• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಸುತ್ತಮುತ್ತಲೇ ಇರುತ್ತವೆ ಪಾಸಿಟಿವ್ ಕಥೆಗಳು, ನೋಡಲು ಕಣ್ಣಿರಬೇಕು

|

ಕಚೇರಿಯ ಊಟದ ಸಮಯದಲ್ಲಿ ಬರುವ ಮಾತುಕತೆಗಳು ಬಹಳ ಆಸಕ್ತಿದಾಯಕವಾಗಿರುತ್ತವೆ. ಬರೀ ಟೆಕ್ನಾಲಜಿ ಅದು ಇದು ಮಾತ್ರವಲ್ಲ, ಒಮ್ಮೊಮ್ಮೆ ಜೀವನದ ಪಾಠಗಳನ್ನ ಅಲ್ಲಿ ಕಲಿಯಬಹುದು.

ಹೊಸದಾಗಿ ಮದುವೆಯಾಗಿರುವವರ ತೊಳಲಾಟಗಳನ್ನ ಪಟ್ಟನೆ ಒಂದಷ್ಟು ವರುಷಗಳ ಕಾಲ ಮದುವೆಯಾದವರು ಆರಾಮಾಗಿ ನಿರ್ವಹಿಸುವುದು, ಅಥವಾ ಮನೆ ಸಾಲದ್ದೋ, ಮನೆಯದ್ದೋ ಇವೆಲ್ಲಾ ಕೇಳಿದಾಗ ಕೆಲವೊಮ್ಮೆ ಅದೊಂದು ಗ್ರೂಪ್ ಕೌನ್ಸೆಲಿಂಗ್ ಆಗೋದ್ರಲ್ಲಿ ಆಶ್ಚರ್ಯವೇ ಇಲ್ಲ. ನಮ್ಮ ಥರಹವೇ ಇರೋರು, ಮಾತಾಡೋರು ಆ ಗುಂಪಿನಲ್ಲಿ ಇರುತ್ತಾರೆ.

ಪರ್ಷಿಯಾದ ಅಮರ ಪ್ರೇಮಕವಿ ಜಲಾಲುದ್ದಿನ್ ಮೊಹಮ್ಮದ್ ರೂಮಿ

ಕೆಲವೊಮ್ಮೆ ಕಚೇರಿಯಲ್ಲಿ ಕೋಡ್ ರೆವ್ಯೂವಿನ ಬಿಸಿ ನೆತ್ತಿಗೇರಿದರೆ ಯಾರೂ ಮಾತಾಡದ ಸ್ಥಿತಿಯಲ್ಲಿರುತ್ತಾರೆ. ಆ ದಿನಗಳಲ್ಲಿ ನಗುವ ಮನಸ್ಸುಗಳನ್ನ ಕಾಣುವುದು ಕಡಿಮೆ. ಆಗಾಗ ಇಂತಹ ಪುಸ್ತಕಗಳು ಓದಿದ್ದೇವೆ, ಎಲ್ಲೋ ಮಾತುಗಳನ್ನ ಕೇಳಿದ್ದೇವೆ ಎಂದು ಮಾತಾಡುತ್ತಾ ಹೋಗುತ್ತಾರೆ. ಆಫೀಸಿನ ಮೀಟಿಂಗ್ ಗಳಲ್ಲಿ ಪಾಸಿಟಿವ್ ಥಿಂಕಿಂಗ್ ಮಾಡಿ, ಮುಂದಕ್ಕೆ ಹೋಗಿತ್ತೀರ ಎಂದೆಲ್ಲಾ ಹೇಳುತ್ತಿರುತ್ತಾರೆ. "ಕೋಡ್ ಆಲ್ಲಿ ಔಟ್ಪುಟ್ ಬರದಿದ್ರೂ ಬಂತು ಎಂದು ಅಂದ್ಕೊಳ್ಳೋದು ಅಥವಾ ಬರತ್ತೆ ಅಂತ ಅಂದ್ಕೊಳ್ಳೋದು ಯಾವ್ ಸೀಮೆ ಪಾಸಿಟೀವ್ ಥಿಂಕಿಂಗ್" ಎಂದು ಆಗಾಗ ಮೊಬೈಲಿನಲ್ಲಿ ಸಂದೇಶ ರವಾನೆ ಮಾಡಿ ನಕ್ಕಿದ್ದರೂ ಒಮ್ಮೊಮ್ಮೆ ಮುಂದೆ ಹೋಗೋದಕ್ಕೆ ಈ ಥರಹದ ಥಿಂಕಿಂಗ್ ಅವಶ್ಯಕ.

There are several inspiring positive stories around us

ಇದಕ್ಕಂತಲೇ ಒಂದು ಸಾವಿರಾರು ಪುಸ್ತಕಗಳು, ಟೆಡ್ ಟಾಕ್ ಗಳು ಇರುತ್ತದೆ. ಇನ್ನು ಆ ಮತ, ಈ ಮತ, ಆ ಧರ್ಮ, ಈ ಧರ್ಮ ಅಂತೆಲ್ಲಾ ಮೊರೆ ಹೋಗುವವರಿದ್ದಾರೆ. ನಾ ಬಾರ್ಸಿಲೋನಾದಲ್ಲಿದ್ದಾಗ ನಮ್ಮ ಪದವಿಯ ಕ್ಲಾಸಿನಲ್ಲಿ 58 ವರ್ಷ ವಯಸ್ಸಾದ ವ್ಯಕ್ತಿ ನಮ್ಮ ಕ್ಲಾಸಿನಲ್ಲಿದ್ದರು. ಅವರು ಓದ್ದಿದ್ದು ಹಳೆಯ ಕಾಲದ ಎಲಕ್ಟ್ರಿಕಲ್ ಇಂಜಿನಿಯರಿಂಗ್, ಅದೂ ಅಪ್ಪಟ ರಷ್ಯನ್ ನಲ್ಲಿ. ನಾವು ಈಗಿನ ಕಾಲದ ಹುಡುಗರು. ಪಟಪಟನೆ ನಾವೆಲ್ಲ ಕಂಪ್ಯೂಟರ್ ತೆಗೆದು ನೋಟ್ಸ್ ಮಾಡಿಕೊಳ್ಳುತಿದ್ವಿ. ಅವರು ಒಂದು ದೊಡ್ಡ ಪುಸ್ತಕ ತೆಗೆದು, ಮಾರ್ಜಿನ್ ಹಾಕಿ, ಬರೆಯುತ್ತಿದ್ದರು. ನಮಗೆ ಒಮ್ಮೊಮ್ಮೆ ನಗು ಬರುತ್ತಿತ್ತು.

ಕನಸುಗಳು ನನಸಾಗುತ್ತವೆ, ಕಾಣುವ ಧೈರ್ಯವಿದ್ದರೆ ಮಾತ್ರ!

ಮೊದಲ ವಾರದ ಕೋಡಿಂಗ್ ಟೆಸ್ಟ್ ಅಲ್ಲಿ ಅವರಿಗೆ ಸೊನ್ನೆ ಬಂದಿತ್ತು. ನಮಗೆ 50ಕ್ಕೆ 37, 28, 45 ಬಂದರೂ ಸಂಭ್ರಮವಿರುತ್ತಿರಲ್ಲಿಲ್ಲ. ಒಂದೊಂದು ಕ್ರೆಡಿಟ್(ಕೋರ್ಸ್)ಗೂ ಇಷ್ಟಷ್ಟು ಯೂರೋ ಕಟ್ಟಿದ್ದೀವಿ ಇದೇನು ಇಷ್ಟೆ ಬಂದಿದೆ ಎಂದು ಪ್ರಾಫಿಟ್ ಲಾಸ್ ಥರ ಯೋಚಿಸುತ್ತಿದ್ವಿ. ಆದ್ರೆ ಸೆವಾ ಮಾತ್ರ ನೆಮ್ಮದಿಯಾಗಿ ನಕ್ಕೊಂಡು ಇದ್ರು. ಅವರ ಮಕ್ಕಳಷ್ಟು ವಯಸ್ಸಾದ ನಮ್ಮಂತವರನ್ನ ನೋಡಿ ಅವರು ಮರುಕ ಪಡುತ್ತಿದ್ದರು. ನಮ್ಮನ್ನೆಲ್ಲ ಕೂಡಿಸ್ಕೊಂಡು ಬುದ್ಧಿ ಹೇಳುತ್ತಿದ್ದರು.

ಪ್ರತಿ ಕ್ಲಾಸೂ ಸಹ ಅವರ ಸ್ಪೀಡಿಗೆ ಇರುತ್ತಿರಲ್ಲಿಲ್ಲ. ಅವರು ನಿಧಾನವಾಗಿ ಎಲ್ಲಾ ಅರ್ಥ ಮಾಡಿಕೊಳ್ಳುತ್ತಿದ್ದರು. ಯಾವುದೇ ಕಷ್ಟಕರವಾದ ಸನ್ನಿವೇಶವನ್ನೂ ಅವರು ನನಗೇನೂ ಕಳೆದುಕೊಳ್ಳಲು ಇಲ್ಲ ಎಂದು ಧೈರ್ಯವಾಗಿ ಎದುರಿಸುತ್ತಿದ್ದರು. ನಮಗೆ ಇವರ್ಯಾಕೆ ಓದೋದಕ್ಕೆ ಬರ್ತಾರೆ ಎಂಬುದೇ ಅರ್ಥವಾಗುತ್ತಿರಲ್ಲಿಲ್ಲ. ಹಿಂದೆ ಏನು ಮಾಡುತ್ತಿದ್ದರು ಎಂಬ ಗುಟ್ಟನ್ನೂ ಬಿಟ್ಟುಕೊಡುತ್ತಿರಲ್ಲಿಲ್ಲ. ಅಲ್ಲಿನ ಯುರೋಪಿಯನ್ನರು ಇವರನ್ನ ಸೋವಿಯಟ್ ಸ್ಪೈ ಎಂದೇ ನಾಮಕರಣ ಮಾಡಿದ್ದರು. ಆದರೂ ಒಂದು ದಿವಸವೂ ಅವರ ಮುಖದ ಮೇಲಿನ ನಗು ಹೋಗಿದ್ದೇ ಇಲ್ಲ. ನಮ್ಮ ಜೀವನದ ಅತಿ ದೊಡ್ಡ ಸಮಸ್ಯೆಗಳಾದ ಕೈಯಲ್ಲಿ ದುಡ್ಡಿಲ್ಲ, ಬಾಯ್ ಫ್ರೆಂಡ್/ ಗರ್ಲ್ ಫ್ರೆಂಡ್ ಜೊತೆ ಜಗಳ, ಅಸೈನ್ ಮೆಂಟ್ ಆಗಿಲ್ಲ ಎಂಬುದನ್ನು ವಿಪರೀತ ಕ್ಷುಲಕ ವಿಚಾರವಾಗಿ ಕಾಣುತ್ತಿದ್ದರು.

There are several inspiring positive stories around us

ಸಂಜೆ 5.30 ಆದ ತಕ್ಷಣ ಟಕ್ಕಂತ ಸೈಕಲ್ ತೆಗೆದುಕೊಂಡು ಹೊರಟುಬಿಡುತ್ತಿದ್ದರು. ಅದ್ಯಾವುದೋ ಬೆಟ್ಟದ ಮೇಲೆ ಮನೆಯಂತೆ ಎಂದು ಒಬ್ಬ ಸ್ನೇಹಿತ ಹೇಳಿದ್ದ. ಒಂದು ದಿವಸವೂ ಕ್ಲಾಸಿನ ನಂತರ ಕ್ಯಾಂಪಸ್ಸಿನಲ್ಲಿ ಇರುತ್ತಿರಲ್ಲಿಲ್ಲ. ಏನು ವಿಷಯ ಎಂದು ನಾವು ಯೋಚಿಸುತ್ತಲೇ ಇರುತ್ತಿದ್ದೆವು. ಗ್ರೂಪ್ ಪ್ರಾಜೆಕ್ಟನ್ನು ಸಹ ಅವರು ಒಬ್ಬರೇ ಮಾಡುತ್ತಿದ್ದರು. ನಮಗೆ ಅದು ಸಹ್ಯವಾಗುತ್ತಿರಲ್ಲಿಲ್ಲ. ಅದ್ಯಾಕೆ ನಾವೆಲ್ಲ ಇದ್ದಾಗ ಒಬ್ಬೊಬ್ಬರೇ ಮಾಡಬೇಕು ಎಂದೂ ಅಂದುಕೊಳ್ಳುತ್ತಾ ಇದ್ವಿ.

ಸೆ. 30ಕ್ಕೆ 'ಜಯನಗರದ ಹುಡುಗಿ' ಪುಸ್ತಕ ಬಿಡುಗಡೆ; ಮೇಘನಾ ಮನದ ಮಾತು

ಒಂದೊಮ್ಮೆ ಸೈಕೆಡೆಲಿಕ್ ರಾಕ್ ಸಂಗೀತ ಕೇಳಲು ಬಾರ್ಸಿಲೋನಾದಿಂದ ದೂರ ಒಂದು ಬೆಟ್ಟಕ್ಕೆ ಹೋಗಿದ್ದೆವು. ಅಲ್ಲಿ ಸೆವಾ ಕಂಡರು, ಒಂದು ವೀಲ್ ಚೇರಿನಲ್ಲಿ ಅವರಿಗಿಂತ ಕೊಂಚ ಚಿಕ್ಕವರಾದ ಹೆಂಗಸಿನ ಜೊತೆ. ತನ್ನ ಪತ್ನಿ ಎಂದು ನಮಗೆಲ್ಲಾ ಪರಿಚಯ ಮಾಡಿಕೊಟ್ಟರು. ನಮ್ಮನ್ನ ಮನೆಗೆ ಅಹ್ವಾನಿಸಿದರು. ಮನೆಯಲ್ಲೆಲ್ಲಾ ನಮ್ಮಷ್ಟೇ ವಯಸ್ಸಿನ ಹುಡುಗನ ಫೋಟೋಗಳು ತುಂಬಿದ್ದವು. ಮಗ ಎಂದು ಅರ್ಥವಾಗುತ್ತಿತ್ತು. ಭಾರತೀಯರಿಗೆ ನಿಮ್ಮ ಮಗ ಎಲ್ಲಿದ್ದಾನೆ ಎಂದು ಕೇಳುವುದು ಅತೀ ಮಾಮೂಲಿನ ವಿಷಯ. ಆದರೆ ಬೇರೆಕಡೆಗಳಲ್ಲಿ ಅದು ಅವರ ಪ್ರೈವೆಸಿಗೆ ಧಕ್ಕೆ ಆದಂತೆ. ಹಾಗಾಗಿಗೂ ಕೇಳಿದಾಗ ಇಬ್ಬರೂ ಅಳುತ್ತಾ ಕೂತರು. ಅದ್ಯಾವುದೋ ಆಕ್ಸಿಡೆಂಟಲ್ಲಿ ಸೆವಾ ತನ್ನ ಮಗನ್ನನ್ನ ಕಳೆದುಕೊಂಡರಂತೆ, ಹೆಂಡತಿಗೆ ಸ್ಪೈನಲ್ ಇಂಜುರಿ. ಆಕೆ ಮತ್ತೆ ಓಡಾಡೋದಕ್ಕೆ ಆಗೋದಿಲ್ಲ ಎಂಬ ಸತ್ಯ ಕೇಳಿ ದಂಗಾಯಿತಂತೆ.

21ನೇ ಶತಮಾನದಲ್ಲಿ ನಾವು ಕಲಿಯಬೇಕಾದ ಇಪ್ಪತ್ತೊಂದು ಪಾಠಗಳು

ಆಕೆ ಒಳ್ಳೆ ಬಾಲರೀನಾ ನರ್ತಕಿಯಂತೆ, ಈತ ಒಳ್ಳೆ ಪಿಯಾನೋ ವಾದಕ. ಹೀಗೆ ಭೇಟಿಯಾಗಿದ್ದು, ನಕ್ಕಿದ್ದು, ಪ್ರೀತಿಯಾಗಿದ್ದು. ಮಗ ಕಣ್ಮಣಿಯಾಗಿದ್ದ. ಒಂದು ರಾತ್ರಿಯಲ್ಲಿ ಎಲ್ಲರನ್ನು, ಎಲ್ಲವನ್ನೂ ಕಳೆದುಕೊಂಡ ಸೆವಾ ಈಗ ಮತ್ತೆ ನಗಲು, ಹೆಂಡತಿಯನ್ನ ಮತ್ತೆ ಬೆಲರೀನಾ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಸೆವಾನ ಮಗ ಸ್ಪೇನಿನಲ್ಲಿ ಓದಬೇಕೆಂಬ ಆಸೆಯಿತ್ತಂತೆ. ಅದಕ್ಕೆ ಇವರು ಅದೆಲ್ಲಾ ಮಾಡಿದ್ದಾರೆ. ಮಗನನ್ನು ಕಳೆದುಕೊಂಡು, ಹೆಂಡತಿಯ ಸ್ಥಿತಿ ಇವರನ್ನ ಘಾಸಿಗೊಳಿಸಬಹುದಿತ್ತು. ಆದರೆ ನಗುತ್ತಾ ಜೀವನವನ್ನ ಎದುರಿಸುತ್ತಿರುವ ಪರಿ ನೋಡಿ ಆಶ್ಚರ್ಯವಾಯಿತು.

ಇಷ್ಟೆಲ್ಲಾ ಬರೆಯೋದಕ್ಕೆ ಕಾರಣ ಸೆವಾ ಖುಷಿಯಾಗಿ ನಮಗಿಂತ ಹೆಚ್ಚುವರಿ ಒಂದು ವರ್ಷ ತೆಗೆದುಕೊಂಡು ಡಿಗ್ರಿ ಮುಗಿಸಿದರು ಎಂದು ಮೆಸೇಜ್ ಕಳಿಸಿದರು. ಇದೇ ಸಮಯದಲ್ಲಿ ಋತುಪರ್ಣ ನಾನು ಎಲ್ಲದರಲ್ಲೂ ಪಾಸಿಟಿವ್ ಒಂದರಲ್ಲಿ ಮಾತ್ರ ನೆಗಟಿವ್ ಎಂಬ ಅರ್ಥವಾಗದ ಜೋಕ್ ಮಾಡಿದ. ಶ್ರವಣ ಅದೇ ಸಮಯದಲ್ಲಿ "ಐ ವೊಂಟ್ ಗಿವ್ ಅಪ್" ಎಂದು ಮಾಡದೇ ಬಿಟ್ಟಿದ್ದ ಹಳೇ ಕೆಲಸವನ್ನ ಮತ್ತೆ ಮಾಡಲು ಶುರುಮಾಡಿಕೊಂಡ. ನಮ್ಮ ಸುತ್ತ ಮುತ್ತಲೇ ಇಂತಹ ಪಾಸಿಟಿವ್ ಕಥೆಗಳು ತುಂಬಿಕೊಂಡಿರುತ್ತದೆ. ನೋಡುವ ಕಣ್ಣಿರಬೇಕಷ್ಟೆ. ಸೆವಾರ ನಗು ಮುಂಚಿನದಕ್ಕಿಂತ ದೊಡ್ಡದಾಗಿದ್ಯೋ? ಅಥವಾ ಹೆಂಡತಿ ಬಾಲರೀನಾ ಕ್ಲಾಸಿಗೆ ಸೇರಿಕೊಂಡರೋ ಕೇಳಿ ನೋಡಬೇಕು.

ಇನ್ನಷ್ಟು motivational stories ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There are several inspiring positive stories around us, we should have a mind to see and get inspired from those inspirational stories. Here is one of them, written by Jayanagarada Hudugi Meghana Sudhindra.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more