ಬಿಜೆಪಿಗೆ ರಂಗಿತರಂಗ, ಕಾಂಗ್ರೆಸ್ ಗೃಹಭಂಗ, ಜೆಡಿಎಸ್ ರಸಭಂಗ...!

By: ಮಪ
Subscribe to Oneindia Kannada

ಚುನಾವಣಾ ಫಲಿತಾಂಶಕ್ಕೆ ಹಾಡಿನ ಟಚ್ ಕೊಟ್ಟರೆ ಹೇಗಿರುತ್ತದೆ? ಅಂತದ್ದೇ ಕೆಲಸವನ್ನು ನಮ್ಮ ನಾಗರಾಜ ಮಾಡಿದ್ದಾನೆ. ಇವನ ಸಾಹಿತ್ಯ ಭಂಡಾರವನ್ನು ಎಷ್ಟು ಹೊಗಳಿದರೂ ಕಡಿಮೆಯೇ.. ನಿಮಗೆ ಹೀಗೆ ಹೇಳಿದರೆ ಮಜಾ ಬರುವುದಿಲ್ಲ.. ರಾಜಕಾರಣಿಗಳ ಪಾಡನ್ನು ಹಾಡಲ್ಲೇ ಕೇಳಿ ಎಂಜಾಯ್ ಮಾಡಿ...

ಥತ್ತೇರಿಕೆ...ಈ ಉಪಚುನಾವಣೆ ಅಂತೂ ಮುಗಿತಪ್ಪಾ. ಅವರಿವರ ಕೈ ಗಡಿಯಾರದ ಗಲಾಟೆ ಮುಗೀತು ಅಂದ್ರೆ ಇದೀಗ ಕಾಲ್ಗುಣದ ಮಾತುಕತೆ ಆರಂಭವಾಗಿದೆ. ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ ಇನ್ನೊಬ್ಬರ ಎರಡು ಕಣ್ಣು ಹೋಗಲಿ ಎಂದು ಬಯಸಿದ್ದವರ ಬಾಯಿಗೆ ಲಡ್ಡು ಬಿದ್ದಿದೆ.[ಉಪಚುನಾವಣೆ: ಹೆಬ್ಬಾಳದಲ್ಲಿ ನಿಜವಾಗಿ ಗೆದ್ದಿದ್ದು ಯಾರು?]

ಇವೆಲ್ಲಾ ಒತ್ತಟ್ಟಿಗೆ ಇರಲಿ, ಚುನಾವಣೆ ಮುಗಿದ್ ಮ್ಯಾಲೇ ನಮ್ಮ ನಾಗರಾಜ ಹೀಗೊಂದು ಹಾಡು ಹೇಳಿಕೊಂಡು ತಿರುಗಾಡ್ತಾ ಇದ್ದಾ. ನಾನು ಗಮನವಿಟ್ಟು ಕೇಳಿದೆ.. ಭಾಳ ಛಲೋ ಐತ್ರಪ್ಪಾ.. ನೀವು ಒಂದ್ ಸಾರಿ ಕೇಳ್ಕಂಡ್ ಬರ್ರಲಾ...

election


ಬಿಜೆಪಿಗೆ....ರಂಗಿ ತರಂಗ
ಕಾಂಗ್ರೆಸ್‌ಗೆ....ಗೃಹ ಭಂಗ
ಜೆಡಿಎಸ್‌ಗೆ....ರಸ ಭಂಗ..!

ಬಿಜೆಪಿಗೆ ಜನರಿಂದ ....ಮುದ್ದು
ಕಾಂಗ್ರೆಸ್ ಗೆ ಜನರಿಂದ..ಗುದ್ದು
ಜೆ.ಡಿ.ಎಸ್. ಗೆ ಜನ ಕಳಿಸಿದ್ದಾರೆ..ಒದ್ದು..!

ಬಿಜೆಪಿ..ವಿನ್ನರ್
ಕಾಂಗ್ರೆಸ್ ..ರನ್ನರ್
ಜೆಡಿಎಸ್..ಢಮಾರ್..!

ಬಿಜೆಪಿಗೆ........ಶಂಖ
ಕಾಂಗ್ರೆಸ್ ಗೆ...ಜಾಗಟೆ
ಜೆಡಿಎಸ್ ಗೆ..ಮಂಗಳಾರತಿ..!

ಬಿಜೆಪಿಗೆ... ನನಸಾಯ್ತು..ಎರಡು ಕನಸು
ಕಾಂಗ್ರೆಸ್ ....ನಾನು ನನ್ನ ಕನಸು
ಜೆಡಿಎಸ್ ಗೆ..ತಿರುಕನ ಕನಸು..![ಉಪ ಚುನಾವಣೆಯಲ್ಲಿ ಜೆಡಿಎಸ್ ಹೆ ಹೀನಾಯ ಸೋಲೆಕೆ?]

ಬಿಜೆಪಿಗೆ...ಶಿಕಾರಿ
ಕಾಂಗ್ರೆಸ್ ಗೆ ಸವಾರಿ
ಜೆಡಿಎಸ್...ಪರಾರಿ...!

ಬಿಜೆಪಿಗೆ....ಅದೃಷ್ಟ ಸರಿಯಿಲ್ಲ..
ಕಾಂಗ್ರೆಸ್ ಗೆ..ವಾಚ್..ಸರಿಯಿಲ್ಲ..
ಜೆಡಿಎಸ್ಗೆ...ಟೈಮೇ..ಸರಿಯಿಲ್ಲ...!

ಬಿಜೆಪಿಗೆ..ಪನ್ನೀರು
ಕಾಂಗ್ರೆಸ್ ಗೆ..ಕಣ್ಣೀರು
ಜೆಡಿಎಸ್‌ಗೆ..ಎಳ್ಳು ನೀರು...!(ವಾಟ್ಸಪ್ ಕೃಪೆ)[ಥತ್ತೇರಿಕೆ ... ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗಿಲ್ಲ!]

ಅಬ್ಬಾ ನಾಗರಾಜ ಯಾವ ಕವಿ ಪುಂಗವರಿಗೂ ಕಡಿಮೆ ಇಲ್ಲ ಬಿಡಿ. ಇಡೀ ಫಲಿತಾಂಶವನ್ನು ಅದು ಹೇಗೆ ಹೇಳಿದ್ದಾನೆ. ರಾಜಕಾರಣವನ್ನು ನಿವಾಳಿಸಿ ಒಗೆದಿದ್ದಾನೆ ನೋಡಿ....! ಇಂಗ್ಲಿಷ್, ಕನ್ನಡ ಭಾಷೆಯನ್ನು ಮಿಕ್ಸ್ ಮಾಡ್ಯಾನ ಅದರ ಜತಿಗೆ ಸಿನಿಮಾ ಹೆಸ್ರುಗಳನ್ನು ಸಖತ್ತಾಗೆ ಬಳಸಿಕಂಡ್ಯಾನ ಬಿಡ್ರಪ್ಪಾ...! ಬರೆದವರಿಗೊಂದು ಸಲಾಂ ಹೇಳುತ್ತ ನಿಮ್ಮ ಮನಸ್ಸಿನಲ್ಲೇ ಹಾಡನ್ನು ರಾಗವಾಗಿ ಗುನುಗಿರಿ..

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Elections are not just battle field for political parties, there is some fun too. An Oneindia Reader has coined one poem on just concluded Karnataka assembly by-election, where BJP has won 2 seats and Congress 1. Take it with pinch of salt!
Please Wait while comments are loading...