ಹಿಂದೀ ದಿವಸ ಆಚರಣೆ ಪ್ರಜಾಪ್ರಭುತ್ವದ ವಿಡಂಬನೆ
ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆ ಹಿಂದೀ ಎಂದು ಬರೆಯುವಾಗ 'ಇದು ಬರೀ ಕೇಂದ್ರಸರ್ಕಾರದ ಕಛೇರಿಗಳಿಗೆ ಮಾತ್ರಾ ಸೀಮಿತ ಎಂದು ಮರುಳು ಮಾಡಿ, ಇದೀಗ ಕನ್ನಡನಾಡಿನ ಹಳ್ಳಿಹಳ್ಳಿಗಳ ಶಾಲೆಗಳ ಮಕ್ಕಳಿಗೂ ಏಕೆ ಹಿಂದೀ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ? ಏಕೆ ನಮ್ಮೂರುಗಳ ಬ್ಯಾಂಕಿನಲ್ಲಿ, ರೈಲ್ವೇಯಲ್ಲಿ ಕೆಲಸ ಸಿಗಬೇಕೆಂದರೂ ಹಿಂದೀ ಗೊತ್ತಿರಬೇಕಾದ್ದು ಕಡ್ಡಾಯವೆಂದು ಮಾಡಲಾಗಿದೆ? ತ್ರಿಭಾಷಾಸೂತ್ರ ಎಂದು ಸ್ಥಳೀಯ ಭಾಷೆಯನ್ನೂ ಬಳಸಲು ಅಡ್ಡಿಯಿಲ್ಲ ಎನ್ನುವ ಉದಾರತೆಯನ್ನು ತೋರಿಸುವ ದೊಡ್ಡಸ್ತಿಕೆ ಏಕೆ? ನಮ್ಮ ನಾಡಿನಲ್ಲಿ ನಮ್ಮ ಭಾಷೆಯಲ್ಲಿ ನಾವು ಸೇವೆ ಕೇಳುವುದು, ನಮ್ಮೂರ ವ್ಯವಸ್ಥೆಗಳನ್ನು ಹೊಂದುವುದು ನಮ್ಮ ಹಕ್ಕಲ್ಲವೇ? ಹಾಗೆ ಸೇವೆ ನೀಡುವುದು, ವ್ಯವಸ್ಥೆ ರೂಪಿಸುವುದು ಸರ್ಕಾರದ ಹೊಣೆಯಲ್ಲವೇ? ಇಷ್ಟಕ್ಕೂ ತ್ರಿಭಾಷಾಸೂತ್ರದ ಜಾರಿ ಎಲ್ಲಾ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಎಲ್ಲಾಗಿದೆ? ವಾಸ್ತವವಾಗಿ ಈ ತ್ರಿಭಾಷಾಸೂತ್ರವನ್ನು ಜಾರಿಗೊಳಿಸಿರುವುದೂ ಕೂಡಾ ಹಿಂದೀ ಭಾಷೆಗೆ ಜಾಗ ಮಾಡಿಕೊಡಲು ಮಾತ್ರವೇ ಆಗಿದೆ.
ಒಂದು ಭಾಷೆಯ ಜನರಿಗೆ ಮಾತ್ರ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಕೇಂದ್ರ ಸರ್ಕಾರವು ಹೊಂದಿರುವುದನ್ನು ಕಣ್ಣೆದುರು ಕಾಣುವಾಗ, ಇಂತಹ ತಾರತಮ್ಯಕ್ಕೆ ಭಾರತ ಅನುಸರಿಸುತ್ತಿರುವ ಭಾಷಾನೀತಿಯೇ ಕಾರಣವಾಗಿರುವಾಗ ಅಂತಹ ನೀತಿಗೆ ಕೊನೆಹಾಡಬೇಕಾದ, ಸಮಾನತೆ-ಸಮಾನ ಸೌಕರ್ಯದ (ಅಥವಾ ಸಮಾನ ತೊಡಕಿನ)-ಸಮಾನ ಗೌರವದ ಭಾಷಾನೀತಿಯನ್ನು ರೂಪಿಸಿ, ಜಾರಿಗೊಳಿಸುವ ಪ್ರಜಾತಾಂತ್ರಿಕ ಪ್ರಕ್ರಿಯೆಯೊಂದು ತುರ್ತಾಗಿ ಆರಂಭ ಆಗಬೇಕಾಗಿದೆಯಲ್ಲವೇ? ಆಡಳಿತ ಭಾಷೆ ಎನ್ನುವುದು ಬರಿಯ ಭಾಷೆಗೆ ಮಾತ್ರಾ ಸೀಮಿತವಾಗಿಲ್ಲದೆ ಇಡೀ ಒಕ್ಕೂಟ ವ್ಯವಸ್ಥೆಯ ಕನ್ನಡಿಯಾಗಿದೆ. ಎಲ್ಲ ಭಾಷೆಗಳ ಜನರೂ, ಎಲ್ಲ ಪ್ರದೇಶಗಳ ಜನರೂ ಸಮಾನ ಅವಕಾಶ ಮತ್ತು ಗೌರವ ಹೊಂದಲು ಇಂದಿನ ಭಾರತದ ಭಾಷಾನೀತಿಯು ಮಾರಕವಾಗಿದೆ. ಉಳಿದ ಭಾಷೆಗಳ ಅಳಿಯುವಿಕೆಗೆ ಕಾರಣವಾಗಿರುವ, ಆಡಳಿತ ಭಾಷೆ ಎನ್ನುವ ಪಟ್ಟ ದಕ್ಕಿಸಿಕೊಂಡದ್ದಕ್ಕಾಗಿ ವಿಜಯೋತ್ಸವವಾಗಿ ಹಿಂದೀ ದಿವಸವನ್ನು ಆಚರಿಸುವುದು, ಪ್ರಜಾಪ್ರಭುತ್ವದ ವಿಡಂಬನೆಯಾಗಿದ್ದು ಭಾರತ ಒಕ್ಕೂಟಕ್ಕಂಟಿದ ಕಪ್ಪುಮಸಿಯಾಗಿದೆ.
ಭಾರತದ ಒಗ್ಗಟ್ಟಿಗೆ ಸಾಧನ ಒಂದು ಭಾಷೆಯನ್ನು ಎಲ್ಲರಿಗೂ ಕಲಿಸುವುದಲ್ಲ. ಬದಲಿಗೆ ಎಲ್ಲಾ ಭಾಷೆಗಳಿಗೂ ಅವುಗಳ ನೆಲದಲ್ಲಿ ಸಾರ್ವಭೌಮತ್ವ ಹೊಂದಿರಲು ಬಿಡುವುದೇ ಆಗಿದೆ. ಇದಕ್ಕೆ ಪರಿಹಾರ ಸರಿಯಾದ ಭಾಷಾನೀತಿಯನ್ನು ರೂಪಿಸುವುದೊಂದೇ ಆಗಿದೆ. ವಿಶ್ವಸಂಸ್ಥೆಯು ಬಾರ್ಸಿಲೋನಾ ಭಾಷಾ ಹಕ್ಕುಗಳ ಮೂಲಕ ಘೋಷಿಸಿರುವ ಎಲ್ಲಾ ಹಕ್ಕುಗಳೂ ಭಾರತದ ಎಲ್ಲಾ ಭಾಷಿಕ ಜನಾಂಗಗಳಿಗೆ ಸಿಗಬೇಕೆಂದರೆ ಇಂದಿನ ಭಾಷಾನೀತಿಯನ್ನು ಕೈಬಿಡಬೇಕಾಗಿದೆ. ಭಾರತದ ಎಂಟನೇ ಪರಿಚ್ಛೇಧದ ಎಲ್ಲಾ ಭಾಷೆಗಳೂ ರಾಷ್ಟ್ರಭಾಷೆಗಳೆಂದು ಘೋಷಣೆಯಾಗಬೇಕು. ಆಯಾ ರಾಜ್ಯಗಳ ಆಡಳಿತ ಆಯಾ ರಾಜ್ಯಭಾಷೆಗಳಲ್ಲಿ ಆಗಬೇಕು. ನಾಡಿನ ಜನರನ್ನು ಕಡೆಗಣಿಸಿ ವಲಸಿಗರಿಗಾಗಿ ವ್ಯವಸ್ಥೆ ಕಟ್ಟುವ ಪರಿಪಾಠ ನಿಲ್ಲಬೇಕು. ರಾಜ್ಯ ರಾಜ್ಯಗಳ ಸಂಪರ್ಕಭಾಷೆಯ ಆಯ್ಕೆ ರಾಜ್ಯಗಳಿರಬೇಕು. ಕೇಂದ್ರ ರಾಜ್ಯಗಳೊಂದಿಗೆ ವ್ಯವಹರಿಸುವಾಗ ರಾಜ್ಯಭಾಷೆಯಲ್ಲಿ ವ್ಯವಹರಿಸಬೇಕು. ಅಂತರ್‌ರಾಜ್ಯ ಸಭೆಗಳಲ್ಲಿ ಅನುವಾದದ ಉಪಯೋಗ ಪಡೆದುಕೊಳ್ಳಬೇಕು. ಸಮಾನ ಗೌರವದ, ಸಮಾನ ಅವಕಾಶದ ಭಾಷಾನೀತಿಯೊಂದು ಭಾರತದೇಶವು ಒಂದಾಗಿ ಉಳಿಯಲು ಬೇಕಾಗಿರುವ ತುರ್ತುಚಿಕಿತ್ಸೆಯಾಗಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications