• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಮಸೂತ್ರ ಆಡಿಯೋದಲ್ಲಿ ತಲ್ಲೀನತೆ

By * ಶಾಮಿ
|

ಶಾಲಾ ಮಕ್ಕಳಿಗೆ ಲೈಂಗಿಕ ತಿಳಿವಳಿಕೆಗಳನ್ನು ಪಠ್ಯ ಮತ್ತು ಪಾಠಗಳ ಮೂಲಕ ನೀಡಬೇಕೇ ಅಥವಾ ಬಿಟ್ಹಾಕಬೇಕೆ ಎಂಬುದು ಭಾರತೀಯ ಸಮಾಜದಲ್ಲಿ ಒಂದು ತಿಕ್ಕಾಟದ ವಿಷಯ. ಇಪ್ಪತ್ತೊಂದನೇ ಶತಮಾನದಲ್ಲಿದ್ದರೂ ಸಹ ಇಂಥ ಬೇಕು ಬೇಡಗಳ ಚರ್ಚೆಗಳಲ್ಲಿ ಭಾಗವಹಿಸುವುದಕ್ಕೂ ಹಿಂಜರಿಯುವ ಜನ ಇರುವುದರಿಂದ .

ಆದರೆ ಶತಶತಮಾನಗಳ ಹಿಂದೆಯೇ ಲೈಂಗಿಕ ವಿಜ್ಞಾನ ಕುರಿತು ಅಧಿಕಾರಯುತ ಕೃತಿ 'ಕಾಮಸೂತ್ರ' ರಚಿಸಿದವನು ಮಲ್ಲನಾಗ ವಾತ್ಸ್ಯಾಯನ. ಭಾರತಕ್ಕೆ ಸ್ವಾತಂತ್ತ್ಯ ಬಂದನಂತರದ ವರ್ಷಗಳಲ್ಲಿ ಈ ಕೃತಿ ಪ್ರಕಟಗೊಂಡಿದ್ದಿದ್ದರೆ ಜ್ಞಾನಪೀಠಕ್ಕೆ ರೆಕಮೆಂಡ್ ಮಾಡಬಹುದಾಗಿತ್ತು. ರಸಋಷಿಗೆ ನಮಸ್ಕಾರಗಳು.

36 ಅಧ್ಯಾಯಗಳಲ್ಲಿ ಹರಡಿಕೊಂಡಿರುವ 1250 ಶ್ಲೋಕಗಳು ಕಾಮಸೂತ್ರದಲ್ಲಿ ಅಡಕಗೊಂಡಿವೆ. ದೇಹೋಲ್ಲಾಸ, ಮನೋಲ್ಲಾಸದ ಮೂಲಕ ಮನುಷ್ಯನನ್ನು ಆಧ್ಯಾತ್ಮದೆಡೆಗೆ ಕೊಂಡೊಯ್ಯಬಲ್ಲ ಶಕ್ತಿ ಕಾಮಕ್ಕೆ ಅಂದರೆ ಕಾಮಶಾಸ್ತ್ರಕ್ಕಿದೆ ಎನ್ನುವುದು ವಾತ್ಸ್ಯಾಯನ ನಂಬಿಕೆ. ಆತ ರಚಿಸಿದ ಕಾಮಸೂತ್ರ ಸಂಸ್ಕೃತ ಗ್ರಂಥ ಜಗತ್ತಿನ ಅನೇಕ ಭಾಷೆಗಳಲ್ಲಿ ಅನುವಾದಗೊಂಡಿದೆ.


ಕನ್ನಡದಲ್ಲೂ ಒಂದು ಅನುವಾದ ಬಂದಿದೆ. ಪತ್ರಕರ್ತ ಮತ್ತು ಪಂಡಿತ ಮ. ಶ್ರೀಧರಮೂರ್ತಿಗಳು ಕಾಮಸೂತ್ರವನ್ನು 1978ರಲ್ಲಿ ಕನ್ನಡಕ್ಕೆ ತಂದಿದ್ದಾರೆ. ಪ್ರತಿಗಳು ಈಗ ಲಭ್ಯವಿವೆಯೋ ಇಲ್ಲವೋ ಗೊತ್ತಿಲ್ಲ. ವಾತ್ಸ್ಯಾಯನ ಕನ್ನಡಕ್ಕೂ ಬಂದಿದ್ದ ಎಂಬ ಸುದ್ದಿ ಸಮಾಧಾನ ನಿಮಗೆ ಸಾಕು.

"ಒಮ್ಮೆ ರತಿಚಕ್ರ ತಿರುಗಲಾರಂಭಿಸಿದರೆ ಶಾಸ್ತ್ರವೂ ಇಲ್ಲ ಕ್ರಮವೂ ಇಲ್ಲ" ಎಂಬ ಮಾತನ್ನು ವಿನಮ್ರತೆಯಿಂದ ಒಪ್ಪಿಕೊಳ್ಳುತ್ತಲೇ ಲೈಂಗಿಕ ವಿಜ್ಞಾನದ ಗುಟ್ಟು ಮಟ್ಟುಗಳನ್ನು ರಟ್ಟುಮಾಡಿದ ವಿದ್ವಾಂಸ ವಾತ್ಸ್ಯಾಯನ. ಇವತ್ತು ಆತನ ಮೇರು ಕೃತಿಗೆ ಜಾಗತಿಕ ಮಟ್ಟದಲ್ಲಿ ಎಲ್ಲಿಲ್ಲದ ಮನ್ನಣೆ. ಇಂದಿನ ಯುಗಕ್ಕೆ ಆತನ ಕೃತಿಯನ್ನು ಪರಿಚಯಿಸುವ ಮತ್ತು ದೇಶ ಕಾಲದ ಅಗತ್ಯಗಳಿಗೆ ಸರಿದೂಗಿಸಿ ಕಾಮಶಾಸ್ತ್ರವನ್ನು ದಾಟಿಸುವ ಹಲವಾರು ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಹೊಸ ಪ್ರಯೋಗ 'ಕಾಮಸೂತ್ರ ಆಡಿಯೋ'.

ಒಮ್ಮೆ ರತಿಚಕ್ರ ತಿರುಗಲಾರಂಭಿಸಿದರೆ ಶಾಸ್ತ್ರವೂ ಇಲ್ಲ ಕ್ರಮವೂ ಇಲ್ಲ.
ಯಾವುದಕ್ಕೂ ಪುರುಸೊತ್ತಿಲ್ಲದ e-ವೇಗದ ಜಗತ್ತಿನಲ್ಲಿ ಪುಸ್ತಕ ಓದಿಕೊಂಡು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯವಾಗದು. ಆದುದರಿಂದ ಆಡಿಯೋಗಳನ್ನು ಎಂಪಿ3ನಲ್ಲಿ ಆಲಿಸುತ್ತಾ ಚಲನಶೀಲರಾಗಿರಿ ಎಂದು ಆಡಿಯೋಗಳನ್ನು ಮಾರುಕಟ್ಟೆಗೆ ತಂದವರು ಹೇಳುತ್ತಿದ್ದಾರೆ. ಲಂಡನ್ನಿನ ಬ್ಯೂಟಿಫುಲ್ ಬುಕ್ಸ್ ಸಂಸ್ಥೆಯ ಹೆಮ್ಮೆಯ ಹೊಸ ಕೊಡುಗೆ ಈ ಆಡಿಯೋ. ನಟಿ ತಾನ್ಯ ಫ್ರಾಂಕ್ಸ್ ಕಂಠದಲ್ಲಿ ಕಾಮಸೂತ್ರದ ಮಂತ್ರಗಳು ಹೊರಹೊಮ್ಮುತ್ತವೆ. ಮಿಲನ ಮಹೋತ್ಸವದ ಸೂತ್ರಗಳನ್ನು ವರ್ಣಿಸುವ ಅಧ್ಯಾಯವೂ ಸೇರಿದಂತೆ ವಾತ್ಸ್ಯಾಯನ ನಿರೂಪಿಸಿದ ಲೈಂಗಿಕ ಶಾಸ್ತ್ರದ 64 ಸ್ಕಿಲ್ ಸೆಟ್ಸ್ ಆಕೆಯ ಕೋಕಿಲ ಕಂಠದಲ್ಲಿ ಮೊಳಗುತ್ತವೆ.ಪುಸ್ತ ಕದ ಬೆಲೆ 8.99 ಡಾಲರು.

ಅವರಿವರು ಎದುರುಗಡೆ ಇರುವಾಗ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓದುವುದಕ್ಕೆ ಅನೇಕರಿಗೆ ಮುಜಗರ ಆಗಬಹುದು. ಆ ಮುಜಗರ ಅಥವಾ ಸಂಕೋಚಗಳನ್ನು ಈ ಆಡಿಯೋ ನಿವಾರಿಸುತ್ತದೆ. ಆಡಿಯೋ ಆಲಿಸುತ್ತಾ ಆಲಿಸುತ್ತಾ ನೀವು ತಲ್ಲೀನರಾಗಬಹುದು ಎಂದು ಬ್ಯೂಟಿಫುಲ್ ಬುಕ್ಸ್ ಅಂಗಡಿಯ ಆಡಳಿತ ನಿರ್ದೇಶಕ ಸೈಮನ್ ಪೆಥರಿಕ್ ಹೇಳುತ್ತಾರೆ ಎಂದು ದಿ ಗಾರ್ಡಿಯನ್ ಪತ್ರಿಕೆಯ ಒಂದು ವರದಿ ಹೇಳುತ್ತದೆ.

"ಕಾಮಸೂತ್ರದ ಶ್ಲೋಕಗಳನ್ನು ಆಡಿಯೋ ಮುದ್ರಿಕೆಗೆ ಹೇಳುತ್ತೀಯಾ ಎಂದು ನನ್ನನ್ನು ಕೇಳಿಕೊಂಡಾಗ ನನಗೆ ಪುಳಕ ಮತ್ತು ಅಳುಕು ಏಕಕಾಲಕ್ಕೆ ಉಂಟಾಯಿತು" ಎಂದು ತಾನ್ಯ ಫ್ರಾಂಕ್ಸ್ ಹೇಳಿದರಂತೆ. ಆದರೆ, ಕಂಠದಾನ ಮಾಡಿ ಮುಗಿಸಿದಾಗ ಮನಸ್ಸು ನಿರುಮ್ಮಳವಾಯಿತು ಎಂದು ತನ್ಯ ಧನ್ಯಳಾದವಳಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Listen to Kamasutra for better sex. kamasutra audio book version released by Beautiful book stores, london.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more