ಮೇಯರ್ ಬರುತ್ತಿದ್ದಾರೆ, ದಾರಿಬಿಡಿ

ಜತೆಗೆ ರಾತ್ರಿ ಹೊತ್ತು ದೀಪ ಇಲ್ಲದೆ ಸೈಕಲ್ ಹೊಡೆಯುವಂತಿರಲಿಲ್ಲ. ಅಟ್ಲಾಸ್, ಹೀರೋ ಮುಂತಾದ ಸೈಕಲ್ಲುಗಳಿಗೆ ಡೈನಮೋ ಇರುತ್ತಿತ್ತು. ಅದು ಕೆಟ್ಟುಹೋದಾಗ ಚಾಲಕರು ಟಾರ್ಚ್ ಹಿಡಿದುಕೊಂಡೋ ಅಥವಾ ಬುಡ್ಡಿ ದೀಪ ಇಟ್ಟುಕೊಂಡೋ ಸೈಕಲ್ ಹೊಡೆಯುತ್ತಿದ್ದರು. ರಾತ್ರಿ ಪಾಳಿ ಮುಗಿಸಿಕೊಂಡು ಮನೆಗೆ ವಾಪಸ್ಸಾಗುವ ನೌಕರರಿಗೆ ಈ ಅನುಭವ ಚೆನ್ನಾಗಿ ಆಗಿರುತ್ತದೆ.
ಬಿಸಿಸಿ ಕ್ರಮೇಣ ಬಿಎಂಪಿ ಎನಿಸಿಕೊಂಡಿತು. BMP ಎಂದರೆ ಬೆಂಗಳೂರು ಮಹಾನಗರ ಪಾಲಿಕೆ. ವಾರ್ಡುಗಳಿಂದ ಆಯ್ಕೆಯಾಗಿ ಬಂದ ಬಹುಮತಗಳಿಸಿದ ಪಕ್ಷದ ನಗರಸಭಾ ಸದಸ್ಯರು ಆಡಳಿತದ ಚುಕ್ಕಾಣಿ ಹಿಡಿದು ನಗರವನ್ನು ಆಳುತ್ತಿದ್ದರು. ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮತ್ತು ಒದಗುವ ಸೌಕರ್ಯಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆಯೇ ಎಂದು ಉಸ್ತುವಾರಿ ಮಾಡುವುದು ಬಿಸಿಸಿಯ ಪ್ರಾಥಮಿಕ ಜವಾಬ್ದಾರಿಯಾಗಿತ್ತು.
ಯಾವುದೇ ಹೆಸರಿನಿಂದ ಕರೆದರೂ ಬೆಂಗಳೂರಿನ ಒಂದು ಮಹಾನ್ ಸಂಸ್ಥೆಯಾದ ಇದು ಮೂಲತಃ ಮುನಿಸಿಪಾಲಿಟಿನೇ. ರಸ್ತೆ ನಿರ್ಮಾಣ, ಪಾದಚಾರಿ ದಾಟುದಾರಿ, ಫುಟ್ ಪಾತ್ ನಿರ್ಮಾಣ, ಬೀದಿ ದೀಪ, ತಿಪ್ಪಗೊಂಡನಹಳ್ಳಿ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ, ಬೀದಿನಾಯಿಗಳ ಹಾವಳಿ ತಡೆಗಟ್ಟುವಿಕೆ, ಮನೆಗಂದಾಯ ವಸೂಲಿ ಮುಂತಾದ ಕೆಲಸ, ಕಾರ್ಯಗಳನ್ನು ನಿರ್ವಹಿಸುತ್ತಿತ್ತು.
ಬರಬರುತ್ತಾ ಬೆಂಗಳೂರು ಬೃಹದಾರಣ್ಯವಾಗತೊಡಗಿತು. ನಗರದ ಸುತ್ತಮುತ್ತಲಿನ ಹಳ್ಳಿಗಳನ್ನು ನಗರ ನುಂಗುತ್ತಿದ್ದಂತೆ ಗ್ರಾಮೀಣ ಪ್ರದೇಶಗಳು, ಹೊಲಗದ್ದೆ ತೋಟಗಳು ಸೈಟುಗಳಾಗತೊಡಗಿದವು. ಮೊದಲಿಗೆ ರೆವಿನ್ಯೂ ಸೈಟುಗಳಾದವು. ಆನಂತರ ಡಿಸಿ ಕನ್ವರ್ಷನ್ ಆಗಿ ಕ್ರಮೇಣ ಬಿಡಿಎ ಪ್ಯಾಪ್ತಿಗೆ ಬಂದವು. ಹೀಗೆ ಹೊಸ ಪ್ರದೇಶಗಳು ಬಿಎಂಪಿ ಬಾಹುಳ್ಯಕ್ಕೆ ಸೇರಿಕೊಂಡು ಬೆಂಗಳೂರು ವಿಶಾಲ ಬೆಂಗಳೂರು ಎನಿಸಿತು. ಈ ಹೊಸ ಬೆಂಗಳೂರಿಗೆ ಸರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಂದು ನಾಮಕರಣ ಮಾಡಿತು.
ಬಿಬಿಎಂಪಿಯಾದ ನಂತರ ಬೆಂಗಳೂರು ಎದುರಿಸುತ್ತಿರುವ ಮೊದಲ ಚುನಾವಣೆ ಈಗ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ನಾನಾ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ನಿಮ್ಮ ಮನೆ ಬಾಗಿಲಿಗೆ ಬಂದು ಮತ ಕೇಳುತ್ತಿದ್ದಾರೆ. ಅವರು ಮನೆಗೆ ಬಂದಾಗ ನೀವು ಬೀಗ ಹಾಕಿಕೊಂಡು ಹೊರಗಡೆ ಹೋಗಿದ್ದರೆ ಬಾಗಿಲ ಚಿಲಕಕ್ಕೆ ಅಥವಾ ಗೇಟಿಗೆ ನಿಮ್ಮ ಅಮೂಲ್ಯ ಮತ ಯಾಚಿಸುವ ಕರಪತ್ರವನ್ನು ಸಿಕ್ಕಸಿ ಹೋಗಿರುತ್ತಾರೆ.
ಮುನಿಸಿಪಾಲಿಟಿ ನಿರ್ವಹಿಸುವ ಮೂಲಭೂತ ಜವಾಬ್ದಾರಿಗಳ ಜತೆಗೆ ಬಿಬಿಎಂಪಿ ಮಾಡಬೇಕಾದ ಕೆಲಸಗಳ ಪಟ್ಟಿ ಈಚೆಗೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಪಾರ್ಕಿಂಗ್ ಲಾಬಿ, ನಗರಸಭೆಯ ಜಾಗವನ್ನು ಒತ್ತುವರಿ ಮಾಡುವ ಲಾಬಿ, ಕಟ್ಟಡ ವಿನ್ಯಾಸವನ್ನು ಇಂಟರ್ ಪ್ರಿಟ್ ಮಾಡುವ ಲಾಬಿ, ರಸ್ತೆ ಅಗಲೀಕರಣದ ಲಾಬಿ, ಮರ ಕೆಡವಿ ಉರುಳಿಸುವ ಲಾಬಿ, ರಸ್ತೆಗೆ ಟಾರ್ ಬಣ್ಣ ಬಳಿಯುವ ಲಾಬಿ, ಅಕ್ರಮಗಳನ್ನು ಸಕ್ರಮ ಮಾಡುವ ಮತ್ತು ಸಕ್ರಮಗಳನ್ನು ಅಕ್ರಮ ಮಾಡುವ ಲಾಬಿ ಇನ್ನೂ ನಾನಾ ತರಹದ ಲಾಬಿಗಳು ಹುಟ್ಟಿಕೊಂಡು ಬೆಂಗಳೂರು ಸ್ವತಃ ತನ್ನ ಅಧಿಕಾರದ ವ್ಯಾಪ್ತಿಯನ್ನೇ ಅರ್ಥ ಮಾಡಿಕೊಳ್ಳಲಾಗದಷ್ಟು ಸಂಕೀರ್ಣವಾಗಿದೆ.
ಈಗ ಬಿಬಿಎಂಪಿ ಚುನಾವಣೆ ಬಂದಿದೆ. 198 ವಾರ್ಡುಗಳಲ್ಲಿ ಪ್ರಮುಖ ಮೂರು ಪಕ್ಷಗಳಾದ ಕಾಂಗ್ರೆಸ್, ಭಾಜಪ, ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 1504 ಹುರಿಯಾಳುಗಳು ಬೆಂಗಳೂರು ಸೇವೆ ಮಾಡಲು ಜಿದ್ದಾಜಿದ್ದಿ ಸ್ಪರ್ಧೆಗೆ ಇಳಿದಿದ್ದಾರೆ. ಮಾರ್ಚ್ 28 ಭಾನುವಾರ ಮತದಾನ. ಏಪ್ರಿಲ್ 5 ಸೋಮವಾರ ಮತಗಳ ಎಣಿಕೆ. ಬಹುಮತಗಳಿಸಿದ ಪಕ್ಷಕ್ಕೆ ಅಧಿಕಾರ. ಅಥವಾ fractured mandate ಆದರೆ ಮೈತ್ರಿಕೂಟವೇ ಆಗತ್ತೋ ಯಾರಿಗೆ ಗೊತ್ತು. ಅಂತೂ ಮೂರು ವರ್ಷಗಳ ನಂತರ ಬೆಂಗಳೂರು ನಗರಸಭೆಗೆ ಒಬ್ಬ ಮಹಾಪೌರ ಅಥವಾ ಮೇಯರ್ ಆಗಮಿಸುತ್ತಿದ್ದಾರೆ, ಸ್ವಾಗತಕ್ಕೆ ಸಿದ್ದರಾಗಿ.
ನಿಮ್ಮ ವಾರ್ಡ್ ಯಾವುದು, ಹೆಸರು ಪಟ್ಟಿಯಲ್ಲಿದೆಯೆ ತಿಳಿಯಿರಿ
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications