• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಗಿನ ಪ್ಲೇಗ್ ಮಲೇರಿಯಾಕ್ಕಿಂತ ಡೇಂಜರ್ ಈಗಿನ ಲವೇರಿಯಾ!

By Staff
|

ಅಷ್ಟಕ್ಕೂ, ಈಗ ಲವ್ ಮಾಡಲು ಭಾರೀ ಶ್ರಮಪಡಬೇಕಾದ ಅಗತ್ಯವಿಲ್ಲ. ಹುಡುಗಿಯೊಬ್ಬಳ ಹಿಂದೆ ತಿಂಗಳು, ಕೆಲವೊಮ್ಮೆ ವರ್ಷಗಟ್ಟಲೆ ತಿರುಗುವ ಕಸರತ್ತೂ ಬೇಕಿಲ್ಲ. ಕಾಡಿ ಬೇಡುವಂತಹ ದೈನೇಸಿತನವೂ ಬೇಡ. ಆಕೆ ಬೀರುವ ಓರೆಗಣ್ಣ ನೋಟಕ್ಕಾಗಿ ದಿನವಿಡೀ ಕಾಯಬೇಕಾದ ಪರಿಸ್ಥಿತಿಯೂ ಇಲ್ಲ. ಒಂದು ನಗು ಚೆಲ್ಲಿದರೆ ಅದೇ ಗ್ರೀನ್ ಸಿಗ್ನಲ್, ಜೀವನ ಪಾವನವಾಯಿತು ಎಂದು ಭಾವಿಸುವಂತಹ ಸನ್ನಿವೇಶವೂ ಇಲ್ಲ. ಈಗ ಪ್ರೇಮಾಂಕುರವಾಗಲು ತಪ್ಪಿ ಕಳುಹಿಸುವ ಒಂದು ಎಸ್ಸೆಮ್ಮೆಸ್ಸು ಅಥವಾ ಮಿಸ್ಡ್ ಕಾಲೂ ಸಾಕು!

  • ಪ್ರತಾಪ್ ಸಿಂಹ

ಆಗಿನ ಪ್ಲೇಗ್ ಮಲೇರಿಯಾಕ್ಕಿಂತ ಡೇಂಜರ್ ಈಗಿನ ಲವೇರಿಯಾ!ಅಯ್ಯಯ್ಯೋ....ಈಗಿನ ಕಾಲದ ಮಕ್ಳಾ? ಕೆಟ್ಟು ಕೆರ ಹಿಡಿದು ಹೋಗಿದ್ದಾರೆ. ಎಷ್ಟು ಹೇಳಿದರೂ ಅರ್ಥವೇ ಆಗುವುದಿಲ್ಲ. ಬೈದರೂ ಬುದ್ಧಿ ಬರುವುದಿಲ್ಲ. ಹೊಡೆದು, ಬಡಿದು ನೋಡಿಯೂ ಆಯಿತು. ಏನೂ ಪ್ರಯೋಜನವಿಲ್ಲ. ನಮಗೇ ಬುದ್ಧಿ ಹೇಳಿಕೊಡುವಷ್ಟು ಮಟ್ಟಕ್ಕೆ ಬೆಳೆದಿದ್ದಾರೆ. ಹಿರಿಯರ ಮಾತಿಗೆ ಗೌರವವನ್ನೇ ಕೊಡುವುದಿಲ್ಲ. ಏನಾದರೂ ಹೇಳಲು ಹೋದರೆ ಎದುರು ಮಾತನಾಡುತ್ತಾರೆ.

ಲವ್ವಂತೆ ಲವ್ವು... ಅಪ್ಪ-ಅಮ್ಮ ಕೊಡುವುದು ಪ್ರೀತಿ ಅಲ್ವಾ? ಹೆತ್ತು-ಹೊತ್ತವರಿಗೆ ಕೊಡುವ ಕೊಡುಗೆ ಇದೇನಾ? ಅಪ್ಪ-ಅಮ್ಮನನ್ನು ಬೀದಿಗೆ ತಂದು ನಿಲ್ಲಿಸುವುದಕ್ಕೂ ಹೇಸುವುದಿಲ್ಲ ಈಗಿನ ಮಕ್ಕಳು. ಸಾಕಿ-ಸಲಹಿದವರನ್ನೇ ಮರೆತು ಯಾವನೋ ಒಬ್ಬನ ಜತೆ ಓಡಿ ಹೋಗುತ್ತಾರಲ್ಲಾ ಈ ಹುಡುಗಿಯರಿಗೇನು ಬಂದಿದೆ ಧಾಡಿ? ಇವುಗಳಿಗೆ ಕೆಟ್ಟ ಮೇಲೆಯೇ ಬುದ್ಧಿ ಬರುವುದು. ಎಷ್ಟು ದಿನ ಲವ್ ಅಂತ ಕುಣಿಯುತ್ತವೆ ನೋಡೋಣ?!

ಪ್ರಿಯಕರನ ಜತೆ ಸೇರಿ ಅಮ್ಮನನ್ನೇ ಕೊಲೆಗೈದ ಮೈಸೂರಿನ ಹುಡುಗಿ ವಿದ್ಯಾ, ಪ್ರೀತಿಸಿದವನ ಜತೆ ಓಡಿ ಹೋಗಿ ವಿವಾಹವಾಗಿದ್ದಲ್ಲದೆ ಜೀವ ಬೆದರಿಕೆ ಆರೋಪ ಮಾಡುವ ಮೂಲಕ ಅಪ್ಪ ಚಿರಂಜೀವಿಯನ್ನೇ ಬೀದಿಗೆ ತಂದು ನಿಲ್ಲಿಸಿದ ಶ್ರೀಜಾ ಹಾಗೂ ಅಕ್ಕ-ಪಕ್ಕದ ಮನೆ, ಊರುಗಳಲ್ಲೇ ನಡೆಯುತ್ತಿರುವ ಇಂತಹ ಘಟನೆಗಳನ್ನು ನೋಡಿ, ಕೇಳಿ ನಿಮ್ಮ ಮನಸ್ಸಿನಲ್ಲೂ ಈ ರೀತಿಯಾದ ಪ್ರಶ್ನೆ, ಹತಾಶೆ ಉದ್ಬವವಾಗಿರಬೇಕಲ್ಲವೆ? ಅದರಲ್ಲಿ ಯಾವ ತಪ್ಪೂ ಇಲ್ಲಾ ಬಿಡಿ.

ಈ ಹಿಂದೆ ಪ್ಲೇಗ್, ಕಾಲರಾ, ಮಲೇರಿಯಾಗಳು ಬಂದರೆ ಹೇಗೆ ಊರಿಗೆ ಊರೇ ಖಾಲಿಯಾಗುತ್ತಿತ್ತೋ ಅದೇ ಥರಾ ಈಗ ಲವ್ ಅನ್ನೋದೇ ಪ್ಲೇಗ್‌ನಂತಾಗಿದೆ. ಈ ಲವೇರಿಯಾದಿಂದ ತಪ್ಪಿಸಿ ಕೊಳ್ಳಲು ಎಂಥವರಿಗೂ ಕಷ್ಟವಾಗುತ್ತದೆ. ಮಧುರ ಸಂಗೀತವೇ ಜೀವಾಳವಾಗಿರುವ “ಮುಂಗಾರು ಮಳೆ"ಯಂತಹ ಸಾಮಾನ್ಯ ಚಿತ್ರವೂ ಮೆಗಾ ಹಿಟ್ ಆಗುತ್ತದೆ ಅಂದರೆ ಈ ಲವ್ ಇನ್ನೆಂತಹ ಮಹಾಮಾರಿ ಇರಬಹುದು ನೀವೇ ಊಹಿಸಿ!

ಅಷ್ಟಕ್ಕೂ, ಈಗ ಲವ್ ಮಾಡಲು ಭಾರೀ ಶ್ರಮಪಡಬೇಕಾದ ಅಗತ್ಯವಿಲ್ಲ. ಹುಡುಗಿಯೊಬ್ಬಳ ಹಿಂದೆ ತಿಂಗಳು, ಕೆಲವೊಮ್ಮೆ ವರ್ಷಗಟ್ಟಲೆ ತಿರುಗುವ ಕಸರತ್ತೂ ಬೇಕಿಲ್ಲ. ಕಾಡಿ ಬೇಡುವಂತಹ ದೈನೇಸಿತನವೂ ಬೇಡ. ಆಕೆ ಬೀರುವ ಓರೆಗಣ್ಣ ನೋಟಕ್ಕಾಗಿ ದಿನವಿಡೀ ಕಾಯಬೇಕಾದ ಪರಿಸ್ಥಿತಿಯೂ ಇಲ್ಲ. ಒಂದು ನಗು ಚೆಲ್ಲಿದರೆ ಅದೇ ಗ್ರೀನ್ ಸಿಗ್ನಲ್, ಜೀವನ ಪಾವನವಾಯಿತು ಎಂದು ಭಾವಿಸುವಂತಹ ಸನ್ನಿವೇಶವೂ ಇಲ್ಲ. ಈಗ ಪ್ರೇಮಾಂಕುರವಾಗಲು ತಪ್ಪಿ ಕಳುಹಿಸುವ ಒಂದು ಎಸ್ಸೆಮ್ಮೆಸ್ಸು ಅಥವಾ ಮಿಸ್ಡ್ ಕಾಲೂ ಸಾಕು!

ಆದರೆ ಅಪ್ಪ-ಅಮ್ಮಂದಿರು ಇಂತಹ ಪರಿಸ್ಥಿತಿ ಎದುರಾದಾಗ ಅದನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಎಂದಾದರೂ ಯೋಚಿ ಸಿದ್ದಾರಾ? ಪ್ರೀತಿ ಅನ್ನೋದು ಭಾವನೆಗಳಿಗೆ ಸಂಬಂಧಿಸಿದ್ದು. ಆ ಭಾವನೆಗಳ ವಿಷಯದಲ್ಲಿ ಇದು ತಪ್ಪು, ಇದೇ ಸರಿ ಅಂತ ಹೇಳುವುದಕ್ಕೆ ಆಗು ವುದಿಲ್ಲ. ಅಪ್ಪ-ಅಮ್ಮ ಕೊಡುವುದೂ ಪ್ರೀತಿಯನ್ನೇ ಆಗಿದ್ದರೂ ಅಪ್ಪ-ಅಮ್ಮ ತಮ್ಮ ಮಕ್ಕಳಿಗೆ ಕೊಡುವ ಪ್ರೀತಿಗೂ ಅಪ್ಪ-ಅಮ್ಮನ ಮಧ್ಯೆ ಇರುವ ಪ್ರೀತಿಗೂ ವ್ಯತ್ಯಾಸವಿದೆಯಲ್ಲವೆ? ಹಾಗೆಯೇ, ವಯಸ್ಸಿಗೆ ಬಂದ ಮಗಳು ಅಥವಾ ಮಗ ಹುಡುಕಿಕೊಂಡು ಹೋಗುವುದೂ ಅಂತಹ ಪ್ರೀತಿಯನ್ನೇ.

ಕೆಲವೊಮ್ಮೆ ಶಾಲೆ, ಕಾಲೇಜಿಗೆ ಹೋಗುವಾಗಲೇ ಮಕ್ಕಳು ಪ್ರೀತಿಯನ್ನು ಅರಸಿಕೊಂಡು ಹೊರಡುತ್ತಾರೆ. ಸ್ವಂತ ಕಾಲ ಮೇಲೆ ನಿಲ್ಲುವ ಮೊದಲೇ ವಿವಾಹದ ಕನಸು ಕಾಣುತ್ತಾರೆ. ಆಗ ಅಪ್ರಭುದ್ಧ ಮಕ್ಕಳನ್ನು ಸರಿದಾರಿಗೆ ತರಬೇಕಾ ದುದು ಅಪ್ಪ-ಅಮ್ಮನ ಕರ್ತವ್ಯ. ಅಷ್ಟಕ್ಕೂ, the greater onus lies on the parents.

ಆದರೂ ಈಗಿನ ಮಕ್ಕಳು ಕೆಟ್ಟು ಹೋಗಿದ್ದಾರೆ. ನಾವೆಲ್ಲ ಹೀಗಿರಲಿಲ್ಲ ಎನ್ನುವ ಅಪ್ಪ-ಅಮ್ಮಂದಿರ ಮಾತಿನಲ್ಲಿ ಎಷ್ಟು ಸತ್ಯವಿದೆ? ನಮ್ಮ ಅಜ್ಜಿ, ಮುತ್ತಜ್ಜಿ ಅಥವಾ ಅಮ್ಮಂದಿರನ್ನೇ ತೆಗೆದುಕೊಳ್ಳಿ. ಅವರ್‍ಯಾರೂ ಈಗಿನಂತೆ 28, 30ವರ್ಷಗಳಾಗುವವರೆಗೂ ಮದುವೆಯಾಗದೆ ಕುಳಿತಿರಲಿಲ್ಲ. ಆ ಕಾಲದಲ್ಲಿ 'ಉದ್ಯೋಗಂ ಪುರುಷ ಲಕ್ಷಣಂ" ಅನ್ನುತ್ತಿದ್ದರು. ಗಂಡ ದುಡಿಯುತ್ತಿದ್ದ. ಅಷ್ಟೇ ಸಾಕಿತ್ತು. ಮುಟ್ಟಾದ ಕೂಡಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತಿದ್ದರು.

ಅಷ್ಟಕ್ಕೂ, ಆಕೆಯ ಜವಾಬ್ದಾರಿ ಅಡುಗೆ ಮನೆ ಅಥವಾ ಬಡವರಾದರೆ ಹೊಲ ಗದ್ದೆಗಳಿಗೆ ಸೀಮಿತವಾಗಿರುತ್ತಿತ್ತು. ಹಾಗೆ ಪ್ರಾಪ್ತ ವಯಸ್ಸಿಗೇ ವಿವಾಹವಾಗುತ್ತಿದ್ದ ಕಾರಣ ಈ emotional need ಏನಿದೆ ಆ ಭಾವನಾತ್ಮಕ ಅಗತ್ಯವನ್ನು fulfillಮಾಡಿಕೊಳ್ಳಲು ಬೇರೆ ಯಾರನ್ನೋ ಅರಸಿಕೊಂಡು ಹೋಗಬೇಕಾದ ಅಗತ್ಯವೇ ಬರುತ್ತಿರ ಲಿಲ್ಲ. ಆದರೆ ಗಂಡ-ಹೆಂಡತಿ ಇಬ್ಬರೂ ದುಡಿದರಷ್ಟೇ ಜೀವನ ಸಾಗೋದು ಎಂಬ ಕಾಲವಿದು. ಈ ಹಿಂದೆ ಹುಡುಗ ಕೆಲಸದಲ್ಲಿದ್ದಾನಾ ಎಂಬುದನ್ನು ನೋಡಿ ಹೆಣ್ಣು ಕೊಡುತ್ತಿದ್ದರೆ, ಈಗ ಉದ್ಯೋಗ ದಲ್ಲಿರುವ ಹುಡುಗಿಯೇ ಬೇಕೆನ್ನುತ್ತಾನೆ ಹುಡುಗ. ಅದು ಅಳಿವು- ಉಳಿವಿನ ಪ್ರಶ್ನೆಯೂ ಹೌದು.

ಹಾಗೆ survive ಆಗಬೇಕಾದರೆ ಓದು ತೀರಾ ಅತ್ಯಗತ್ಯ. ಹೆಣ್ಣೂ ಕೂಡ ಶಿಕ್ಷಣದ ಗೆರೆ, ಗುರಿಯನ್ನು ತಲುಪಲೇಬೇಕು. ಬದುಕಿಗೆ ಅನಿವಾರ್ಯವಾಗಿರುವ ಓದನ್ನು ಮುಗಿಸುವ ವೇಳೆಗೆ ಕನಿಷ್ಠ 23, 24, 25 ವರ್ಷಗಳಾಗುತ್ತವೆ. ಕೆಲಸಕ್ಕೆ ಸೇರಿ ಭದ್ರವಾಗಿ ಕಾಲನ್ನು ಊರುವ ವೇಳೆಗೆ ವಯಸ್ಸು 28ರ ಆಸುಪಾಸಿನಲ್ಲಿರುತ್ತದೆ. ಹಾಗಂತ emotional need ಅನ್ನು ಸಪ್ರೆಸ್ ಮಾಡಿಕೊಳ್ಳುವುದಕ್ಕೂ ಆಗುವುದಿಲ್ಲ. ಈ ಬಾಯ್ ಫ್ರೆಂಡ್, ಗರ್ಲ್‌ಫ್ರೆಂಡ್ ವ್ಯವಹಾರ ಪ್ರಾರಂಭವಾಗುವುದೇ ಅಂತಹ ಸಂದರ್ಭದಲ್ಲಿ.

ಅಂದರೆ, ಓದಿನ ಜತೆಗೆ ಭಾವನಾತ್ಮಕ ಅಗತ್ಯಗಳನ್ನೂ ಈಡೇರಿಸಿಕೊಳ್ಳಲು ಮುಂದಾಗುತ್ತಾರೆ. ಸಂಗಾತಿಯನ್ನು ತಾವೇ ಕಂಡುಕೊಳ್ಳುತ್ತಾರೆ. ಹಾಗೆ ಹುಡುಕಿಕೊಳ್ಳುವುದೇ ಸರಿ ಅಂತ ಇಲ್ಲಿ ಹೇಳುತ್ತಿಲ್ಲ. ಆದರೆ ಮಗಳು ಯಾರನ್ನೋ ಲವ್ ಮಾಡುತ್ತಿದ್ದಾಳೆ ಎಂಬ ವಿಷಯ ಗೊತ್ತಾದ ಕೂಡಲೇ ಸಿಡಿದೇಳುವುದರಿಂದ, ಹುಡುಗ ಅಥವಾ ಹುಡುಗಿಯ ಜಾತಿ ಬೇರೆಯದ್ದು ಅಂತ ಗೊತ್ತಾದ ಕೂಡಲೇ ಕೆಂಡಾಮಂಡಲವಾಗುವುದರಿಂದ ಯಾವ ಲಾಭವಿದೆ? ಇಲ್ಲಿ ತಪ್ಪು ಯಾರದ್ದು?

ಅಂತಹ ಮಹಾನ್ ನಟ ಚಿರಂಜೀವಿಯ ಮಾನವನ್ನೇ ಹರಾಜು ಹಾಕಿದಳು ಶ್ರೀಜಾ. ಆತ ಯಾವುದಕ್ಕೆ ಕಮ್ಮಿ ಮಾಡಿದ್ದ, ಅಪ್ಪ-ಅಮ್ಮ ಬಯಸುವುದೂ ಮಕ್ಕಳ ಅಭ್ಯುದಯವನ್ನೇ ಅಲ್ಲವೆ ಎಂದು ಓಡಿ ಹೋಗಿ ಸಿರೀಶ್ ಭಾರದ್ವಾಜನನ್ನು ವಿವಾಹವಾದ ಶ್ರೀಜಾಳನ್ನು ದೂರುವುದು ಸುಲಭ. ಆದರೆ ಚಿರಂಜೀವಿ ಎಷ್ಟೇ ದೊಡ್ಡ ನಟ, ಸ್ಟಾರ್ ಆಗಿದ್ದರೂ ಅಪ್ಪನಾಗಿ ಪ್ರಬುದ್ಧತೆ ತೋರಿದ್ದಾರೆಯೆ? ಆ ಪ್ರಶ್ನೆಯನ್ನು ನಾವೂ ಕೇಳಿಕೊಳ್ಳಬಹುದು.

ಅಷ್ಟಕ್ಕೂ, ಲವ್ ಮಾಡುತ್ತಿದ್ದಾರೆ ಎಂಬುದು ತಿಳಿದ ಕೂಡಲೇ ಖಂಡಿಸುವುದರಿಂದ ಏನು ಪ್ರಯೋಜನ? ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ವಿರೋಧಿಸಿದರೆ ಅವರು ಇನ್ನೂ ಅಗ್ರೆಸ್ಸಿವ್ ಆಗುತ್ತಾರೆ. ಶ್ರೀಜಾ ಪ್ರಕರಣದಲ್ಲಿ ಆಗಿದ್ದೂ ಅದೇ. ಆಕೆಯನ್ನು ಗೃಹಬಂಧನದಲ್ಲಿಟ್ಟರು. ಪರಿಣಾಮವಾಗಿ ಆಕೆ ಅಪ್ಪನನ್ನು ಬೀದಿಗೆಳೆಯುವುದಕ್ಕೂ, ಕೋರ್ಟ್ ಮುಂದೆ ಮಾನ ತೆಗೆಯುವುದಕ್ಕೂ ಅಂಜಲಿಲ್ಲ. ಆ ವಯಸ್ಸಿನಲ್ಲಿ ಹೊಡೆದು, ಬಡಿದು, ಬೆದರಿಸಿ ಯಾರನ್ನೂ ಬಗ್ಗಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ ಅಪ್ಪ-ಅಮ್ಮನಾದವರು ಕಮಾಂಡಿಂಗ್ ಆಗಿರುವ ಬದಲು ಫ್ರೆಂಡ್ಲಿ ಆಗಿ ಮಕ್ಕಳ ಜತೆ ನಡೆದುಕೊಳ್ಳಬೇಕು.

ಎಲ್ಲವನ್ನೂ ಚರ್ಚಿಸುವಂತಹ ಮುಕ್ತ ವಾತಾವರಣ ಮನೆಯಲ್ಲಿರ ಬೇಕು. ಅಪ್ಪ-ಅಮ್ಮನಲ್ಲಿ rigidity ಬದಲು openness ಇರಬೇಕು. ಆಗ ಮಕ್ಕಳೂ ಕೂಡ ಧೈರ್ಯವಾಗಿ ಮನೆಯವರಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆ ಹಂಚಿಕೊಂಡಾಗ ಮಕ್ಕಳನ್ನು ದಂಡಿಸುವುದನ್ನು ಬಿಟ್ಟು ಮನವರಿಕೆ ಮಾಡಿಕೊಡಲು ಪ್ರಯತ್ನಿಸಬಹುದು. ಹುಡುಗನ ಜಾತಿಯನ್ನೇ ದೊಡ್ಡ ಅಡ್ಡಗೋಡೆ ಯಾಗಿ ಪರಿವರ್ತಿಸುವ ಬದಲು ಆತನ ಯೋಗ್ಯಾಯೋಗ್ಯತೆಯನ್ನು ಅಳೆದು ತೂಗಿ ಮಕ್ಕಳಿಗೆ ಸಲಹೆ ನೀಡಬಹುದು.

ಒಂದು ವೇಳೆ, ಮಗಳು ಪ್ರೀತಿಸುತ್ತಿರುವ ಹುಡುಗ ಮುಸ್ಲಿಮನಾಗಿದ್ದರಂತೂ ಹಿಂದೂಗಳು ಆಕಾಶವೇ ಕಳಚಿ ಬಿದ್ದಂತೆ ವರ್ತಿಸುತ್ತಾರೆ. ಆದರೆ ರೇಗಾಡುವ ಬದಲು, ಮುಖಗಂಟಿಕ್ಕಿಕೊಂಡು ಮಗಳನ್ನು ದುರುಗುಟ್ಟಿ ನೋಡುವ ಬದಲು ಮುಸ್ಲಿಮ್ ಯುವಕನೊಬ್ಬನನ್ನು ವಿವಾಹವಾಗುವುದರಿಂದ ಮುಂದೆ ಎದುರಾಗಲಿರುವ ಪರಿಸ್ಥಿತಿಯನ್ನು ವಿವರಿಸಿ ಹೇಳಬಹುದಲ್ಲವೆ? ಮದುವೆಯಾಗಿ ಮೊದಲ ಮೂರ್‍ನಾಲ್ಕು ವರ್ಷಗಳು ಚೆನ್ನಾಗಿಯೇ ಇರುತ್ತವೆ. ಆದರೆ ಆ ಮೂರ್‍ನಾಲ್ಕು ವರ್ಷಗಳಲ್ಲಿ ಅಷ್ಟೇ ಪ್ರಮಾಣದ ಮಕ್ಕಳನ್ನು ಹೆತ್ತು ಸೊಂಟವೂ ಜಾರಿರುತ್ತದೆ, ಜೀವನವೂ ಸಾಕಾಗಿ ಹೋಗಿರುತ್ತದೆ. ಜತೆಗೆ ಆ ಮೂರ್‍ನಾಲ್ಕು ವರ್ಷಗಳಲ್ಲಿ ನಿನ್ನ ಗಂಡ ಮತ್ತೊಂದು ವಿವಾಹವಾಗಲು ರೆಡಿಯಾಗಿರುತ್ತಾನೆ. ಸವತಿಯಾಗಿ ಜೀವನ ಸವೆಸಬೇಕಾಗುತ್ತದೆ ಅಂತ ಬಿಡಿಸಿ ಹೇಳಿ.

ಅಷ್ಟಕ್ಕೂ, ಈ ಹಿಂದೆ ಮುಸ್ಲಿಂ ಯುವಕರ ಜತೆ ಓಡಿ ಹೋಗಿದ್ದ ಬಹುತೇಕ ಹುಡುಗಿಯರು ಕೈಸುಟ್ಟುಕೊಂಡು ವಾಪಸ್ ಬಂದ ಉದಾಹರಣೆಗಳೇ ಹೆಚ್ಚಿವೆ. ಅದನ್ನು ಮನವರಿಕೆ ಮಾಡಿಕೊಟ್ಟು ಯೋಚಿಸಲು ಸಮಯ ಕೊಡಿ. ಮಂಡೆ ಮೊಂಡಾಗಿರುವ ಈ ಹುಡುಗಿಯರಿಗೆ discretion ಅಥವಾ ವಿವೇಚನೆ ಅನ್ನೋದು ಸ್ವಲ್ವ ಕಡಿಮೆ. ಅವರೊಂಥರಾ emotional fools. ಪ್ರಿಯತಮನ ಸಿಹಿ ಸಿಹಿ ಮಾತುಗಳನ್ನು ಕೇಳಿ ಕೇಳಿ ಅವರಿಗೆ ಜೀವನದಲ್ಲಿ ಕಹಿಯೇ ಜಾಸ್ತಿ ಇರುತ್ತದೆ ಎಂಬುದು ಓಡಿ ಹೋಗಿ ವಿವಾಹವಾಗು ವವರೆಗೂ ಗೊತ್ತಾಗುವುದಿಲ್ಲ. ಹಾಗಾಗಿ ವಯಸ್ಸಿನಲ್ಲಿ ಹಿರಿಯರಾದ ಅಪ್ಪ-ಅಮ್ಮಂದಿರು ತಾವೇ ಸಹನೆ ಕಳೆದುಕೊಂಡು ಖಂಡಿಸಲು ಮುಂದಾಗುವ ಬದಲು ಮಕ್ಕಳು ದುಡುಕಿನ ನಿರ್ಧಾರ ತೆಗೆದು ಕೊಳ್ಳುವ ಮೊದಲು ತಾಳ್ಮೆಯಿಂದ ತಿಳಿ ಹೇಳುವುದು ಒಳ್ಳೆಯ ದಲ್ಲವೆ?

ಈ ಅಪ್ಪ-ಅಮ್ಮಂದಿರೇಕೆ ಹೀಗಾಡ್ತಾರೆ, ನಮ್ಮ ಭಾವನೆಗಳೇಕೆ ಅವರಿಗೆ ಅರ್ಥವಾಗುವುದಿಲ್ಲ ಅಂತ ನಾವೂ ಕೂಡ ತಾಳ್ಮೆ ಕಳೆದುಕೊಳ್ಳುವುದು ಬೇಡ. ನಮ್ಮ ಅಪ್ಪ-ಅಮ್ಮಂದಿರ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಈ ಮೊಬೈಲ್, ಇಂಟರ್ನೆಟ್, ಆರ್ಕಟ್, ಜಿ-ಚಾಟ್ ಯುಗ ಬಂದು ಹತ್ತು ವರ್ಷಗಳೂ ಆಗಿಲ್ಲ. ಇಂಥದ್ದೊಂದು ತೀರಾ ಹೊಸ ಸನ್ನಿವೇಶವನ್ನು ಒಪ್ಪಿಕೊಳ್ಳಲು, ಜೀರ್ಣಿಸಿಕೊಳ್ಳಲು ಎಂತಹವರಿಗೂ ಕಷ್ಟವಾಗುತ್ತದೆ. ಹಾಗಿರುವಾಗ ಅಪ್ಪ-ಅಮ್ಮಂದಿರನ್ನು ಏನೂ ಅರ್ಥವಾಗದ ಪೆದ್ದುಗಳು ಎಂಬಂತೆ ನೋಡುವ ಬದಲು ಅವರ ಯೋಚನಾ ವಿಧಾನದಲ್ಲಿ ತಪ್ಪಿದ್ದರೆ ಅವರಿಗೆ ನಾವೇ ಏಕೆ ಮನವರಿಕೆ ಮಾಡಿಕೊಡಬಾರದು? ಅರೆ, ಹೌದಲ್ವಾ?

(ಸ್ನೇಹಸೇತು : ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more