ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ ಪ್ರಶಸ್ತಿ ಎರಡನೇ ಪಟ್ಟಿ ಬಿಡುಗಡೆ

By * ಎಸ್ಕೆ. ಶಾಮಸುಂದರ
|
Google Oneindia Kannada News

I Love My Mother Tongue Kannada
ಅದಿಲ್ಲ ಇದಿಲ್ಲ, ನಮ್ಮ ಭಾಷೆಯ ಹಣೆಬರಹ ಇಷ್ಟೇನೇ, ನಮ್ಮವರ ಯೋಗ್ಯತೆ ಇಷ್ಟೇನೇ ಎಂದು ಹಳಹಳಿಸಿ ಇನ್ನೊಬ್ಬರ ಮೇಲೆ ಬೊಟ್ಟು ತೋರಿಸುತ್ತ ಸದಾ ಕೊರಗುವ ಕೊರಗಪ್ಪಗಳಿಂದ ಈ ವರ್ಷ ಸ್ವಲ್ಪ ದೂರವಿರಿ. ಜೋಪಾನ.

ಇದ್ದಿದ್ದರಲ್ಲಿ ತೃಪ್ತಿಪಡುತ್ತಲೇ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಇನ್ನೂ ಎತ್ತರಕ್ಕೆ ಬೆಳೆಸುವ ಆಸೆ, ಶ್ರಮ, ಪ್ರೀತಿ ಇಟ್ಟುಕೊಂಡಿರುವ ಲಕ್ಷಲಕ್ಷ ಕನ್ನಡಿಗರಲ್ಲಿ ನೀವೂ ಒಬ್ಬರೆಂಬುದು ನಮಗೆ ಗೊತ್ತು. ಹಾಗಾಗಿ, ನಿಮಗೆ ಮತ್ತು ನಿಮ್ಮ ಪರಿವಾರಕ್ಕೆ 56ನೇ ಕನ್ನಡ ರಾಜ್ಯೋತ್ಸವ ಶುಭಾಶಯಗಳನ್ನು ಹೇಳುವ ಧೈರ್ಯ ನಮಗೆ ಬಂದಿದೆ.

ವಿಶೇಷವಾಗಿ, ನಿತ್ಯ ಬದುಕಿಗೆ ಅಂತರ್ಜಾಲವನ್ನೇ ಆತುಕೊಂಡ ಪಡುವಲ ಸೀಮೆಯ ಕನ್ನಡಿಗರನ್ನೇ ನಂಬಿಕೊಂಡಿದ್ದ ಕನ್ನಡ ಅಂತರ್ಜಾಲವನ್ನು ಕರ್ನಾಟಕದ ಗಲ್ಲಿಗಲ್ಲಿಗೆ, ಭಾರತದ ಹಾದಿಬೀದಿಗೆ, ಕಚೇರಿ, ಅಂಗಡಿ ಮುಂಗಟ್ಟುಗಳಿಗೆ, ಉದ್ಯಾನವನಕ್ಕೆ, ಅಡುಗೆ ಮನೆಗೆ ಆಹ್ವಾನಿಸಿ ನಮ್ಮನ್ನು ಹುರಿದುಂಬಿಸಿದ ಒನ್ ಇಂಡಿಯ ಕನ್ನಡ ಓದುಗ ನೆಂಟರಿಷ್ಟರಿಗೆ ಕೃತಜ್ಞತೆಗಳು.

ಕನ್ನಡವನ್ನು ದಿನಕ್ಕೆ 8640 ಕ್ಷಣ ಹೊಟ್ಟೆಯಲ್ಲಿಟ್ಟುಕೊಂಡು ಸಲಹುವ ಸರ್ವರ್ ಗಳಿಗೆ, ಕನ್ನಡದ ಸುದ್ದಿ ಸರಕುಗಳನ್ನು ಬಿಂಬಿಸುವ ಡೆಸ್ಕ್ ಟಾಪ್, ಲ್ಯಾಪ್ ಟಾಪ್, ಪಾಮ್ ಟಾಪ್, ಐಫೋನ್, ಐಪ್ಯಾಡ್ ಮತ್ತಿತರ ಗ್ಯಾಡ್ಜೆಟ್ಟುಗಳನ್ನು ರೂಪಿಸಲು ಪ್ರೊಗ್ರಾಂ ಬರೆದವರಿಗೆ ಸಹಸ್ರ ಸಹಸ್ರ ಧನ್ಯವಾದಗಳು.

ಕನ್ನಡ ತಂತ್ರಾಂಶಗಳನ್ನು ಕಂಡುಹಿಡಿದು ಉಚಿತವಾಗಿ ಹಂಚಿದವರಿಗೆ, ಯುನಿಕೋಡ್ ಅನ್ನು ರೂಪಿಸಲು ದುಡಿದ ಕಾಣದ ಕೈಗಳಿಗೆ, ಅದನ್ನು ಡೌನ್ ಲೋಡ್ ಮಾಡಿಕೊಂಡು ಕನ್ನಡ ಓದು ಬರವಣಿಗೆಯನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿರುವ ನಿಮ್ಮ ಹೆಸರು ಸೋಮವಾರ ಸಂಜೆ ಬಿಡುಗಡೆಯಾದ ರಾಜ್ಯೋತ್ಸವ ಪ್ರಶಸ್ತಿಯ ಎರಡನೇ ಪಟ್ಟಿಯಲ್ಲಿದೆ. ಖುಷಿಪಡಿ. ಅಭಿನಂದನೆಗಳು.

ನಿಮ್ಮ ಮಕ್ಕಳು ಮರಿಗಳಿಗೆ ನಿಮ್ಮ ಮನೆಯಲ್ಲಿ ನೀವೇ ಕನ್ನಡ ಪಾಠ ಹೇಳಿಕೊಡಲು ಇವತ್ತಿನಿಂದಲೇ ಆರಂಭಿಸಿದರೆ ಮುಂದಿನ ವರ್ಷದ ಪ್ರಶಸ್ತಿ ನಿಮಗೇ ಮುಡಿಪಾಗಿಡಲಾಗುತ್ತದೆ. ನಮಸ್ಕಾರ. ಹಾಗೆಯೆ, ನೀವು ಕನ್ನಡ ಪ್ರೀತಿಸುವಿರಾದರೆ ಈ ಕೊಂಡಿ ಕ್ಲಿಕ್ಕಿಸಿ.

English summary
On the occasion of 56th Kannada Rajyotsava 2nd list of awardees has been released. The award goes to beloved readers, writers, speakers of Kannada all over the world. Congratulations to all. By the by I love my mother tongue Kannada. Don't you?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X