ಮಾರಣಾಂತಿಕ ಕ್ಯಾನ್ಸರ್ ಮೆಟ್ಟಿನಿಂತ ಹಿರಿಯಜ್ಜನ ಯಶೋಗಾಥೆ
ಇಂಗ್ಲೆಂಡಿನ ಮಿಡ್ಲ್‌ಸ್‍ಬ್ರೊದಲ್ಲಿ ವಾಸವಾಗಿರುವ 78 ವರ್ಷದ ಅಲನ್ ಟೇಯ್ಲರ್ ಎಣ್ಣೆ ಮತ್ತು ಅನಿಲದ ರಿಗ್ಗುಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ 13 ವರ್ಷದ ಹಿಂದೆ ನಿವೃತ್ತಿ ಹೊಂದಿದ ಇಂಜಿನೀಯರ್. ಹೃದಯದ ತೊಂದರೆಯಿದ್ದರೂ ವಾರ್ಫಾರಿನ್ (ರಕ್ತ ತೆಳುವಾಗಿಸುವ ಔಷಧಿ) ಸಹಾಯದಿಂದ ಆರೋಗ್ಯವಾಗಿಯೇ ಕಾಲಕಳೆದವರು. ಹಿರಿಯ ಮಗಳು ತನ್ನ 49ನೇ ವಯಸ್ಸಿನಲ್ಲಿ ಕ್ಯಾನ್ಸರಿಗೆ ತುತ್ತಾಗಿ ಸಾಂಪ್ರದಾಯಿಕ ಚಿಕಿತ್ಸೆ ಫಲಕಾರಿಯಾಗದೆ ತೀರಿಕೊಂಡಿದ್ದಳು. ಒಂದು ದಿನ ತಮಗೂ ಕ್ಯಾನ್ಸರ್ ಇದೆ ಎಂದು ಟೇಯ್ಲರ್ ಗೆ ಗೊತ್ತಾಯಿತು. ಅದರ ವಿರುದ್ಧ ಹೋರಾಡಿ, ಗೆದ್ದ ಚೇತರಿಕೆಯ ಅದ್ಭುತ ಕಥೆಯನ್ನು ಅವರ ಬಾಯಿಯಿಂದಲೇ ಕೇಳಬೇಕು.
ಟೇಯ್ಲರ್ ಅವರ ಈ ಅನುಭವ ಕಥನವನ್ನು ಕನ್ನಡಕ್ಕೆ ತಂದವರು ಮುಂಬಯಿಯ ಡಾ| ರಾಮಚಂದ್ರ ಭಟ್. ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ 37 ವರ್ಷ ಸಂಶೋಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಭಟ್ ಅವರು ಆರೋಗ್ಯ ಸಂಬಂಧಿ ಲೇಖನಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರು. ವಿಶೇಷವಾಗಿ ಕ್ಯಾನ್ಸರ್ ಕುರಿತು "ಕಸ್ತೂರಿ" (ಮಾಸಪತ್ರಿಕೆ), "ತರಂಗ" ವಾರಪತ್ರಿಕೆಯಲ್ಲಿ ಅವರು ಬರೆದ ಲೇಖನಗಳು ಅನೇಕರ ಕಣ್ತೆರೆಸಿವೆ. ಈಗ ಓವರ್ ಟು ಟೇಯ್ಲರ್ - ಸಂಪಾದಕ.

2010ರ ಅಂತ್ಯ ಭಾಗ. ಹೊಟ್ಟೆಯ ಅಗ್ರ ಭಾಗದಲ್ಲಿ ಸ್ವಲ್ಪ ನೋವಿನಿಂದ ಕೂಡಿದ ಗಟ್ಟಿಯಾದ ಭಾಗವನ್ನು ವೈದ್ಯರಿಗೆ ತೋರಿಸಲು ಹೋಗಿದ್ದೆ. ಪರೀಕ್ಷಿಸಿದ ವೈದ್ಯರು ಏನೂ ತೊಂದರೆಯಿಲ್ಲವೆಂದು ಆಶ್ವಾಸನೆಯಿತ್ತರು. ಕೆಲವು ದಿನಗಳ ನಂತರ ಗಡ್ಡೆ ದೊಡ್ಡದಾಗಲು ಇನ್ನೊಂದು ವೈದ್ಯರಲ್ಲಿ ತೋರಿಸಿದೆ. ಕೂಲಂಕಷವಾಗಿ ಪರೀಕ್ಷಿಸಿ ಅವರೂ ಮೊದಲಿನ ವೈದ್ಯರಂತೆಯೇ ಅಭಿಪ್ರಾಯವಿತ್ತರು. ನಾನು ನೆಮ್ಮದಿಯಲ್ಲಿ ಇರಬಹುದೆಂದುಕೊಂಡೆ.
ಆದರೆ ಆರು ವಾರಗಳ ನಂತರವೂ ಏನೋ ಮನಸ್ಸಿನಲ್ಲಿ ಕಿರಿಕಿರಿ. ಇನ್ನೊಬ್ಬ ವೈದ್ಯರು ನೋಡಿ ಪೂರ್ತಿ ತೃಪ್ತಿಯಾಗದೆ ಸೌತ್ ಕ್ಲೀವ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಹೆಚ್ಚಿನ ಪರೀಕ್ಷೆಗೆ ಏರ್ಪಾಡು ಮಾಡಿದರು. ಅಲ್ಲಿ ಕೊಲೋನೊಸ್ಕೊಪಿ, ಎಂಡೋಸ್ಕೊಪಿ ಹಾಗು ಎರಡು ಬಯೋಪ್ಸಿಗಳ ನಂತರ ತಜ್ಞರು ನನಗೆ ದೊಡ್ಡಕರುಳಿನ ಅದೂ ಯಕೃತ್ತಿಗೆ ತುಂಬಾ ಹತ್ತಿರದ ಭಾಗದಲ್ಲಿ ಕ್ಯಾನ್ಸರ್ ಇದೆ ಎಂದು ತೀರ್ಪಿತ್ತರು. ಕಂಪ್ಯೂಟರ್ ಪರದೆಯಲ್ಲಿ ನನಗೇ ಕಾಣುತ್ತಿತ್ತು ಆ ಭಯಂಕರ ಗಡ್ಡೆ.
2011ರ ಸೆಪ್ಟೆಂಬರ್ 28ಕ್ಕೆ ನನ್ನ ಗಡ್ಡೆಯ ಆಪರೇಶನ್ ಎಂದು ಏರ್ಪಾಡಾಗಿತ್ತು. ಆಪರೇಶನ್ನಿನ ಫಲಿತಾಂಶದಲ್ಲಿ ನನಗೆ ಸಂಪೂರ್ಣ ನಂಬಿಕೆ ಬಾರದಿದ್ದರೂ ನನ್ನ ಸರ್ಜನ್ ಭರವಸೆ ಮೂಡಿಸಿದ್ದರು. ಆದರೆ ನಿಗದಿಪಡಿಸಿದ ದಿನಕ್ಕೆ ನಾಲ್ಕು ದಿನ ಮೊದಲು ಮುಂಜಾನೆಯ ಸಮಯ ವಿಪರೀತ ಹೊಟ್ಟೆನೋವಿನಿಂದ ಕುಸಿದಾಗ ನನ್ನ ಮಗಳು ದಾದಿಯಾಗಿದ್ದವಳು, ಆಂಬ್ಯುಲೆನ್ಸ್ ಮೂಲಕ ಕ್ಲೀವ್‌ಲ್ಯಾಂಡ್, ಮಿಡ್ಲ್‌ಸ್‍ಬ್ರೊನಲ್ಲಿನ ಜೇಮ್ ಕುಕ್ ಯುನಿವರ್ಸಿಟಿ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಸಾಗಿಸಿದಳು. ಅಲ್ಲಿ ನಾನು ಭೆಟ್ಟಿಯಾದ ಸರ್ಜನ್ ಅನಿಲ್ ರೆಡ್ಡಿ, ಕೂಡಲೆ ಆಪರೇಶನ್ ಮಾಡಲು ನಿರ್ಧರಿಸಿದರು. [ಬೆಂಗಳೂರು, ಭಾರತದ ನೂತನ ಸ್ತನ ಕ್ಯಾನ್ಸರ್ ರಾಜಧಾನಿ!]
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications