ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಲೇಖನ ಓದುತ್ತಲೇ ದಯವಿಟ್ಟು ನಿದ್ದೆ ಮಾಡಬೇಡಿ!

By ಜಯನಗರದ ಹುಡುಗಿ
|
Google Oneindia Kannada News

ಹೋದ ವಾರ ಥೀಸಿಸ್ ಡಿಫೆನ್ಸ್ ಮಾಡಬೇಕಾದ ಸಮಯಕ್ಕೆ 2 ವಾರದ ಹಿಂದೆ ಈ ನಿದ್ದೆಯ ಕಾರ್ಯಕ್ರಮ ಬದಲಾಗಿತ್ತು. ದಿನಕ್ಕೆ 2 ಘಂಟೆ ನಿದ್ದೆ ಮಾಡಿದರೆ ಹೆಚ್ಚು ಅನ್ನೋ ರೀತಿಯಲ್ಲಿ ಹುಚ್ಚಾಗಿ ಓದಿದ್ವಿ. ನಾವು ಅಲ್ಲಿ ವರ್ಷವಿಡೀ ಮಾಡಿದ ಕೆಲಸವನ್ನ ಪರೀಕ್ಷೆ ಮಾಡುತ್ತಿದ್ದರು. ಮೊದಲು ನಮ್ಮನ್ನ ನೋಡಿ ಶಿಕ್ಷಕರು ಅಂದಿದ್ದು "I can see zombies" ಎಂದು. ಎಲ್ಲರ ಕಣ್ಣು ಅಷ್ಟು ಕೆಂಪಾಗಿ ಮುಚ್ಚಿದ್ದರೆ ನಿದ್ದೆ ಬರುವ ಹಾಗೆ ಇತ್ತು. ನಿದ್ದೆಯ ಮಹತ್ವ ತಿಳಿದಿದ್ದೆ ಅವಾಗ!

ನಾ ಜಯನಗರದಲ್ಲಿ ಇದ್ದಾಗ ಮನೆಯಲ್ಲಿ ಶಿಸ್ತಾಗಿ 10 ಘಂಟೆಗೆ ಮಲಗುವ ಪರಿಪಾಠ ಇತ್ತು. ಬೆಳಿಗ್ಗೆ ಮಲಗಬೇಕೆಂದರೂ ಮಸೀದಿಯ ಆಝಾನ್, ದೇವಸ್ಥಾನದ ಜಾವದ ಪೂಜೆ ನಮ್ಮನ್ನು ಎಬ್ಬಿಸುತ್ತಿತ್ತು. ಸುಮಾರು 10 ವರ್ಷಗಳ ಕಾಲ ಅಲಾರ್ಮ್ ಇಟ್ಟುಕೊಳ್ಳದೆ ಎದ್ದೇಳುವ ಪರಿಪಾಠ ನಮ್ಮಲ್ಲಿತ್ತು.

Don't go to sleep while reading this article

ಅಪ್ಪ ಮೊದಲ ಬಾರಿಗೆ ಅಮೆರಿಕಾಗೆ ಹೋದಾಗಲೇ ನನಗೆ ಈ ಜೆಟ್ ಲ್ಯಾಗ್ ಬಗ್ಗೆ ಗೊತ್ತಾಗಿದ್ದು. ನಾ ಜಯನಗರಕ್ಕೆ ಬೆಳಕಾದರೆ ಜಗತ್ತಿಗೆಲ್ಲ ಬೆಳಕಾಗಿರುತ್ತೆ ಅಂದುಕೊಂಡಿದ್ದೆ. ಅಲ್ಲಿ ಅಪ್ಪನಿಗೆ ರಾತ್ರಿ ಎಂದು ತಿಳಿದಾಗ ಹೆಂಗೆ ಅಂತಾ ಇರೋ ಬರೋ ಪುಸ್ತಕವನ್ನೆಲ್ಲಾ ಹುಡುಕಿದ್ದೆ. ಅಪ್ಪ ಭೂಮಿಯ ಚಲನೆಗಳನ್ನೆಲ್ಲ ವಿವರಿಸಿದಾಗ ನಾವು ಹೆಂಗೆ ಹೀಗೆ ಸ್ಥಾವರವಾಗೆ ಇದ್ದೀವಿ ಅಂತ ಪ್ರಶ್ನೆ ಮಾಡಿ, ಐ ಎಸ್ ಡಿ ಕರೆ ಕಟ್ ಆಯ್ತು. ಅಪ್ಪ ಮನೆಗೆ ಬಂದ ನಂತರ ಒಂದೆರೆಡು ದಿವಸ ನಿದ್ದೆ ಸರೀಗಿಲ್ಲ ಎಂದು ಹೇಳಿದಾಗ್ಲೆ ಈ ನಿದ್ದೆಯ ಬಗ್ಗೆ ಆಳವಾದ ಅಧ್ಯಯನ ಮಾಡಬೇಕು ಅನಿಸಿದ್ದು.

ಜಯನಗರ 9ನೇ ಬ್ಲಾಕ್ ಮಾರುಕಟ್ಟೆಗೆ ಶರಣು ಶರಣಾರ್ಥಿಜಯನಗರ 9ನೇ ಬ್ಲಾಕ್ ಮಾರುಕಟ್ಟೆಗೆ ಶರಣು ಶರಣಾರ್ಥಿ

ಚಿಕ್ಕವಳಿಂದನೂ ರಾತ್ರಿ ಹೊತ್ತು ನಿದ್ದೆ ಬರತ್ತೆ, ಬೆಳಗ್ಗೆ ಎದ್ದೇಳುತ್ತೀವಿ ಎಂದು ಅನ್ನಿಸುತ್ತಿತ್ತು. ಆದರೆ ನಮ್ಮ ದೇಹದಲ್ಲಿಯೂ ಒಂದು ಗಡಿಯಾರ ಇದೆ ಎಂದು ತಿಳಿದಿರಲ್ಲಿಲ್ಲ. ಇಲ್ಲಿ ಬಾರ್ಸಿಲೋನಾಗೆ ಬಂದಾಗಲೇ ಇದರ ಆಳ ಗೊತ್ತಾಗಿದ್ದು. ನನಗೆ ಬೆಳಗ್ಗೆ ಎಷ್ಟು ಬೇಗ ಬೇಕಾದ್ರೂ ಏಳಬಹುದು ಆದ್ರೆ ರಾತ್ರಿ ನಿದ್ದೆಯನ್ನ ತಡೆಯಕ್ಕೆ ಆಗೋದಿಲ್ಲ. ಒಮ್ಮೆ ಇಲ್ಲಿನ ಸ್ನೇಹಿತರ ಜೊತೆಗೆ ಪಾರ್ಟಿಗೆ ಹೋಗಿ ಅಲ್ಲಿ ನಿದ್ದೆ ತಡೆಯಲಾಗದೆ ಆ ಪಾರ್ಟಿಯಲ್ಲಿಯೇ ನಿದ್ದೆ ಮಾಡಿದ್ದೆ. ಜೈವಿಕ ಗಡಿಯಾರದ ಏರು ಪೇರು ಗೊತ್ತಾಗಿದ್ದೇ ಆವಾಗ. ಇವಾಗಲೂ ಒಮ್ಮೊಮ್ಮೆ ಸಂಜೆ 6.30ಕ್ಕೆ ಕಣ್ಣು ಎಳಿಯುತ್ತೆ. ಭಾರತದಲ್ಲಿ 10 ಘಂಟೆಯಾಗಿದೆ ಎಂದು ತಿಳಿಸುವುದಕ್ಕೆ!

ಇನ್ನು ಮನೆಯವ್ರೆಲ್ಲ ಕರೆ ಮಾಡೋದು, ಸ್ನೇಹಿತರು ಕರೆ ಮಾಡೋದು ಎಲ್ಲ ಬೇರೆ ಸಮಯಕ್ಕೇನೆ. ಒಮ್ಮೊಮ್ಮೆ ನಿದ್ದೆಗೆಟ್ಟು ಮಾತಾಡೋದು ರೂಢಿಯಾಗೋಗಿದೆ. ಭಾರತದಲ್ಲಿ ಸಾಮಾನ್ಯವಾಗಿ ಬೆಳಿಗ್ಗೆ ಬೇಗ ಎದ್ದು ರಾತ್ರಿ ಬೇಗ ಮಲಗೋ ರೂಢಿ ಬಹಳ ಇದೆ. ಇಲ್ಲಿ ಸ್ಪ್ಯಾನಿಷ್ ಜನರ ನಿದ್ದೆ ಕಥೆ ಬಹಳ ಭಿನ್ನ. ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗಿ, ಮಧ್ಯಾಹ್ನದ ಸಿಯೆಸ್ತಾ (ನಿದ್ದೆ) ಮಾಡಿದ ನಂತರವೆ ನಂತರದ ಕೆಲಸಗಳನ್ನ ಮಾಡೋದು. ಸಿಯೆಸ್ತಾ ಇವರಿಗೆ ಬಹಳ ಮುಖ್ಯವಾದ ದಿನದ ಕೆಲಸ, ಅದು ಎಲ್ಲಾ ಕಛೇರಿಗಳಲ್ಲಿ ಕೊಡಲೇಬೇಕಾದ ಒಂದು ಸೌಲಭ್ಯ. ಇದನ್ನ ಕೇಳಿ ನನಗೆ ನಗು ಬರೋದೊಂದು ಬಾಕಿ ಇತ್ತು.

Don't go to sleep while reading this article

ನಮ್ಮ ಪಾಠಗಳೆಲ್ಲ ಸುಮಾರಾಗಿ 2 ಘಂಟೆಯ ನಂತರವೆ ಇರುತ್ತಿದ್ದದ್ದು. ಸಂಜೆ 8 ಘಂಟೆಗೆ ಮುಗಿಯುತ್ತಿತ್ತು. ಅಷ್ಟರಲ್ಲಿ ನನಗೆ ಕಣ್ಣು ಎಳೆದು ನಿದ್ದೆ ಬರೋದೊಂದು ಬಾಕಿ ಇರುತ್ತಿತ್ತು. ಸೂರ್ಯನ ದರ್ಶನದ ಮೇರೆಗೆ ಇವರ ನಿದ್ದೆಯ ಸಮಯವನ್ನ ಅಚ್ಚುಕಟ್ಟಾಗಿ ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ನಮಗಿವೆಲ್ಲ ಹೊಸದು. ಬೆಳಗ್ಗೇನೂ ಬೇಗ ಎದ್ದು ರಾತ್ರಿ ಸಹ ತಡವಾಗಿ ಮಲಗಿ ವಿಪರೀತವಾಗಿ ನಿದ್ದೆಗೆಟ್ಟಿದ್ದೆವು. ಒಮ್ಮೆ ದೊಡ್ಡದಾಗಿ ಆಕಳಿಸಿ, ನನ್ನ ಪ್ರೊಫೆಸರ್ ಆರಾಮಾಗಿ ಮಲಗು ಅಂದಿದ್ದು. ಇದನ್ನೆ ಇಂಜಿನಿಯರಿಂಗ್ ನಲ್ಲಿ ಮಾಡಿ, ಮುಖದ ತುಂಬಾ ಉಗಿಸಿಕೊಂಡದ್ದು ನೆನಪಿಗೆ ಬಂತು.

ಪುಸ್ತಕದ ಹುಚ್ಚು ಹಚ್ಚಿದ ಗ್ರಂಥಾಲಯದ ಕಥೆಯಿದುಪುಸ್ತಕದ ಹುಚ್ಚು ಹಚ್ಚಿದ ಗ್ರಂಥಾಲಯದ ಕಥೆಯಿದು

ನನಗೆ ಯಾವುದೇ ಜಾಗದಲ್ಲಿ ಅರ್ಧ ಘಂಟೆಗಿಂತ ಜಾಸ್ತಿ ಜಡವಾಗಿದ್ದರೆ ಆರಾಮಾಗಿ ನಿದ್ದೆ ಬರುತ್ತದೆ. ಅದು ನಾನು ಪಯಣಿಸುವ ಬಸ್, ಟ್ರೈನ್ ಯಾವುದೇ ಆಗಿರಲಿ ಗೊರಕೆ ಹೊಡೆಯುವ ನಿದ್ದೆ ಬಂದೇ ಇರುತ್ತದೆ. ಒಮ್ಮೆ ಏರ್ ಪೋರ್ಟನಲ್ಲಿ ನಿದ್ದೆ ಮಾಡಿ 10 ನಿಮಿಷದಲ್ಲಿ ವಿಮಾನ ಮಿಸ್ಸ್ ಆಗುವುದರಲ್ಲಿತ್ತು. ಒಮ್ಮೆ 10 ಘಂಟೆಯ ವಿಮಾನದ ಪ್ರಾಯಾಣದಲ್ಲಿ 6 ಘಂಟೆ ನಿದ್ದೆ ಮಾಡಿ ಗಗನಸಖಿಗೆ ಭಯವಾಗಿ ವೈದ್ಯರ ಸಹಾಯ ಬೇಕಾ ಎಂದು ಕೇಳಿದ್ದಳು.

ಅಮ್ಮ ಅವಗಾವಾಗ ಚಿಂತೆಯಿಲ್ಲದ್ದವರಿಗೆ ಸಂತೆಯಲ್ಲಿಯೂ ನಿದ್ದೆ ಅಂತ ತಮಾಷೆ ಮಾಡುತ್ತಿದ್ದರು. ನನ್ನ ಮುತ್ತಜಿಗೆ ದಿಂಬು ಇಟ್ಟ ಕಡೆ ನಿದ್ದೆ ಬರುತ್ತದೆ ಎಂದು, ಅವರ ಹಾಗೆ ನನಗೆ ಆಗಿದೆಯೆಂದು ಅಮ್ಮ ಅನ್ನುತಿರುತ್ತಾರೆ. ಪರೀಕ್ಷೆಯ ಸಮಯದಲ್ಲಿಯೂ ಸಹ ನಿದ್ದೆ ಮತ್ತು ಓದುವ ಸ್ಪರ್ಧೆಯಲ್ಲಿ ನಿದ್ದೆಯೇ ಗೆಲ್ಲುವುದು. ಒಮ್ಮೆ ಕಠಿಣವಾದ 3 ಘಂಟೆಯ 'Field Theory' ಪರೀಕ್ಷೆಯಲ್ಲಿ ಒಂದು ಘಂಟೆ ಬರೆದು 2 ಘಂಟೆ ಭರ್ತಿಯಾಗಿ ನಿದ್ದೆ ಹೊಡೆದಿದ್ದೆ. ಹಿಂದಿನ ರಾತ್ರಿ ನಿದ್ದೆಗೆಟ್ಟಿದರ ಪರಿಣಾಮವದು.

ಜಗತ್ತಿನ ಯಾವ ಕೆಲಸವೂ ನಿದ್ದೆಗಿಂತ ಮುಖ್ಯವಾದುದಲ್ಲ ಎಂದು ನಂಬಿದವಳು ನಾನು. ನಿದ್ದೆಗೆಟ್ಟು ಓದಿದ್ದನ್ನು, ಭಾರತ ವಿಶ್ವ ಕಪ್ ಗೆದ್ದದ್ದನ್ನು, ರೋಜರ್ ಫೆಡರರ್ ಟೆನಿಸ್ ಮ್ಯಾಚನ್ನು ಬಿಟ್ಟು ನಿದ್ದೆ ಮಾಡಿದ್ದು ನನ್ನ ದೊಡ್ಡ ಸಾಧನೆ. ತಂಗಿ ರಾತ್ರಿಯೆಲ್ಲ ನಿದ್ದೆಗೆಟ್ಟು ಇವೆಲ್ಲವನ್ನು ನೋಡಿ ವಿವರಿಸಿದ್ದಳು. ಮೊನ್ನೆ ಥೀಸಿಸ್ ಡಿಫೆನ್ಸ್ ನಲ್ಲಿ ಅರ್ಧ ಘಂಟೆ ಗುದ್ದಾಡಿ, ಮನೆಗೆ ಬಂದು ಹಾಸಿಗೆ ಮೇಲೆ ಮಲಗಿದವಳು ಎದ್ದಿದ್ದು ಮರುದಿವಸ ಮಧ್ಯಾಹ್ನವೇ. ಎಲ್ಲರೂ ಪಾರ್ಟಿ ಮಾಡಲು ನಿರ್ಧರಿಸಿದವರು ಏಳೋ ಸೂಚನೆಯೆ ಕಾಣಲಿಲ್ಲ. ಈ ಲೇಖನ ಓದಿ ನಿದ್ದೆ ಮಾಡಬೇಡಿ, ಹಾಗೂ ನಿಮ್ಮ ನಿದ್ದೆಯ ಕಥೆಯನ್ನ ಖಂಡಿತಾ ತಿಳಿಸಿ.

English summary
Dalai Lama had said 'Sleep is the best meditation'. Undoubtedly, you can dream only when you are sleeping. Sleeping is the most essential part of our life structure. But, Don't go to sleep while reading this article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X