ಕಾಗೆ ಕೂರೋದಕ್ಕೂ, ಕಾರು ಬದಲಾಯಿಸೋದಕ್ಕೂ ಸರಿ ಹೋಯ್ತು!

By: ಮ ಪ
Subscribe to Oneindia Kannada

ಕಾಗೆ ಕೂರುವುದಕ್ಕೂ, ಕೊಂಬೆ ಮುರಿಯುವುದಕ್ಕೂ ಸರಿ ಹೋಯ್ತು ಎಂಬುದು ಹಳೆ ಗಾದೆ. ಇದೀಗ ಕಾಗೆ ಕೂರುವುದಕ್ಕೂ, ಕಾರು ಬದಲಾಯಿಸುವುದಕ್ಕೂ ಸರಿ ಹೋಯ್ತು ಎಂದು ಬದಲಾವಣೆ ಮಾಡಿಕೊಳ್ಳಬಹುದು!

ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ನಿತ್ರಾಣಗೊಂಡಿದ್ದ ಕಾಗೆ ಕುಳಿತಿದ್ದ ಬಗ್ಗೆ ಕತೆಗಳು ಜೋರಾಗಿಯೇ ಹರಿದಾಡಿದ್ದವು. ಸುದ್ದಿ ವಾಹಿನಿಗಳಲ್ಲಿ ಭವಿಷ್ಯವಾಣಿಗಳು ಕೇಳಿಬಂದಿತ್ತು. ಅದ್ಯಾವುದರ ಪರಿಣಾಮವೋ ಗೊತ್ತಿಲ್ಲ ಕುಮಾರಕೃಪಕ್ಕೆ ಹೊಸ ಕಾರು ಬಂದಿದೆಯಂತೆ![ಸಿಎಂ ಕಾರಿನ ಮೇಲೆ ಕುಳಿತ ಕಾಗೆಗೆ ಮಾಧ್ಯಮಗಳ ರೆಕ್ಕೆ ಪುಕ್ಕ!]

karnataka

35 ಲಕ್ಷ ರು. ಗೂ ಮಿಕ್ಕುವ ಫಾರ್ಚೂನರ್ ಹೈ ಎಂಡ್ 2016 ಮಾಡೆಲ್ ಬಿಳಿಯ ಬಣ್ಣದ ಕಾರು ಸಿದ್ದು ಆಗಮನಕ್ಕೆ ಕಾಯುತ್ತಿದೆ. ಕಾರಿಗೆ ನೋಂದಣಿ ಸಂಖ್ಯೆ ಅಂಟಿಸಿ ರಸ್ತೆಗೆ ಇಳಿಸುವುದಷ್ಟೆ ಬಾಕಿ ಇದೆ.

ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ತರಲು ಮುಂದಾದವರೆ ಹೀಗೆ ಮಾಡಿದರೆ ಹೇಗೆ? ಅಲ್ಲಾ ಸ್ವಾಮಿ... ಕಾಗೆ ಕೂತಿದ್ದಕ್ಕೆ, ನಾಯಿ ಇನ್ನೇನೋ ಮಾಡಿದ್ದಕ್ಕೆ ಕಾರು, ಬೈಕ್ ಬದಲಾಯಿಸುತ್ತಾ ಹೋದರೆ ಮುಗಿಯದ ಕತೆ ಎಂದು ಶಿವಾನಂದ ಸರ್ಕಲ್ ಬಳಿ ಪಂಕ್ಚರ್ ಹಾಕಿಸಿಕೊಳ್ಳುತ್ತಿದ್ದ ನಾಗರಾಜ ಹೇಳಿದ್ದು ಮಾಧ್ಯಮದವರ ಕಿವಿಗೆ ಬೀಳಲೇ ಇಲ್ಲ.[ಕಾಗೆ ಹಾರಿಸೋದು ಅಂದ್ರೆ ಏನು, ನಿಮಗೇನಾದ್ರೂ ಗೊತ್ತಾ?]

ಕಾಗೆ ಕೂತಿದ್ದು ಕಾರು ಬದಲಾಯಿಸಲು ಕಾರಣ ಅಲ್ಲ. ಕಾರು ಹಳೆಯದಾಗಿತ್ತು. ಆಗಾಗ ಕೈಕೊಡುತ್ತಿತ್ತು. ಇನ್ಯಾವುದೋ ಕಡಿಮೆ ಇತ್ತು ಎಂಬ ಕಾರಣಗಳನ್ನು ಸರ್ಕಾರದ ಕಾರ್ಯದರ್ಶಿಗಳು ರೆಡಿ ಮಾಡಿಕೊಳ್ಳುತ್ತಾ ಇದ್ದಾರೆ. ಕಾಗೆ ಕೂತಿದ್ದಕ್ಕೋ ಏನೋ ಟಯೋಟಾ ಕಂಪನಿಯವರಿಗೆ ಮತ್ತೊಂದು ಫಾರ್ಚೂನರ್ "ಮಾರಾಟದ ಭಾಗ್ಯ" ಸಿಕ್ಕಿದ್ದು ಸುಳ್ಳಲ್ಲ.[ಸಾಡೇಸಾತಿ ಎಂದರೇನು, ಏನಿದರ ಮರ್ಮ?]

ಮೂಢ ನಂಬಿಕೆಗೆ ಮಣೆ ಹಾಕಿದರೆ ಸಿದ್ದರಾಮಯ್ಯ!
ಕಾರಿನ ಮೇಲೆ ಕುಳಿತ ಕಾಗೆ ಈಗೇನು ಮಾಡುತ್ತಿದೆ
ಸಿಎಂ ಹೊಸ ಫಾರ್ಚೂನರ್ ಹೇಗಿದೆ?
ನಿಜವಾದ ಭವಿಷ್ಯ, ಕಾರು ಬದಲಾಯಿಸಿದ ಸಿಎಂ ( ಕಾರ್ಯಕ್ರಮಗಳು ಬ್ರೇಕ್ ನಂತರ ಪ್ರಸಾರ ಆಗಲಿವೆ)

ಫಾರ್ಚೂನರ್ 2016? ಏನಿದರ ವಿಶೇಷ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After a baby Crow Sits on CM Siddaramaiah's Car on June 2 Morning a debate was started in television Media. Now CM Siddaramaiah decided to buy a new Toyota Fortuner - 2016 .
Please Wait while comments are loading...