382293bookಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ/column/gv/2009/0314-ajji-kathe-story-on-grandmother-by-hys.htmlನನ್ನ ಮೊದಲಿನ ಎರಡು ಅಮೇರಿಕಾ ಪ್ರವಾಸಗಳು(2000 ಮತ್ತು 2002) ಅವಿಸ್ಮರಣಿಯವಾಗಲು ಕಾರಣರಾದವರಲ್ಲಿ ಡಾ| ಎಚ್.ವಾಯ್.ರಾಜಗೋಪಾಲ ಒಬ್ಬರು. ನನ್ನ ಎರಡನೆಯ ಪ್ರವಾಸದಲ್ಲಿ ನಾನು ಅವರ ಆತಿಥ್ಯದಲ್ಲಿ ಎರಡು ವಾರ ಫಿಲೆಡೆಲ್ಫಿಯಾದಲ್ಲಿದ್ದೆ. ಅವರ ಅಣ್ಣ ಪ್ರಸಿದ್ಧ ಪತ್ರಕರ್ತ ಎಚ್.ವಾಯ್. ಶಾರದಾ ಪ್ರಸಾದ. ತಮ್ಮ ತಂದೆಯ ಜನ್ಮ ಶತಾಬ್ದಿಯ ನೆನಪಿಗಾಗಿ ಎಂಟು ಮಕ್ಕಳು ಸೇರಿ ಒಂದು ಅಪೂರ್ವ ಪುಸ್ತಕ ಬರೆದಿದ್ದಾರೆ. (ಸಂಗೀತದ 35217http://kannada.oneindia.com/img/2009/03/14-sharadaprasad2.jpg382293bookಹೊತ್ತಿಗೆ ರೂಪದಲ್ಲಿ ಏನ್ ಗುರು ಕಾಫಿ ಆಯ್ತಾ?/column/enguru/2009/0508-enguru-in-book-form.html2007ರಲ್ಲಿ ಬನವಾಸಿ ಬಳಗದ "ಏನ್ ಗುರು ಕಾಫಿ ಆಯ್ತಾ?" ಅಂಕಣಮಾಲೇನಾ ಶುರು ಮಾಡಲಾಯ್ತು. ಇದಕ್ಕೆ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ, ಉತ್ತೇಜನ ನಿಮ್ಮಿಂದ ಸಿಕ್ಕಿದೆ. ಈ ಬರಹಗಳನ್ನು ಬರೀತಾ ಬರೀತಾನೇ ನಮ್ಮ ಚಿಂತನೆಗಳೂ ಸ್ಪಷ್ಟರೂಪ ತೆಗೆದುಕೊಳ್ಳುತ್ತಾ ಸಾಗಿದ್ದು ಸುಳ್ಳಲ್ಲ. ನಿಮ್ಮ ಸಹಕಾರ ಮತ್ತು ಅಭಿಮಾನದಿಂದ ಈ ಬ್ಲಾಗು ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಜನ ಓದುಗರನ್ನು ಮುಟ್ಟಿದೆ.ಆದ್ರೆ ನಾವು 36498http://kannada.oneindia.com/img/2009/05/08-enguru1.jpg382293bookಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು/column/gv/2009/0518-bendre-prose-critical-analysis-narayanacharya.html'ದೇಸಿಯತೆಯಲ್ಲಿ ಬೇರೂರಿ ಅರಳಿದ ದತ್ತ ಪ್ರತಿಭೆ' ಎಂದು ವರ್ಣಿತರಾದ ಸಾಧಕ ಕವಿ ದ.ರಾ.ಬೇಂದ್ರೆ ಅವರ ಕವಿ, ಕಾವ್ಯ ಮತ್ತು ವಿಮರ್ಶೆ ಕುರಿತು 32 ಸೂತ್ರಗಳ ವಿಮರ್ಶಾಗ್ರಂಥವನ್ನು ಡಾ. ಕೆ.ಎಸ್. ನಾರಾಯಣಾಚಾರ್ಯರು ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಬರೆದ ಈ ಗ್ರಂಥ ಈಗ ಬಿಡುಗಡೆಯಾಗುತ್ತಿದೆ. ಈ ಗ್ರಂಥಕ್ಕೆ ಬೇಂದ್ರೆ ಅವರ ಮಗ ವಾಮನ ಬೇಂದ್ರೆ ಅವರು 50 ಪುಟಗಳ 36726http://kannada.oneindia.com/img/2009/05/18-bendre4.jpg382293bookನಾರಾಯಣಾಚಾರ್ಯ ಬರೆದ ಪುಸ್ತಕದ ಪರಿಚಯ (ಭಾಗ 2)/column/gv/2009/0523-book-by-ks-narayanacharya-on-bendre-prose.htmlಬೇಂದ್ರೆಯವರ ಬರವಣಿಗೆಯಲ್ಲಿ ಹುದುಗಿದ್ದ ವಿಮರ್ಶಾ ಸೂತ್ರಗಳನ್ನು ಆಯ್ದ ಶ್ರೇಯಸ್ಸು ನಾರಾಯಣಾಚಾರ್ಯರಿಗೆ ಸಲ್ಲುತ್ತದೆ. ಪ್ರತಿಯೊಂದು ಸೂತ್ರಕ್ಕೂ ನಾರಾಯಣಾಚಾರ್ಯರು 'ಸಾಹಿತ್ಯದ ವಿರಾಟ ಸ್ವರೂಪ' ಗ್ರಂಥದಲ್ಲಿ ದೀರ್ಘವಾದ ವಿದ್ವತ್‌ಪೂರ್ಣವಾದ ವ್ಯಾಖ್ಯಾನವನ್ನು ಬರೆದಿದ್ದಾರೆ. ಪುಸ್ತಕ ಪರಿಚಯದ ಎರಡನೇ ಭಾಗ ಇಲ್ಲಿದೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಡಾ| ಕೆ.ಎಸ್. ನಾರಾಯಣಾಚಾರ್ಯರು ಬೇಂದ್ರೆಯವರ "ಸಾಹಿತ್ಯದ ವಿರಾಟ ಸ್ವರೂಪ" ಗ್ರಂಥದಿಂದ 32 ವಿಮರ್ಶಾ ಸೂತ್ರಗಳನ್ನು ಆರಿಸಿದ್ದಾರೆ. ಸಾಹಿತ್ಯದ 36851http://kannada.oneindia.com/img/2009/05/23-ks-narayanacharya2.jpg382293bookಮೇ 31ರಂದು ನಟನದಲ್ಲಿ ರಂಗವಲ್ಲಿಯ ಲೋಕಾರ್ಪಣೆ/literature/book/2009/0529-mandya-ramesh-rangavalli-in-mysuru.htmlಮೈಸೂರು, ಮೇ 29 : ಜನಪ್ರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಬರೆದ 'ರಂಗವಲ್ಲಿ' ಕೃತಿ ಮೇ 31ರ ಭಾನುವಾರ ಸಂಜೆ 5.30ಕ್ಕೆ ರಾಮಕೃಷ್ಣನಗರದ ನಟನ ರಂಗಮಂಟಪದಲ್ಲಿ ಲೋಕಾರ್ಪಣೆಗೊಳ್ಳಲಿದೆ.ಡಾ|| ಹಾಲತಿ ಸೋಮಶೇಖರ್ ಅವರ ವಿಸ್ಮಯ ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಕುತೂಹಲ ಸಂಸ್ಥೆ ಲೋಕಾರ್ಪಣೆಗೊಳಿಸಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ, ಜನಪ್ರಿಯ ಲೇಖಕ ಡಾ|| ಸಿದ್ಧಲಿಂಗಯ್ಯ ಬಿಡುಗಡೆ 36989http://kannada.oneindia.com/img/2009/05/29-rangavalli-mandya-ramesh1.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)/column/gv/2009/0117-vinayaka-krishna-gokak-part3.htmlಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಮಾಡಿ ಭಾರತಕ್ಕೆ ಮರಳಿದ ವಿನಾಯಕ ಕೃಷ್ಣ ಗೋಕಾಕ್ ಅವರು ಮಾಡಿಕೊಂಡ ದೊಡ್ಡ ಆಸ್ತಿಯೆಂದರೆ ಅಪಾರ ಶಿಷ್ಯವೃಂದ. ಹೇಮಂತ ಕುಲಕರ್ಣಿ, ಸುಬ್ಬಣ್ಣ ಎಕ್ಕುಂಡಿ, ವಿ.ಜಿ.ಭಟ್ಟ, ಗಾಂಗಾಧರ ಚಿತ್ತಾಲ ಮೊದಲಾದ ಖ್ಯಾತ ಲೇಖಕರು ಗೋಕಾಕರ ಗರಡಿಯಲ್ಲಿ ಪಳಗಿದವರೇ.* ಡಾ|ಜೀವಿ ಕುಲಕರ್ಣಿಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಂಗ್ಲಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.(ಆಗ್ಝನ್) ಡಿಗ್ರಿ ಪಡೆದು ವಿಕ್ರಮ ಸಾಧಿಸಿದ ಗೋಕಾಕರು 34120http://kannada.oneindia.com/img/2009/01/17-vk-gokak3e.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 4)/column/gv/2009/0124-vinayaka-krishna-gokak-part4.htmlಮಹರ್ಷಿ ಶ್ರೀ ಅರವಿಂದರ ಕೃತಿಗಳನ್ನು ಅರಗಿಸಿ ಕುಡಿದು ತಮ್ಮ ಜೀವನದಲ್ಲಿ ಹಾಗೂ ಸಾಹಿತ್ಯದಲ್ಲಿ ಅದರ ಬೆಳಕನ್ನು ಹರಡಿದ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲಿ ಗೋಕಾಕರೂ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ನಿಮಿತ್ತ ಲೇಖನ ಸರಣಿ ಮುಂದುವರಿಯುತ್ತಿದೆ.* ಡಾ|ಜೀವಿ ಕುಲಕರ್ಣಿ1947ರಲ್ಲಿ ಭಾರತಕ್ಕೆ ಸ್ವಾತಂತ್ಯ ದೊರೆತ ನಂತರ ಬರೋಡಾ ಸಂಸ್ಥಾನ ಭಾರತ ಸರಕಾರದಲ್ಲಿ 34269http://kannada.oneindia.com/img/2009/01/24-vk-gokak4.jpg99737gv kulkarniಧಾರವಾಡಕ್ಕೂ ಗೋಕಾಕರಿಗೂ ಬಿಡಲಾರದ ನಂಟು/column/gv/2009/0131-unforgettable-days-of-gokak-in-dharwad.htmlಧಾರವಾಡಕ್ಕೂ ವಿಕೆ ಗೋಕಾಕರಿಗೂ ಬಿಡಲಾರದ ನಂಟು. ಅವರು ಧಾರವಾಡಕ್ಕೆ ಬರುತ್ತಿದ್ದಾರೆಂದು ತಿಳಿದಕೂಡಲೆ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಗೋಕಾಕರ ಮಹತ್ವದ ಕೃತಿಗಳು ಪ್ರಕಟವಾಗಿದ್ದು ಅವರು ಧಾರವಾಡದಲ್ಲಿದ್ದಾಗಲೇ. ಧಾರವಾಡದಲ್ಲಿನ ಅವರ ಒಡನಾಟ, ವಿದ್ಯಾರ್ಥಿಗಳೊಂದಿಗಿನ ಬಾಂಧವ್ಯ, ಸಾಂಸ್ಕೃತಿಕ ನಗರಿಯಲ್ಲಿ ಕಳೆದ ಅವಿಸ್ಮರಣೀಯ ಗಳಿಗೆಗಳನ್ನು ಜೀವಿ ಕುಲಕರ್ಣಿಯವರು ಇಲ್ಲಿ ಮೆಲುಕು ಹಾಕಿದ್ದಾರೆ. ಗೋಕಾಕ್ ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಲೇಖನ ಸರಣಿಯ ಭಾಗ 34397http://kannada.oneindia.com/img/2009/01/31-vk-gokak4.jpg99737gv kulkarniಗೋಕಾಕರಿಗೆ ಸತ್ಯಸಾಯಿಬಾಬಾ ಅನುಗ್ರಹ/column/gv/2009/0207-vk-gokak-birth-centenary-part-6.htmlಶೈಕ್ಷಣಿಕವಾಗಿ ಮಾತ್ರ ವಿನಾಯಕ ಕೃಷ್ಣ ಗೋಕಾಕರು ಪರೀಕ್ಷೆಗಳನ್ನೆದುರಿಸಲಿಲ್ಲ ಜೀವನದುದ್ದಕ್ಕೂ ಅನೇಕ ಸತ್ವಪರೀಕ್ಷೆಗಳನ್ನು ಅವರು ಎದುರಿಸಿದರು. ಹೋದಲ್ಲೆಲ್ಲ ವಿಜಯಶಾಲಿಯಾದರು, ಗೆಳೆಯರನ್ನು ಸಂಪಾದಿಸಿದರು, ಶಿಷ್ಯಂದಿರನ್ನು ಹುಟ್ಟುಹಾಕಿದರು. ಅವರ ವ್ಯಕ್ತಿತ್ವವೇ ಅಂತಹುದಾಗಿದ್ದು. ಗೋಕಾಕರ ಜೀವನವನ್ನು, ವ್ಯಕ್ತಿತ್ವವನ್ನು ಬಣ್ಣಿಸುವ 'ಜೀವಿ' ಕುಲಕರ್ಣಿಯವರ ಸರಣಿ ಲೇಖನದ ಆರನೇ ಭಾಗ, ಗೋಕಾಕರ ಜನ್ಮಶತಮಾನೋತ್ಸವದ ನಿಮಿತ್ತ.ಗೋಕಾಕರು ಎರಡನೆಯ ಸಲ ಹೈದ್ರಾಬಾದ್‌ಗೆ ತೆರಳಿದ್ದು ಆಕಸ್ಮಿಕವಾಗಿದ್ದರೂ, ಒಂದು ರೀತಿಯಲ್ಲಿ, ಇದು 34531http://kannada.oneindia.com/img/2009/02/07-vk-gokak4.jpg192170ಜೀವಿಶ್ರೀಮದ್ ಭಗವದ್ಗೀತೆಯಲ್ಲಿ ಆರೋಗ್ಯ ಸೂತ್ರಗಳು/column/gv/2008/1116-karma-yoga-dhyana-yoga-in-bhagavad-gita.htmlಭಗವದ್ಗೀತೆಯಲ್ಲಿ ಬರುವ ಹದಿನೆಂಟು ಯೋಗಶಾಸ್ತ್ರಗಳಲ್ಲಿ ಆರೋಗ್ಯ ಕಾಪಾಡಲು ಸೂತ್ರಗಳನ್ನು ಅಳವಡಿಸಲಾಗಿದೆ. ಮಹತ್ವದ ಯೋಗಗಳಾದ ಕರ್ಮಯೋಗ ಮತ್ತು ಧ್ಯಾನಯೋಗ ರೋಗಗಳನ್ನು ವಾಸಿಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಅನಾರೋಗ್ಯವೆಂಬುದು ಹತ್ತಿರ ಕೂಡ ಸುಳಿಯಲಾರದು. * ಡಾ. 'ಜೀವಿ' ಕುಲಕರ್ಣಿ, ಮುಂಬಯಿ ಶ್ರೀಮದ್ ಭಗವದ್ಗೀತೆ ಒಂದು ಯೋಗಶಾಸ್ತ್ರ. ಭವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಕೊನೆಗೆ ಓಂತತ್ಸತ್ ಇತಿ 32800http://kannada.oneindia.com/img/2008/11/bhagavadgita1.jpg192170ಜೀವಿಗೀತೆಯಲ್ಲಿ ಆರೋಗ್ಯ ಸೂತ್ರಗಳು (ಭಾಗ 2)/column/gv/2008/1122-health-tips-in-bhagavad-gita-part2.htmlಮನ ಒಂದು ದೈತ್ಯ ಇದ್ದಹಾಗೆ. ಅದಕ್ಕೆ ಸದಾ ಕೆಲಸ ಇರಬೇಕು. ಇಲ್ಲದಿದ್ದರೆ ಅದು ನಿಮ್ಮ ತಲೆ ತಿನ್ನುತ್ತದೆ. ಎಲ್ಲ ರೋಗಗಳಿಗೂ ಮನವೇ ಕಾರಣವಾಗುತ್ತದೆ. ಕೈಯಲ್ಲಿ ಒಂದು ಜಪಮಾಲೆ ಕೊಡಬೇಕು. ಕೆಲಸವಿಲ್ಲದೇ ಇದ್ದಾಗ ಜಪಮಾಲೆ ಎಣಿಸುತ್ತಿರಬೇಕು. ಕೆಲಸ ಬಂದಾಗ ಜಪ ಬದಿಗಿಟ್ಟು ಕೆಲಸ ಮಾಡಬೇಕು. * ಡಾ. 'ಜೀವಿ' ಕುಲಕರ್ಣಿ, ಮುಂಬಯಿ ನಮ್ಮ ಜೀವನದಲ್ಲಿಯ ಅಧ್ಯಾತ್ಮಿಕ ಹಾಗೂ ಆರೋಗ್ಯದ 32918http://kannada.oneindia.com/img/2008/11/bhagavadgita2.jpg192170ಜೀವಿಎಲೆಮರೆಯ ಚಿತ್ರನಿರ್ದೇಶಕ ಹರ್ಷವರ್ಧನ್ ಕುಲಕರ್ಣಿ/literature/people/2009/0121-lost-and-found-director-harshavardhan.htmlಮುಂಬೈ ಕಡಲ ತೀರದಲ್ಲಿ ಅನಾಥವಾಗಿ ಬಿದ್ದಿದ್ದ ಶತಮಾನದಷ್ಟು ಹಳೆಯ ಬಾಟಲಿಯೊಂದು ವ್ಯಕ್ತಿಯಿಂದ ವ್ಯಕ್ತಿಗೆ ದಾಟುತ್ತ, ಮಾನವನ ದುರಾಸೆ, ವಾಂಛೆ, ಪ್ರೀತಿ, ಆಶಾವಾದಿತನಗಳಿಗೆ ಸಾಕ್ಷಿಯಾಗುವ ಕಥೆಯುಳ್ಳ 'Lost and Found' ಚಲನಚಿತ್ರ ಚಿತ್ರಕಥೆಯಲ್ಲಿನ ನವಿರುತನದಿಂದ, ಅದ್ಭುತ ದಿಗ್ದರ್ಶನದಿಂದ, ಅಷ್ಟೇ ಪಕ್ವವಾದ ಛಾಯಾಗ್ರಹಣದಿಂದ ವಿಶ್ವದಾದ್ಯಂತ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. ಈ ಚಿತ್ರವನ್ನು ಬರೆದು, ನಿರ್ದೇಶಿಸಿರುವ ಅಪ್ಪಟ ಕನ್ನಡಿಗ ಹರ್ಷವರ್ಧನ್ ಕುಲಕರ್ಣಿ ಅವರ 34205http://kannada.oneindia.com/img/2009/01/24-harshavardhana-kulkarni2.jpg192170ಜೀವಿಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ/column/gv/2009/0314-ajji-kathe-story-on-grandmother-by-hys.htmlನನ್ನ ಮೊದಲಿನ ಎರಡು ಅಮೇರಿಕಾ ಪ್ರವಾಸಗಳು(2000 ಮತ್ತು 2002) ಅವಿಸ್ಮರಣಿಯವಾಗಲು ಕಾರಣರಾದವರಲ್ಲಿ ಡಾ| ಎಚ್.ವಾಯ್.ರಾಜಗೋಪಾಲ ಒಬ್ಬರು. ನನ್ನ ಎರಡನೆಯ ಪ್ರವಾಸದಲ್ಲಿ ನಾನು ಅವರ ಆತಿಥ್ಯದಲ್ಲಿ ಎರಡು ವಾರ ಫಿಲೆಡೆಲ್ಫಿಯಾದಲ್ಲಿದ್ದೆ. ಅವರ ಅಣ್ಣ ಪ್ರಸಿದ್ಧ ಪತ್ರಕರ್ತ ಎಚ್.ವಾಯ್. ಶಾರದಾ ಪ್ರಸಾದ. ತಮ್ಮ ತಂದೆಯ ಜನ್ಮ ಶತಾಬ್ದಿಯ ನೆನಪಿಗಾಗಿ ಎಂಟು ಮಕ್ಕಳು ಸೇರಿ ಒಂದು ಅಪೂರ್ವ ಪುಸ್ತಕ ಬರೆದಿದ್ದಾರೆ. (ಸಂಗೀತದ 35217http://kannada.oneindia.com/img/2009/03/14-sharadaprasad2.jpgnews"> ಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ | Ajji Kathe | Book | HY Sharada Prasad | GV Kulkarni - ಅಪೂರ್ವ ಪುಸ್ತಕ : ಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ - Kannada Oneindia

ಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ

HY Sharada Prasad
ನನ್ನ ಮೊದಲಿನ ಎರಡು ಅಮೇರಿಕಾ ಪ್ರವಾಸಗಳು(2000 ಮತ್ತು 2002) ಅವಿಸ್ಮರಣಿಯವಾಗಲು ಕಾರಣರಾದವರಲ್ಲಿ ಡಾ| ಎಚ್.ವಾಯ್.ರಾಜಗೋಪಾಲ ಒಬ್ಬರು. ನನ್ನ ಎರಡನೆಯ ಪ್ರವಾಸದಲ್ಲಿ ನಾನು ಅವರ ಆತಿಥ್ಯದಲ್ಲಿ ಎರಡು ವಾರ ಫಿಲೆಡೆಲ್ಫಿಯಾದಲ್ಲಿದ್ದೆ. ಅವರ ಅಣ್ಣ ಪ್ರಸಿದ್ಧ ಪತ್ರಕರ್ತ ಎಚ್.ವಾಯ್. ಶಾರದಾ ಪ್ರಸಾದ. ತಮ್ಮ ತಂದೆಯ ಜನ್ಮ ಶತಾಬ್ದಿಯ ನೆನಪಿಗಾಗಿ ಎಂಟು ಮಕ್ಕಳು ಸೇರಿ ಒಂದು ಅಪೂರ್ವ ಪುಸ್ತಕ ಬರೆದಿದ್ದಾರೆ. (ಸಂಗೀತದ ಸಿರಿ ಎಚ್ ಯೋಗಾನರಸಿಂಹಂ). ಆ ಪುಸ್ತಕದ ಬಗ್ಗೆ (ಮತ್ತೊಮ್ಮೆ ಅಮೇರಿಕಾ ಪ್ರವಾಸದಲ್ಲಿ) ವಿವರವಾಗಿ ಬರೆದಿದ್ದೇನೆ. ಎಂಟು ಮೊಮ್ಮಕ್ಕಳು ತಮ್ಮ ಅಜ್ಜಿಯ ಬಗ್ಗೆ ಬರೆದ ಪುಸ್ತಕದ ಬಗ್ಗೆ ಕೂಡ ಮಿತ್ರ ರಾಜಗೋಪಾಲ ಹೇಳಿದ್ದರು. ಆ ಪುಸ್ತಕ ನನಗೆ ನೋಡಲು ಲಭ್ಯವಿರಲಿಲ್ಲ. ಆ ಪುಸ್ತಕ ದೊರಕಿಸಲು ಪ್ರಯತ್ನಿಸಿದ್ದೆ. 'ಅರಸುತಿಹ ಲತೆ ಕಾಲತೊಡಕಲು' ಎಂಬ ಕವಿವಾಣಿಯಂತೆ ಆ ಪುಸ್ತಕ ನನಗೆ ದೊರಕಿದಾಗ ನನಗೆ ಸಂತಸವಾಯಿತು. ನನಗೆ ಅತೀವ ಆನಂದ ಉಂಟು ಮಾಡುವ ಎರಡು ಸಂಗತಿಗಳಿವೆ. ಒಂದು ಅಪೂರ್ವ ವ್ಯಕ್ತಿಯ ಭೇಟಿ, ಇನ್ನೊಂದು ಅಪೂರ್ವ ಪುಸ್ತಕ ದೊರೆತ ಸಂಭ್ರಮ.

ನನ್ನ ವಿದ್ಯಾರ್ಥಿಮಿತ್ರ ಶ್ರೀನಿವಾಸ ರಾವ್ ವೃತ್ತಿಯಲ್ಲಿ ಸುವರ್ಣಾಲಂಕಾರದಲ್ಲಿ ತೊಡಗಿದ್ದಾನೆ ಆದರೆ ಪ್ರವೃತ್ತಿಯಲ್ಲಿ ಕವಿಮನದ ವಾಚಕ, ಸೂಕ್ಷ್ಮಗ್ರಾಹಿಯಾದ ರಸಿಕ ವಿಮರ್ಶಕ. ಒಮ್ಮೆ ಅವನೊಡನೆ ಫೊನ್‌ನಲ್ಲಿ ಸಂವಾದಿಸುವಾಗ, ಸರ್, ನಾನೊಂದು ಒಳ್ಳೆಯ ಪುಸ್ತಕ ಓದಿದೆ, ತಾವು ನೋಡಿದ್ದೀರಾ?' ಎಂದು ಕೇಳಿದ. ಆ ಪುಸ್ತಕ ಎಚ್.ವಾಯ್.ಶಾರದಾಪ್ರಸಾದ ಸಂಪಾದಿಸಿದ 'ಮೊಮ್ಮಕ್ಕಳು ಹೇಳಿದ ಅಜ್ಜೀ ಕಥೆ'. ಅವನನ್ನು ಕಂಡು ಪುಸ್ತಕವನ್ನು ಪಡೆದೆ. ಅಕ್ಷರ ಪ್ರಕಾಶನದವರು 1994ರಲ್ಲಿ ಪ್ರಕಟಿಸಿದ ಚಿಕ್ಕ ಪುಸ್ತಕವದು.

ಎಚ್.ವಾಯ್. ಶಾರದಾಪ್ರಸಾದರ ಹೆಸರು ಕನ್ನಡಿಗರಿಗೆ, ಭಾರತೀಯರಿಗೆ ಚಿರಪರಿಚಿತ. ಅವರು ಭಾರತದ ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿ, ರಾಜೀವ ಗಾಂಧಿ, ನಂತರ ವಾಜಪೆಯಿ ಇವರುಗಳ ಮಾಧ್ಯಮ ಸಲಹೆಗಾರರಾಗಿದ್ದರು. ಅವರ ಭಾಷಣಗಳನ್ನು ತಯಾರಿಸಿ ಕೊಡುತ್ತಿದ್ದರು. ಸಾಹಿತ್ಯದಲ್ಲೂ ಅವರಿಗೆ ಒಲವು ಇತ್ತು. ಕಾರಂತರ ಕೆಲವು ಕಾದಂಬರಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದರು. ನಾಡಿನ ಹಿರಿಯ ಪತ್ರಕರ್ತರೆಂಬ ಹೆಸರು ಪಡೆದಿದ್ದರು. ಲಾಲ ಬಹಾದುರ ಶಾಸ್ತ್ರಿಗಳ ತರಹದ ಪ್ರಾಮಾಣಿಕ ವ್ಯಕ್ತಿ ಅವರು. ಅತ್ಯಂತ ಪ್ರಭಾವಶಾಲಿ ಹುದ್ದೆಯಲ್ಲಿದ್ದೂ ತಮಗಾಗಿ ದೆಹಲಿಯಲ್ಲಿ ಒಂದು ಸೈಟು, ಇಲ್ಲವೆ ಆಸ್ತಿ ಪಡೆದಿರಲಿಲ್ಲ. ಅವರು ಸಂಪಾದಿಸಿದ್ದು ಒಳ್ಳೆಯ ಹೆಸರು ಮಾತ್ರ.

ಎಂಟು ಜನ ಮೊಮ್ಮಕ್ಕಳು ನೂರರ ಅಂಚಿಗೆ ಬಂದು ಸ್ವರ್ಗಸ್ಥರಾದ ಅಜ್ಜಿಯ ನೆನಪು ಮಾಡಿಕೊಂಡು ಬರೆದ ಪುಸ್ತಕ ಎನ್ನುವ ಸಂಗತಿಯೇ ಒಂದು ರೋಮಾಚನಕಾರಿ ಭಾವನೆಯನ್ನು ಹುಟ್ಟಿಸುವಂಥಹದು. ಈ ಅಜ್ಜಿ ಸಾಮಾನ್ಯ ಅಜ್ಜಿಯಲ್ಲ. ಹಳೆಯ ಸಂಪ್ರದಾಯದ ಪ್ರತಿನಿಧಿ, ಮಡಿ-ಮೈಲಿಗೆಯ ಅಪರಾವತಾರ. ಅವಳ ಹಟಮಾರಿತನ, ಛಲ, ಧೈರ್ಯ, ಸಾಹಸ, ಜಗಳಗಂಟಿತನ, ಕಲಾವಂತಿಕೆ ಮುಂತಾದ ಹತ್ತಾರು ಮುಖಗಳನ್ನು ಈ ಕಿರು ಹೊತ್ತಿಗೆಯಲ್ಲಿ ಎಂಟು ಜನ ಮೊಮ್ಮಕ್ಕಳು ಚಿತ್ರಿಸಿದ್ದಾರೆ. ಇಂಥ ಬರವಣಿಗೆಯನ್ನು ವ್ಯಕ್ತಿಚಿತ್ರವೆನ್ನಬೇಕೋ, ಸಾಮಾಜಿಕ ಇತಿಹಾಸವೆನ್ನಬೇಕೋ, ಲಲಿತ ಪ್ರಬಂಧವೆನ್ನಬೇಕೋ ಎಂಬುದು ಪ್ರಕಾಶಕರಿಗೆ ಸ್ಪಷ್ಟವಾಗಿಲ್ಲ. ಆದರೆ ಇವೆಲ್ಲವುಗಳನ್ನು ಒಳಗೊಂಡ ವಿಶೇಷ ಸಾಹಿತ್ಯ ಇಲ್ಲಿ ನಿರ್ಮಿತವಾಗಿದೆ ಎನ್ನಬಹುದು. ಕನ್ನಡದಲ್ಲಿ ಅಷ್ಟೇ ಏಕೆ ಭಾರತೀಯ ಭಾಷೆಗಳಲ್ಲಿಯೂ ಇದು ಅನನ್ಯ ಪ್ರಯೋಗವೆಂದೇ ಹೇಳಬೇಕು. ಇಲ್ಲಿರುವ ಅಜ್ಜಿಗಳಂತಹ ವ್ಯಕ್ತಿಗಳಿಗೆ ಕೊರತೆಯಿಲ್ಲ, ಅಂಥವರ ಬಗ್ಗೆ ಬರೆಯುವ ಮೊಮ್ಮಕ್ಕಳ ಕೊರತೆ ಮಾತ್ರ ಇದೆ.

ಶಾರದಾಪ್ರಸಾದರು ಮೊದಲು ಒಂದು ಪ್ರಬಂಧವನ್ನು ಬರೆದು, ಅದನ್ನು ಇತರ ಮೊಮ್ಮಕ್ಕಳಿಗೆ ಕಳಿಸಿ, ಅವರಿಗೂ ಬರೆಯಲು ಆಹ್ವಾನಿಸುತ್ತಾರೆ. ಇವರದು ದೀರ್ಘವಾದ ಪ್ರಬಂಧ. "ನಮ್ಮಜ್ಜಿ . . ಆಗಾಗ ದೇವರ ಪೂಜೆಯ ದ್ರಾಕ್ಷೆಯನ್ನೋ, ಕಲ್ಲುಸಕ್ಕರೆಯ ತುಂಡನ್ನೋ, ಸಾಯಂಕಾಲ ಬೆಲ್ಲ ಕೊಬ್ಬರಿಗಳ ಚೂರನ್ನೊ ಕೊಟ್ಟದ್ದುಂಟು. ಕಾಗೆಗುಬ್ಬಮ್ಮನ ಕತೆಗಿಂತ ಪುರಾಣದ ಕತೆ ಹೇಳಿದ್ದೇ ಹೆಚ್ಚು. ಕತೆಗಿಂತ ಹೆಚ್ಚಾಗಿ ಹಾಡು ಹೇಳಿಕೊಟ್ಟಂದ್ದುಂಟು. ಆದರೆ ಚಿಕ್ಕಂದಿನಲ್ಲಿ ಯಾರನ್ನೂ ಮುದ್ದಿಸಿಲ್ಲ. ತಮ್ಮ ಹಾಸಿಗೆಯಲ್ಲಿ ಕೂಡಿಸಿಕೊಂಡಿದ್ದಿಲ್ಲ. ಎಷ್ಟೋ ಮನೆಯಲ್ಲಿ ಅಜ್ಜಿ ಏಕವಚನದವರಾದರೆ ನಮ್ಮಜ್ಜಿ ಬಹುವಚನದವರು. ನವಿರಾದ ವ್ಯಕ್ತಿಯಲ್ಲ. ಹಟಮಾರಿ, ಛಲಗಾತಿ, ಜಗಳಗಂಟಿ, ಮಾತಿನಲ್ಲಿ ಹುಳುಕಿ ಹಿಡಿಯುವದರಲ್ಲಿ ಎತ್ತಿದ ಕೈ." ಎನ್ನುತ್ತಾರೆ. ಇವರ ಅಜ್ಜಿ ಮಡಿ ಹೆಂಗಸು. ಕೆಂಪುವಸ್ತ್ರ ಧರಿಸಿದವರು. ತಮ್ಮದೇ ಕೋಣೆಯಲ್ಲಿ ಪಟ, ವಿಗ್ರಹ, ಸಾಲಿಗ್ರಾಮ ಪೂಜಿಸುವವರು. ತಮ್ಮದೇ ಇದ್ದಲು ಅಗ್ಗಿಷ್ಟಿಗೆಯಲ್ಲಿ ಹುಗ್ಗಿ ಗೊಜ್ಜನ್ನು, ಗೊಡ್ಡಸಾರನ್ನು ಮಾಡಿಕೊಳ್ಳುವವರು. ಒಂದೇ ಹೊತ್ತು ಊಟಮಾಡುವವರು. ರಾತ್ರಿ ಮೊಸರವಲಕ್ಕಿ ಇಲ್ಲವೆ ಬೇರೆ ಫರಾಳ ತಿನ್ನುವವರು. ಹೀಗೆ ಚಿತ್ರವತ್ತಾಗಿ ವಿವರ ಕೊಡುತ್ತಾರೆ. ಅಜ್ಜಿಯ ಜಗಳದ ಬಗ್ಗೆ ಬರೆಯುತ್ತಾರೆ. ಯಾವದೋ ಮಾತಿನಿಂದ, ಯಾರದೋ ನಡತೆಯಿಂದ, ತಮ್ಮ ಆತ್ಮಾಭಿಮಾನಕ್ಕೆ ಚ್ಯುತಿಯಾಯಿತೆಂದು ಭಾವಿಸಿ ಜಗಳಾಡುವದು. ಇವರ ತಾಯಿಯ ಮದುವೆಯ ದಿನದಿಂದ ಹಿಡಿದು ಅಂದಿನವರೆಗೆ ತಮಗಾದ ಅನ್ಯಾಯಗಳ ಪಟ್ಟಿಮಾಡುತ್ತಿದ್ದರಂತೆ. ಕೆಲಸಲ ಊರೇ ಬಿಟ್ಟು ಹೋಗುತ್ತಿದ್ದರಂತೆ. ಯಾವುದೋ ಬಾಡಿಗೆ ಮನೆಯಲ್ಲಿ ತಿಂಗಳುಗಟ್ಟಲೆ ಇದ್ದುಬಿಡುತ್ತಿದ್ದರಂತೆ. ಅಲ್ಲಿಂದ ಕಾರ್ಡು ಬರೆಸಿ ಮನಿ ಆರ್ಡರ ತರಿಸುತ್ತಿದ್ದರಂತೆ. ಇವರ ತಾಯಿಯ ಬಲವಂತಕ್ಕೆ ಇವರ ತಂದೆ ಹೋಗಿ ಅಜ್ಜಿಯನ್ನು ಕರೆದುಕೊಂಡು ಬರುತ್ತಿದ್ದರಂತೆ. ಅಜ್ಜಿಗೆ ಆರು ವರ್ಷಕ್ಕೆ ಮದುವೆ ಆಗಿತ್ತು. ಅಜ್ಜ ನಾರಣಪ್ಪ. ಭೂಮಿ ಇಲ್ಲದ ವೈದಿಕ ಮನೆತನದವರು. ಹನ್ನೆರಡು ವರ್ಷಕ್ಕೆ ಇಂಗ್ಲೀಷು ಕಲಿಯಲು ಹೊಳೆನರಸೀಪುರದಿಂದ ಮೈಸೂರಿಗೆ ಓಡಿಹೋಗಿ, ಬಳಗದವರ ಮನೆಯಲ್ಲಿದ್ದುಕೊಂಡು ಮೆಟ್ರಿಕ್ಯುಲೇಶನ್ ಪಾಸಾಗಿದ್ದರಂತೆ. ಒಳ್ಳೆಯ ಕೆಲಸದಲ್ಲಿದ್ದರು. ಶಾರದಾಪ್ರಸಾದರು ಎರಡು ವರ್ಷದವರಿದ್ದಾಗಲೇ ಅಜ್ಜ ತೀರಿದ್ದರಿಂದ ಅವರ ಮುಖದ ನೆನಪಿಲ್ಲ ಎಂದು ಬರೆಯುತ್ತಾರೆ. ಅಜ್ಜಿ ಇವರಿಗೆ ಶೌರಿ ಎಂದು ಕರೆಯುತ್ತಿದ್ದರಂತೆ. ಅವರಿಗೆ ಮೊಣಕಾಲ ನೋವಿನಿಂದಾಗಿ. ಕುರ್ಚಿಯ ಮೇಲೆ ಕೂತು ಊಟಮಾಡುವ ಪ್ರಸಂಗ ಬಂದಾಗ, "ಎಲೋ ಶೌರಿ, ನಾನೀಗ ಲೇಡಿ ಆಗಿಬಿಟ್ಟಿದ್ದೇನೆ ಕಣೋ" ಎಂದು ಹೇಳಿ ತಮ್ಮ ಹಾಸ್ಯ ಪ್ರಜ್ಞೆ ತೋರಿಸಿದ್ದರಂತೆ. ಅಜ್ಜಿ ಹೇಳಿದ ಅನೇಕ ಕತೆಗಳ ಬಗ್ಗೆ ಬರೆಯುತ್ತಾರೆ. ಅಜ್ಜಿಗೆ ಸಂಗೀತ ಮೊದಲನೆಯ ಚಟವಾದರೆ ವೈದ್ಯ ಎರಡನೆಯ ಚಟವಾಗಿತ್ತಂತೆ. ಯಾವುದೇ ಕಾಯಿಲೆಯಾದರೆ ಸುತ್ತಲಿನವರಿಗೆ ಔಷಧಿ ಕೊಡುತ್ತಿದ್ದರಂತೆ. ರಾಜಣ್ಣ ಎಂಬ ಸಂಬಂಧಿಕ ಅಜ್ಜಿಯನ್ನು ನಿಯಮಿತವಾಗಿ ಕಂಡು ಅವರ ಬಗ್ಗೆ ವಿಚಾರಿಸಿಕೊಂಡು ಹೋಗುತ್ತದ್ದನಂತೆ. ಅವನು ಹತ್ತು ತಿಂಗಳ ಕೂಸಾಗಿದ್ದಾಗ, ಒಂದು ಮದುವೆಗೆ ಹೋಗಿದ್ದರಂತೆ. ಅವನ ತಾಯಿ ಹತ್ತಿರ ಎಲ್ಲಿಯೋ ಹೋದಾಗ ಮಗು ವಿಪರೀತ ಅತ್ತಾಗ ಅಜ್ಜಿ ಅವನಿಗೆ ತಮ್ಮ ಮೊಲೆಹಾಲು ಕುಡಿಸಿ ಸಮಾಧಾನ ಮಾಡಿದ್ದರಂತೆ. ಆ ಹಾಲಿನ ಋಣ ತೀರಿಸಲು ಅವನು ಆಗಾಗ ಬಂದು ಕ್ಷೇಮ ವಿಚಾರಿಸಿಕೊಂಡು ಹೋಗುತ್ತಾನೆ ಎನ್ನುತ್ತಿದ್ದರಂತೆ.

ಅಜ್ಜಿಯ ಆತ್ಮಾಭಿಮಾನದ ಬಗ್ಗೆ ಜಯಮ್ಮ ವೆಂಕಟರಾಮಯ್ಯ ಬರೆಯುತ್ತಾರೆ. ಅಜ್ಜಿಗೆ ಮೊಮ್ಮಕ್ಕಳ ಕೂದಲು ಬಾಚುವುದು ಇಷ್ಟವಾಗಿತ್ತಂತೆ. ಎರಡು ಗಂಟೆ ಅಲ್ಲಾಡದೆ ಕೂಡಬೇಕಾಗುತ್ತಿತ್ತು. ಅಲ್ಲಾಡಿದರೆ ಗುದ್ದು. ಒಂದು ಸಲ ಹಾಕಿದ ಜಡೆ ಎರಡುದಿನ ಬಿಚ್ಚುವಂತಿಲ್ಲ. ಲಕ್ಷ್ಮೀ ರಾಮಣ್ಣ ಅಜ್ಜಿಯ ವಾಚನಾಭಿರುಚಿಯ ಬಗ್ಗೆ ಬರೆಯುತ್ತಾರೆ. ಮುಪ್ಪಿನ ಕಾಲದಲ್ಲಿ ಅವರು ಓದುಬರೆಯಲು ಕಲಿತ ಬಗ್ಗೆ ಬರೆಯುತ್ತಾರೆ. ಅಜ್ಜಿ ತಮ್ಮ 87ನೆಯ ವಯಸ್ಸಿನಲ್ಲಿ ಕನ್ನಡಕ ಹಾಕಿಕೊಂಡು ವಿನೋಬಾ ಭಾವೆಯವರ ಗೀತಾಪ್ರವಚನ ಪುಸ್ತಕ ತಮ್ಮ ತಂಗಿಗೆ ಓದಿಹೇಳುತ್ತಿದ್ದರಂತೆ. ಮೈಸೂರು ಆಕಾಶವಾಣಿಯಲ್ಲಿ ಮೈಸೂರು ಸದಾಶಿವರಾಯರ ಬಗ್ಗೆ ಇದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡಿದ ವಿವರ ಬರೆಯುತ್ತಾರೆ. ತಮ್ಮ ಹಾಡಿನ ರೆಕಾರ್ಡ್ ತಾವೇ ಕೇಳಿದಾಗ ಧ್ವನಿ ಮುದಿಯಾಗಿದೆ ಎಂಬ ಉದ್ಗಾರ ತೆಗೆದಿದ್ದರಂತೆ. ಆಗ ಅವರ ವಯಸ್ಸು 86 ಆಗಿತ್ತು. ಅವರ ಅಗಾಧ ಸ್ಮರಣ ಶಕ್ತಿಯಬಗ್ಗೆ ಬರೆಯುತ್ತಾರೆ. ಉಳಿದವರು ಹಾಡುಗಳನ್ನು ನೋಟ್‌ಬುಕ್‌ನಲ್ಲಿ ಬರೆದುಕೊಳ್ಳುತ್ತಿದ್ದರೆ ಅಜ್ಜಿಗೆ ಬಾಯಿಯೇ ನೋಟ್‌ಬುಕ್ ಆಗಿತ್ತಂತೆ. ಆ ಕಾಲದ ವಿಶ್ವಕೋಶವಿದ್ದಂತೆ ಇದ್ದರು ಎನ್ನುತ್ತಾರೆ. ಅಜ್ಜಿ ರಚಿಸಿದ ಒಂದು ಹಾಡನ್ನು ಉದ್ಧರಿಸುತ್ತಾರೆ. ಶಾಲೆಗೆ ಹೋಗದೇ ಇದ್ದ ಅಜ್ಜಿ ಮುಪ್ಪಿನ ಕಾಲದಲ್ಲಿ ಹಟದಿಂದ ಅಕ್ಷರಾಭ್ಯಸ ಮಾಡಿದವಳು. ಅವಳು ಬರೆದ ಪದ್ಯ ನಿಜವಾಗಿಯೂ ಪ್ರಶಂಸನೀಯವಾಗಿದೆ.
ರಾಗ: ಭೈರವಿ.

ಪೂರ್ಣಮಂಗಳೇ ಕಾಮಾಕ್ಷೀ || ಪಲ್ಲವಿ||

ಭಕ್ತಪಾಲಿನೀ ಭಯವಿದೂರಿನೀ
ಮೃತ್ಯುನಾಶಿನೀ ಮುಕ್ತಿದಾಯಕೀ || ಅನು||
1)
ನಿನ್ನ ನಂಬಿದೆ ನನ್ನ ಪಾಲಿಸು |
ಕನ್ನೆ ಶಿರೋಮಣೀ ಕಾಮಹರಪ್ರಿಯೇ |
ಸನ್ನುತಾಂಗಿ ಸುಗುಣರೂಪೇ |
ಪನ್ನಗವೇಣಿ ಪಾರಿಜಾತ ಪ್ರಿಯೇ || ಪೂರ್ಣ||
2)
ತ್ರಿಜಗೋದ್ಧಾರಿನೀ ತ್ರಿನೇತ್ರಿನೀ |
ಅಜವಂದಿತೇ ಆದಿ ಪಾರ್ವತೀ |
ಭುಜಗಭೂಷಣನರಸಿ ಸುಂದರೀ |
ಭಜಿಪೆ ನಿನ್ನನು ಭರದಿ ಪಾಲಿಸು ||ಪೂರ್ಣ||
3)
ಶ್ರಮಪರಿಹಾರಿನೀ ತ್ರಿಕುಟವಾಸಿನೀ |
ಕಮಲದಳಾಕ್ಷಿ ನೀ ಕಾತ್ಯಾಯಿನೀ |
ಭ್ರಮರಕುಂತಳೇ ಭಾಸುರತೇಜಳೇ |
ವಿಮಲಚರಿತೇ ವೀಣಾಗಾನ ಪ್ರಿಯೇ || ಪೂರ್ಣ||

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+