ನಿಮ್ಮ ಮೊಬೈಲ್ ನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ

ಮೊಬೈಲ್ ಬಳಕೆದಾರರಿಗೆ ದಟ್ಸ್ ಕನ್ನಡ ಸುದ್ದಿ ಸಮಾಚಾರಗಳನ್ನು ತಲುಪಿಸುವ ಹೊಸ ಸೇವೆಯನ್ನು ಮೈಟುಡೆ.ಕಾಂ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಆರಂಭಿಸಿದೆ. ಇಡೀ ಜಗತ್ತಿನ ಆಗುಹೋಗುಗಳ ಬಗ್ಗೆ ಮೊಬೈಲಿಗೆ ಬಂದು ಬೀಳುವ ಸಂದೇಶಗಳ ಮುಖಾಂತರ ನೀವು ಎಲ್ಲೇ ಇದ್ದರೂ ತಿಳಿಯಬಹುದು. ಕನ್ನಡ ಭಾಷೆಯಲ್ಲಿ ಸುದ್ದಿಗಳು ಮಾತ್ರವಲ್ಲ ಸಿನೆಮಾ ಜಗತ್ತಿನ ಸ್ವಾರಸ್ಯಕರ ಸಂಗತಿಗಳು ನಿಮಗೆ ತಿಳಿಯಲಿವೆ.
ಈ ಸಂದೇಶಗಳ ವಿಶೇಷತೆಯೇನೆಂದರೆ, ನಿಮ್ಮ ಬಳಿ ಇಂಟರ್ನೆಟ್ ಮೊಬೈಲ್ ಇದ್ದರೆ ಸಂದೇಶಗಳ ಜೊತೆ ಇರುವ ಲಿಂಕ್ ಕ್ಲಿಕ್ ಮಾಡಿ ಸುದ್ದಿಯ ಸಂಪೂರ್ಣ ವಿವರ ಪಡೆಯಬಹುದು. ಕಚೇರಿಯಲ್ಲೇ ಇರಿ, ಬೈಕ್ ಮೇಲೆ ಓಡಾಡುತ್ತಲೇ ಇರಿ, ತಾಜಾ ತಾಜಾ ಸುದ್ದಿಗಳನ್ನು ನಿಮ್ಮದಾಗಿಸಿಕೊಳ್ಳಿರಿ.
ಈ ಸೇವೆಗೆ ಚಂದಾದಾರರಾಗಲು ಅಗತ್ಯವಿರುವ ಶುಲ್ಕವನ್ನು ತಿಳಿದರೆ ಹೌಹಾರಿ ಬೀಳುತ್ತೀರಿ! ತಿಂಗಳಿಗೆ ಬರೀ 10 ರು. ವರ್ಷಕ್ಕೆ 120 ರು. ಮಾತ್ರ! (ಇಂದೇ ಚಂದಾದಾರರಾಗಿ 7 ದಿನಗಳ ಉಚಿತ ಎಸ್ಎಮ್ಎಸ್ ಪಡೆಯಿರಿ.) ಈ ಹಣವನ್ನು ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್-ಬ್ಯಾಂಕಿಂಗ್ ಖಾತೆ, ಚೆಕ್ ಮುಖಾಂತರ, ಫೋನ್ ಮುಖಾಂತರ ಕ್ರೆಡಿಟ್ ಕಾರ್ಡ್ ಬಳಸಿ ಅಥವಾ ಮತ್ತಿತರ ಪ್ರಿಪೇಯ್ಡ್ ಕ್ಯಾಷ್ ಕಾರ್ಡ್ ಬಳಸಿ ಪಾವತಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ
ಕನ್ನಡ ಸುದ್ದಿಗಳಿಗೆ ಚಂದಾದಾರರಾಗುವುದು ಸುಲಭ
ಮೊಬೈಲ್ ಮೂಲಕ ONE-KNNEWS ಸಂದೇಶವನ್ನು 09212 012345 ನಂಬರಿಗೆ ಕಳಿಸಿ, ಅಷ್ಟೇ. ಈ ಸೌಲಭ್ಯ ಭಾರತದಲ್ಲಿ ಮಾತ್ರ ಲಭ್ಯ. ಕನ್ನಡ ಸುದ್ದಿಗಳ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಸಂದರ್ಶಿಸಿ.
ಚಂದಾದಾರರಾಗಿ ಮತ್ತು ದಿನಕ್ಕೆ ನಾಲ್ಕು ಬಾರಿ ಕನ್ನಡ ಸುದ್ದಿಗಳನ್ನು ಮತ್ತು ಎರಡು ಬಾರಿ ಸಿನೆಮಾ ಸುದ್ದಿಗಳನ್ನು ಮೊಬೈಲಿನಲ್ಲಿ ಪಡೆಯಿರಿ. 7 ದಿನಗಳ ಉಚಿತ ಸೇವೆಯನ್ನು ಪಡೆಯಲು ಕೂಡಲೇ ಚಂದಾದಾರರಾಗಿರಿ. ಈ ಸುದ್ದಿಗಳನ್ನು ನೀಡುತ್ತಿರುವುದು, ನಿಮ್ಮ ಅಚ್ಚುಮೆಚ್ಚಿನ ಕನ್ನಡ ಬಂಟ ದಟ್ಸ್ ಕನ್ನಡ.
ನಿಮ್ಮ ಮೊಬೈಲಲ್ಲಿ ಕನ್ನಡ ಲಿಪಿಗೆ ಬೆಂಬಲವಿದೆಯೇ ಪರೀಕ್ಷಿಸಿ.












Click it and Unblock the Notifications