ನಿಪುಣ ಸರ್ಜನ್ ಡಾ. ಅನಿಲ್ ರೆಡ್ಡಿ ಸಿಕ್ಕಿದ್ದು ಅದೃಷ್ಟ
ಒಬ್ಬ ಉತ್ತಮ ನಿಪುಣ ಸರ್ಜನ್ ಆದ ಅನಿಲ್ ರೆಡ್ಡಿ ಅಲ್ಲಿ ನನಗೆ ದೊರಕಿದ್ದು ನನ್ನ ಅದೃಷ್ಟವೆಂದುಕೊಳ್ಳುತ್ತೇನೆ. ಹಾಗೆಯೇ ಅಲ್ಲಿಯ ವೈದ್ಯಕೀಯ ಸವಲತ್ತು ಹಾಗೂ ದಾದಿಯರ ಸೇವಾ ಮನೋಭಾವ. ದೊಡ್ಡಕರುಳಿನ ಸುಮಾರು 9 ಇಂಚು(22.5.ಸೆ.ಮೀ.) ಭಾಗವನ್ನು ಕತ್ತರಿಸಿ ತೆಗೆದು ಇಲಿಯೋಸ್ಟೊಮಿ (ಸಣ್ಣ ಕರುಳಿನ ತುದಿಯನ್ನು ಹೊಟ್ಟೆಯ ಹೊರಗೆ ಜೋಡಿಸುವುದು) ಮಾಡಬೇಕಾಗಿ ಬಂದರೂ ರೆಡ್ಡಿಯವರ ಸ್ನೇಹಮಯ ನಡತೆ ನನಗೆ ಹೆಚ್ಚು ಆತ್ಮವಿಶ್ವಾಸವನ್ನು ಉಂಟುಮಾಡಿತು.
ಡಾ. ರೆಡ್ಡಿ ಹಾಗೂ ಅವರ ತಂಡದ ನೈಪುಣ್ಯದಿಂದಷ್ಟೇ ನಾನೀಗ ಬದುಕುಳಿದಿದ್ದೇನೆ ಎಂದು ನನಗೆ ಸಂಪೂರ್ಣ ವಿಶ್ವಾಸ. ಆಪರೇಶನ್ನಿನ ನಂತರದ ಏಳು ದಿನಗಳು ಐ.ಸಿ.ಸಿ.ಯು.ನಲ್ಲಿ, ಅದೊಂದು ನರಕ ಯಾತನೆ. ಮೂರು ವಾರ ಆಸ್ಪತ್ರೆಯಲ್ಲಿದ್ದು ನಿಧಾನವಾಗಿ ತಿರುಗಾಡಲಾರಂಭಿಸಿದೆ. [ಕ್ಯಾನ್ಸರ್ ಇದೆ; ಆದರೆ ಚಿಂತೆ ಇಲ್ಲ!]

ಕೆಮೋ ಆರಂಭಿಸಿದ ಮೊದಲ ವಾರ ಸಮಸ್ಯೆಯೇನೂ ಉಂಟಾಗಲಿಲ್ಲ. ಆದರೆ ಎರಡನೆಯ ವಾರ ಶುರುವಾಯಿತು ಓಕರಿಕೆ, ತಲೆಭಾರ, ಅರುಚಿ. ಕಾಲುಗುರು ಸಡಿಲವಾಗಿ ಬಿದ್ದುಹೋದುವು. ಮುಂಗೈ, ಕಾಲು ಎಲ್ಲೆಂದರಲ್ಲಿ ಮುಟ್ಟಿದರೆ ನೋವು, ಅತಿಸಾರದ ಸಮಸ್ಯೆ, ಅದರೊಂದಿಗೆ ತೀವ್ರವಾದ ಎದೆನೋವು ಇವುಗಳಿಂದ ನರಳಿ ನರಳಿ ಜೀವನವೇ ಬೇಡವೆನ್ನಿಸಿತು. ನನ್ನ ಅವಸ್ಥೆ ನೋಡಿದ ಓಂಕೋಲೊಜಿಸ್ಟ್ ನಾಲ್ಕು ತಿಂಗಳ ನಂತರ ಈ ಕೆಮೋಥೆರಪಿ ನಿಲ್ಲಿಸಿ ಈ ನರಕದಿಂದ ಮುಕ್ತಿ ನೀಡಿದರು.
ಆದರೆ ಕ್ಯಾನ್ಸರ್ ನನ್ನ ಬೆನ್ನು ಬಿಡಲಿಲ್ಲ. ಪೆಟ್ ಸ್ಕ್ಯಾನಿನಲ್ಲಿ ಉದರದ ಗೋಡೆಯಲ್ಲಿ ಕ್ಯಾನ್ಸರ್ ಹರಡಿರುವುದು ಕಂಡುಬಂತು. ಶುಕ್ಲ ಗ್ರಂಥಿ (ಪ್ರಾಸ್ಟೇಟ್) ಸಹ ತೊಂದರೆ ಕೊಡಲಾರಂಭಿಸಿತು. ಈ ಸಮಯ ಕ್ಯಾನ್ಸರ್ ತಜ್ಞರಿಂದ ಸೂಚನೆ ಬಂತು ನನ್ನ ಕ್ಯಾನ್ಸರ್ ಗುಣಪಡಿಸಲಾರದ್ದು ಎಂದು. ನನ್ನ ಅಮ್ಮ ಮತ್ತು ಮಗಳು ಕಡೆಗಾಲದಲ್ಲಿ ಅನುಭವಿಸಿದ್ದನ್ನು ನೋಡಿದವನು, ನನಗೂ ಏನು ಕಾದಿದೆ ಎಂಬುದರ ಅರಿವಾಯಿತು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications