ಜೂನ್ : ಪಂಚಾಂಗ, ದಿನದ ವಿಶೇಷ ಮತ್ತು ಸುಭಾಷಿತ
ನಮ್ಮ ಜೀವನ, ನಮ್ಮ ಬಂಧುಗಳ ಜೀವನ ಎಂದೆಂದೂ ಸುಭಿಕ್ಷವಾಗಿರಬೇಕು, ಕನಿಷ್ಠಪಕ್ಷ ನಮಗೆ ಒಳತಾಗಬೇಕು ಎಂದು ಮನಸ್ಸು ಯಾವತ್ತೂ ಹಾತೊರೆಯುತ್ತಿರುತ್ತದೆ. "ನಿಮ್ಮದು ಒಳ್ಳೆಯ ಮನಸು, ನೀವು ತುಂಬಾ ಹೃದಯವಂತರು, ನಿಮ್ಮಂಥವರಿದ್ದಿದ್ದಕ್ಕೇ ಮಳೆಬೆಳೆಯೆಲ್ಲ ಕಾಲಕಾಲಕ್ಕೆ ಆಗುತ್ತಿರುತ್ತದೆ" ಎಂದು ಯಾರಾದರೂ ನಮ್ಮ ಬಗ್ಗೆ ಹೇಳಿದರೆ ಮನಸ್ಸು ಅರಳುತ್ತದೆ.
ತಮ್ಮ ಜೀವನವನ್ನೇ ಸಮಾಜದ ಉದ್ಧಾರಕ್ಕಾಗಿ ಧಾರೆಯೆರೆದ ಮಹಾನ್ ಜೀವಿಗಳ ಜಾಣ್ನುಡಿಗಳು, ಅಮೃತ ಪದಗಳು, ಸುಭಾಷಿತಗಳು, ಸೂಕ್ತಿಗಳು, ಜನಪದದಿಂದ ಹರಿದುಬಂದ ಸ್ಫೂರ್ತಿಯುತ ಮಾತುಗಳು, ಹಿರಿಯರ ಹಾರೈಕೆಗಳು, ಶ್ರೀಸಾಮಾನ್ಯರ ಬಾಯಿಂದ ತೇಲಿಬಂದ ನುಡಿಗಳು ಪ್ರತಿದಿನ ಕೇಳುತ್ತಿದ್ದರೆ, ಓದುತ್ತಿದ್ದರೆ, ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದರೆ ಒಂದು ಬಗೆಯ ಸಾರ್ಥಕ ಭಾವ ಮೂಡುತ್ತದೆ.
ಹಾಗೆಯೆ, ಜೂನ್ ತಿಂಗಳ ದಿನನಿತ್ಯದ ಪಂಚಾಂಗದ ಜೊತೆ ಪ್ರತಿದಿನದ ವಿಶೇಷ ಆಚರಣೆಗಳು, ಕರ್ನಾಟಕದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಉತ್ಸವಗಳು, ರಾಷ್ಟ್ರೀಯ ಅಂತಾರಾಷ್ಟ್ರೀಯ ಚಟುವಟಿಕೆಗಳತ್ತ ಒಂದು ನೋಟ ಈ ಪುಟಗಳು ಚೆಲ್ಲಲಿವೆ. ಸಮೃದ್ಧ ಮಾಹಿತಿ ಇರುವ ಈ ಪುಟಗಳು ನಿಮಗಾಗಿ. [ಜೂನ್ ತಿಂಗಳ ರಾಶಿ ಭವಿಷ್ಯ]

ಶುಕ್ರವಾರ, ಜೂ. 27 : ಮಣ್ಣೆತ್ತಿನ ಅಮವಾಸ್ಯೆ
ಪಂಚಾಂಗ : ಶ್ರೀಜಯನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣಪಕ್ಷ, ಅಮವಾಸ್ಯಾ ತಿಥಿ, ಆರ್ದ್ರಾ ನಕ್ಷತ್ರ, ರಾಹುಕಾಲ ಬೆಳಿಗ್ಗೆ 10.30 ರಿಂದ 12.00.
ದಿನದ ವಿಶೇಷ : ಮಣ್ಣೆತ್ತಿನ ಅಮವಾಸ್ಯೆ, ಮಧುಮೇಹ ದಿನ, ಸಾಗರಕಟ್ಟೆಯಲ್ಲಿ ಆರಾಧನೆ.
ಸುಭಾಷಿತ : ದಾರಿ ಸುಂದರವಾಗಿದ್ದಾಗ ಅದು ತಲುಪುವ ಗುರಿಯ ಬಗ್ಗೆ ತಿಳಿದುಕೊಳ್ಳಬೇಕು, ಆದರೆ ಗುರಿ ಸುಂದರವಾಗಿದ್ದಾಗ ದಾರಿಯ ಬಗ್ಗೆ ಯೋಚಿಸದೆ ಮುನ್ನಡೆಯಬೇಕು.

ಗುರುವಾರ, ಜೂ. 26 : ಮಾದಕ ವಸ್ತು ವಿರೋಧಿ ದಿನ
ಪಂಚಾಂಗ : ಶ್ರೀಜಯನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣಪಕ್ಷ, ಚತುರ್ದಶಿ ತಿಥಿ, ಮೃಗಶಿರಾ ನಕ್ಷತ್ರ, ರಾಹುಕಾಲ 13.30 ರಿಂದ 15.00.
ದಿನದ ವಿಶೇಷ : ಅಂತರಾಷ್ಟ್ರೀಯ ಮಾದಕವಸ್ತು ಸೇವನೆ ಮತ್ತು ಕಳ್ಳಸಾಗಣಿಕೆ ವಿರೋಧಿ ದಿನ
ಸುಭಾಷಿತ : ಜೀವನದಲ್ಲಿ ಎರಡನೇ ಭಾರಿ ಅವಕಾಶ ಸಿಗಬಹುದು, ಆದರೆ ಇನ್ನೊಂದು ಜೀವನದ ಅವಕಾಶ ಸಿಗುವುದು ಕಷ್ಟ.

ಶುಕ್ರವಾರ, ಜೂ. 20 : ವಿಶ್ವ ನಿರಾಶ್ರಿತರ ದಿನ
ಪಂಚಾಂಗ :ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣಪಕ್ಷ, ಅಷ್ಠಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ರಾಹುಕಾಲ ಬೆಳಿಗ್ಗೆ 10.30 ರಿಂದ 12.00.
ದಿನದ ವಿಶೇಷ : ವಿಶ್ವ ನಿರಾಶ್ರಿತರ ದಿನ, ಆತ್ಮಕೂರ ಸತ್ಯಧೀರ ತೀರ್ಥರ ಆರಾಧನೆ, ಮಲ್ಹಾರಿ ದೀಕ್ಷಿತರ ಆರಾಧನೆ.
ಸುಭಾಷಿತ : ಸಾವಿರಾರು ಜನರನ್ನು ಗೆಲ್ಲುವವನು ವೀರನಲ್ಲ, ಮನಸ್ಸನ್ನು ಗೆಲ್ಲುವವನು ವೀರ - ಗೌತಮ ಬುದ್ದ.

ಮಂಗಳವಾರ, ಜೂ. 17 : ಅರಣ್ಯನಾಶ ವಿರೋಧಿ ದಿನ
ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣಪಕ್ಷ, ಪಂಚಮಿ ತಿಥಿ, ಧನಿಷ್ಠಾ ನಕ್ಷತ್ರ, ರಾಹುಕಾಲ 15.00 ರಿಂದ 16.30.
ದಿನದ ವಿಶೇಷ : ಅರಣ್ಯ ನಾಶ ಮತ್ತು ಕ್ಷಾಮ ವಿರೋಧಿ ದಿನ, ಹುಣಸೀಹೊಳೆ ವಿದ್ಯಾಮನೋಹರತೀರ್ಥರ ಆರಾಧನೆ.
ಸುಭಾಷಿತ : ದೊಡ್ಡ ದೊಡ್ಡ ಮಾತುಗಳಾಡುವುದರಿಂದ ನಾವು ಪ್ರಭುದ್ದರಾಗುವುದಿಲ್ಲ. ಸಣ್ಣ ಸಣ್ಣ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿತಾಗ ಪ್ರಭುದ್ದರಾಗುತ್ತೇವೆ.

ಭಾನುವಾರ, ಜೂ. 15 : ಅಪ್ಪಂದಿರ ದಿನ
ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣಪಕ್ಷ, ತದಿಗೆ ತಿಥಿ, ಪೂರ್ವಾಷಾಢಾ, ಉಪರಿ ಉತ್ತರಷಾಢಾ ನಕ್ಷತ್ರ, ರಾಹುಕಾಲ 16.30 ರಿಂದ 18.00.
ದಿನದ ವಿಶೇಷ : ವಿಶ್ವ ಅಪ್ಪಂದಿರ ದಿನ, ಮಿಥುನ ಸಂಕ್ರಮಣ, ಕೊಳ್ಳೇಗಾಲ ಉತ್ಸವ.
ಸುಭಾಷಿತ : ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಎಂದು ಸುಮ್ಮನೆ ಕೂಡುವುದು ಮೂರ್ಖತನದ ಪರಮಾವಧಿ.

ಶನಿವಾರ, ಜೂ. 14 : ವಿಶ್ವ ರಕ್ತದಾನಿಗಳ ದಿನ
ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣಪಕ್ಷ, ಪಾಡ್ಯ ತಿಥಿ, ಮೂಲಾ ನಕ್ಷತ್ರ,ರಾಹುಕಾಲ 09.00 ರಿಂದ 10.30.
ದಿನದ ವಿಶೇಷ : ವಿಶ್ವ ರಕ್ತದಾನಿಗಳ ದಿನ, ಜ್ಯೇಷ್ಠ ಮಾಸ ಕೃಷ್ಣಪಕ್ಷ ಆರಂಭ, ಮಕರೇಚ.
ಸುಭಾಷಿತ : ಸಮುದ್ರದಲ್ಲಿ ಸುರಿದ ಮಳೆ, ಹಸಿವಿಲ್ಲದವನಿಗೆ ನೀಡಿದ ಭೋಜನ, ಧನವಂತನಿಗೆ ಕೊಟ್ಟ ದಾನ, ದರಿದ್ರನಿಗೆ ಬಂದ ಯೌವನ ಇವೆಲ್ಲ ವ್ಯರ್ಥವೇ ಸರಿ.

ಗುರುವಾರ, ಜೂ. 12 : ಫೀಫಾ ವಿಶ್ವ ಕಪ್ ಆರಂಭ
ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಚತುರ್ದಶಿ/ಹುಣ್ಣಿಮೆ ತಿಥಿ, ಅನುರಾಧಾ ನಕ್ಷತ್ರ, ರಾಹುಕಾಲ 13.30 ರಿಂದ 15.00.
ದಿನದ ವಿಶೇಷ : ಫೀಫಾ ವಿಶ್ವ ಕಪ್ ಆರಂಭ, ಬಾಲ ಕಾರ್ಮಿಕ ವಿರೋಧಿ ದಿನ, ವಟಸಾವಿತ್ರೀ ವ್ರತ, ಸಂತ ಕಬೀರ ಜಯಂತಿ, ಬಿಲ್ವಾತ್ರಿರತ್ರ ವ್ರುತ, ಕಾರಹುಣ್ಣಿಮೆ, ಫಲ ಪೂರ್ಣಿಮಾ.
ಸುಭಾಷಿತ : ಶಾಲೆಯಲ್ಲಿ ಏನು ಕಲಿತೆವು ಎಂಬುದನ್ನು ಮರೆತ ನಂತರವೂ ಉಳಿಯುವುದೇ ವಿದ್ಯೆ - ಐನ್ ಸ್ಟೀನ್, ವಿಜ್ಞಾನಿ.

ಬುಧವಾರ, ಜೂ. 11 : ನೃಸಿಂಹ ಜಯಂತಿ (ಸ್ಮಾರ್ತ/ಭಾಗವತ)
ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ತ್ರಯೋದಶಿ ತಿಥಿ, ವಿಶಾಖಾ ನಕ್ಷತ್ರ, ರಾಹುಕಾಲ 12.00 ರಿಂದ 13.30.
ದಿನದ ವಿಶೇಷ : ನೃಸಿಂಹ ಜಯಂತಿ (ಸ್ಮಾರ್ತ/ಭಾಗವತ/ಮನ್ನಾರ್), ಮಂಗಳೂರು ವೀರವೆಂಕಟೇಶ ವರ್ಧಂತೀಃ, ವೃಶ್ಚಿಕೇಚ.
ಸುಭಾಷಿತ : ಮನೆ ತುಂಬ ಪುಸ್ತಕಗಳಿದ್ದರೆ ಒಂದು ಉತ್ತಮ ಹೂತೋಟವಿದ್ದಂತೆ.

ಗುರುವಾರ, ಜೂ. 5 : ವಿಶ್ವ ಪರಿಸರ ದಿನಾಚರಣೆ
ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಸಪ್ತಮಿ ತಿಥಿ, ಮಖಾ ನಕ್ಷತ್ರ, ರಾಹುಕಾಲ 13.30 ರಿಂದ 15.00.
ದಿನದ ವಿಶೇಷ : ವಿಶ್ವ ಪರಿಸರ ದಿನ, ಬೇಟನಾರಾಯಣ ಮಹಾರಾಜ್ ಜಯಂತಿ.
ಸುಭಾಷಿತ : ಭಗವಂತ ನಮ್ಮನ್ನು ಕಷ್ಟಗಳ ಆಳದ ನೀರಿಗೆ ಕರೆದೊಯ್ಯವುದು ನಮ್ಮನ್ನು ಮುಳುಗಿಸುವುದಕ್ಕಲ್ಲ, ಚೆನ್ನಾಗಿ ತೊಳೆದು ಶುದ್ದವಾಗಿಸಲು ಅಷ್ಟೇ.

ಬುಧವಾರ, ಜೂ. 4 : ಬಾಲ ದೌರ್ಜನ್ಯ ವಿರೋಧಿ ದಿನ
ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಷಷ್ಠಿ ತಿಥಿ, ಮಖಾ ನಕ್ಷತ್ರ, ರಾಹುಕಾಲ 12.00 ರಿಂದ 13.30.
ದಿನದ ವಿಶೇಷ : ಕೊಲ್ಲೂರು ಮೂಕಾಂಬಿಕೆ ಜಯಂತಿ, ಅಂತಾರಾಷ್ಟೀಯ ಬಾಲ ದೌರ್ಜನ್ಯ ವಿರೋಧಿ ದಿನ.
ಸುಭಾಷಿತ : ಜೀವನವನ್ನು ಸಂತೋಷದಿಂದ ಹೇಗೆ ಕಳೆಯಬೇಕು ಎನ್ನುವದನ್ನು ತಿಳಿಯದಿದ್ದವನು ಮನುಷ್ಯನೇ ಅಲ್ಲ - ಸರ್ವಜ್ಞ.

ಮಂಗಳವಾರ, ಜೂ. 3 : ಮೊಹಲ್ಲಾ ವೆಂಕಟರಮಣ ಉತ್ಸವ
ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಷಷ್ಠಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ 15.00 ರಿಂದ 16.30.
ದಿನದ ವಿಶೇಷ : ಅರಣ್ಯ ಷಷ್ಠಿ, ಶಿರಸಂಗಿ, ಚೇಳ್ಳಗುರಿಕಿ ಮತ್ತು ಮೈಸೂರು N R ಮೊಹಲ್ಲಾ ವೆಂಕಟರಮಣ ಉತ್ಸವ.
ಸುಭಾಷಿತ : ನಿದ್ದೆಯಲ್ಲಿ ಕಾಣುವಂಥದ್ದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು - ಡಾ. ಎ.ಪಿ.ಜೆ ಅಬ್ದುಲ್ ಕಲಾಂ.

ಸೋಮವಾರ, ಜೂ. 1 : ಲೈಂಗಿಕ ಕಾರ್ಯಕರ್ತರ ದಿನ
ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಪಂಚಮಿ ತಿಥಿ, ಪುಷ್ಯ ನಕ್ಷತ್ರ, ರಾಹುಕಾಲ 07.30 ರಿಂದ 09.00
ದಿನದ ವಿಶೇಷ : ಶ್ರುತ ಪಂಚಮಿ, ಚಿತ್ರರಥ ಜಯಂತಿ, ತಿಪ್ಪಗೊಂಡನಹಳ್ಳಿ ಉತ್ಸವ, ಚಿತ್ರರಥ ಗಂಧರ್ವ ಜಯಂತಿ, ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿನ.
ಸುಭಾಷಿತ : ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ ಕಾಲ ಕೆಡುವುದಿಲ್ಲ, ಕೆಡುವುದು ಜನರ ನಡತೆ ಮತ್ತು ಆಚಾರ - ವಿಚಾರ ಮಾತ್ರ.

ಭಾನುವಾರ, ಜೂ. 1 : ಕ್ಯಾನ್ಸರ್ ಮೆಟ್ಟಿದವರ ದಿನ
ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಚೌತಿ ತಿಥಿ, ಪುನರ್ವಸು ನಕ್ಷತ್ರ, ರಾಹುಕಾಲ 16.30 ರಿಂದ 18.00.
ದಿನದ ವಿಶೇಷ : ಕ್ಯಾನ್ಸರ್ ಮೆಟ್ಟಿದವರ ದಿನ, ಅಷೆನ್ಸನ್ ಡೇ, ಅಗ್ನಿನಕ್ಷತ್ರ ದೋಷ ನಿವೃತ್ತಿ, ಉಮಾವತಾರ.
ಸುಭಾಷಿತ : ನಾನು ಬೇರೆ, ದೇಹ ಬೇರೆ ಎ೦ದು ತಿಳಿವು ತ೦ದುಕೊ೦ಡರೆ ರೋಗದ ಬಾಧೆಯು ಅತ್ಯಲ್ಪವಾಗುತ್ತದೆ - ಎಮ್.ವಿ.ಸೀತಾರಾಮಯ್ಯ.












Click it and Unblock the Notifications