ಥತ್ತೇರಿಕೆ ... ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗಿಲ್ಲ!

ಇದೆಂಥಾ ಕಾಲ ಬಂತಪ್ಪಾ, ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕ್ತಾರಾ? ಈ ಸರ್ಕಾರದೋರು.. ಥತ್ತೇರಿಕೆ .. ದಾರಿ ಮೇಲೆ ಹೋಗ್ತಾ ಇದ್ರೆ ಸುಂದರ ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗೆ ಇಲ್ಲದಂಗೆ ಆಯ್ತಲ್ಲಾ.. ಎಂದು ನಾಗರಾಜ ಬೆಳಗ್ಗೆ ಬೆಳಗ್ಗೆನೇ ಕೂಗಾಡ್ತಾ ಇದ್ದ.

ಆಯ್ತಪ್ಪಾ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ.. ಒಪ್ಪಿಕೊಂಡೆವು ಅಂಥ ಇಟ್ಕಳ್ಳಿ.. ಹಿಂಬದಿ ಸವಾರರರು ಹೆಲ್ಮೆಟ್ ಹಾಕದೇ ಇದ್ರೆ ಬೈಕ್ ಸವಾರನಿಗೆ ದಂಡ.. ಇದ್ಯಾವ ನ್ಯಾಯ? ಅಲ್ಲಾ ಸ್ವಾಮೀ ಸುಪ್ರೀಂ ಕೋರ್ಟ್ ನೆಪ ಹೇಳೋರು ಇವರು ಏನ್ ಸಾಧನೆ ಮಾಡ್ತಾರೋ...[ಹೆಲ್ಮೆಟ್ ಕಡ್ಡಾಯ; ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು..]

helmet

ಶನಿವಾರ, ಭಾನುವಾರ ಬಂತೂ ಅಂದ್ರೆ ಸುಮ್ಮನೇ ನಂದಿ ಬೆಟ್ಟವೋ, ಶ್ರೀರಂಗಪಟ್ಟಣವೋ ಅಂಥ ತಿರಗಾಡಿಕೊಂಡು ಇದ್ವಿ. ಇದೀಗ ಇಂಥದ್ದೊಂದು ಎಡವಟ್ಟು ಕಾನೂನು ಮಾಡಿ ಎಂಥಾ ತಾಪತ್ರಯ ತಂದು ಹಾಕ್ಬಿಟ್ರು.. ಅಲ್ಲಾ ಹೊಂಡ ಬಿದ್ದ ರಸ್ತೆ, ಕಿತ್ತೋಗಿರೋ ಫುಟ್ ಪಾತ್, ಬೇಡದೆಡೆ ಹಂಪ್ ಹಾಕಿ ತೊಂದರೆ ಕೊಡುವ ಇವರಿಗೆ ದಂಡ ಹಾಕೋರು ಯಾರು?[ಹೆಲ್ಮೆಟ್ ಕಡ್ಡಾಯ: ಜನರ ಪ್ರಶ್ನೆಗೆ ಸರ್ಕಾರ ಏನು ಹೇಳುತ್ತೆ?]

ಮಕ್ಕಳು-ಮರಿ ಇರೋರು ಕತೆ ಏನು? ಬೆಳಗ್ಗೆ ಸ್ಕೂಲಿಗೆ ಬಿಡಬೇಕಾದ್ರೂ ಹೆಲ್ಮೆಟ್ ಹಾಕೊಂಡು ಹೋಗಬೇಕಾ? ಒಂದು ಬೈಕ್ ನಲ್ಲಿ ಒಂದು ಹೆಲ್ಮೆಟ್ ಇಟ್ಕಳ್ಳಕೇ ಜಾಗ ಇರಲ್ಲ. ಹಾಕಿದ್ದು ಲಾಕ್ ಸಮೇತ ಮೂರು ಹೆಲ್ಮೆಟ್ ಕದ್ಕೊಂಡು ಹೋಗಿದಾರೆ. ಇದು ಕಳ್ಳರಿಗೆ ಡಬಲ್ ಧಮಾಕಾ.

ಮಗಾ.. ಎಲ್ಲಿದಿಯೋ ಸಿಗ್ನಲ್ ಬಳಿ ನಿಂತಿದ್ದೀನಿ, ಎಂದು ಪ್ರತಿ ಬಾರಿ ಕೀಟಲೇ ಕೊಡ್ತಾ ಇದ್ದೋನನ್ನು ಸಾಗಹಾಕಲು ಒಳ್ಳೆ ಉಪಾಯ ಕೊಟ್ಟ ಸರ್ಕಾರಕ್ಕೆ ಧನ್ಯವಾದ ಹೇಳಲೇಬೇಕು. ಆದ್ರೆ ಅದೇ ಫೊನ್ ನಲ್ಲಿ ಸ್ವೀಟ್ ವಾಯ್ಸ್ ಬಂದ್ರೆ ಮಾತ್ರ ಎದೆ ಒಡೆದು ಚೂರಾದಂತೆ! ಪ್ರೀತಿ ಬ್ರೇಕ್ ಅಪ್ ಆಗಲು ಹೊಸ ಕಾರಣವೊಂದು ಸಿಕ್ಕಿದ ಹಾಗಾಯ್ತು![ಜನವರಿ 12ರಿಂದ ನಿಮಗೊಂದು, ನಿಮ್ಮಿಂದೆ ಕುಳಿತವರಿಗೊಂದು]

ಹಿಂಬದಿ ಸವಾರಿಗೆ ಹೆಲ್ಮೆಟ್ ಕಡ್ಡಾಯವನ್ನು ಹೀಗೂ ಅನ್ಕಬಹುದು!
* ನಿಮಗೊಂದು, ನಿಮ್ಮ ಹಿಂದೆ ಕುಳಿತವರಿಗೊಂದು
* ಬೈಕ್ ಒಂದು, ಹೆಲ್ಮೆಟ್ ಎರಡು(ಮೂರು ಅಂಥಾನೂ ಸೆರಿಸ್ಕೋಬಹುದು)|
* ಸರ್ಕಾರಕ್ಕೆ ಆಟ, ಜನರಿಗೆ ಪ್ರಾಣ ಸಂಕಟ
* ಹಿಂಬದಿ ಸವಾರ ಹೆಲ್ಮೆಟ್ ಹಾಕದಿದ್ರೆ, ಮುಂಬದಿ ಸವಾರನಿಗೆ ಬರೆ
* ಮನೆಗೆರಡು ಬೈಕ್, ಬೈಕ್ ಗೆ ಎರಡು ಹೆಲ್ಮೆಟ್
* ಏನೇ ಬರಲಿ.. ಎರಡು ಹೆಲ್ಮೆಟ್ ಇರಲಿ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+