ಕನ್ನಡದಲ್ಲಿ ಮಾತಾಡಿದರೆ ವಿಶೇಷ ರಿಯಾಯತಿ
ಕನ್ನಡದಲ್ಲಿ ಮಾತನಾಡಿ ಮತ್ತು ಹಾಗೆ ಮಾಡುವುದರಿಂದ ಅಧಿಕ ಲಾಭ ಪಡೆಯಿರಿ ಎನ್ನುತ್ತದೆ ಬೆಂಗಳೂರಿನಲ್ಲಿರುವ ಒಂದು ಅಂಗಡಿ. ಇದೇನು ತಮಾಷೆಯಲ್ಲ. ರಿಂಗ್ ರಸ್ತೆ ಕೋರಮಂಗಲದಲ್ಲಿರುವ ಡಾ.ಮೆಡಿಕಲ್ಸ್ ಹೆಸರಿನ ಒಂದು ಔಷಧದ ಅಂಗಡಿಯಲ್ಲಿ ಕನ್ನಡ ಮಾತನಾಡಿ ಹೆಚ್ಚುವರಿ ರಿಯಾಯಿತಿ ಪಡೆಯಿರಿ ಎಂದು ಅಂಗಡಿಯ ನಾಮಫಲಕದಲ್ಲೇ ಬರೆಯಲಾಗಿದೆ.
ಅಂಗಡಿಯಾತ ಹೇಳುವ ಪ್ರಕಾರ ಎಲ್ಲಾ ಔಷಧಗಳ ಎಂ ಆರ್ ಪಿ ಬೆಲೆಗಳ ಮೇಲೆ ಶೇ.10 ರಿಯಾಯಿತಿ ಕೊಡಲಾಗುತ್ತದೆ. ಆದರೆ ತಾವು ದೊಡ್ಡ ಮನಸ್ಸು ಮಾಡಿ ಅಥವಾ ರಿಯಾಯಿತಿ ಆಶೆಯಿಂದಲಾದರೂ ಕನ್ನಡದಲ್ಲೇ ಮಾತನಾಡಿದರೆ ಹೆಚ್ಚುವರಿ ಶೇ.1 ರಿಯಾಯಿತಿ ಸಿಗುತ್ತದೆ. ಅಲ್ಲಿಗೆ, ಕನ್ನಡದಲ್ಲಿ ಸೊಲ್ಲೆತ್ತಿದರೆ ಮತ್ತೊಂದಿಷ್ಟು ಲಾಭ ಸಿಕ್ಕತ್ತೆ ಎಂದಾಯಿತು.
ಕನ್ನಡದಲ್ಲಿ ಮಾತನಾಡಿ ಎಂಬ ಫಲಕವನ್ನು speak kannada and get 1% discount ಎಂದು ಇಂಗ್ಲಿಷ್ನಲ್ಲಿ ಯಾಕೆ ಬರೆದಿದ್ದಾರೆ ಎಂದು ಕನ್ನಡ ಹಠವಾದಿಗಳು ಹುಬ್ಬೇರಿಸಬಹುದು. ಮತ್ತು, ಅಂಗಡಿಯಾತನ ಕನ್ನಡ ಪ್ರೇಮವನ್ನು ದಟ್ಸ್ ಕನ್ನಡ ಕಾಮೆಂಟ್ ವಿಭಾಗದಲ್ಲಿ ಹೀಯಾಳಿಸಲೂಬಹುದು. ಆದರೆ, ವಿಷಯ ಏನಪ್ಪಾ ಅಂದ್ರೆ ಕನ್ನಡದಲ್ಲಿ ವ್ಯವಹರಿಸುವವರು ಯಥಾಪ್ರಕಾರ ಕನ್ನಡದಲ್ಲಿ ಮಾತನಾಡಿ ರಿಯಾಯಿತಿ ಪಡೆಯಬಹುದು. ಆದರೆ, ಕನ್ನಡವೇ ಗೊತ್ತಿಲ್ಲದ ಗಿರಾಕಿಗಳಿಗೆ ಕನ್ನಡದಲ್ಲಿ ಮಾತನಾಡುವ ಪ್ರೀತಿ ಉಕ್ಕಿಬರಲಿ ಎಂಬ ಉದ್ದೇಶದಿಂದ ಇಂಗ್ಲಿಷ್ ಬಳಸಲಾಗಿದೆ.
ಕೇವಲ ಇಂಗ್ಲಿಷ್, ಕೇವಲ ತಮಿಳು, ಕೇವಲ ಬಂಗಾಲಿ, ಕೇವಲ ತೆಲುಗು, ಕೇವಲ ಮಲೆಯಾಳಂ ಮಾತನಾಡುವವರು ಬೆಂಗಳೂರಿನಲ್ಲಿ ಹೆಚ್ಚು ಜನ ಇದ್ದಾರೆ. ಕನ್ನಡ ಮಾತನಾಡುವುದಕ್ಕೂ ಬರದ ಈ ಜನಸ್ತೋಮಕ್ಕೆ ಕನ್ನಡದ ಬೆಲೆ ಗೊತ್ತಾಗಲಿ ಎಂಬ ಉದ್ದೇಶದಿಂದ ಔಷಧ ಬೆಲೆಗಳಲ್ಲಿ ರಿಯಾಯತಿಯನ್ನು ಆಂಗ್ಲ ಭಾಷೆಯಲ್ಲಿ ಸಾರಲಾಗಿದೆ. ಇದನ್ನು ಕನ್ನಡ ಕಲಿಯದ ಜನಕ್ಕೆ ಅಂಗಡಿಯಾತ ಕೊಟ್ಟಿರುವ ರಿಯಾಯತಿ ಗುಳಿಗೆ ಎಂದೂ ಕರಿಯಲಿಕ್ಕೆ ಅಡ್ಡಿಯಿಲ್ಲ.
ಅಂದಹಾಗೆ, ರಿಯಾಯಿತಿ ಪಡೆಯುವುದಕ್ಕೋಸ್ಕರವೆ ತಕ್ಷಣ ಕನ್ನಡ ಕಲಿಯುವುದು ಹೇಗೆ? ಸದ್ಯದಲ್ಲೇ ಇಲ್ಲಿ ಯಾರಾದರು ಕನ್ನಡ ಕಲಿ ತರಗತಿಗಳನ್ನು ಆರಂಭಿಸಿದರೆ ಕನ್ನಡ ಹೇಳಿಕೊಡುವವರಿಗೂ ಲಾಭ, ಕಲಿಯುವವರಿಗೂ ಲಾಭ ಮತ್ತು ಔಷಧ ಮಾರುವ ಅಂಗಡಿಗೂ ಲಾಭ. ಶುಭ ಲಾಭ, ಲಾಭವೋ ಲಾಭ.
ತಮಾಷೆಯ ಗೋಡೆ ಬರಹಗಳ ಗ್ಯಾಲರಿ
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications