ಕೆಮೋ ಥೆರಪಿಗೆ ನನ್ನ ದೇಹವನ್ನು ಒಡ್ಡಲಾರೆ
ನನ್ನ ಸ್ಥಿತಿಯನ್ನು ಸಂಪೂರ್ಣ ಅರಿತವನೇ ಈ ಕಾಯಿಲೆಗೆ ಪರ್ಯಾಯ ಚಿಕಿತ್ಸೆ ಏನಾದರೂ ಇದೆಯೇ ಎನ್ನುವುದನ್ನು ಅರಿಯಲು ಪ್ರಯತ್ನಿಸಿದೆ. ಸ್ನೇಹಿತರು, ಹೆಲ್ತ್ ಕ್ಲಬ್, ಅಂತರ್ಜಾಲ ಎಲ್ಲ ಕಡೆಯೂ ಜಾಲಾಡಿದೆ. ಅಂತರ್ಜಾಲದ ವರದಿಯು ಕೆಮೋ ಥೆರಪಿಯಿಂದ ಗುಣವಾಗುವ ಪ್ರಮಾಣ ಬರೇ 5% ಎಂದೂ, ಇತರ ಪ್ರಾಕೃತಿಕ ಚಿಕಿತ್ಸೆಯಿಂದ ಹೆಚ್ಚಿನ ಲಾಭ ಆದರೂ ಆಗಬಹುದೆಂದು ತಿಳಿಸಿತು.
ನನ್ನ ನಿರ್ಣಯವನ್ನು ಕ್ಯಾನ್ಸರ್ ತಜ್ಞರಿಗೆ ತಿಳಿಸಿದಾಗ ಅವರು ಈ ನಿರ್ಣಯದಿಂದ ಅಪಾಯವೇನೂ ಇಲ್ಲವೆಂದು ಅಭಿಪ್ರಾಯಪಟ್ಟರು. ಆದರೆ ಪ್ರಯೋಜನವಾಗುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ನನ್ನ ಹೆಂಡತಿಯೂ ಸಾಂಪ್ರದಾಯಿಕ ಪದ್ದತಿಯ ಚಿಕಿತ್ಸೆಯೇ ಗತಿ ಎನ್ನುವವಳು. ನಾನು ಪಟ್ಟು ಹಿಡಿದೆ. ವೈದ್ಯರುಗಳು ಹೇಗೂ ನನ್ನ ಆಯುಸ್ಸು ಕೆಲವೇ ತಿಂಗಳು ಎಂದು ನಿಗದಿಪಡಿಸಿ ಆಗಿದೆ.
ನನ್ನ ಮುಂದಿನ ಸಿ.ಟಿ. ಸ್ಕ್ಯಾನ್ ಗೆ 8 ವಾರದ ನಂತರ ಏರ್ಪಾಡಾಗಿತ್ತು. ಅಷ್ಟರಲ್ಲಿ ಹಲವು ಪರ್ಯಾಯ ಚಿಕಿತ್ಸೆಯ ಔಷಧಿಗಳನ್ನು ಹುಡುಕಿ ಸ್ಥಳೀಯ ಹೆಲ್ತ್ ಶಾಪಿನಿಂದ ತರಿಸಿಕೊಂಡೆ. ನನ್ನ ರೋಗ ನಿವಾರಣಾ ವಿಧಿಯ ಮೊಟ್ಟ ಮೊದಲನೇ ಹೆಜ್ಜೆಯಾಗಿ ನನ್ನ ಆಹಾರ ಕ್ರಮದಲ್ಲಿ ಬದಲಾವಣೆ. ಮಾಂಸ, ಬೇಕನ್, ಸೂಪ್ ಮುಂತಾದ ಸಂಸ್ಕರಿಸಿದ ಮಾಂಸ ವೈವಿಧ್ಯಗಳು, ಸಂಪೂರ್ ವರ್ಜ್ಯ. ಹಾಲು ಮತ್ತು ಅದರ ಉತ್ಪನ್ನಗಳು, ಶುದ್ಧೀಕರಿಸಿದ ಸಕ್ಕರೆಯಿರುವ ಕೇಕ್ ಮುಂತಾದ ತಿನಿಸುಗಳಿಗೆ ನಿಷೇಧ. ಬೇಯಿಸುವುದರಿಂದ ಆವಶ್ಯಕ ಕಿಣ್ವ(ಎನ್‌ಜೈಮ್)ಗಳು ನಾಶವಾಗುವುದರಿಂದ ದಿನದಲ್ಲಿ 10 ಭಾಗವಾಗಿ ಹಸಿಯಾಗಿ ವಿವಿಧ ಸಾವಯವ ತರಕಾರಿಗಳ ಸೇವನೆ. ಬೆಳಿಗ್ಗೆ ಮತ್ತು ಸಂಜೆ ಅರ್ಧ ಗಂಟೆಯ ಓಟದ ನಡಿಗೆಯನ್ನು ದಿನಚರಿಯಲ್ಲಿ ಅಳವಡಿಸಿಕೊಂಡೆ. ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಿ ಕ್ಯಾನ್ಸರ್ ಜೀವಕೋಶಗಳನ್ನು ನಾಶಮಾಡುವುದೇ ನನ್ನ ಗುರಿಯಾಗಿತ್ತು.

ಅಂತರ್ಜಾಲದಲ್ಲಿ ತನ್ನ ಅನ್ವೇಷಣೆಗಳಿಗೆ ನೋಬೆಲ್ ಪ್ರಶಸ್ತಿ ಪಡೆದ ಜರ್ಮನಿಯ ಡಾ| ಒಟ್ಟೊ ವಾರ್‌ಬುರ್ಗ್ ಅವರ "ಶರೀರದಲ್ಲಿ ಕ್ಷಾರೀಯ ಗುಣವನ್ನು ವೃದ್ಧಿಸಿದಲ್ಲಿ ಆಮ್ಲಜನಕದ ಮಟ್ಟವು ಏರಿ ಕ್ಯಾನ್ಸರ್ ಜೀವಕೋಶಗಳು ನಾಶವಾಗುವುವು" ಎಂಬ ವರದಿಯಿತ್ತು. ಹಿಟ್ಲರನಿಗೆ ಕ್ಯಾನ್ಸರ್ ಅಂದರೆ ಎಷ್ಟು ಭಯವಿತ್ತೆಂದರೆ, ತನಗೇನಾದರೂ ಆ ಕಾಯಿಲೆ ತಟ್ಟಿದರೆ ಗುಣಮಾಡಲು ಯೆಹೂದಿಯಾದರೂ ಒಟ್ಟೊ ವಾರ್‌ಬುರ್ಗ್‌ರವರ ಅಗತ್ಯವಿರುವುದರಿಂದ ಅವರನ್ನು ಜೀವ ಸಹಿತ ಬಿಟ್ಟನಂತೆ. ನಲ್ಲಿ ನೀರು ಆಮ್ಲೀಯವಾಗಿರುವುದರಿಂದ ನಾನು ಅದನ್ನು ಕುಡಿಯುವುದು ಬಿಟ್ಟೆ. ಕ್ಷಾರೀಯ ಗುಣದ (pH 7.4) ನೀರಿನ ಬಾಟಲು ಖರೀದಿಸಿ ಅದನ್ನೇ ಕುಡಿಯತೊಡಗಿದೆ.
ದಿನಕ್ಕೆರಡು ಬಾರಿ ಬೆಳಿಗ್ಗೆ ಮತ್ತು ಸಂಜೆ ಎರಡು ತುಂಬಿದ ಟೀ ಚಮಚ ಬಾರ್ಲಿ ಹುಲ್ಲಿನ ಪುಡಿಯನ್ನು ಒಂದು ಗ್ಲಾಸ್ ಬೆಚ್ಚಗಿನ ನೀರಿನೊಂದಿಗೆ ಸೇವಿಸತೊಡಗಿದೆ. ಇದು ಶರೀರವು ಕ್ಷಾರಿಯವಾಗಿರಿಸಲು ಸಹಕರಿಸುತ್ತದೆ. ನನ್ನ ದೇಹದ ರಕ್ಷಕ ವ್ಯವಸ್ಥೆಯ ಆಸರೆಗೆ ದಿನಕ್ಕೆರಡು ಬಾರಿ 200 mg ಸೆಲೇನಿಯಮ್ ತೆಗೆದುಕೊಳ್ಳುತ್ತಿದ್ದೆ. ಏಕೆಂದರೆ ಕೆಮೋ ಥೆರಪಿಯು ಕ್ಯಾನ್ಸರ್ ಜೀವ ಕೋಶಗಳನ್ನು ಕೊಲ್ಲುವುದರೊಂದಿಗೆ ಕಾಯಿಲೆಯನ್ನು ದೂರವಿಡಲು ಸಹಾಯಮಾಡುವ ರಕ್ಷಕ ವ್ಯವಸ್ಥೆಯನ್ನು ನಾಶ ಮಾಡುತ್ತದೆ. ರಕ್ಷಕ ವ್ಯವಸ್ಥೆಯು (immune system) ಉತ್ತಮ ಸ್ಥಿತಿಯಲ್ಲಿದ್ದರೆ ದೇಹದಲ್ಲಿ ತೇಲಾಡುತ್ತಿರುವ ಕ್ಯಾನ್ಸರ್ ಕೋಶಗಳನ್ನು ಕೊಂದು ನಮ್ಮ ಆರೋಗ್ಯವನ್ನು ಕಾಪಾಡುವುದು. ನಾನು ಇನ್ನು ಮುಂದೆ ಯಾವುದೇ ಕೆಮೋ ಥೆರಪಿಗೆ ನನ್ನ ದೇಹವನ್ನು ಒಡ್ಡಲಾರೆ ಎಂದು ನಿಶ್ಚಯಿಸಿದೆ.












Click it and Unblock the Notifications