...ಉಂಡು ಮಲಗುವ ತನಕ : ಅವರಿವರ ಅನಿಸಿಕೆಗಳು
(ಈ ಗಾದೆ ತಮ್ಮ ದೃಷ್ಟಿಯಲ್ಲಿ ಹೇಗೆ? ಎಂದು ಓದುಗರು ಹೇಳಿಕೊಳ್ಳುತ್ತಿದ್ದಾರೆ , ಓದಿ- ಸಂಪಾದಕ)
‘ಉಂಡು ಮಲಗುವುದು’ ಸಮೃಧ್ಧಿಯ ಸಂಕೇತ
ಮನುಷ್ಯ ಮನುಷ್ಯನ ನಡುವೆ ವಾದ, ವಿವಾದ, ಜಗಳ, ಸಹಜವೇ. ಅದರಲ್ಲೂ, ಒಂದು ಗಂಡು ಹಾಗೂ ಒಂದು ಹೆಣ್ಣಿನ ಭಾವನಾತ್ಮಕ ಸಂಬಂಧಗಳಲ್ಲಿ ಮನಸ್ತಾಪಗಳು ಅನಿವಾರ್ಯ.
ಈ ಗಾದೆಯನ್ನು ಓದಿದೊಡನೆ ಹೊಳೆಯುವುದೇನೆಂದರೆ, ಗಂಡ-ಹೆಂಡತಿಯ ಜಗಳ ಮಾತ್ರ ಯಾಕೆ ಉಂಡು ಮಲಗುವ ತನಕ ? ಅತ್ತೆ-ಸೊಸೆ, ಅಣ್ಣ-ತಮ್ಮ, ಅಕ್ಕ-ತಂಗಿಯರ ಜಗಳ ಅಂತ ಯಾಕೆ ಅನ್ನುವುದಿಲ್ಲ ? ಯಾವುದೋ ಒಂದು ಸಂಬಂಧ ತೆಗೆದುಕೊಳ್ಳಬೇಕಿತ್ತು, ಗಂಡ-ಹೆಂಡತಿ ಅಂತ ಇಲ್ಲಿ ತೆಗೆದುಕೊಂಡಿದ್ದಾರೆ ಎಂದು ಏನೂ ಹುರುಳಿಲ್ಲದ ವಾದ ಮಾಡಬಹುದು. ಆದರೆ, ನಮ್ಮ ಹಿರಿಯರು ಇದಕ್ಕಿಂತ ಬಹಳ ಬುದ್ಧಿವಂತರು. ‘ಉಂಡು ಮಲಗುವುದು’ ಸಮೃಧ್ಧಿಯ ಸಂಕೇತ. ಆದರೆ, ಬರಿ ಅಷ್ಟೇ ಮಾಡಿದರೆ ಆಡಿದ ಜಗಳ ಮರೆತುಹೋಗುವುದಿಲ್ಲ.
ಗಂಡ-ಹೆಂಡತಿ ಮಲಗಿದ ನಂತರ ಏನು ಮಾಡುತ್ತಾರೆ ಎಂದು ಗಾದೆಯಲ್ಲಿ ವಿಸ್ತಾರವಾಗಿ ಬಿಡಿಸಿ ಹೇಳಬೇಕಿಲ್ಲ. ಮದುವೆ ಆಗಿರುವ, ಆಗದಿರುವವರೆಲ್ಲರಿಗೂ ಅದು ಗೊತ್ತಿರುವ ವಿಷಯವೇ. ಈ ಗಾದೆಯನ್ನು ಹುಟ್ಟುಹಾಕಿದ ಹಿರಿಯರ ಹಿರಿಯರು ಹೇಳಿರಲಿಲ್ಲವೇ - ‘‘ಕಾಮಾತುರಾಣಾಂ ನ ಭಯೋ ನ ಲಜ್ಜ’’ ಎಂದು ? ಕಾಮ ಆರೋಗ್ಯಕ್ಕೂ ಒಳ್ಳೆಯದು, ಮನಸ್ಸಿಗೂ ಒಳ್ಳೆಯದು. ದೇಹವನ್ನು ತಣಿಸಿ, ಮನಸ್ಸಿನ ತೃಷೆಯನ್ನು ನೀಗಿಸುವ ಕ್ರಿಯೆಯು ಯಾವ ಜೀವಿಯನ್ನೂ ಉದ್ಧರಿಸುವಂತಹದ್ದು. ಇಷ್ಟಾದ ಮೇಲೆ ಗಂಡ-ಹೆಂಡತಿಗೆ ಜಗಳ ಎಲ್ಲಿ ನೆನಪಿರಬೇಕು ?
- ಸುಕುಮಾರ್ ಎಸ್. ರಘುರಾಂ
*
ಪಾಲಿಗೆ ಬಂದದ್ದು ಪಂಚಾಮೃತ
ಗಂಡಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತು ಈಗಿನ ಕಾಲಕ್ಕೆ ಅನ್ವಯಿಸುವುದಿಲ್ಲ. ಜೀವನದ
ಏಳು ಬೀಳುಗಳನ್ನು ಸಮಾನಾಂತರವಾಗಿ ಸ್ವೀಕರಿಸುವ ಮನೋಭಾವ ಕಡಿಮೆಯಾಗಿ, ಕೊರಗು ಜಾಸ್ತಿಯಾಗಿದೆ. ಇದರಿಂದ ರೋಗರುಜಿನಗಳು ಹೆಚ್ಚಾಗಿದೆ. ನಗು ಕಾಣದಾಗಿದೆ.ಅದರಲ್ಲೂ ಹೆಂಗಸರಿಗೆ ಸಮಾನ ಹಕ್ಕು ದೊರೆಯಬೇಕು, ಅವರು ಗಂಡಸರಿಗಿಂತ ಯಾವುದರಲ್ಲೂ ಕಡಿಮೆಇಲ್ಲ ಅನ್ನುವ ಸಾಧನೆ ಯಾರಲ್ಲಿ ತಪ್ಪಿದ್ದರೂ ಒಪ್ಪಿಕೊಳ್ಳದೆ ನಾನೇನು ನಿನಗಿಂತ ಯಾವುದರಲ್ಲೂ ಕಡಿಮೆಇಲ್ಲ ನಾನು ನಿನ್ನ ದಾಸಿಯೂ ಅಲ್ಲ ಅನ್ನುವ ತರ್ಕದಮೇಲೆ ದಾಂಪತ್ಯ ನಿಂತಿದೆ.
ಹಿಂದೆ ಹೆಂಡತಿ ಆದವಳು ಗಂಡನನ್ನು ಅನುಸರಿಸಿಕೊಂಡು ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಅತ್ತೆಮಾವನ ಸೇವೆಯೇ ದೇವರ ಕಾರ್ಯವೆಂದು ತಪ್ಪು ಒಪ್ಪುಗಳಿಂದ ಜೀವನವನ್ನು ಒಪ್ಪ ಓರಣವಾಗಿ ಸಾಗಿಸುತ್ತಿದ್ದರು.ಈ ಗಾದೆ ಆ ಕಾಲಕ್ಕೆ ಒಪ್ಪುತ್ತಿತ್ತು.
ಈಗ ಜೀವನದ ಅಲ್ಪ ಸುಖಕ್ಕೆ ಮೌಲ್ಯವಿಲ್ಲ. ದೊಡ್ಡ ದೊಡ್ಡ ಬಂಗಲೆಯೇ ಆಗಬೇಕು,ಬೆನ್ಜ್ ಮೋಟಾರು ಕಾರಾಗಬೇಕು. ಅದಿಲ್ಲದಿದ್ದರೆ ನಮ್ಮ ಅಪ್ಪನ ಮನೆಗೆ ಹೋಗ್ತೀನಿ, ಲಾಯರ್ ನೋಟೀಸು ಕಳುಹಿಸ್ತೀನಿ. ನಾನು ನೀನು ಇಬ್ಬರೇ ಇರಬೇಕು. ಮನೆಗೆ ಯಾರು ಬರಬೇಕು, ಯಾರು ಹೋಗಬೇಕು ಎಲ್ಲದರಲ್ಲೂ ಕಡಿವಾಣ ಇರಬೇಕು.
ದೊಡ್ಡವರು,ಚಿಕ್ಕವರು ನೋಡುವುದಿಲ್ಲ. ಬಾಯಿಗೆ ಬಂದಹಾಗೆ ಮಾತಾಡಿಕೊಂಡು,ಮನಸಾ ಇಚ್ಚೇ ತಿರುಗಿಕೊಂಡು ಇರುತ್ತಾರೆ.ಗಂಡಸರು ತಾನೆ ಎಷ್ಟು ಸಹಿಸಿಕೊಳ್ಳುತ್ತಾರೆ. ನಿತ್ಯ ಸಾಯುವವರಿಗೆ ಅಳುವವರಾರು , ಪಾಲಿಗೆ ಬಂದದ್ದು ಪಂಚಾಮೃತ ಅಂತ ಸುಮ್ಮನಿರುತ್ತಾರೆ. ಮನೆ ರಂಪ ಬೀದಿ ರಂಪಗಳಾಗಿವೆ.
ಅದರಲ್ಲೂ ಹುಡುಗಿ ಹುಡುಗನಿಗಿಂತಾ ಅನುಕೂಲವಾಗಿದ್ದರಂತೂ ಗಂಡಂದಿರ ಪಾಡು ನಾಯಿಪಾಡಾಗಿರುತ್ತೆ.
- ಅನುರಾಧ ಅರುಣ್, ಇಲಿನಾಯ್‌ು
*
Beyond the Grind
Nature has instilled in all living beings a force that goes beyond the grind of every day living. That is the force of procreation, ever uplifting and rejuvenating. It bonds mind and spirit.
- Maina
*
ಗಂಡ-ಹೆಂಡಿರ ಜಗಳ
ಕೈತುಂಬ ಸಂಬಳವ ತರದಿರುವ ಗಂಡ
ಗೊಜ್ಜು ಮಜ್ಜಿಗೆಹುಳಿ ಕೇಳದಿರು ಭಂಡ
ನಿನ್ನ ರೂಪವ ಕಂಡು ಮರುಳಾದೆ ಬೆಡಗಿ
ಕಿರಿಕಿರಿ ಮಾಡದೇ ಮಾಡು ನೀ ಅಡುಗಿ
ಮಾರುಕಟ್ಟೆಗೆ ಹೋಗಿ ತರಕಾರಿ ಕೊಂಡುಬಾ
ಇಲ್ಲದಿರೆ ಹೋಟಲಲೆ ಮನಸಾರೆ ಉಂಡುಬಾ
ನಿಮ್ಮಪ್ಪ ಕೊಟ್ಟ ಪುಡಿ-ಚಿಲ್ಲರೆಯ ತಾರೇ
ನಾವಿಬ್ಬರೂ ಹೋಟಲಿಗೆ ಹೋಗೋಣ ಬಾರೆ
ಕಪಿಮುಷ್ಟಿ ನಿಮ್ಮಪ್ಪನಾಸ್ತಿಯೂ ಸಿಕ್ಕರೆ
ನಮ್ಮಿಬ್ಬರಾ ಜೋಡಿ ಬರಿ ಹಾಲು ಸಕ್ಕರೆ
ಸಂಜೆ ಸಿನಿಮಾ ನೋಡಿ ಹೊರಗಡೆ ಊಟ
ಫಟಫಟನೆ ರೆಡಿಯಾಗು ಕೊಡದೇ ನೀ ಕಾಟ
ಟಿಕೇಟು ಸಿಗಲಿಲ್ಲ ಯಾವ ಥಿಯೆಟರಿನಲ್ಲು
ಎಲ್ಲೆಲ್ಲಿ ನೋಡಿದರು ಬರಿ ಹೌಸು-ಫುಲ್ಲು
ನಿನ್ನಿಂದ ತಡವಾಯ್ತು ಅದಕೇ ನಿರಾಸೆ
ಕೊನೆಪಕ್ಷ ತಿನ್ನೋಣ ಹೋಟಲಲಿ ದೋಸೆ
ದಾರಿ ಉದ್ದಕು ಕದನ ಮನೆ ತಲಪುವನಕ
ಗಂಡ-ಹೆಂಡಿರ ಜಗಳ ಉಂಡು-ಮಲಗನಕ!
- ಡಾ. ಮೈ.ಶ್ರೀ. ನಟರಾಜ, ಪೊಟೊಮೆಕ್, ಮೇರೀಲ್ಯಾಂಡ್
*
‘ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ’ ಇದು ಹಳೆಯ ಗಾದೆ. ‘ಗಂಡ ಹೆಂಡತಿ ಜಗಳ ಇಬ್ಬರಲ್ಲಿ ಒಬ್ಬರು ಶಾಶ್ವತವಾಗಿ ಮಲಗುವ ತನಕ’ ಎಂಬುದು ಹೊಸ ಗಾದೆ.
- ವಿ.ಎಸ್.ಶೇಷಾದ್ರಿ, ಮೈಸೂರು
*
ಗಂಡ ಮನೆಯಲ್ಲಿದ್ದಾಗ, ಹೆಂಡತಿ ಕಚೇರಿಯಲ್ಲಿರುತ್ತಾಳೆ. ಹೆಂಡತಿ ಮನೆಯಲ್ಲಿದ್ದಾಗ, ಗಂಡ ಕಚೇರಿಯಲ್ಲಿರುತ್ತಾನೆ. ಇದು ಈಗಿನ ಆಧುನಿಕ ವ್ಯವಸ್ಥೆ. ಪರಿಸ್ಥಿತಿ ಹೀಗಿರಬೇಕಾದರೆ, ಉಂಡು ಮಲಗುವ ಮಾತು ಬಹಳ ದೂರ.. ಆದರೆ ಜಗಳಕ್ಕೂ, ಮಕ್ಕಳಿಗೂ ಏನೂ ಕೊರತೆ ಇರುವುದಿಲ್ಲ.
- ಜಿ.ಪ್ರಹ್ಲಾದ್, ಬೆಂಗಳೂರು
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications