ಹಲೋ ಬೆಂಗಳೂರು. ಫಸ್ಟ್ ಓಟು ಮಾಡು, ಆಮೇಲೆ ಮಾತಾಡು!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 21 : ನಮ್ಮ ಬೆಂಗಳೂರು ಮಹಾನಗರದಲ್ಲಿ ಒಂದು ಕೋಟಿ ಜನ ಇದ್ದಾರೆ. ಇವರಲ್ಲಿ ಅಧಿಕೃತ ಮತದಾರರ ಸಂಖ್ಯೆ 73 ಲಕ್ಷ. ಈ ಮತದಾರರನ್ನು ನಾಲಕ್ಕು ಗುಂಪುಗಳಾಗಿ ವಿಂಗಡಿಸಬಹುದು.

ಆ ಪಾರ್ಟಿ, ಈ ಪಾರ್ಟಿ, ಎರಡೂ ಪಾರ್ಟಿಯಿಂದ ಒಂದು ಓಟಿಗೆ ಒಂದು ಸಾವಿರ ರೂಪಾಯಿ ಲೆಕ್ಕದಲ್ಲಿ ಲಂಚ ಇಸ್ಕೊಳ್ಳುವವರದು ಒಂದು ಜಾತಿ. ಚುನಾವಣೆಗೋಸ್ಕರ ದೊರೆತ ಶನಿವಾರ (22ನೇ ಆಗಸ್ಟ್ 2015)ದ ರಜಾದಿನವನ್ನು ಸದುಪಯೋಗ ಪಡಿಸಿಕೊಂಡು ಮತಗಟ್ಟೆಗೆ ತೆರಳಿ ಮತ ಚಲಾಯಿಸುವವರದು ಇನ್ನೊಂದು ಜಾತಿ.

ಇಲ್ಲಿ ಏನೂ ಬದಲಾಗುವುದಿಲ್ಲ. ಸುಮ್ಮನೆ ನಾನು ತಲೆ ಕೆಡಿಸಿಕೊಂಡು ಪ್ರಯೋಜನವಿಲ್ಲ. ನನ್ನ ಒಂದು ಓಟಿನಿಂದ ಬೆಂಗಳೂರು ಲೈಫೇನೂ ಬದಲಾಗುವುದಿಲ್ಲ. ಕತ್ತೆ ಬಾಲ, ಕುದುರೆ ಜುಟ್ಟು ಎಂದುಕೊಂಡು ತಮ್ಮಪಾಡಿಗೆ ತಾವು ಇದ್ದುಬಿಡುವವರದು ಇನ್ನೊಂದು ಜಾತಿ. [ನಿಮ್ಮ ಮತಗಟ್ಟೆ ತಿಳಿಯಲು ಎಸ್ಎಂಎಸ್ ಮಾಡಿ]

BBMP Elections 2015 : Vote for min bribe and max governance

ಶನಿವಾರ, ಭಾನುವಾರದ ಜೋಡಿ ರಜೆ ಅನುಭವಿಸಲು ಲಕ್ಷಾಂತರ ಮತದಾರರು ಶುಕ್ರವಾರ ಸಂಜೆನೇ ತಮ್ಮ ತಮ್ಮ ನೇಟಿವ್ ಪ್ಲೇಸಿಗೆ ಹೋಗುವವರು. ಅಥ್ವಾ, ಎರಡು ರಾತ್ರಿ ಎರಡು ಹಗಲು ಟೂರ್ ಪ್ಯಾಕೇಜ್ ತಗೊಂಡು ಹಾಯಾಗಿ ಎಲ್ಲಿಗೋ ಹೋಗುವವರದು ಮತ್ತೊಂದು ಜಾತಿ.

ಮತದಾನ ಪವಿತ್ರ, ತಪ್ಪದೆ ಚಲಾಯಿಸಿ, ಬದಲಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮುಂತಾದ ಪ್ರೇರಣಾತ್ಮಕ, ಘೋಷಣೆಗಳನ್ನು ನಾನು ಹೊರಡಿಸುವುದಿಲ್ಲ. ಇಲ್ಲಿ ಉದ್ದೀಪನ ಔಷಧಿ ಸಿಗುವುದಿಲ್ಲ. ನಿಮ್ಮ ಮನೆ ಮುಂದೆ ತಿಪ್ಪೆ ಮೈಚಾಚಿ ಮಲಗಿದೆ. ಅದರಲ್ಲಿ ಒಂದು ನಾಯಿ ಸತ್ತು ಬಿದ್ದಿದೆ. ಅದನ್ನು ಕಣ್ಣಾರೆ ಕಂಡವರನ್ನು ಉದ್ದೇಶಿಸಿ ಮತ್ತೆ ಮತ್ತೆ ಭಾಷಣ ಯಾಕೆ ಮಾಡುತ್ತಿರಬೇಕು? [ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ? ಪರೀಕ್ಷಿಸಿ]

ಇಡೀ ದಿನ ಮನೆಯಲ್ಲಿ ಕಳೆಯುವವರಿಗೆ ಟಿವಿ ಇದೆ. ಊರಿಗೆ ಹೋಗುವವರಿಗೆ ಬಸ್ ಸ್ಯ್ಟಾಂಡುಗಳು, ರೈಲ್ವೆ ನಿಲ್ದಾಣಗಳು, ಏರೋ ಪ್ಲೇನುಗಳು, ಕಾರು, ವ್ಯಾನು, ಟಂಟಂಗಳಿವೆ. ನನ್ನ ಮತಗಟ್ಟೆ ಎಲ್ಲಿದೆ ಎಂದು ಹುಡುಕುವವರಿಗೆ ದಾರಿ ಇಲ್ಲಿದೆ. ನಾನು ನಾಳೆ ಮತದಾನ ಮಾಡುತ್ತೇನೆ. ಈ ಚುನಾವಣೆಗೆ ನನ್ನ ಪ್ರಣಾಳಿಕೆ ಏನೆಂದರೆ : ಕಡಿಮೆ ಲಂಚ, ಹೆಚ್ಚು ಆಡಳಿತ. Minimum Corruption, Maximum Governence, the E-Governence.

ಮೊಬೈಲ್ ಫೋನು ಮೂಲಕ ಮತಗಟ್ಟೆ ವಿವರ ಬೇಕಿದ್ದರೆ. SMS ಬಳಸಿ. epic ಎಂದು ಟೈಪ್ ಮಾಡಿ, ಸ್ಪೇಸ್ ಕೊಟ್ಟು, ಮತದಾರರ ಸಂಖ್ಯೆ ಟೈಪ್ ಮಾಡಿ 88618 66993 ನಂಬರಿಗೆ ರವಾನಿಸಿ. ಕ್ಷಣಾರ್ಧದಲ್ಲಿ ನಿಮ್ಮ ಫೋನಿಗೆ ಎಸ್ ಎಂ ಎಸ್ ಠನ್ ಅಂತ ಬಂದು ಬೀಳತ್ತೆ. ಬೈದವೇ, ವಾಟ್ಸ್ ಆಪ್ ನಲ್ಲಿ ಇದು ಆಗಲ್ಲ, ಸಾರಿ! [ಈ 'ವಿಶೇಷ ಅತಿಥಿ'ಗಳ ಮೇಲೆ ಕಣ್ಣು ಇಡುವವರು ಯಾರು?]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru has four types of voters among 73 lac registered voters. Cash for votes, agents of change, nonchalant and you are not there!. A letter to Bengalurians on the eve of polling for Local body BBMP elections 2015.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ