• search

ಜಂಗಲ್ ಡೈರಿ: ಹಬ್ಬಗಳಲ್ಲಿ ಆನೆಗಳೆಂದರೆ ಸಂಭ್ರಮವಲ್ಲ, ಸಂಕಟ

Posted By: ಗಗನ್ ಪ್ರೀತ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಅರಣ್ಯ ಹಾಗೂ ವನ್ಯಜೀವಿಗಳು ಅಂದಾಕ್ಷಣ ನನ್ನ ಕಿವಿ ನೆಟ್ಟಗಾಗುತ್ತದೆ. ಅವುಗಳಿಗೆ ಸಂಬಂಧಿಸಿದ ಏನಾದರೂ ಕಾರ್ಯಕ್ರಮಗಳಿದ್ದಲ್ಲಿ ಅಲ್ಲಿ ನಾನು ಹಾಜರ್ ಆಗುತ್ತೇನೆ. ಕಳೆದ ಭಾನುವಾರ ಎಂ.ಜಿ ರಸ್ತೆ ಮೆಟ್ರೋವಿನ ರಂಗೋಲಿ ಆವರಣದಲ್ಲಿ ಕೇರಳದ ಆನೆಗಳ ಬಗ್ಗೆ ಒಂದು ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮವನ್ನು ಫ್ರೆಂಡ್ಸ್ ಆಫ್ ಎಲಿಫೆಂಟ್ಸ್ ಹಾಗೂ ನಮ್ಮ ಮೆಟ್ರೋ ಕಡೆಯಿಂದ ಆಯೋಜಿಸಲಾಗಿತ್ತು.

  ಈ ಕಾರ್ಯಕ್ರಮ ಇದ್ದದ್ದೇ ಕೇರಳದ ಆನೆಗಳ ಬಗ್ಗೆ. ಕೇರಳದಲ್ಲಿ ಆನೆಗಳು ಅವರ ಎಲ್ಲ ಧಾರ್ಮಿಕ ಚಟುವಟಿಕೆಗಳ ಅವಿಭಾಜ್ಯ ಅಂಗ. ಅವುಗಳನ್ನು ಅಲಂಕರಿಸಿ, ಮೆರವಣಿಗೆಗೆ ಬಳಸುತ್ತಾರೆ. ಅವು ಕಣ್ಮನ ಸೆಳೆಯುವಂತಿರುತ್ತವೆ. ಆದರೆ ನಾವಿಲ್ಲಿ ಒಂದು ವಿಷಯವನ್ನು ಮರೆತಿದ್ದೀವಿ. ಆನೆಗಳ ಸ್ವಭಾವ ಇದಲ್ಲ. ಅವುಗಳ ಜೀವನ ಶೈಲಿ ಇದಲ್ಲ. ಅವುಗಳು ಕಾಡಿನಲ್ಲಿ ಇರಬೇಕಾದ ಪ್ರಾಣಿಗಳು.[ಗಜ ಬದುಕಿನ ರೋಚಕ ಸಂಗತಿಗಳ ಇಷ್ಟಿಷ್ಟೇ ವಿವರಗಳು...]

  ಮೆರವಣಿಗೆ, ಹಬ್ಬಗಳಲ್ಲಿನ ಜನಜಾತ್ರೆ, ವಾದ್ಯಗಳ ಶಬ್ದ, ಪಟಾಕಿಯ ಸದ್ದು ಇವೆಲ್ಲವೂ ಅವುಗಳನ್ನು ಒತ್ತಡಕ್ಕೆ ಈಡು ಮಾಡಿಬಿಡುತ್ತವೆ. ಇಂತಹ ಸಮಯಗಳಲ್ಲಿ ಅವುಗಳಿಗೆ ಆಹಾರ ಇರುವುದಿಲ್ಲ. ಅವುಗಳು ಡಾಂಬರು ರಸ್ತೆಯಲ್ಲಿ ನಡೆಯುವುದರಿಂದ ಕಾಲುಗಳು ಬಿಸಿಯಾಗಿಬಿಡುತ್ತದೆ. ದೇಹದ ಉಷ್ಣ ಜಾಸಿಯಾಗುತ್ತದೆ. ನೀರಿಲ್ಲದೆ ಆರ್ಥ್ರೈಟಿಸ್ ನಿಂದ ಕೆಲವು ಬಾರಿ ಸತ್ತುಹೋಗುತ್ತವೆ.

  500 ಕೋಟಿ ರುಪಾಯಿಯಷ್ಟು ವ್ಯವಹಾರ

  500 ಕೋಟಿ ರುಪಾಯಿಯಷ್ಟು ವ್ಯವಹಾರ

  ಕೇರಳದಲ್ಲಿ ಆನೆಗಳಿಗೆ ಬ್ರೋಕರ್ ಗಳು ಇರುತ್ತಾರೆ. ಆನೆಗಳಿಂದಲೇ ವಾರ್ಷಿಕ 500 ಕೋಟಿ ರುಪಾಯಿಯಷ್ಟು ವ್ಯವಹಾರ ಮಾಡುತ್ತಾರೆ. ಅದು ಹೇಗೆ ಅಂದರೆ, ಈ ಬ್ರೋಕರ್ ಗಳಿಗೆ ಕನಿಷ್ಠ 10 ಮಾವುತರು ಪರಿಚಯವಿರುತ್ತಾರೆ. ಹಬ್ಬಗಳ ಮಾಸ ಬಂದಾಗ ಮಾವುತರನ್ನು ಬುಕ್ ಮಾಡಿಕೊಂಡು, ಆಚರಣೆಗಳಿಗೆ ಆನೆಗಳನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹಿಂದೆ ಹಿಂದೆಯೇ ಗಾಡಿಗಳಲ್ಲಿ ಸಾಗಿಸುತ್ತಾರೆ.

  ನಿಯಂತ್ರಿಸಲು ಕಣ್ಣು ಚುಚ್ಚುತ್ತಾರೆ

  ನಿಯಂತ್ರಿಸಲು ಕಣ್ಣು ಚುಚ್ಚುತ್ತಾರೆ

  ಅವುಗಳಿಗೆ ವಿಶ್ರಾಂತಿಯೇ ಇರುವುದಿಲ್ಲ. ಆನೆಗಳನ್ನು ನಿಯಂತ್ರಿಸಲು ಅವುಗಳನ್ನು ಚುಚ್ಚುತ್ತಿರುತ್ತಾರೆ. ಹಬ್ಬಗಳು ಮುಗಿಯುವಷ್ಟರಲ್ಲಿ ದೇಹದ ಪೂರ್ತಿ ಗಾಯ. ಇಷ್ಟೇ ಅಲ್ಲ, ಅವುಗಳನ್ನು ನಿಯಂತ್ರಿಸಲು ಒಂದು ಕಣ್ಣನ್ನು ಚುಚ್ಚಿಬಿಡುತ್ತಾರೆ. ಇದರಿಂದ ಒಂದು ಕಣ್ಣಲ್ಲಿ ಮಾತ್ರ ದೃಷ್ಟಿ ಇರುತ್ತದೆ. ದೃಷ್ಟಿ ಕಡಿಮೆಯಾದಾಗ ಅವುಗಳಲ್ಲಿ ಒತ್ತಡ ಜಾಸ್ತಿಯಾಗುತ್ತದೆ. ಒತ್ತಡ ಜಾಸ್ತಿಯಾದಾಗ ರಂಪಾಟಕ್ಕಿಳಿದು, ದಾಳಿ ಮಾಡಲು ಶುರು ಮಾಡಿಬಿಡುತ್ತವೆ. ಮದ ಬಂದಾಗ ಮಾವುತರನ್ನೇ ಕೊದು ಹಾಕಿಬಿಡುತ್ತವೆ.

  ದಕ್ಷಿಣ ಭಾರತದಲ್ಲಿ 16,925 ಆನೆಗಳು

  ದಕ್ಷಿಣ ಭಾರತದಲ್ಲಿ 16,925 ಆನೆಗಳು

  ಕೇರಳ ರಾಜ್ಯದ ವನ್ಯಜೀವಿ ಮಂಡಳಿಯ ಡಾ. ನಮೀರ್ ಕೆಲವು ವಿಚಾರಗಳನ್ನು ಹಂಚಿಕೊಂಡರು. ದಕ್ಷಿಣ ಭಾರತದಲ್ಲಿ ಆನೆಗಳ ಸಂಖ್ಯೆ 16,925. ಕೇರಳದಲ್ಲೇ 2005ರಲ್ಲಿ 3564 ಆನೆಗಳಿದ್ದವು. 2010ರಲ್ಲಿ 7490ಕ್ಕೆ ಏರಿತು. ಈ ಆನೆಗಲ ಸಂಖ್ಯೆಯನ್ನು ನಿರ್ಧರಿಸುವುದು ಅವುಗಳ ಲದ್ದಿಯ ಮೂಲಕ. ಆದರೆ ಇದು ಹಳೆಯ ವಿಧಾನ. ಹೊಸ ರೀತಿಯ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗಿದೆ. ಇವುಗಳ ಮೇಲಿನ ಸಂಶೋಧನೆ ಕೂಡ ತೀರಾ ಕಡಿಮೆ. ಇನ್ನೊಂದು ಮಾತು: 2009-2016ರ ಮಧ್ಯೆ 500 ಆನೆಗಳು ಸಾವನ್ನಪ್ಪಿವೆ.

  ಎಲಿಫೆಂಟ್ ಪ್ರೂಫ್ ರೈಲ್ ಫೆನ್ಸ್ ಗೆ ವೆಚ್ಚ ಕಡಿಮೆ, ಶಾಶ್ವತವಾದದ್ದು

  ಎಲಿಫೆಂಟ್ ಪ್ರೂಫ್ ರೈಲ್ ಫೆನ್ಸ್ ಗೆ ವೆಚ್ಚ ಕಡಿಮೆ, ಶಾಶ್ವತವಾದದ್ದು

  ಮಾನವ ಹಾಗೂ ಆನೆಯ ಮಧ್ಯೆ ಸಂಘರ್ಷ ಹೆಚ್ಚುತ್ತಲೇ ಇದೆ. ಗದ್ದೆ ಹಾಗೂ ತೋಟಗಳಿಗೆ ನುಗ್ಗಿ ಆನೆಗಳು ಬೆಳೆ ಹಾನಿ ಮಾಡುತ್ತವೆ ಎಂಬ ಕಾರಣಕ್ಕೆ ಪ್ರತಿ ವರ್ಷ 40-50 ಆನೆಗಳನ್ನು ಕೊಲ್ಲಲಾಗುತ್ತಿದೆ.ಎಷ್ಟೋ ಆನೆಗಳು ರೈಲುಗಳಿಗೆ ಸಿಲುಕಿ ಸಾಯುತ್ತಿವೆ. ಈ ಅನಾಹುತ ತಡೆಯಲು ಎಲಿಫೆಂಟ್ ಪ್ರೂಫ್ ರೈಲ್ ಫೆನ್ಸ್ ಮಾಡಬಹುದು. ಈ ವಿಧಾನವನ್ನು ನಾಗರಹೊಳೆಯ ವ್ಯಾಪ್ತಿಯಲ್ಲಿ 2015ರಲ್ಲಿ ಮಾಡಲಾಗಿದೆ. ಇದು ಪರಿಸರ ಸ್ನೇಹಿ ಕೂಡ ಹೌದು. ಹಳೆಯ ರೈಲು ಕಂಬಿಗಳನ್ನು ಬಳಸಿ ಇದನ್ನು ಮಾಡಲಾಗುತ್ತದೆ. 20 ವರ್ಷದ ನಂತರ ರೈಲು ಕಂಬಿಗಳನ್ನು ಬದಲಾಯಿಸಲಾಗುತ್ತದೆ . ಈ ಕಂಬಿಗಳನ್ನು ಫೆನ್ಸ್ ರೀತಿ ಬಳಸಲಾಗುತ್ತದೆ. ಆನೆಗಳು ಸಾಗದಂತೆ ಟ್ರೆಂಚ್ ಗಳನ್ನು ಮಾಡಲಾಗುತ್ತದೆ. ಆದರೆ ಹೀಗೆ ಮಾಡಿದಾಗ ಆನೆಗಳಲ್ಲದೆ ಬೇರೆ ಪ್ರಾಣಿಗಳಿಗೂ ತೊಂದರೆ ಆಗಿಬಿಡುತ್ತದೆ. ಮಳೆಗಾಲದಲ್ಲಿ ಮಣ್ಣು ಮುಚ್ಚಿಕೊಂಡುಬಿಡುತ್ತದೆ. ಅದಕ್ಕೆ ತಗಲುವ ವೆಚ್ಚ ಕೂಡ ಹೆಚ್ಚು. ಎಲಿಫೆಂಟ್ ಪ್ರೂಫ್ ರೈಲ್ ಫೆನ್ಸ್ ಗೆ ತಗುಲುವ ವೆಚ್ಚ ಕಡಿಮೆ ಹಾಗೂ ಶಾಶ್ವತವಾದದ್ದು.

  ಪ್ರತಿ ವರ್ಷ 26 ಆನೆಗಳು ಸಾವು

  ಪ್ರತಿ ವರ್ಷ 26 ಆನೆಗಳು ಸಾವು

  ಭಾರತದಲ್ಲಿ 3467 ಸಾಕಾನೆಗಳಿವೆ. ಆ ಪೈಕಿ ಕೇರಳದಲ್ಲೇ 612 ಸಾಕಾನೆಗಳಿವೆ. ಇದರಲ್ಲಿ ಶೇ 50ರಷ್ಟು 30ರಿಂದ50 ವಯಸ್ಸಿನವು. ಪ್ರತಿ ವರ್ಷ 26 ಆನೆಗಳು ಸಾವನ್ನಪ್ಪುತ್ತಿವೆ. ಇವುಗಳಿಗೆ ಹೆಚ್ಚಾಗಿ ತಾಳೆಗರಿಗಳನ್ನು ನೀಡುತ್ತಾರೆ. ಕಾಡಿನಲ್ಲಿ ಅವುಗಳು ಹುಲ್ಲನ್ನು ಜಾಸ್ತಿ ಸೇವಿಸುತ್ತವೆ. ಇಷ್ಟು ದೊಡ್ಡ ಪ್ರಾಣಿಗೆ ಹುಲ್ಲು ಹೀಗೆ ಸಾಕಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಿಗಿದೆ. ಎಲ್ಲ ಪೌಷ್ಟಿಕಾಂಶಗಳುಳ್ಳ ಆಹಾರ ಸಿಗುತ್ತಿಲ್ಲ. ಕಾಡಿನಲ್ಲಿ ಆನೆಗಳು ಗುಂಪಿನಲ್ಲಿ ಇರುತ್ತವೆ. ಆದರೆ ಅವುಗಳನ್ನು ಒಂಟಿಯಾಗಿ ಸಾಕಲಾಗುತ್ತದೆ. ಹೆಚ್ಚಿನ ಕೆಲಸದಿಂದ ಅವುಗಳು ದಣಿಯುತ್ತವೆ. ಅವುಗಳ ತೂಕದ ಶೇ 10ರಷ್ಟು ಭಾರವನ್ನು ಸೊಂಡಿಲಿನಲ್ಲಿ ಹೊರಿಸುತ್ತಾರೆ. ಇದರಿಂದಾಗಿ ಅವುಗಳ ಮೆದುಳು ಹಾಗೂ ನರಗಳಲ್ಲಿ ತೊಂದರೆ ಉಂಟಾಗುತ್ತದೆ.

  ಆನೆಗಳನ್ನು ಸಾಕುವ ರೀತಿ ಬದಲಾಗಬೇಕು

  ಆನೆಗಳನ್ನು ಸಾಕುವ ರೀತಿ ಬದಲಾಗಬೇಕು

  ಆನೆಗಳನ್ನು ಸಾಕುವ ರೀತಿ ಬದಲಾಗಬೇಕು. ಹಿಂಸಿಸಿ, ನೋಡಿಕೊಳ್ಳುವುದು ಎಷ್ಟು ಸರಿ? ಜನರಲ್ಲಿ ಅರಿವು ಮೂಡಿಸುವುದು ಹೇಗೆ? ಇವೆಲ್ಲವನ್ನು ಚರ್ಚಿಸಲಾಯಿತು. ಆರೋಗ್ಯದಾಯಕ ಚರ್ಚೆ ನಡೆಯಿತು. ಅಂದಹಾಗೆ ಫ್ರೆಂಡ್ಸ್ ಆಫ್ ಎಲಿಫಂಟ್ಸ್ ಸಂಸ್ಥೆಯ ಬಗ್ಗೆ, ಅವರ ಕಾರ್ಯವೈಖರಿ ಬಗ್ಗೆ, ಅಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಗ್ಗೆ ಮುಂದಿನವಾರ ತಿಳಿಸುತ್ತೇನೆ. ಮತ್ತೆ ಸಿಗೋಣ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Elephants are used in auspicios occasions in Kerala. But, it is really pain for elephants. Columnist Gagan Preeth explains about business behind elephants in Kerala.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more