ದಟ್ಸ್ ಕನ್ನಡ ಕಾಮೆಂಟ್ ವಿಭಾಗ ಮುಕ್ತ ಮುಕ್ತ!

ಅನೇಕ ಸುದ್ದಿ ಸಮಾಚಾರಗಳಿಗೆ ತಮ್ಮ ಅನಿಸಿಕೆಗಳನ್ನು ದಾಖಲಿಸುವ ಆವೇಶದಲ್ಲಿ, ಕೋಪದಲ್ಲಿ, ಅಸಹನೆಯಲ್ಲಿ, ಅವಸರದಲ್ಲಿ ಕೆಲವರು ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದುದರಿಂದ ಲಾಗಿನ್ ಆಗಿ ನಂತರ ಕಾಮೆಂಟ್ಸ್ ಬರೆಯಬಹುದಾದ ವ್ಯವಸ್ಥೆಯನ್ನು ನಾನು ಜಾರಿಗೆ ತಂದಿದ್ದುದು ನಿಮಗೆ ಗೊತ್ತಿದೆ.
ಆದರೆ, ಯಾರೋ ಮಾಡುವ ತಪ್ಪಿಗೆ ನಮಗೇಕೆ ಅಂಕುಶ? ಕಾಮೆಂಟ್ಸ್ ವಿಭಾಗ ನೋಡಿ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಲೇ ಎಂಜಾಯ್ ಮಾಡುವ ನಮ್ಮ ಫ್ರೀಡಂ ಅನ್ನು ನೀವು ಕಸಿದುಕೊಂಡಿದ್ದೀರಿ ಎಂದು ಅನೇಕರು ನನಗೆ ಆರೋಪಿಸಿದ್ದರು. ನಮ್ಮ ಒನ್ ಇಂಡಿಯಾ ಕನ್ನಡ ಕಚೇರಿಯಲ್ಲಿ ಕೆಲಸ ಮಾಡುವ ಕನ್ನಡಿಗರ ಅಭಿಪ್ರಾಯವೂ ಇದೇ ಆಗಿತ್ತು.
ಈ ಎಲ್ಲ ಕಾರಣಗಳಿಂದಾಗಿ ಕಾಮೆಂಟ್ಸ್ ವಿಭಾಗದಲ್ಲಿ ಹಲಕೆಲವು ಮಾರ್ಪಾಟುಗಳನ್ನು ಮಾಡಿ ಇಂದಿನಿಂದ ಓದುಗರ ಮಡಿಲಿಗೆ ಹಾಕುತ್ತಿದ್ದೇನೆ. ಹ್ಯಾಪಿ ಕಾಮೆಂಟಿಂಗ್. ಗಮನಿಸಿ :
1) ಈಗಿರುವ ಲಾಗಿನ್ ವ್ಯವಸ್ಥೆ ಎಂದಿನಂತೆ ಮುದುವರೆಯುತ್ತದೆ.
2) ಆದಷ್ಟೂ ಲಾಗಿನ್ ಆಗಿಯೇ ಬರೆಯುವ ಅಭ್ಯಾಸ ರೂಢಿಸಿಕೊಳ್ಳಿರಿ.
3) ಗೆಸ್ಟ್ ಕಾಮೆಂಟುಗಳನ್ನು ಮಾಡರೇಟ್ ಮಾಡಲಾಗುವುದು.
4) ಗೆಸ್ಟ್ ಕಾಮೆಂಟುಗಳು ಮಾಡರೇಟ್ ಆದನಂತರವೇ ಪುಟದಲ್ಲಿ ಗೋಚರಿಸುತ್ತವೆ.
5) ಭಾರತೀಯ ಕಾಲಮಾನ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಮಾಡರೇಟಿಂಗ್ ಇರುತ್ತದೆ.
6) ಕಾಮೆಂಟ್ ವಿಭಾಗದಲ್ಲಿರುವ guest button ಒತ್ತಿರಿ.
7) ಕಾಮೆಂಟ್ ಬರೆಯಿರಿ.
8) Submit ಮಾಡಿರಿ.
ಈ ಸೌಲಭ್ಯವನ್ನು ತಾವುಗಳು ಸದುಪಯೋಗ ಪಡಿಸಿಕೊಳ್ಳುತ್ತೀರೆಂಬ ವಿಶ್ವಾಸ ನನ್ನದು ಮತ್ತು ದಟ್ಸ್ ಕನ್ನಡ ಸಂಪಾದಕೀಯ ಬಳಗದ್ದು.











Click it and Unblock the Notifications