ಕನ್ಡ ಚಿತ್ರರಂಗಕ್ಕೆ ಬಿಗ್ಗೆಸ್ಟ್ ಛತ್ರಿ ಅಂದ್ರ ಹೆಂಗ್ರೀ?

Satire
ಹೋಗ್ ನಿಮ್ಮಾಪ್ನ ಹೋಗ ಅತ್ಲಾಗ, ನನಗಂತೂ ಸಾಕ ಸಾಕಾಗಿ ಹೋತಪ, ಈ ಕನ್ನಡ ಸಿನ್ಮಾದವ್ರೀಗೆ ಯಾವಾಗ ಬುದ್ಧಿ ಬರ್ತೈತೋ ಶಿವನೇ ಕಲ್ಬುರ್ಗಿ ಶರಣಬಸವ...

ನಮಸ್ಕಾರ ಕಿಲಿಬಿಲ್ಲಿ ಅವ್ರೀಗೆ...ಯಾಕ್ಲೆ ಮಂಗ್ಯಾ.. ಏನ್ ಭಾಳಾ ಚಿಂತಿ ಮಾಡಕ್ ಹತ್ಯೀದಿ...

ಹೋಗ ನಿನ್ ಮಂಜ್ಯಾಳ ಆಗ್ಲಿ, ಸರಾ...ಏನಂತ ಹೇಳ್ಲಿ, ಮನ್ನೆ ಬೆಂಗಳೂರ್ಗೆ ಹೋಗ ಚಾನ್ಸ್ ಸಿಕ್ತು, ಬೆಂಗ್ಲೂರಾಗ ನಮ್ಮ ತಿಂದೋಡೆಪ್ಪನ ಮಗ ಗುಂಡಾಡಿ ಅದಾನಲ್ಲ, ಅಂವ ಅದೇನ ಅಂತಾರಲ್ಲ ಕಂಪ್ಯೂಟರ್ ಇಂಜ್ನಿಯರ್, ಅಲ್ಲ ಅಲ್ಲ ಸಾಫ್ಟ್ ವೇರ್ ಇಂಜ್ನಿಯರ್ ಆಗ್ಯಾನ. ಅಂವ ಕರ್ಕೊಂಡ ಹೋಗಿದ್ದ. ನಾನು ಭಾಳಾ ದಿಸ ಆಗಿತ್ ಬೆಂಗ್ಳೂರ್ಗೆ ಹೋಗಿ, ನಾಕ್ ದಿಸ ಇದ್ದ ಬಂದ್ರಾತು ಅಂತ ಹೋದೆ. ಅಬ್ಬ ಏನ್ ಊರ್ರಿ ಅದು, ಏನ್ ಜನಾರೀ ಅವ್ರು, ಛೇಛೇಛೇ ಹೇಳಾಕ ವಲ್ನಾನು...

ಬೆಂಗ್ಳೂರ್ಗೆ ಹೋಗಿ ಏನ್ ಮಾಡ್ದಿಲೇ ಕಿಲಿಬಿಲ್ಲಿ... ವಿಧಾನಸೌಧ, ಲಾಲ್ ಬಾಗ್ ನೋಡಿಕ್ಯಂಡ ಬಂದಿಲ್ಲ...

ಎಪ್ಪಾ ಏನಂತ ಹೇಳಲ್ರೀ ಮಾರಾಯ್ರ, ರೊಕ್ಕ ಕೊಟ್ಟು ವಿಜಯ್ ಕರ್ನಾಟಕ ತಗೊಂಡೆ, ಮುಖ್ಪುಟದಾಗ ಅದೇ ಗಣಿ, ಪಣಿ, ಚಿಣಿ ಹೊಡೆದಾಟದ ಧೂಳು, ಮುಟಿಗಿ ಶಾಪ ಹಾಕಿ... ಥೂಥೂಥೂ...ಮೂರು ರುಪೈಯ್ ವೆಸ್ಟ್ ಆತು ಅಂದಕಳ್ಳಕತ್ತಿದ್ಯ, ಕಣ್ಣಿಗೆ ಬಿತ್ ನೋಡ್ರೀ ಬಂಬಾಟ್ ನ್ಯೂಸ್.

ಏನ್ಲೆ ಅದು, ಗಣಿ, ರೆಡ್ಡಿ, ಸಿದ್ದು, ದೇಶಪಾಂಡೆ, ಡಿಕೆಶಿ ಅವರಿಗಿಂತೂ ದೊಡ್ಡ ಸುದ್ದಿನಾ ಅದು ?

ಏಯ್ ಅವರ್ನೆಲ್ಲಾ ಇಲ್ಗೆ ತರಬ್ಯಾಡ್ರೀ... ಪಾಪ. ಅವರೇನೂ ಸಮಾವೇಶ, ಮತ್ತೊಂದು ಮುಗದೊಂದು ಮಾಡಿಕೊಂಡ ಹೊಂಟಾರ, ಅವ್ರ ಸುದ್ದಿ ತಗೀಬ್ಯಾಡ್ರೀ...ಇವ್ರು ಬಗ್ಗೆ ಕೇಳಿ ಕೇಳಿ, ನೋಡಿ ನೋಡಿ ನಮ್ಗಂತೂ ತಲೀ ಕೆಟ್ಟ ಸಾಕ ಸಾಕಾಗಿ ಹೋಗೈತಿ. ಅದನ್ನು ಮಾತ್ರ ತಗೀಬ್ಯಾಡ್ರೀ ಪ್ಲೀಸ್...

ಮತ್ತೆನ್ಲೆ ಅದು... ಬೊಂಬಾಟ್ ನ್ಯೂಸ್, ಭಾಳಾ ಸೆಸ್ಪೆನ್ಸ್ ಇಟ್ಟ ಮಾತಾಡಾಕ ಹತ್ತಿಯಲ್ಲಲೇ...

ಇದು ಸಿನ್ಮಾಕ ಸಂಬಂದಪಟ್ಟ ಸುದ್ದಿರೀ, ಬಿಗ್ ಎಫ್ಎಂ ಅಂತ ರೇಡಿಯೋ ಚಾನೆಲ್ ಐತಲ್ರೀ ನಿಮ್ಗ ಗೊತ್ತಿರ್ಬೇಕಲ್ಲ. 24 ಗಂಟೆನೂ ಹಾಡ ಹಾಕೋ ಸ್ಟೇಷನ್...

ಹೌದು ಐತೀ...

ಅದರೀ ದೊಡ್ಡ ಫಜೀತಿ ಮಾಡಿಕೊಂಡೈತಿ...

ಜಗತ್ ಕ್ಯಾಂಪಿಟೇಷನ್ ನೋಡ್ರೀ, ಎಲ್ಲಿ ನೋಡಿದ್ರು ನಾನ್ ಮುಂದು ನೀನ್ ಮುಂದು, ಹಿಂಗ್ ಹೊಂಟೈತಿ ದುನಿಯಾ. ಬಿಗ್ ಎಫ್ಎಂನ ಪುಣ್ಯಾತ್ಮ ಆರ್ ಜೆ ಒಬ್ಬಾತ ಬಿಗ್ಗೆಸ್ಟ್ ಛತ್ರಿ ಅಂತ ಕಾರ್ಯಕ್ರಮ ರೂಪಿಸಿ, ಅದರಾಗ ಕನ್ನಡ ಚಿತ್ರರಂಗವನ್ನು ಹಿಯ್ಯಾಳಿಸಿದ್ನಂತ. ಅದನ್ನು ಕೇಳಿಸಿಕೊಂಡ ಚಿತ್ರರಂಗದ ಮಂದಿ ಎದ್ದ ಕುಂತು ಬಿಟ್ಟಾರ. ಚಲನಚಿತ್ರ ವಾಣಿಜ್ಯ ಮಂಡಳಿ ಅಂತ ಸಂಘ ಐತಲ್ರೀ. ಅವರೆಲ್ಲ ಮೀಟಿಂಗ್ ಮಾಡಿ ಬಿಗ್ ಎಫ್ಎಂ ಜೊತೆಗೆ ಚಿತ್ರರಂಗ ಯಾವ ಯವಾರ ಮಾಡ್ಬಾರ್ದು, ಹೊಸ ಚಿತ್ರಗಳ ಅನುಮತಿ, ಹಾಡು ಬಿಡುಗಡೆ ಏನನ್ನೂ ಮಾಡ್ಬಾರ್ದು ಅಂತ ಪರ್ಮಾನು ಹೊರಡಿಸ್ಯಾರ್ರೀ ಮಂಡಲಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ರು.

ನೋಡು, ಒಂದ್ಮಾತು ಹೇಳ್ತೀನಿ, ಕನ್ಡ ಚಿತ್ರರಂಗನ ಛತ್ರಿ ಅಂತ ಕರೆದಿದ್ದು ಫಸ್ಟ್ ತಪ್ಪು. ಅಂತಹ ಕಾರ್ಯಕ್ರಮ ಮಾಡೋದು ಸರಿಯಲ್ಲ ಬಿಡು.

ಅಲ್ರೀ, ಅದು ಅಷ್ಟಕ್ಕೆ ಮುಗಿಲಿಲ್ಲ. ಕಾರ್ಯಕ್ರಮ ರೂಪಿಸಿದ್ದ ಆರ್ ಜೆಯನ್ನು ಕೆಲಸದಿಂದ ಕಿತ್ತು ಹಾಕ್ಯಾರಂತ. ಒಂದು ದಿನ ಎಫ್ಎಂ ಪ್ರಸಾರವನ್ನು ಸ್ಟಾಪ್ ಮಾಡಿದ್ರಂತ, ಕನ್ನಡ ಚಿತ್ರರಂಗಕ್ಕೆ ಅಪಮಾನ ಮಾಡಿದ್ದಕ್ಕೆ ಕ್ಷಮೆ ಕೋರ್ತೀವಿ ಅಂತ ಬಿಗ್ ಕಂಪನಿ ಕಡೆಯವ್ರು ದಿನಕ್ಕ ನೂರ್ಸಲ ಸಾರಿ ಕೇಳಿಕೊಂಡಾರ. ಕನ್ನಡ ಪತ್ರಿಕೆಯೊಳಗೆ ಕ್ಷಮಾಪಣೆ ಪತ್ರವನ್ನೂ ಪ್ರಕಟಿಸ್ಯಾರ. ಇಷ್ಟಾದ್ರು ಮಂಡಳಿ ಮಾತ್ರ ತನ್ನ ತನ್ನ ನಿರ್ಧಾರನ ಸಡ್ಲ ಮಾಡ್ವಲ್ದು.

ಇದು ತಟಗು ಜಾಸ್ತಿ ಆತು ಅಂತ ಅನಸಂಗಿಲ್ಲ ಕಿಲಿಬಿಲ್ಲಿ...

ಜಾಸ್ತಿಯೇನು ಹೆಚ್ಚಾಗಿ ಇಡೀ ಬೆಂಗ್ಳೂರ್ಗೆ ಹಂಚಂಗಾಗೈತಿ. ಕಸಬ್ ಯಾರ್ರೀ, ಅಫ್ಜಲ್ ಗುರು ಯಾರ್ರೀ... ಈ ಇಬ್ಬರು ದೇಶದ ಮೇಲೆ ಯುದ್ಧ ಸಾರಿದ ಮಹಾನ್ ಉಗ್ರರು, ಇಂತಹ ಕಳ್ರು ರಾಷ್ಟ್ರಪತಿಗೆ ಕ್ಷಮಾಪಣೆ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸ್ಯಾರ. ಕಾಂಗ್ರೆಸ್ ಪಕ್ಷ ಇವರನ್ನು ಬಿಡುಗಡೆ ಮಾಡಿದ್ರು ಮಾಡ್ಬಹುದು. ಇಂತ ದೊಡ್ಡ ತಪ್ಪು ಅಂತೂ ಬಿಗ್ ಕಂಪನಿಯವ್ರ ಮಾಡಿಲ್ಲ. ಹಾಗಂತ ಇದು ಸಮರ್ಥನೆ ಅಂತೂ ಅಲ್ರೀ, ಸಾರಿ ಅಂದ್ರ ಮಂಡಳಿ ಕ್ಷಮಿಸಬೇಕಾಗಿತ್ ಅಲ್ರೀ...

ಸಾರಿ ಕೇಳಿದ್ರ ಕ್ಷಮಿಸಬೇಕಾಗಿತ್ತು ಅಂತ ಅನಿಸ್ತೈತಲೇ ಕಿಲಿಬಿಲ್ಲಿ...ತಪ್ಪು ಆಗೋದು ಸಹಜ, ತಿದ್ದಿ ನಡೆಯೋದು ಮನುಷ್ಯಾರ ಲಕ್ಷಣಂತ. ಮುಂದ ಅವ್ರು ಸುಧಾರಿಕೊಳ್ತಿದ್ರೋ ಏನೋ...ಒಂದ್ ಅವಕಾಶ ಅಂತೂ ಅವ್ರೀಗೆ ಕೊಡಬೇಕಿತ್ತು ಅಲ್ಲಾ.

ಸರ, ಇವ್ರು ತೆಗಿಯೋ ಸಿನ್ಮಾಗಳಿಗೆ ಅಷ್ಟೂ ಇಷ್ಟೂ ಮಂದಿ ಟಾಕೀಸಿಗೆ ಬರ್ತಾರ ಅಂದ್ರ ಅದು ಟಿವಿ, ಎಂಎಫ್ ಗಳಿಂದ. ಸಿನ್ಮಾಗಳ ಪ್ರಮೋಟ್ ಮಾಡೋ ಇಂತಹ ಮೀಡಿಯಾಗಳು ಮೇಲೆ ಈ ರೀತಿ ಅಟ್ಯಾಕ್ ಮಾಡಿದ್ರ ಮುಂದ ಹೆಂಗ ಅಂತೀನಿ.

ಹೋಗ್ಲಿ ಯಾವ ಸಿನ್ಮಾ ನೋಡಿದಿ ಬೆಂಗ್ಳೂರಾಗ ?

ಇಲ್ರೀ, ಅಂತ ತಪ್ಪು ಅಂತೂ ನಾನು ಮಾಡಲ್ಲ. ಮೂವರು ವರ್ಷದಾಗ ಎರಡು ಸಿನ್ಮಾ, ಒಂದು ಚಿಕ್ಕಪೇಟಿ ಸಾಚಗಳು ಇನ್ನೊಂದು ಪ್ರಕಾಶ ರೈ ಅವರ ನಾನು ನನ್ನ ಕನಸು ನೋಡಿದ್ದ ಬಿಟ್ರ ಹುಂ ಸಿನ್ಮಾದ ಉಸಾಬರಿಗೆ ಹೋಗಿಲ್ಲ.

ಕನ್ಡ ಸಿನ್ಮಾ ನೋಡ್ಬೇಕಲೇ...ಕಿಲಿಬಿಲ್ಲಿ

ಯಾಕ... ನೀವೇನಾದ್ರು ಕನ್ಡ ಸಿನ್ಮಾ ಡೈರೆಕ್ಟ್ ಮಾಡ್ಬೇಕು ಅಂತ ಸ್ಕೇಚ್ ಹಾಕಿರೇನು. ಹಂಗೇನಾದ್ರು ಇದ್ರು ಬೇಡಾ. ಯಾಕಂತ ಕೇಳಬ್ಯಾಡ್ರೀ. ಹೇಳಿಬಿಟ್ರ ಬಸಂತ್ ಕುಮಾರ್ ಪಾಟೀಲ್ರು ಕಿಲಿಬಿಲ್ಲಿ ಹುಡ್ಕಿಕೊಂಡ ಬರೋ ಛಾನ್ಸ್ ಭಾಳಾ ಐತೀ....ಹಹಹಹಹಹಹಹಹಹ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+