393709infatuationಪ್ರಾಮಿಸ್‌ ಮಾಡಿದ್ರೆ ಮಾತ್ರ ನಾನ್‌ ಈ ವಿಷ್ಯಾ ಹೇಳ್ತೀನಿ!/column/women/2007/020307gossipping.htmlಕಂಡೋರ ಪತ್ರ, ಅದರಲ್ಲೂ ಪ್ರೇಮ ಪತ್ರಗಳ ಓದೋದು ತಪ್ಪು ಅಂತ ನಮಗೆಲ್ಲರಿಗೂ ಚೆನ್ನಾಗಿ ಗೊತ್ತು, ಆದರೆ ಹಾಳಾದ್ದು ಎಂಥದ್ದೋ ಒಂದು ರೀತಿಯ ಕುತೂಹಲ! ಮೊನ್ನೆ ಹೀಗೆ ಒಂದು ಲವ್‌ಲೆಟರ್‌ ನನ್‌ ಕಣ್ಣಿಗೆ ಬಿತ್ತು. ಅದರ ಬಗ್ಗೆ ನಿಮಗೆ ಹೇಳ್ದೆಯಿದ್ರೇ, ಬೆಳಗ್ಗೆ ತಿಂದ ತಿಂಡಿ ಜೀರ್ಣವಾಗೋದಾದ್ರೂ ಹೇಗೆ? ಅವಳು ಆ ಲವ್‌ಲೆಟರ್‌ನಲ್ಲಿ ಏನೇನ್‌ ಬರ್ದೀದಾಳೆ? ಯಾರಿಗೆ ಬರ್ದೀದಾಳೆ ಅಂತಾ 10897http://kannada.oneindia.com/img/2009/08/27-woman-water1.jpg393709infatuationಯಾವ ಮೋಹನ ಮುರಳಿ ಕರೆಯಿತು.../column/manikanth/2009/0325-youth-love-infatuation-and-betrayal.htmlಅವನು: ನನ್ನ ಹೆಸರು ರಮೇಶ ಅಲಿಯಾಸ್ ಪೆರ್ಕಳ ರಮೇಶ ಅಂತ ಸಾರ್. ನಮ್ದು ಮಂಗಳೂರು. ನಮ್ಮ ಕುಟುಂಬಕ್ಕೆ ಅದ್ಯಾವ ಹಾಳು ಶಾಪ ತಟ್ಟಿದೆಯೋ ಗೊತ್ತಿಲ್ಲ; ನಮ್ಮ ತಾತನ ಕಾಲದಿಂದ್ಲೂ ಬಡತನ, ಬಡತನ, ಬಡತನ! ಗೊತ್ತಲ್ಲ ಸಾರ್ ನಿಮ್ಗೂ? ಮಂಗ್ಳೂರಲ್ಲಿ ವರ್ಷಕ್ಕೆ ಹತ್ತಿಪ್ಪತ್ತು ಬಾರಿ ಹಿಂದೂ ಮುಸ್ಲಿಂ ಫೈಟಿಂಗು ನಡೀತದೆ. ಈ ಕಡೆ ಕೋಮುಗಲಭೆ, ಆ ಕಡೆ ಬಡತನ! 35523http://kannada.oneindia.com/img/2009/03/25-couple4.jpg393709infatuationಆಸೆಯ ದೋಸೆ ತಿನ್ನಲು ಹೋಗಿ ಮಣ್ಣಾದ ಮೀಸೆ!/column/humor/2009/0630-masale-dose-and-a-beautiful-girl.htmlಆಗೊಮ್ಮೆ-ಈಗೊಮ್ಮೆ ನಾನು ಅವಳನ್ನು ನೋಡ್ತಾ ಇದೆ. ಅವಳು ನನ್ನ ಕಡೆ ನೋಡಿದ ಕೂಡಲೇ ಬೇರೆ ಕಡೆಗೆ ನೋಟ. ಹಾಗೆಯೇ ಅವಳು ನನ್ನ ಮೇಲೆ ಕಣ್ಣು ಹಾಯಿಸ್ತಾ ಇದ್ದಳು. ನಾನು ನೋಡಿದ ಕೂಡಲೇ ನೋಟ ಬೇರೆಡೆಗೆ ಪಲಾಯನ. ಹೀಗೆ, ನನ್ನ-ಅವಳ ಕಣ್ಣುಗಳು ಆಗಾಗ ಸಂಪರ್-ಕಿಸ್-ಉತ್ತಿದವು. ಇಷ್ಟೆಲ್ಲಾ ಕಣ್ಣಲ್ಲಿ ನಡೆಯುತ್ತಿದ್ದಾಗ...* ಕಿರಣ ಕಾಟವಾ, ಬೆಂಗಳೂರು ಪಿ.ಯು.ಸಿ 2ನೇ ವರ್ಷ. ನಾನು, 37681http://kannada.oneindia.com/img/2009/06/30-kiran-katava1.jpg393709infatuationಅಷ್ಟು ಪ್ರೀತಿ ಪಡೆದ ನಾನು ಅಂದೇ ಸತ್ತುಹೋಗಬೇಕಿತ್ತು!/column/ravibelagere/2009/0826-my-dear-you-wont-find-better-lover-than-me.htmlಅಷ್ಟು ಪ್ರೀತಿಯಿಂದ ನೀನು ಯಾವತ್ತೂ ಉಣಬಡಿಸಿರಲಿಲ್ಲವೇನೋ? ಬೆರಳ ತುದಿಯಲ್ಲಿ ಮೊಸರಕೆನೆ ನೆಕ್ಕಿಸಿದವಳು ಯಾವಾಗ ಜೇನು ಬೆರೆಸಿದ್ದೆಯೋ? ನೀನು ಒಂದೊಂದಾಗಿ ಕಿಟಕಿಯ ಪರದೆಗಳನ್ನು ಹಾಕುತ್ತ ಬಂದೆ. ಅದು ಮೇಘ ಮಂಥನದ ಆಹ್ವಾನ. ನನ್ನೊಳಗಿನ ನಾಭಿಯಾಳದಲ್ಲಿ ಪ್ರಾಣ ಬಂದಿತ್ತು. ನಿನ್ನ ಮೈಯ ಘಮದಲ್ಲಿ ಈಸು ಬಿದ್ದ ಘಳಿಗೆ, ನನ್ನನ್ನು ನಾನು ಇಡಿಯಾಗಿ ಮರೆತಿದ್ದೆ.* ನಿನ್ನವನುಒಂದ್ನಿಮಿಷ! ಹೊರಡುವ ನಿನ್ನ ಸಡಗರಕ್ಕೆ ನಾನು 38844http://kannada.oneindia.com/img/2009/08/26-beautiful-eyes1.jpg38243manikanthಅಮ್ಮ ಹೇಳಿದ ಎಂಟು ಸುಳ್ಳುಗಳು/column/manikanth/2008/0918-eight-lies-of-my-mothers.htmlಸೂಚನೆ : ಈ ಸುಳ್ಳುಗಳನ್ನು ಓದುವುದಕ್ಕೆ ಶುರುಮಾಡುವ ಮುನ್ನ ಕರವಸ್ತ್ರವನ್ನು ಕೈಯಲ್ಲಿಟ್ಟುಕೊಂಡಿದ್ದರೆ ಕ್ಷೇಮ. ಯಾಕೆಂದರೆ, ಇದು ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ಕಂಡುಂಡು ಕಡುಬಡತನದಲ್ಲಿ ಬೆಳೆದ ಕನ್ನಡ ಮಕ್ಕಳಿಗೆ ಮಾತ್ರ. ಸಿರಿ ಉಕ್ಕಿ ಮದ ಹೊಕ್ಕಿದವರಿಗಿಲ್ಲ. ಅಂಕಣಕಾರ : ಎ.ಆರ್. ಮಣಿಕಾಂತ್ ತುಂಬಾ ದೂರ ಅಲ್ಲ ಸಾರ್, ಇಲ್ಲೇ, ಬೆಂಗಳೂರು ತುಮಕೂರಿನ ಮಧ್ಯೆ ನೆಲಮಂಗಲ 765http://kannada.oneindia.com/img/2009/10/24-manikanth1.jpg38243manikanthಎರಡೂ ಕೈಗಳಿಲ್ಲದ ಹೀಗೂ ಉಂಟೆ/column/manikanth/2008/1224-jessica-cox-hats-off-to-the-handless.htmlಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ; ಹ್ಯಾಟ್ಸ್ 33687http://kannada.oneindia.com/img/2008/12/24-jessicacox1.jpg38243manikanthಯುವ ನಿರ್ದೇಶಕರುಗಳಿಗೆ ಒಂದು ಪತ್ರವು.../column/manikanth/2009/0103-open-letter-to-young-directors-kannada-movie.htmlಹಳೆಯ ಕಥೆ, ಬಡಕಲು ಹೀರೋ, ಕಡಿಮೆ ಬಟ್ಟೆಯ ಇಪ್ಪತ್ತೈದು ಕೇಜಿಯ ಹೀರೋಯಿನ್, ಮಧ್ಯೆ ಮಧ್ಯೆ ಲಾಂಗು-ಮಚ್ಚುಗಳ ಖಣಖಣ, ನಮ್ಮ ವಜ್ರಮುನಿಯ ಕಿರುಬೆರಳಿಗೂ ಸಾಟಿಯಾಗದಂಥ ವಿಲನ್ನು... ಇಂಥವರೇ ತುಂಬಿಕೊಂಡಿರೋ ನಿಮ್ಮ ಸಿನಿಮಾ ನೋಡೋಕೆ-ಜನಕ್ಕೇನಾದ್ರೂ ಹುಚ್ಚು ಹಿಡಿದಿದೆಯೇನ್ರಿ? ಮುಂಗಾರು ಮಳೆ ಸುರಿಸಲು ಬಂದು ಅರ್ಧದಾರಿಯಲ್ಲೇ ಆವಿಯಾಗಿ ಹೋದ ಯುವ ನಿರ್ದೇಶಕರಿಗೆ ಎರಡು ಕಿವಿಮಾತುಗಳು. ಆದರೆ ಇನ್ನೊಂದು ಮಾತು, ಈ ಕಿವಿಯಿಂದ 33855http://kannada.oneindia.com/img/2009/01/03-preetam-gubbi1e.jpg38243manikanthಪ್ರೀತಿಯ ತಂದೆಗೆ ಮಗಳ ಪತ್ರ.../column/manikanth/2009/0109-letter-from-daughter-to-beloved-father.htmlಮಕ್ಕಳು ಜೀವನದಲ್ಲಿ ಎಡವದಿರಲೆಂದು ಮುದ್ದು ಮಾಡಿ ಬೆಳೆಸಿದ ಅಪ್ಪ ಅಮ್ಮಂದಿರು ಹೇಗೆ ಅಪೇಕ್ಷಿಸುತ್ತಾರೋ, ಅರಿವಿದ್ದೋ, ಅರಿವಿಲ್ಲದೆಯೋ ಎಡವಿ ಬಿದ್ದಾಗ ಮಕ್ಕಳು ಕೂಡ ಪ್ರೀತಿಯ ಅಪ್ಪ ಮತ್ತು ಅಮ್ಮ ತಮ್ಮ ಕಿರುಬೆರಳು ಹಿಡಿದು ಎಬ್ಬಿಸುತ್ತಾರೆಂದು ಅಪೇಕ್ಷಿಸುತ್ತವೆ. ಸೋತಾಗ ಕೈಹಿಡಿದು ಎಬ್ಬಿಸಿ, ಗೆದ್ದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಪ್ರತಿ ಪಾಲಕರ ಕರ್ತವ್ಯ.* ಎ.ಆರ್. ಮಣಿಕಾಂತ್ಮಗಳ ವರ್ತನೆ ಯಾಕೋ ಸರಿಯಾಗಿಲ್ಲ. ಇಂಥದೊಂದು ಅನುಮಾನ 33978http://kannada.oneindia.com/img/2009/01/09-daughter-father-love1.jpg38243manikanthಬೇಡ ಬಿಟಿ ಬದನೆ, ಶ್ರೀರಾಮುಲು ಅವರಿಗೆ ನಿವೇದನೆ/column/manikanth/2009/0128-bt-brinjal-how-safe-is-gm-crop.htmlಜೈವಿಕ ತಂತ್ರಜ್ಞಾನ ಬಳಸಿ ಬೆಳೆಯಲಾಗುವ ಆಹಾರದ ವಿರುದ್ಧ ಇಡೀ ದೇಶದಲ್ಲೇ ಹುಯಿಲೆದ್ದಿದೆ. ಕುಲಾಂತರಿ ಆಹಾರ ತಯಾರಿಗೆ, ಸಂಶೋಧನೆಗೆ ನಾನು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವರು ಕೂಡ ಘೋಷಿಸಿದ್ದಾರೆ. ರಾಜ್ಯದ ಆರೋಗ್ಯ ಸಚಿವರಾದ ಶ್ರೀರಾಮುಲು ಮಾತ್ರ ಬಾಯಿಗೆ ಬಿರಡೆ ಹಾಕಿ ಕುಳಿತಿದ್ದಾರೆ. ಸಾವಯವ ಕೃಷಿಗೆ ಉತ್ತೇಜನ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದರೂ ಜೈವಿಕ ತಂತ್ರಜ್ಞಾನದ ಬಳಕೆ 34337http://kannada.oneindia.com/img/2009/01/28-bt-brinjal1.jpg234944love storyನರಕದಲ್ಲಿ ಇಂದು : ಎಲ್ಲೂ ಕೇಳಿರದ ಪ್ರೇಮಕಥೆ/literature/short-story/2008/0905-hell-today-kannada-fiction-guruprasad.htmlಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಅನೇಕಾರು ಕಥೆಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ತಮ್ಮ ಅಪ್ರಕಟಿತ ಕಥಾ ಕಣಜಕ್ಕೆ ಅವರು ಇಟ್ಟಿರುವ ಹೆಸರು "ಸಿನಿಮಾ ಮಾಡಲಾಗದ ಕಥೆಗಳು". ಈ ಕಥಾ ಗುಚ್ಛದಿಂದ ಆಯ್ದ ಒಂದು ಮುತ್ತು "ನರಕದಲ್ಲಿ ಇಂದು.." ಈ ಕತೆಯನ್ನು ಸೆಲ್ಯುಲ್ಯಾಡ್ ಗೆ ತರಬಹುದಾ? ಯಾವುದಕ್ಕೂ ನಿರ್ದೇಶಕರಿಗೇ ಎರಡು ಸಾಲು ಬರೆಯಿರಿ. ಕಥೆಗಾರ : ಗುರುಪ್ರಸಾದ್, ಬೆಂಗಳೂರು ಈಗ 976http://kannada.oneindia.com/img/2009/07/21-guruprasad3.jpg234944love storyಜಿಯಾಂಗ್-ಕ್ವಿನ್‌ರ ಅಮರ ಪ್ರೇಮದ ಕತೆ/column/manikanth/2009/0205-a-chinese-immoral-love-story.htmlಹತ್ತು ವರ್ಷ ದೊಡ್ಡವಳಾದ ಪ್ರಿಯತಮೆ ಬೆಟ್ಟ ಇಳಿಯಲು ಅನುವಾಗಲೆಂದು ಸಾವಿರಾರು ಮೆಟ್ಟಿಲುಗಳನ್ನು ಕಡಿದು ಎಲ್ಲ ವೈರುದ್ಧ್ಯಗಳನ್ನು ಮೆಟ್ಟಿನಿಂತ ಸಾಹಸಿಯ ಕಥೆಯಿದು. ಸಮಾಜದಿಂದ ದೂರವೇ ಉಳಿದು ಅರ್ಧ ಶತಮಾನ ಕಾಡಿನ ಗುಹೆಯಲ್ಲೇ ಪ್ರೇಮ ಜೀವನ ನಡೆಸಿದ ಅಮರ ಪ್ರೇಮಿಗಳ ಕಥಾನಕವಿದು. ಈ ಪ್ರೇಮಕ್ಕೆ ಸಾಕ್ಷಿಯಾಗಿ ಕಥಾನಾಯಕಿ ಇಂದಿಗೂ ಚೀನಾದಲ್ಲಿ ಜೀವಂತವಿದ್ದಾಳೆ. ಆಕೆಗೊಂದು ಪ್ರೇಮೋನ್ನಮಃ.* ಎಆರ್ ಮಣಿಕಾಂತ್ಪ್ರೀತಿಸಿದವಳಿಗಾಗಿ ಹೆತ್ತವರನ್ನು ತೊರೆದವರಿದ್ದಾರೆ. 34496http://kannada.oneindia.com/img/2009/02/05-guo-jiang-qu1.jpg234944love storyಇನ್ಫೋಸಿಸ್ ಪ್ರಥಮ ದಂಪತಿಗಳ ಪ್ರೇಮಕಥೆ/column/manikanth/2009/0221-sudha-narayana-murthy-success-love-story.htmlಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸಿ ಇಡೀ ದೇಶವೇ ಹೆಮ್ಮೆಪಡುವಂಥ ಇನ್ಫೋಸಿಸ್ ಸಂಸ್ಥೆ ಕಟ್ಟಿದ ಕಥೆ ಯಾರಿಗೆ ಗೊತ್ತಿಲ್ಲ? ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಪ್ರೇಮಕಥೆಯೂ ಎಲ್ಲರಿಗೂ ತಿಳಿದ ವಿಷಯವೇ. ಆದರೂ, ಜೀವನದುದ್ದಕ್ಕೂ ಅವರಿಬ್ಬರೂ ಎದುರಿಸಿದ ಸಮಸ್ಯೆಗಳು, ಕಂಡುಕೊಂಡ ಪರಿಹಾರ, ಜೀವನರೀತಿ ಎಂಥವರಿಗೂ ಮಾದರಿಯಾಗಬಲ್ಲವು. ಕಷ್ಟಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ.* ಎಆರ್ ಮಣಿಕಾಂತ್"ಇದು 34786http://kannada.oneindia.com/img/2009/02/21-sudha-narayana-murthy1.jpg234944love storyಯಾವ ಮೋಹನ ಮುರಳಿ ಕರೆಯಿತು.../column/manikanth/2009/0325-youth-love-infatuation-and-betrayal.htmlಅವನು: ನನ್ನ ಹೆಸರು ರಮೇಶ ಅಲಿಯಾಸ್ ಪೆರ್ಕಳ ರಮೇಶ ಅಂತ ಸಾರ್. ನಮ್ದು ಮಂಗಳೂರು. ನಮ್ಮ ಕುಟುಂಬಕ್ಕೆ ಅದ್ಯಾವ ಹಾಳು ಶಾಪ ತಟ್ಟಿದೆಯೋ ಗೊತ್ತಿಲ್ಲ; ನಮ್ಮ ತಾತನ ಕಾಲದಿಂದ್ಲೂ ಬಡತನ, ಬಡತನ, ಬಡತನ! ಗೊತ್ತಲ್ಲ ಸಾರ್ ನಿಮ್ಗೂ? ಮಂಗ್ಳೂರಲ್ಲಿ ವರ್ಷಕ್ಕೆ ಹತ್ತಿಪ್ಪತ್ತು ಬಾರಿ ಹಿಂದೂ ಮುಸ್ಲಿಂ ಫೈಟಿಂಗು ನಡೀತದೆ. ಈ ಕಡೆ ಕೋಮುಗಲಭೆ, ಆ ಕಡೆ ಬಡತನ! 35523http://kannada.oneindia.com/img/2009/03/25-couple4.jpg234944love storyತನುಗೂಚಿ-ಯೂಕೋ/nri/short-story/2009/0508-japanees-love-story-by-sydney-srinivas.htmlಶನಿವಾರ ಸಂಜೆ. ತನುಗೂಚಿ ಹಲ್ಲು ಕಡಿಯುತ್ತಲೇ ಕಂಪ್ಯೂಟರ್ ಸ್ಕ್ರೀನಿನತ್ತ ಒಮ್ಮೆ, ಸೆನ್ಸೆಯತ್ತ ಒಮ್ಮೆ ನೋಡುತ್ತಿದ್ದ. ಆಗಲೇ ಐದೂವರೆ ಹತ್ತಿರ, ಇನ್ನೂ ಸೆನ್ಸೆ (ಗುರು ಫ್ಯೂಜಿಸಾವ) ಅಲ್ಲೇ ಕೂತಿದ್ದಾರೆ, ಮನೆಗೆ ಹೋಗಿಲ್ಲ. ಆರು ಗಂಟೆಗೆ ಗೆಳತಿ ಯೂಕೋ ಜೊತೆ ಸಿನೀಮಾಕ್ಕೆ ಹೋಗುವ ಕಾರ್ಯಕ್ರಮ. ಶನಿವಾರ ಸೆನ್ಸೆ ಲ್ಯಾಬಿಗೆ ಬರುವುದು ಅಪರೂಪ. ಸೋಮವಾರ ಯಾವುದೋ ಕಾನ್ಫೆರೆನ್ಸಿಗೆ ಪೇಪರ್ ಕಳುಹಿಸಬೇಕು. ಅದಕ್ಕಾಗಿ 36499http://kannada.oneindia.com/img/2009/05/08-sydney-srinivas1.jpgnews"> ಯಾವ ಮೋಹನ ಮುರಳಿ ಕರೆಯಿತು... | Youth love | Infatuation | Betrayal | Manikanth - ಯಾವ ಮೋಹನ ಮುರಳಿ ಕರೆಯಿತು... - Kannada Oneindia

ಯಾವ ಮೋಹನ ಮುರಳಿ ಕರೆಯಿತು...

Love or infatuation?
ಅವನು: ನನ್ನ ಹೆಸರು ರಮೇಶ ಅಲಿಯಾಸ್ ಪೆರ್ಕಳ ರಮೇಶ ಅಂತ ಸಾರ್. ನಮ್ದು ಮಂಗಳೂರು. ನಮ್ಮ ಕುಟುಂಬಕ್ಕೆ ಅದ್ಯಾವ ಹಾಳು ಶಾಪ ತಟ್ಟಿದೆಯೋ ಗೊತ್ತಿಲ್ಲ; ನಮ್ಮ ತಾತನ ಕಾಲದಿಂದ್ಲೂ ಬಡತನ, ಬಡತನ, ಬಡತನ! ಗೊತ್ತಲ್ಲ ಸಾರ್ ನಿಮ್ಗೂ? ಮಂಗ್ಳೂರಲ್ಲಿ ವರ್ಷಕ್ಕೆ ಹತ್ತಿಪ್ಪತ್ತು ಬಾರಿ ಹಿಂದೂ ಮುಸ್ಲಿಂ ಫೈಟಿಂಗು ನಡೀತದೆ. ಈ ಕಡೆ ಕೋಮುಗಲಭೆ, ಆ ಕಡೆ ಬಡತನ! ಹೀಗಿರುವಾಗ ಊರಲ್ಲಿದ್ದು ಮಾಡೋದೇನು ಅಂದ್ಕೊಂಡೇ ಬೆಂಗಳೂರಿಗೆ ಬಂದೆ. ಓದಿದ್ದು ಬರೀ ಏಳನೇ ಕ್ಲಾಸು ನೋಡಿ, ಹಾಗಾಗಿ ಒಂದು ಹೋಟೆಲಲ್ಲಿ ಕೆಲ್ಸ ಸಿಕ್ತು. ನಿಮ್ಮ ಜತೆ ಸುಳ್ಳು ಹೇಳೋದಿಲ್ಲ ಸಾರ್. ಹೀಗೆ, ಒಂದು ಕೆಲ್ಸ ಹಿಡಿದೆನಲ್ಲ? ಆಗ ನನಗೂ ಹತ್ತೊಂಬತ್ತು ತುಂಬಿತ್ತು. ಬೆಳಗ್ಗೆ, ಧರ್ಮಸ್ಥಳದ ಮುಂಜನಾಥಸ್ವಾಮಿಯ ಫೋಟೊ ನೋಡ್ಕೊಂಡೇ- ನಂಗೆ ಕೆಟ್ಟ ಬುದ್ಧಿ ಕೊಡಬೇಡ ದೇವ್ರೇ' ಅಂದ್ಕೊಂಡೇ ಏಳ್ತಿದ್ದೆ ನಿಜ. ಆದರೆ, ಹೋಟೆಲಿಗೆ ಬರ್‍ತಿದ್ದ ಕಲರ್ ಕಲರ್ ಹುಡುಗೀರನ್ನ ನೋಡ್ತಿದ್ದ ಹಾಗೇ ಮನಸ್ಸು ಕಂಟ್ರೋಲ್ ತಪ್ತಿತ್ತು.

ಮೊನ್ನೆ ಏನಾಯ್ತು ಅಂದ್ರೆ, ಕಾಫಿಗೇಂತ ಬಂದಿದ್ದ ಹುಡುಗಿಯೊಬ್ಬಳು ಪರ್ಸ್ ಮರೆತು ಹೋಗ್ತಾ ಇದ್ಲು. ನಾನು ಸರಸರಾಂತ ಅವಳ ಹಿಂದೆ ಹಿಂದೇನೇ ರಸ್ತೆ ತನಕ ಓಡಿ ಹೋಗಿ ಪರ್ಸ್ ಬಿಟ್ಟಿದೀರ. ತಗೊಳ್ಳಿ ಮೇಡಂ' ಅಂದೆ. ಸುಳ್ಳಲ್ಲ ಸಾರ್, ಆ ಹುಡುಗಿಯ ರೂಪು ಕಂಡು ತಲೆತಿರುಗಿ ಬಿದ್ದು ಹೋಗೋ ಹಾಗೆ ಆಗಿಬಿಟ್ಟಿತ್ತು.

ಅವಳು: ಮೈ ನೇಮ್ ಈಸ್ ಶರ್ಮಿಳಾ. ಸೋ ಸ್ವೀಟ್ ಅಂಡ್ ಟೂ ಕ್ಯೂಟ್ ಅಂತಾರಲ್ಲ; ಅಂಥ ಹುಡುಗಿ ನಾನು. ಅಪ್ಪ-ಅಮ್ಮನ ಒಬ್ಬಳೇ ಮಗಳು. ಇವತ್ತು ಕಾಲೇಜಿನ ಮುಂದಿರೋ ಹೋಟೆಲಿಗೆ ಕಾಫಿಗೇಂತ ಹೋಗಿದ್ದೆ. ಅಲ್ಲಿ ಕಣ್ಣಿಗೆ ಬಿದ್ದನಲ್ಲ- ಆ ಹುಡುಗ ಕಪ್ಪು, ಆದರೆ ಲಕ್ಷಣವಾಗಿದಾನೆ. ನೀಟ್‌ನೆಸ್ಸು, ಡ್ರೆಸ್‌ಸೆನ್ಸು ಎರಡೂ ಇಲ್ಲ. ಅಂದ ಮೇಲೆ ನಮ್ಮ ಜಾತಿಯವನಲ್ಲ ಅನಿಸುತ್ತೆ. ಆದರೆ, ಆ ಹುಡುಗನ ಪ್ರಾಮಾಣಿಕತೆ ಇದೆಯಲ್ಲ? ವಾಹ್, ಅದು ಕೋಟ್ಯಾಪತಿಗಳಲ್ಲೂ ಇರಲ್ಲ. ಅವನ ನಡೆ-ನುಡಿ ಎರಡೂ ಚೆನ್ನಾಗಿದೆ. ತುಂಬ ಪ್ರೀತಿಯಿಂದ, ಗೌರವದಿಂದ ಮಾತಾಡಿಸ್ತಾನೆ. ಅವನನ್ನು ನೊಡೋಕೆ ಅಂತಾನೇ ಐದಾರು ಸಲ ಹೋಟೆಲಿಗೆ ಹೋಗಿ ಬಂದಿದ್ದಾಯ್ತು. ಪುಣ್ಯಾತ್ಮ, ತುಂಬ ಸಂಕೋಚದಿಂದ ವರ್ತಿಸ್ತಾನೆ. ಮೈಕೈ ಸೋಕದ ಹಾಗೆ ನಡ್ಕೋತಾನೆ. ಕಾಲೇಜಿನಲ್ಲಿ ನನ್ನ ಹಿಂದೆ ಹಿಂದೆಯೇ ಸುತ್ತುವ ಮಂಗಗಳಂಥ ಹುಡುಗರಿಗಿಂತ ಇವನು ಸಾವಿರ ಪಟ್ಟು ಮೇಲು.

ಅರೆ, ಇವನು ನಮ್ಮ ಜಾತಿಯವನಲ್ಲ. ನಮ್ಮಷ್ಟು ಆಸ್ತಿವಂತನೂ ಅಲ್ಲ. ನನ್ನ ಚೆಲುವಿಗೆ ಸರಿಸಾಟಿ ಕೂಡ ಅಲ್ಲ. ಆದರೆ, ಆತ ಒಳ್ಳೆಯವನಿದ್ದಾನೆ, ನಂಬಿದವರನ್ನು ಕಾಪಾಡ್ತಾನೆ. ಒಂದು ಸೆಕ್ಯೂರಿಟಿ ಕೊಡ್ತಾನೆ. ಕೈ ಹಿಡಿದವಳಿಗೆ ಮೂರು ಹೊತ್ತಿನ ಊಟವನ್ನಂತೂ ತಪ್ಪದೆ ಹಾಕ್ತಾನೆ ಅಂತ ನನ್ನ ಒಳಮನಸ್ಸು ಹೇಳ್ತಿದೆ. ಅಯ್ಯಯ್ಯೋ, ಅವನ ಬಗ್ಗೆ ನನಗಾದ್ರೂ ಯಾಕಪ್ಪಾ ಇಂಥ ಮಮಕಾರ? ನಾನೇನಾದ್ರೂ ಅವನನ್ನು ಪ್ರೀತಿಸ್ತಾ ಇದೀನಾ? ಛೆ, ಇರಲಾರದು.

ಅವನು: ಶರ್ಮಿಳಾ ಮೇಡಂ ಪರಿಚಯವಾಗಿ ಇವತ್ತಿಗೆ ಐದು ತಿಂಗಳು. ಅವತ್ತೊಂದು ದಿನ ಹೊಸ ಬಟ್ಟೆ ಹಾಕ್ಕೊಂಡಿದ್ದೆ. ಏನ್ರೀ ವಿಶೇಷ? ಮಿಂಚ್ತಾ ಇದೀರ' ಅಂದ್ರು. ನನ್ನ ಬರ್ತ್‌ಡೇ ಮೇಡಂ' ಅಂದೆ. ಅವತ್ತೇ ಸಂಜೆ ಒಂದು ಗ್ರೀಟಿಂಗ್ ಕಾರ್ಟ್ ಕೊಟ್ರು. ಅದರೊಳಗೆ- ದಾರಿ ದೂರವಾದರೂ ಪ್ರೀತಿ ಹತ್ತಿರವಾಗಲಿ/ಮನದ ತುಂಬಾ ಮಮತೆಯಿರಲಿ/ತುಟಿಯ ತುಂಬಾ ನಗುವಿರಲಿ/ನೀನು ನಕ್ಕಾಗ ನನ್ನ ನೆನಪಿರಲಿ!' ಎಂದು ಬರೆದಿದ್ರು. ಅವರನ್ನು ನೋಡ್ತಾ ಇದ್ರೆ ನಂಗೆ ಜಗತ್ತೇ ಮರೆತುಹೋಗುತ್ತೆ. ಮಾತಿನ ಮಧ್ಯೆ ಶರ್ಮೀಳಾ ಮೇಡಂ ವಿಪರೀತ ಇಂಗ್ಲಿಷ್ ಬಳಸ್ತಾರೆ. ಮೊದಮೊದ್ಲು ಅದೆಲ್ಲ ಅರ್ಥ ಆಗ್ತಾನೇ ಇರಲಿಲ್ಲ. ತಕ್ಷಣ ಟ್ಯೂಶನ್‌ಗೆ ಸೇರಿಕೊಂಡೆ. ಇಂಗ್ಲಿಷು ಕಲಿತೆ. ಲೆಕ್ಕ ಕಲಿತೆ. ಲವ್‌ಲೆಟರ್ ಬರೆಯೋದು ಕಲಿತೆ. ಈ ಮಧ್ಯೆ ಒಳಮನಸ್ಸು ಸದಾ ಶರ್ಮಿಳಾ ಮೇಡಂ ಜಪದಲ್ಲಿದೆ. ಅವರನ್ನು ಪ್ರೀತಿಸು. ಬೇಗ ಪ್ರೊಪೋಸ್ ಮಾಡು' ಅಂತ ಹೇಳ್ತಿದೆ. ನಮ್ಮಿಬ್ಬರ ಮಧ್ಯೆ ಜಾತಿ-ಅಂತಸ್ತಿನ ತಡೆಗೋಡೆಯಿದೆ. ಹಾಗಿದ್ರೂ ಐ ಲವ್ ಯೂ ಅಂತ ಹೇಳಲೇಬೇಕು ಅನ್ನಿಸ್ತಿದೆ. ಹೇಳಿಬಿಡ್ಲಾ? ಈ ಮಾತಿಗೆ ಅವರು ಕೋಪಿಸಿಕೊಂಡ್ರೆ? ಛಟೀರ್ ಅಂತ ಕೆನ್ನೆಗೆ ಹೊಡ್ದೇಬಿಟ್ರೆ ಅಥವಾ ಮಾತಾಡೋದನ್ನೇ ನಿಲ್ಲಿಸಬಿಟ್ರೆ...?

ಅವಳು: ಎಲ್ಲವೂ ನನ್ನ ನಿರೀಕ್ಷೆ ಮೀರಿ ನಡೆದು ಹೋಗ್ತಾ ಇದೆ. ರಮೇಶ ಒಂದೆರಡಲ್ಲ, ಭರ್ತಿ ನೂರಿಪ್ಪತ್ತೈದು ಲವ್‌ಲೆಟರ್ ಕೊಟ್ಟಿದಾನೆ. ಕೆಲವನ್ನಂತೂ ರಕ್ತದಲ್ಲಿ ಬರೆದಿದ್ದಾನೆ. ತನ್ನ ಬಗ್ಗೆ, ತನ್ನವರ ಬಗ್ಗೆ, ತನ್ನ ಬಡತನದ ಬಗ್ಗೆ, ತನ್ನ ಅಲ್ಪ ಓದಿನ ಬಗ್ಗೆ, ಈಗಿನ ಕಲಿಕೆಯ ಬಗ್ಗೆ, ಕನಸುಗಳ ಬಗ್ಗೆ ಸಂಕೋಚದಿಂದ ಹೇಳ್ಕೊಂಡಿದಾನೆ. ಅವನ ಮಾತುಗಳ ತುಂಬ ಪ್ರಾಮಾಣಿಕತೆಯಿದೆ. ವಿನಂತಿಯಿದೆ. ಕಂಡೂ ಕಾಣದಂಥ ಆಗ್ರಹವಿದೆ. ನನಗಾದ್ರೂ ಯಾಕೆ ಅಂಥ ಮಮಕಾರ? ಗೊತ್ತಾಗ್ತಿಲ್ಲ. ನನ್ನ ಒಂದೇ ಒಂದು ಕುಡಿನೋಟಕ್ಕೆ ಕಾದಿರುವ ನೂರು ಹುಡುಗರಿದ್ದಾರೆ. ಆದ್ರೂ ನನಗೆ ಇವನ ಧ್ಯಾನ! ಅವನು ಬಡವ ಆದ್ರೆ ಏನಂತೆ? ಹೇಗಿದ್ರೂ ನಾನು ಡಬಲ್ ಡಿಗ್ರಿ ಮಾಡಿದೀನಲ್ಲ? ನಾನೂ ದುಡಿದ್ರಾಯ್ತು. ಅವನ ಪ್ರೀತೀನ ಒಪ್ಕೊಂಡು, ಯಾವುದಾದ್ರೂ ದೇವಸ್ಥಾನದಲ್ಲಿ ಮದುವೆಯಾಗಿ, ಹೊಸಬದುಕು ಶುರು ಮಾಡೋದೇ ಸರಿ ಅನ್ನಿಸ್ತಿದೆ. ಅಲ್ಲಿ ಎಷ್ಟು ಫಾಸ್ಟ್ ಆಗಿ ಹೋಗ್ತಾ ಇದೆಯಲ್ಲ ಬದುಕು?

ಅವನು: ಶರ್ಮಿಳಾ ಮೇಡಂ ಪರಿಚಯವಾಗಿ ಆಗಲೇ ನಾಲ್ಕು ವರ್ಷ! ಅವರ ಬರ್ತ್‌ಡೇನ ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡ್ದೆ. ಒಂದು ವಾಚು, ಕಿವಿಗೆ ರಿಂಗು, ಪಿಂಕ್ ಕಲರ್‌ನ ಚೂಡಿದಾರ್ ತಂದುಕೊಟ್ಟೆ. ಚಾಕೊಲೇಟ್ ಕೇಕ್‌ನ ಅವರ ಬಾಯಿಗಿಟ್ಟೆನಲ್ಲ? ಅದರ ಮರುಕ್ಷಣವೇ ಮೇಡಂ ಒಂದು ಮುತ್ತು ಕೊಟ್ರು. ನನ್ನೆದೆಗೆ ಒರಗಿ ನಿಂತ್ರು. ಸಾಯೋ ತನ್ಕ ಹೀಗೇ ಬದುಕಿರೋಣ. ನಿನ್ನ ಪ್ರೀತೀನ ಒಪ್ಕೊಂಡಿದೀನಿ. ಈ ಕೆಲ್ಸ ಬಿಡು. ಹೊಸ ಬಿಜಿನೆಸ್ ಶುರು ಮಾಡು. ಒಂದಿಷ್ಟು ದುಡ್ಡು ಜೋಡಿಸ್ಕೊ. ಮದುವೆಗೆ ಬೇಕಾಗುತ್ತೆ. ಮುಂದೆ ಏನಾಗತ್ತೋ ಏನೋ; ಇವತ್ತೇ ದೇವರ ಮುಂದೆ ನಿಂತು ಹಣೆಗೆ ಕುಂಕುಮ ಇಟ್ಟುಬಿಡು. ಹಾಗೆ ಮಾಡಿದ್ರೆ ಮದುವೆ ಆಯ್ತು ಅಂತಾನೇ ಅರ್ಥ. ಇಬ್ರೂ ಜತೇಗಿರೋ ಫೋಟೊ ತೆಗೆಸ್ಕೊಳ್ಳೋಣ. ಮುಂದೆ ಮನೆಯವರು ನಮ್ಮ ಪ್ರೀತೀನ ವಿರೋಧಿಸಿದ್ರೆ ಆವಾಗ ಇದು ಉಪಯೋಗಕ್ಕೆ ಬರುತ್ತೆ. ಜಾತಿಯ ಮನೆ ಹಾಳಾಗಲಿ...' ಹೀಗೆಲ್ಲ ಹೇಳಿಹೋದರು ಶರ್ಮಿಳಾ. ಆಮೇಲೆ- ಇನ್ಮೇಲೆ ನನ್ನನ್ನ ಏಕವಚನದಲ್ಲಿ ಕರೆಯೋ' ಅಂದ್ರು.

ಅವಳು: ಹೀಗೆಲ್ಲ ಮಾಡಿದ್ದು ಸರಿಯೋ ತಪ್ಪೋ ಗೊತ್ತಾಗ್ಲಾ ಇಲ್ಲ. ನನಗಂತೂ ರಮೇಶನೊಂದಿಗಿನ ಒಡನಾಟ ಬೇಕೇಬೇಕು ಅನ್ನಿಸ್ತಿದೆ. ಅದೇ ಕಾರಣದಿಂದ ದೇವರ ಮುಂದೆ ನಿಂತು ಅರುಶಿನಕೊಂಬು ಕಟ್ಟಿಸ್ಕೊಂಡೆ! ಪಾರ್ಕು, ಸಿನಿಮಾ, ಹೋಟೆಲು ಅಂತೆಲ್ಲಾ ಸುತ್ತಾಡಿದೆ. ಮಾತಲ್ಲಿ ಹೇಳಲಾಗದಂಥ ಹಸಿಬಿಸಿಯ ಏನೇನೋ ನಮ್ಮ ಮಧ್ಯೆ ನಡೀತು. ಅದನ್ನು ನೆನಪು ಮಾಡಿಕೊಂಡ್ರೇ ನಾಚಿಕೆ ಆಗುತ್ತೆ. ಹಿಂದೇನೇ ಆಸೆಯೂ ಕೈ ಜಗ್ಗುತ್ತೆ. ನನ್ನ ಸಾಹಸವನ್ನೆಲ್ಲ ಗೆಳತಿಯರ ಮುಂದೆ ಹೇಳಿಕೊಂಡೆ. ಅವರೆಲ್ಲ ಬೆರಗಾದರು. ರಮೇಶನ ಫೋಟೊ ನೋಡಿ- ಇವ್ನು ಕರಿಯ. ಒಳ್ಳೇ ಅಬ್ಬೇಪಾರಿ ಥರಾ ಇದಾನೆ. ನೀನು ನೋಡಿದ್ರೆ ತ್ರಿಲೋಕಸುಂದ್ರಿ. ನಿಂಗಿವ್ನು ಸರಿ ನೋಡಿ ಅಲ್ಲ. ಮುಂದುವರೀಬೇಡ. ಅದೂ ಅಲ್ಲದೆ, ಅವ್ನು ಓದಿರೋದು ಏಳನೇ ಕ್ಲಾಸು ಅಂತೀಯ. ಅದೇ ಕಾರಣಕ್ಕೆ ನಿಮ್ಮ ಮಧ್ಯೆ- ಮುಂದೆ ಮಿಸ್ ಅಂಡರ್‌ಸ್ಟ್ಯಾಂಡಿಂಗ್ ಬರಬಹುದು' ಅಂದ್ರು. ಅವರ ಬುದ್ಧಿವಾದಕ್ಕೆ ಬೆಂಕಿ ಬೀಳಲಿ. ಹುಡುಗನಷ್ಟೇ ಚೆನ್ನಾಗಿ ಹುಡುಗಿಯೂ ಇರ್‍ಲೇಬೇಕಾ? ಸಾಧಾರಣ ಸುಂದರಾಂಗನೊಂದಿಗೂ ಸಂತೃಪ್ತ ಬದುಕು ನಡೆಸಬಹುದು ಅಂತ ಜಗತ್ತಿಗೇ ತೋರಿಸ್ತೀನಿ. ಅಂದ್ಹಾಗೆ, ಅಮ್ಮನ ಅನುಮಾನದ ಕಣ್ಣು ನನ್ನ ಹಿಂದಿವೆ. ಅವಳಿಗೆ ಇದೆಲ್ಲ ಗೊತ್ತಾಗಿಬಿಡ್ತಾ?

ಅವನು: ಶರ್ಮಿಳಾ ಮೇಡಂ ಮನೇಲಿ ವಿಷಯ ಗೊತ್ತಾಯ್ತಂತೆ. ಹೇಳಿ ಕೇಳಿ ಒಬ್ಬಳೇ ಮಗಳು. ನೀನೂ ನಮ್ಮ ಮಾತು ಮೀರ್‍ತಿಯೇನೇ? ಹಾಗೇನಾದ್ರೂ ಮಾಡಿ ಲವ್ ಮ್ಯಾರೇಜ್ ಆದ್ರೆ ನಾವು ವಿಷ ಕುಡೀತೀವಿ ಹುಶಾರ್ ಅಂದ್ರಂತೆ ಅವಳ ಅಪ್ಪ-ಅಮ್ಮ. ಪರ್ವಾಗಿಲ್ಲ. ಇದಕ್ಕೆಲ್ಲ ನೀನು ಹೆದರಬ್ಯಾಡ' ಅಂದಿದಾರೆ ಮೇಡಂ. ಆದ್ರೂ ಹೆದರಿಕೆ ಆಗ್ತಿದೆ. ಯಾಕಂದ್ರೆ ಬಿಜಿನೆಸ್ಸು ಕೈ ಹಿಡೀತಿಲ್ಲ. ಒಳ್ಳೇ ಸಂಬಳದ ಕೆಲಸವೂ ಸಿಕ್ತಾ ಇಲ್ಲ. ಮೊದಲಿನ ಹಾಗೆ ಶರ್ಮಿಳಾ ಜತೆ ಮಾತಾಡೋಕೂ ಆಗ್ತಾ ಇಲ್ಲ. ಅವರ ಮನೆಗೇ ಫೋನ್ ಮಾಡಿದ್ರೆ ಮೇಡಂ ತಂದೇನೇ ಫೋನ್ ತಗೋತಾರೆ. ನನ್ನ ಹೆಸರು ಕೇಳಿದಾಕ್ಷಣ, ರಾಂಗ್‌ನಂಬರ್ ಅಂದು ಕುಕ್ಕಿ ಬಿಡ್ತಾರೆ. ಕಾಲೇಜಿನ ಹತ್ರಾನೇ ಒಂದೆರಡು ಸಾರಿ ಹೋಗಿ ಎಲ್ಲವನ್ನೂ ಹೇಳ್ಕೊಂಡೆ. ಹಣೆಗೆ ಕುಂಕುಮ ಇಟ್ಟಿದೀನಿ. ತಾಳೀನೂ ಕಟ್ಟಿದೀನಿ. ನಮ್ಮ ಪ್ರೀತಿ ಗೆಲ್ಲುತ್ತೆ ಅಲಾ, ಅಂದು ಬಿಕ್ಕಳಿಸಿದೆ. ಏನೂ ಆಗಲ್ಲ ಸುಮ್ನಿರು ' ಅಂದಳು ಶರ್ಮಿಳಾ. ಈಗ ಹತ್ತು ದೇವರಿಗೆ ಹರಕೆ ಕಟ್ಕೊಂಡಿದೀನಿ. ದೇವರು ನನ್ನ ಕೈ ಬಿಡಲಾರ.

****
ಅವಳು: ಪ್ರಾಯದ ಹಮ್ಮಿನಲ್ಲಿ ನಾನು ತಪ್ಪು ಮಾಡಿಬಿಟ್ಟೆನಾ? ಈಗೇಕೋ ಹಾಗೇ ಅನ್ನಿಸ್ತಾ ಇದೆ. ಫ್ರೆಂಡ್ಸ್ ಹೇಳಿದ್ದೇ ಸರಿ. ರಮೇಶ್ ನಂಗೆ ಸರಿ ಜೋಡಿಯಲ್ಲ. ಅವನನ್ನು ಮದುವೆಯಾದ್ರೆ ಎದುರಾಗುವ ಸಮಸ್ಯೆಗಳು ಒಂದಾ ಎರಡಾ? ಮೊದಲನೆಯದಾಗಿ, ಅಪ್ಪ ಅಮ್ಮಂಗೆ ಕೆಟ್ಟ ಹೆಸರು ಬರುತ್ತೆ. ಬಂಧುಗಳು ದೂರ ಆಗ್ತಾರೆ. ಆಮೇಲೆ ಕೂಡ ಸಿಕ್ಕಾಗೆಲ್ಲ ಅಣಕಿಸ್ತಾರೆ. ಅಷ್ಟೇ ಅಲ್ಲ. ರಮೇಶನನ್ನೇ ಮದುವೆಯಾಗಿ ಮುಂದೊಂದು ದಿನ ಪಾರ್ಟಿಗೆ ಹೋದ್ರೆ ಆಗ ಕೂಡ ಜನ ಒಂಥರಾ ನೋಡ್ತಾರೆ. ಹೌದು, ಈಗ ದುಡುಕಿ ಮುಂದೆ ಪಶ್ಚಾತ್ತಾಪ ಪಡಬಾರದು. ಈಗಿಂದಲೇ ರಮೇಶನನ್ನು ಅವಾಯ್ಡ್ ಮಾಡಬೇಕು. ಅಪ್ಪ-ಅಮ್ಮ ಹೇಳಿದಂಗೆ ಕೇಳಬೇಕು. ಮುಂದಿನದು ನನ್ನ ಹಣೇಲಿ ಬರೆದಂತೆ ಆಗಲಿ.

ಅವನು: ಉಹುಂ, ಹೀಗೆಲ್ಲ ಆಗುತ್ತೆ ಅಂತ ನಾನು ಕನಸೂ ಕಂಡಿರಲಿಲ್ಲ. ಹುಡುಗಾ, ನಿನ್ನ ಹೃದಯದ ಬಡಿತವಾಗಿ, ಜತೆಜತೆಯ ಹೆಜ್ಜೆಯಾಗಿ, ಕಣ್ಣೊಳಗಿನ ಬೆಳಕಾಗಿ, ಹಾಲಲ್ಲಿ ಜೇನಾಗಿ ಜತೆಗಿರ್‍ತೀನಿ ಕಣೋ' ಎಂದಿದ್ದ ಶರ್ಮಿಳಾ; ನನಗೋಸ್ಕರ ವಾರವಾರವೂ ಅರ್ಚನೆ ಮಾಡಿಸಿದ್ದ ಶರ್ಮಿಳಾ; ನೋಟ್ ಬುಕ್ಕಿನ ಪ್ರತಿ ಹಾಳೆಯಲ್ಲೂ ನನ್ನ ಹೆಸರು ಬರೆದಿದ್ದ ಶರ್ಮಿಳಾ; ನನ್ನ ಅಂಗೈ ಮೇಲಿನ ಹಚ್ಚೆಯಾಗಿ ಮೆರೆದಿದ್ದ ಶರ್ಮಿಳಾ; ಕಳೆದ ಆರು ವರ್ಷಗಳಲ್ಲಿ ನನ್ನ ಆತ್ಮ ಬಂಧುವೇ ಆಗಿದ್ದ ಶರ್ಮಿಳಾ- ಈಗ ನನ್ನಿಂದ ದೂರಾಗುವ ಮಾತಾಡ್ತಾ ಇದಾಳೆ. ಉಹುಂ, ಅವಳೇ ಇಲ್ಲದ ಮೇಲೆ ಯಾರಿಗಾಗಿ ಬದುಕಲಿ? ಸತ್ತುಹೋದ್ರೆ ಹೇಗೆ? ಯೋಚಿಸ್ತಾ ಇದೀನಿ.

ಅವಳು: ಹೌದು, ಈಗ ನನ್ನ ನಿರ್ಧಾರ ಇನ್ನಷ್ಟು ಗಟ್ಟಿಯಾಗಿದೆ. ಹಳೆಯದನ್ನೆಲ್ಲ ಕೆಟ್ಟ ಕನಸು ಅಂತ ಮರೆತುಬಿಡಬೇಕು. ನಾನು ತಪ್ಪು ಮಾಡಿದ್ದು ಹೌದು. ಹಾಗೆ ನೋಡಿದ್ರೆ ತಪ್ಪು ಮಾಡದವ್ರು ಯಾರವ್ರೆ? ಗಾಂಧಿಯಂಥ ಗಾಂಧಿ ಕೂಡ ಲವ್ ಮಾಡಲಿಲ್ವೆ? ಆಮೇಲೂ ನೂರಾರು ತಪ್ಪು ಮಾಡಲಿಲ್ವೆ? ಆನಂತರ ಕೂಡ ಮಹಾತ್ಮ ಅಂತ ಕರೆಸಿಕೊಳ್ಳಲಿಲ್ವೆ? ಪ್ರಾಯದ ದಿನಗಳಲ್ಲಿ ಮಾಡಿದ ಎಲ್ಲ ತಪ್ಪುಗಳಿಗೂ ಕ್ಷಮೆ ಇದೆಯಂತೆ. ಇಷ್ಟೆಲ್ಲ ಗೊತ್ತಿದ್ದ ಮೇಲೂ ಸುಮ್ನೆ ಯಾಕೆ ರಿಸ್ಕ್ ತಗೊಳ್ಳೋದು? ರಮೇಶ ಬಿಸಿನೆಸ್ ಮಾಡಿ, ಅದು ಸಕ್ಸಸ್ ಆಗಿ, ಅದರಿಂದ ಲಾಭ ಬಂದು... ಓಹ್, ಅದೆಲ್ಲ ಆಗದ ಹೋಗದ ವಿಚಾರ. ನನಗಿಂತ ಜಾಸ್ತಿ ಓದಿರುವ, ನನಗಿಂತ ಚೆನ್ನಾಗಿರುವ, (ನಮಗಿಂತ ಶ್ರೀಮಂತರೂ ಆದ) ಹುಡುಗನ ಕಡೆಯವರು ಬಂದಿದ್ರಂತೆ. ಅಪ್ಪ-ಅಮ್ಮ ಒಪ್ಕೊಂಡಿದಾರೆ. ಮಗಳಿಗೆ ಒಳ್ಳೇದಾಗ್ಲಿ ಅಂತ ತಾನೆ ಅವರು ಇಷ್ಟೆಲ್ಲ ಮಾಡ್ತಿರೋದು? ನಾನು, ಅವರು ಹೇಳಿದಂತೆಯೇ ಕೇಳೋದು ವಾಸಿ.

ಅವನು: ಅಂತೂ ಈ ಬದುಕಿನ ಬಂಡಿ ಮುಳುಗಿಹೋಯ್ತು ಸಾರ್. ಆ ಹುಡುಗನನ್ನೇ ಮದುವೆಯಾದ್ರೆ ನಾವು ವಿಷ ಕುಡೀತೀವಿ ಅಂತ ಮತ್ತೆ ಹೇಳಿದ್ರಂತೆ ಶರ್ಮಿಳಾನ ತಂದೆ-ತಾಯಿ. ಅದನ್ನೇ ನೆಪ ಮಾಡಿ ಆಕೆ ಹಳೇದನ್ನೆಲ್ಲ ಮರ್ತುಬಿಡು. ಬೇರೆ ಮದುವೆ ಮಾಡ್ಕೊ. ಖುಷಿಯಾಗಿರು. ನಾನೂ ಅಷ್ಟೆ. ಅಪ್ಪ-ಅಮ್ಮ ಹೇಳಿದಂತೆ ಕೇಳ್ತೇನೆ. ಬದುಕು ಬಂದ ಹಾಗೆ ಬರಲಿ ಅನ್ನಬೇಕೇ ಹೊರತು ನಮ್ಮ ಇಷ್ಟದಂತೆಯೇ ಇರಲಿ ಅನ್ನಬಾರ್‍ದು' ಎಂದೆಲ್ಲಾ ಬುದ್ಧಿ ಹೇಳಿ ಹೋದಳು. ಹೀಗೆ ಹೇಳೋದ್ರಲ್ಲೂ ಒಂದು ಸಾಫ್ಟ್ ವಿಧಾನ ಇರ್‍ತದೆ ಅಲ್ವ? ಉಹುಂ, ಶರ್ಮಿಳಾಳ ಮಾತಲ್ಲಿ ಆ ವಿನಯ ಕಾಣಲಿಲ್ಲ!

ಅವಳು: ಅಬ್ಬ, ಕಡೆಗೂ ಅವನನ್ನು ಸಾಗಹಾಕಿದ್ದಾಯ್ತು. ಮುಂದೆ ಇಂಥ ತಪ್ಪು ಮಾಡಬಾರ್‍ದು. ಅವನು ಓಡಾಡೋ ಜಾಗದಲ್ಲಿ ಸುಳಿಯಲೂಬಾರದು. ಸುಳಿದರೂ ಮಾತಾಡಬಾರ್‍ದು. ಅಂದ್ಹಾಗೆ, ಮೊನ್ನೆ ಬಂದಿದ್ದ ಹುಡುಗ, ಸೈಡ್ ಆಂಗಲ್‌ನಿಂದ ನೋಡಿದ್ರೆ ಸೈಫ್ ಆಲಿ ಖಾನ್ ಥರಾನೇ ಇದಾನೆ. ಅವನನ್ನು ಒಪ್ಪಿದ್ದಾಯ್ತು. ಅಪ್ಪ-ಅಮ್ಮಂಗೆ ಬೇಗ ಹೇಳಿಬಿಡಬೇಕು...

***
ಉಪಸಂಹಾರ: ಈಗ ಏನಾಗಿದೆ ಅಂದರೆ, ರಮೇಶ, ಹಳೆಯ ದಿನಗಳ ನೆನಪಲ್ಲಿ ಬಿಕ್ಕಳಿಸ್ತಾ ಇದಾನೆ. ಈ ಕಲರ್ ಕಲರ್ ಹುಡುಗಿ ಶರ್ಮಿಳಾ, ಹೊಸ ಗೆಳೆಯನ ಜತೆ ಬೆಂಗ್ಳೂರು ಸುತ್ತುತ್ತಾ ಕಿಲಕಿಲಕಿಲ ನಗ್ತಾ ಇದಾಳೆ. ಅವಳ ಅಪ್ಪ-ಅಮ್ಮ-ಸದ್ಯ, ದೊಡ್ಡ ಕಂಟಕ ತಪ್ಪಿತು ಎಂದು ಖುಷಿ ಪಡ್ತಾ ಇದಾರೆ. ಮಗಳಿಗೆ ಮದುವೆ ಮಾಡಲು ಛತ್ರ ಹುಡುಕ್ತಾ ಇದಾರೆ. ಅಂದಹಾಗೆ, ಇದು ಕಾಲ್ಪನಿಕ ಕಥೆ ಅಲ್ಲ. ನಾಡಿನ ಪ್ರತಿ ಬೀದಿಯಲ್ಲೂ ವಿಫಲ ಪ್ರೇಮದಿಂದ ಬಿಕ್ಕುತ್ತಿರುವ ರಮೇಶನಂಥ ಹುಡುಗರಿದ್ದಾರೆ. ಹೊಸ ಪ್ರೇಮದ ಅಮಲಲ್ಲಿ ನಗುತ್ತಿರುವ ಶರ್ಮಿಳಾ ಥರದ ಬೆಡಗಿಯರೂ ಇದಾರೆ. ಇಲ್ಲಿ ಪಾತ್ರಗಳು ಅದಲು ಬದಲಾಗಬಹುದು. ಆದರೆ ಪ್ರೀತಿಸಿದ ಮನಸ್ಸಿನಿಂದ ಎದ್ದು ಹೋಗುವ ಮುನ್ನ ಎಲ್ಲರೂ ಹೇಳುವ ಕಾರಣಗಳು ಮಾತ್ರ ಹೀಗೇ ಇರ್‍ತವೆ. ನಿಜ, ಅಲ್ವ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+