• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಮೂಲವ್ಯಾಧಿ'ಗೆ ಯೋಗ ಮತ್ತು ನಿಸರ್ಗ ಚಿಕಿತ್ಸೆ(ಭಾಗ 1)

By ಡಾ.ಜೀವಿ ಕುಲಕರ್ಣಿ, ಮುಂಬೈ
|

ಎರಡು ಮೂಲವ್ಯಾಧಿ ಪೀಡಿತರ ಉದಾಹರಣೆಯನ್ನು ಇಲ್ಲಿ ಕೊಡುತ್ತೇನೆ. ಅವರು ಕಂಡುಕೊಂಡ ಪರಿಹಾರದ ಮಾರ್ಗ, ಅನೇಕರಿಗೆ ದಾರಿದೀಪವಾಗಬಹುದು.

ಮಲಬದ್ಧತೆಯಿಂದಾಗುವ ಹಲವಾರು ದುಷ್ಪರಿಣಾಮಗಳಲ್ಲಿ ಮೂಲವ್ಯಾಧಿಯು ಪ್ರಮುಖವಾದುದು. ಮೂಲವ್ಯಾಧಿ ಪಾಶ್ಚಾತ್ಯ ದೇಶಗಳಲ್ಲಿ ಬಹಳ ಸಾಮಾನ್ಯ ಎಂದು ಹೇಳಲಾಗುತ್ತದೆ. 'ಮೂಲವ್ಯಾಧಿ ಇದು ರೋಗವಲ್ಲ, ರೋಗಲಕ್ಷಣ.'ಎನ್ನುತ್ತಾರೆ ನಿಸರ್ಗತಜ್ಞ ಡಾ.ವಿಠ್ಠಲದಾಸ ಮೋದಿ.

ಯಾವುದೇ ಉಪದ್ರವಿ ಗಿಡವನ್ನು ನೆಲದಿಂದ ಕಿತ್ತುಹಾಕಬೇಕಾದರೆ ಅದರ ಟೊಂಗೆಯನ್ನು, ಎಲೆಗಳನ್ನು ಕತ್ತರಿಸುವುದರಿಂದ ಸಾಧ್ಯವಾಗುವುದಿಲ್ಲ, ಅದು ಮತ್ತೆ ಬೆಳೆಯುತ್ತದೆ. 'ಮೂಲವ್ಯಾಧಿಗೆ ಔಷಧಿಯಾಗಲಿ, ಶಸ್ತ್ರಚಿಕಿತ್ಸೆಯಾಗಲೀ ಉಪಾಯವಲ್ಲ, ಅದರ ಮೂಲ ಕಾರಣವಾದ ಮಲಬದ್ಧತೆಯನ್ನು ಮೂಲದಿಂದ ತೆಗೆದುಹಾಕಬೇಕು, ನಿವಾರಿಸಬೇಕು" ಎಂಬುದು ನಿಸರ್ಗತಜ್ಞರ ಅಭಿಮತ. ಅಲೋಪತಿ ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆ ಪರಿಹಾರ ಎನ್ನಲಾಗುತ್ತದೆ. ಆದರೆ ಶಸ್ತ್ರಚಿಕಿತ್ಸೆಯ ಬಳಿಕ ರೋಗ ಪೂರ್ತಿಯಾಗಿ ಗುಣವಾಗುವುದಿಲ್ಲ. ಮತ್ತೆ ಅದು ತಲೆಯೆತ್ತುತ್ತದೆ.

ಯೋಗಾಚಾರ್ಯರೂ ಆಯುರ್ವೇದ ತಜ್ಞರೂ ಶತಾಯುಗಳೂ ಆಗಿದ್ದ ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರಸ್ವಾಮಿಗಳು ಮೂಲವ್ಯಾಧಿಯ ಬಗ್ಗೆ ತಮ್ಮ 'ಸ್ವಯಂವೈದ್ಯ" ಗ್ರಂಥದಲ್ಲಿ ಹೀಗೆ ಬರೆಯುತ್ತಾರೆ:

“ಮೂಲವ್ಯಾಧಿಗೆ ಸಂಸ್ಕೃತದಲ್ಲಿ ಅರ್ಶವೆಂಬ ಹೆಸರಿದೆ. ಮೂಲ ಎಂದರೆ ಶರೀರದ ಮೂಲ, ಗುದದ್ವಾರ ಎಂದರ್ಥ. ಗುದದ್ವಾರದಲ್ಲಿ ಮೊಳೆಗಳು ಸಂಭವಿಸಿ ಮಲವಿಸರ್ಜನೆಯ ವೇಳೆಗೆ ರಕ್ತಸ್ರಾವವಾಗುತ್ತದೆ. ಗುದದ್ವಾರದ ಬಾವು, ಉರಿ, ನೋವು, (ತುರಿಕೆ) ಈ ರೋಗದ ಮುಖ್ಯ ಲಕ್ಷಣ. ... ಶರೀರದ ದೊಡ್ಡ ಕರುಳಿನ ಕೊನೆಯ ನಾಲ್ಕು ಇಂಚು ಭಾಗವೇ ಗುದವೆಂದು ಪರಿಗಣಿಸಲಾಗುತ್ತದೆ. ಶಂಖದೊಳಗಿನ ನಾಭಿಯ ತೆರದಂತೆ ನಾಲ್ಕು ಅಂಗುಲದಲ್ಲಿ ಮೂರು ಚಕ್ರಗಳಿರುತ್ತವೆ. ಮೊದಲನೆಯದು 'ಪ್ರವಾಹಿನೀ", ಎರಡನೆಯದು 'ವಿಸರ್ಜಿನೀ", ಮೂರನೆಯದು 'ಸಂವರಣಿ".

ಪ್ರವಾಹಿನಿ ಚಕ್ರ ಮಲವನ್ನು ಹೊರಗೆ ತಳ್ಳುತ್ತದೆ, ವಿಸರ್ಜಿನಿ ಚಕ್ರ ಮಲವನ್ನು ಹೊರಗೆ ಹಾಕುತ್ತದೆ. ಸಂವರಣಿ ಚಕ್ರ ಮಲವು ಹೋದ ನಂತರ ಗುದದ್ವಾರವನ್ನು ಮುಚ್ಚುತ್ತದೆ. ವಾತ ಪಿತ್ತ ಕಫಗಳನ್ನು ಉದ್ರೇಕಗೊಳಿಸುವ ಆಹಾರದ ಸೇವನೆಯಿಂದ ಮೂರು ಚಕ್ರಗಳಲ್ಲಿಯ ಸ್ಥಾನದೊಳಗಿನ ಮಾಂಸ, ಮೇದೋರಕ್ತವನ್ನು ಕೆಡಿಸಿ ಗುದಪ್ರದೇಶದಲ್ಲಿಯ ಮಾಸಪೇಶಿಗಳು ಮೊಳೆಯ ಆಕಾರ ಪಡೆಯುತ್ತವೆ. (ಮಲವಿಸರ್ಜನೆಯ ಕಾಲಕ್ಕೆ ರಕ್ತಸ್ರಾವವುಂಟಾಗುತ್ತದೆ.)

ಈ ವ್ಯಾಧಿಯು ವಂಶಪಾರಂಪರ್ಯವಾಗಿಯೂ ಬರುತ್ತದೆ, ಕೆಲಸಲ ಮಧ್ಯದಲ್ಲಿ ಸೇರಿಕೊಳ್ಳುತ್ತದೆ. ಈ ರೋಗವು ಅತಿಯಾದ ಕುದುರೆ ಸವಾರಿ, ಸೈಕಲ್ ಸವಾರಿ ಮಾಡುವುದರಿಂದ, ಒಂದೇ ಜಾಗೆಯಲ್ಲಿ ಕುಳಿತು ಬಹಳ ಸಮಯ ಕೆಲಸ ಮಾಡುವುದರಿಂದ, ಮಲವಿಸರ್ಜನೆಯ ಸಮಯಕ್ಕೆ ಮಾಡುವ ತಿಣಕುವ ಕ್ರಿಯೆಯಿಂದ, ಅತಿ ಉಷ್ಣ ಪದಾರ್ಥ ಸೇವಿಸುವುದರಿಂದ, ಕಾಫಿ,ಚಹ, ಬೀಡಿ, ಸಿಗಾರೆಟ ಸೇವನೆಯಿಂದ, ವೀರ್ಯನಾಶದಿಂದ, ಗರ್ಭಪಾತದಿಂದ ಕೂಡ ಕಾಣಿಸಿಕೊಳ್ಳುತ್ತದೆ. ಪರರ ಏಳ್ಗೆ ಕಂಡು ಈರ್ಷೆಪಡುವದರಿಂದಲೂ ಈ ರೋಗ ಉಂಟಾಗುತ್ತದೆ. ಆದ್ದರಿಂದ ಈ ಜಾಡ್ಯವನ್ನು ಆಯುರ್ವೇದವು ಕರ್ಮಜಾಡ್ಯವೆಂದೇ ಭಾವಿಸಿದೆ."

ಮಲ್ಲಾಡಿಹಳ್ಳಿ ಸ್ವಾಮಿಗಳು ಮೂಲವ್ಯಾಧಿಗೆ ನೂರೈವತ್ತಕ್ಕಿಂತ ಹೆಚ್ಚು ಉಪಚಾರಗಳ ಬಗ್ಗೆ, ಗಿಡಮೂಲಿಕೆ ಸೇವನೆಯ ಬಗ್ಗೆ ಬರೆದಿದ್ದಾರೆ. ಅವರು ಸೂಚಿಸಿದ ಕೆಲವು ಪರಿಹಾರಗಳು ಬಹಳ ಸುಲಭವಾಗಿವೆ.

1. ಎರಡು ತೊಲೆಯಷ್ಟು ಬಿಲ್ವಪತ್ರದ ರಸವನ್ನು ನಿತ್ಯ ಸೇವಿಸುವುದು

2. ಪ್ರತಿದಿನ ಬೆಳಗ್ಗೆ ಎರಡೂವರೆ ತೊಲೆಯಷ್ಟು ಮೂಲಂಗಿ ರಸವನ್ನು ಮಜ್ಜಿಗೆಯಲ್ಲಿ ಸೇರಿಸಿ ಕುಡಿಯುವುದು. ರಕ್ತಸ್ರಾವ ಬರಿಸುವ ಮೊಳಕೆಗಳ ನಿವಾರಣೆಗೆ ಡೋಣಿ ಸ್ನಾನ (ಟಬ್-ಬಾಥ್), ಖರ್ಜೂರದ ಬೀಜಗಳನ್ನು ಕುಟ್ಟಿ ಒಣಗಿಸಿ ಕೆಂಡದ ಮೇಲೆಹಾಕಿ ಅದರ ಹೊಗೆಯನ್ನು ಮೂಲವ್ಯಾಧಿಯ ಮೊಳಕೆಗಳಿಗೆ ತಾಗುವಂತೆ ಮಾಡುವ ಉಪಾಯವನ್ನೂ ಸೂಚಿಸಿದ್ದಾರೆ.

ಎರಡು ಮೂಲವ್ಯಾಧಿ ಪೀಡಿತರ ಉದಾಹರಣೆಯನ್ನು ಇಲ್ಲಿ ಕೊಡುತ್ತೇನೆ. ಅವರು ಕಂಡುಕೊಂಡ ಪರಿಹಾರದ ಮಾರ್ಗ ಅನೇಕರಿಗೆ ಅನುಸರಿಸಲು ಸಹಾಯಕಾರಿ ಆಗಬಹುದು.

ಮಿಸೆಸ್ ಮಿನಿ ಪ್ರಿನ್ಸ್ ಎಂಬ ಟೀಚರರ ಸ್ವಾನುಭವ ಕಥನ :

90ರ ದಶಕದಲ್ಲಿ ನಾನು ಯೋಗಾಭ್ಯಾಸದಿಂದ ವಿಶೇಷ ಲಾಭವನ್ನು ಪಡೆದಾಗ 'ಗುಡ್ಬಾಯ್ ಡಾಕ್ಟರ್" ಎಂಬ ತ್ರೈಮಾಸಿಕ ಪತ್ರಿಕೆಯನ್ನು ಸಂಪಾದಿಸುತ್ತಿದ್ದೆ. ಮುಂಬಯಿಯ ಪ್ರಸಿದ್ಧ ಹಠಯೋಗಿ ನಿಕಂ ಗುರೂಜಿಯವರ ಅಂಬಿಕಾ ಯೋಗ ಕುಟೀರದ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತಿದ್ದೆ. ಒಂದು ಯೋಗಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಿಸೆಸ್ ಮಿನಿ ಪ್ರಿನ್ಸ್ ಎಂಬ ಶಾಲಾಶಿಕ್ಷಕಿ ತನ್ನ ಅನುಭವಕಥನ ಹೇಳಿದಳು. ಯೋಗಾಭ್ಯಾಸದ ಮಹತಿಯನ್ನು ತಿಳಿದು ನಮಗೆಲ್ಲ ಆಶ್ಚರ್ಯ ಹಾಗೂ ಆನಂದ ಏಕಕಾಲಕ್ಕೆ ಆಗಿದ್ದವು.

ಸಭೆ ಮುಗಿದ ಮೇಲೆ ನಾನು ಅವಳನ್ನು ಕಂಡು ತನ್ನ ಅನುಭವ ಕಥನವನ್ನು ಬರೆದುಕೊಡಲು ವಿನಂತಿಸಿದೆ. ಅದನ್ನು ನಾನು ಪ್ರಕಟಿಸುತ್ತಿದ್ದ 'ಗುಡ್ಬಾಯ್ ಡಾಕ್ಟರ್" ಎರಡನೆಯ ಸಂಚಿಕೆಯಲ್ಲಿ ಪ್ರಕಟಿಸಿದೆ.(ಅಗಸ್ಟ್-ನವೆಂಬರ್ ೧೯೯೩). ಅವಳು ಮೂಲವ್ಯಾಧಿಯಿಂದ ಬಳಲುತ್ತಿದ್ದಳು. ಶಸ್ತ್ರಚಿಕಿತ್ಸೆ ನಿಶ್ಚಿತಪಡಿಸಲಾಗಿತ್ತು. ಮಗಳ ಪರೀಕ್ಷೆಯಿಂದಾಗಿ ಕೆಲತಿಂಗಳು ಮುಂದೆಹಾಕಲಾಗಿತ್ತು. ಆಗ ಅವಳು ಅಂಬಿಕಾಯೋಗ ಕುಟೀರ ನಡೆಸುತ್ತಿದ್ದ ಬೊರಿವಲಿ ಶಾಖೆಯಲ್ಲಿ ಮೂರು ತಿಂಗಳ ಕೋರ್ಸಿಗೆ ನೆರೆಮನೆಯ ಸ್ನೇಹಿತೆಯ ಅಗ್ರಹದ ಮೇರೆಗೆ ಸೇರಿದ್ದಳು. ಅವಳಿಗೆ ಮೂಲವ್ಯಾಧಿಯಿಂದ ಮುಕ್ತಿ ದೊರೆತಿತ್ತು, ಡಾಕ್ಟರರೇ ಇನ್ನೊಮ್ಮೆ ಪರೀಕ್ಷಿಸಿದಾಗ ಅಚ್ಚರಿಗೊಂಡರು ಅಷ್ಟೇ ಅಲ್ಲ ಯೋಗದಲ್ಲಿ ಆಸಕ್ತರಾದರು.

ಮಿಸೆಸ್ ಮಿನಿ ಪ್ರಿನ್ಸ್ ಕೇರಳದವಳು. ಸ್ಥಳೀಯ ಕಾನ್ವೆಂಟ ಶಾಲೆಯ ಶಿಕ್ಷಕಿ. ನಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಅನುಭವ ಕಥನ ಇಂತಿದೆ :

“I had been suffering from Piles for a period of ten years and doctors advised me to get operated as that was the only remedy. As I wanted to avoid surgery, I tried all kinds of medicines- the allopathic, the homeopathic and ayurvedic. With the passage of time the piles developed into pustule. I had to face a number of problems in my life. Finally I decided to see a surgeon and the date for surgical treatment was fixed. It was July 1991. As a teacher of the tenth standard I could not afford to take leave for the post-operation treatment. Moreover my daughter was preparing for the HSC Board examination. I postponed the treatment (operation) till the Diwali holidays. In the mean time I was inspired by my neighbours who had joined Yoga classes for women. Ambika Yoaga Kutira had a branch in Borivali and I took the advantage of these classes. Every Saturday we had classes from 4 PM to 6 PM. The course of Shuddhi-kriyas and Asanas and specially the Ganesh Dhauti' (taught my teachers) helped me. By the end of three months I found much relief and postponed my operation till May holidays. I continued Yoga and when I met my surgeon in the month of May 1992, I was surprised to see the miracle of healing. Without taking any medicine I got rid of Piles. So I am recommending to one and all, old and young. I am grateful to the organizers of Ambika Yoga Kutir for their free and selfless service.''(- Mrs.Mini Prince, Bombay)

ಇನ್ನೊಂದು ರೋಚಕವಾದ ಅನುಭವಕಥನ, ಇನ್ನೊಬ್ಬ ಮಹಿಳೆಯದು (ನನ್ನ ಅರ್ಧಾಂಗಿಯದು), ಕೇವಲ ನಿಸರ್ಗ ಚಿಕಿತ್ಸೆಯಿಂದ ಗುಣವಾದ ಉದಾಹರಣೆ. ಆದರ ಬಗ್ಗೆ ಮುಂದಿನ ಕಂತಿನಲ್ಲಿ ಬರೆಯುವೆ.

English summary
Common Diseases and Nature Treatment (for Piles) by Dr.G.V.Kulakarni, Oneindia Kannada Columnist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X