ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳ,ಕಳ್ಳಿ,ಕೊರಮರ ಸಂತೆಯಲ್ಲಿ ಯಾರು ಯಾರಿಗೆ ಜೋಡಿ?

By Staff
|
Google Oneindia Kannada News


’ಮಹಾಪಾಕೀ’ ಎಂಬ ಕಾವ್ಯದ ಮುಂದಿನ ಅಧ್ಯಾಯಗಳು ಸ್ವಾರಸ್ಯಕರವಾಗಿರುತ್ತವೆ. ’ಕಳ್ಳ-ಕಳ್ಳಿ-ಕೊರಮ’ ಇವರ ತ್ರಿಕೋಣ ಮತ್ತು ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿರುವ ನ್ಯಾಯಾಲಯ, ಅದರ ಆಧಾರಸ್ತಂಭವಾದ ಸಹಸ್ರಾರು ವಕೀಲರು, ಪುನಃಪುನಃ ಬರೆಯಲ್ಪಟ್ಟು ಬೇಕಾದಂತೆ ತಿರುಚಲ್ಪಡುತ್ತಿರುವ ಸಂವಿಧಾನ,

ರೊಚ್ಚಿಗೆದ್ದ ಜನತೆ, ಸಿಡಿದೆದ್ದ ಉಗ್ರ-ಭಯೋತ್ಪಾದಕರು, ಇತರ ಸುತ್ತಮುತ್ತಲ ದೇಶಗಳಂತೆ ತಾವೂ ಆರ್ಥಿಕವಾಗಿ ಮುಂದುವರೆದು ಶಾಂತಿ ಮತ್ತು ಸಮೃದ್ಧಿಯಿಂದ ಜೀವನ ನಡೆಸುತ್ತ ಪ್ರಜಾಪ್ರಭುತ್ವವನ್ನು ಅನುಭವಿಸಬೇಕೆಂಬ ಆಶಾವಾದವನ್ನು ತಳೆದಿರುವ ಮೌನಿಗಳಾದ ಬುದ್ಧಿಜೀವಿಗಳು, ಹೇಗಾದರೂ ಮಾಡಿ ಭಾರತದಮೇಲೆ ವೈರ ಸಾಧಿಸಬೇಕೆಂಬ ಛಲವುಳ್ಳ ಸೈನ್ಯಾಧಿಕಾರಿಗಳು ಮತ್ತು ಬೇಹುಗಾರರ ತಂಡ, ಕುದಿಯುತ್ತಿರುವ ವಜೀರಿಸ್ತಾನ್, ಸಮಯಕ್ಕಾಗಿ ಕಾಯುತ್ತಿರುವ ಸಿಂಧ್ ಮತ್ತು ವಾಯವ್ಯ ಪ್ರಾಂತ್ಯಗಳು ಇವೆಲ್ಲ ಪಾಕೀಸ್ತಾನದ ಆಂತರ್ಯದ ವಾತಾವರಣದಲ್ಲಿ ಕುದಿಯುತ್ತಿರುವ ಅಗ್ನಿಪರ್ವತಗಳು.

ಕುತಂತ್ರಕ್ಕೊಳಗಾಗಿ ವ್ಯಗ್ರವಾದ ಆಫ್‌ಘಾನಿಸ್ತಾನ ಪಶ್ಚಿಮಕ್ಕೆ, ಕುಟಿಕಿಸಿಕೊಂಡು ಕಚ್ಚಿಸಿಕೊಂಡು ಬೇಸತ್ತರೂ ಏನೂಮಾಡಲಾಗದೇ ಬುಸುಗುಟ್ಟುತ್ತಿರುವ ಭಾರತ ಪೂರ್ವಕ್ಕೆ. ಅಲ್ಲಿನ ಆಡಳಿತವನ್ನು ಸೈನ್ಯಾಧಿಕಾರಿಗಳ ಮೂಲಕ ತನ್ನ ಅಧೀನದಲ್ಲಿ ಇಟ್ಟುಳ್ಳಲೋಸುಗ ವರ್ಷೇ ವರ್ಷೇ ಲೆಕ್ಕವಿಲ್ಲದಷ್ಟು ಡಾಲರ್ ಸುರಿಯುತ್ತಿರುವ ಅಮೇರಿಕ, ಇವು ಹೊರಗಿನ ಶಕ್ತಿಗಳು.

ಬ್ರಿಟಿಷರ ಭಾರತದಿಂದ ಬೇರ್ಪಟ್ಟು ಈಗಾಗಲೇ ಒಮ್ಮೆ ಒಡೆದುಹೋದಂತೆ, ಪಾಕೀಸ್ತಾನ ಮತ್ತೊಮ್ಮೆ ಒಡೆದು ಹೋಗುವುದೇ? ಅಥವ, ಪ್ರಜಾಪ್ರಭುತ್ವ ಅಲ್ಲಿ ಚಿಗುರುವುದೇ? ಸೈನ್ಯದ ಬಲದಿಂದ ಸರ್ವಾಧಿಕಾರ ಮುಂದುವರೆಯುವುದೇ? ಮುಷರ್ರಾಫ್ ಮತ್ತು ಬೇನಜೀರ್ ಜೋಡಿಯಾಗುವರೆ? ಅಥವಾ ಅವರಿಬ್ಬರ ಜಗಳದಿಂದ ನವಾಜ್‌ಷರೀಫ್‌ಗೆ ಪಟ್ಟ ಕಟ್ಟುವರೆ? ಅಥವ, ಜನತೆ ಕಣ್ಬಿಟ್ಟು ಈ ಮೂವರನ್ನೂ ಒದ್ದೋಡಿಸಿ ಹೊಸ ನಾಯಕತ್ವ ಉಂಟಾಗುವುದೇ? ಮೈತ್ರಿಯ ಹೊಸ ಅಧ್ಯಾಯವನ್ನು ಬರೆಯಹೊರಟಿರುವ ಭಾರತ-ಅಮೆರಿಕ ಜೋಡಿಯಾಗಿ ಪಾಕೀಸ್ತಾನವನ್ನು ಅಮೆರಿಕ ಕೈಬಿಡುವ ಸಾಧ್ಯತೆ ಇದೆಯೆ?

ಡಾಲರ್ ನದಿ ಬತ್ತಿದ ಕೂಡಲೆ ಪಾಕೀಸ್ತಾನ ದಿವಾಳಿಯಾಗುವುದು ಖಂಡಿತ. ದಿಕ್ಕು ತೋಚದೆ ಪಾಕೀಸ್ತಾನ ಭಾರತದ ಮೇಲೆ ಆಕ್ರಮಣ ಮಾಡುವುದೆ? ತನ್ನ ಅಸಹಾಯಕ ಪರಿಸ್ಥಿತಿಯಿಂದ ಅಣುಬಾಂಬನ್ನು ಉಪಯೋಗಿಸುವ ದುಸ್ಸಾಹಸ ಮಾಡುವ ಸಾಧ್ಯತೆ ಇದೆಯೇ? ಇವೆಲ್ಲ ಚಿಂತಿಸಲು ಯೋಗ್ಯ ವಿಷಯಗಳು. ಪಾಕೀಸ್ತಾನದಲ್ಲಿ ಏನೇ ಆದರೂ ಭಾರತದ ಮೇಲೆ ಆಗುವ ಪರಿಣಾಮ ಮಹತ್ತರವಾದುದು ಎಂಬ ಎಚ್ಚರಿಕೆ ಭಾರತದ ಸೈನ್ಯ ಮತ್ತು ಜನನಾಯಕರಿಗೆ ಇದೆಯೆಂಬ ಆಶಾವಾದದೊಂದಿಗೆ ವಿರಮಿಸುವೆ ಮುಂದಿನ ಕಂತಿನವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X