ನಗೆಗಿಂತ ಮಿಗಿಲಾದ ಧರ್ಮ, ಸಂಭ್ರಮ ಯಾವುದಿದೆ ಹೇಳಿ?

ನಾಲ್ಕು ನಿಮಿಷಗಳ ನಂತರ ಅಣುಬಾಂಬ್‌ ದಾಳಿಯಾಗುತ್ತದೆ ಅಂದ್ರೆ ಏನು ಮಾಡುತ್ತೀರಿ? -ಹೆಂಡತಿ ಗಂಡನಿಗೆ ಕೇಳಿದಳು.

ನಿನ್ನನ್ನು ಪ್ರೀತಿಸುತ್ತೇನೆ ಎಂದ ಗಂಡ.

ಅದಕ್ಕೆ ಹೆಂಡತಿ ಕೇಳಿದಳು -ಉಳಿದ ಮೂರು ನಿಮಿಷ ಏನು ಮಾಡುತ್ತೀರಿ?

*

ಮುಲ್ಲಾ ನಸ್ರುದ್ದೀನ್‌ ಮನೆಗೆ ಬಂದ ತಕ್ಷಣ ಆತನ ಹೆಂಡತಿ ಅವನ ಅಂಗಿಯನ್ನೆಲ್ಲ ನೋಡಿ, ಅದರಲ್ಲಿ ಏನಿರಬಹುದೆಂದು ಹುಡುಕುತ್ತಿದ್ದಳು. ಕಾಗದದಲ್ಲಿ ಫೋನ್‌ ನಂಬರ್‌ ಕಂಡರೆ 'ಇದ್ಯಾವ ಹೆಂಗಸಿನದು" ಎಂದು ಕೇಳುತ್ತಿದ್ದಳು. ಕೂದಲು ಸಿಕ್ಕರೆ 'ಇಂದು ಯಾವಳ ಜತೆ ಮಲಗಿ ಬಂದೆ ಹೇಳು" ಎಂದು ಕೇಳುತ್ತಿದ್ದಳು. ಮುಲ್ಲಾನ ಮೇಲೆ ಅಂಥ ಸಂದೇಹ.

ಒಂದು ದಿನ ಮುಲ್ಲಾನ ಕಿಸೆಯ್ಲಿ ಏನೂ ಸಿಗಲಿಲ್ಲ. ಹೆಂಡತಿ ಮುಲ್ಲಾನಿಗೆ ಹೊಡೆಯಲಾರಂಭಿಸಿದಳು. ಮುಲ್ಲಾನಿಗೆ ಹೆಂಡತಿ ಯಾಕೆ ಹೊಡೆಯುತ್ತಿದ್ದಾಳೆಂಬುದೇ ಗೊತ್ತಾಗಲಿಲ್ಲ. ಕಾರಣ ಕೇಳಿದ್ದಕ್ಕೆ, ಹೇಳಿದಳು -'ಇಂದು ನೀನು ಬೋಳು ತಲೆ ಹೆಂಗಸಿನ ಜತೆ ಮಲಗಿ ಬಂದೆ ಹೌದಲ್ವಾ?"

*

ಯುವತಿಯಾಬ್ಬಳು ಪೊಲೀಸ್‌ ಅಧಿಕಾರಿ ಬಳಿ ಹೋಗಿ, 'ಅಲ್ಲಿದ್ದಾನಲ್ಲ, ಅವನು ನನಗೆ ತೀವ್ರ ಅವಮಾನ ಮಾಡುತ್ತಿದ್ದಾನೆ. ದಯವಿಟ್ಟು ಅವನ ವಿರುದ್ಧ ಕ್ರಮ ತೆಗೆದುಕೊಳ್ಳಿ"ಎಂದಳು. ಅದಕ್ಕೆ ಪೊಲೀಸ್‌ ಅಧಿಕಾರಿ 'ನಾನೂ ನೋಡ್ತಾ ಇದ್ದೇನೆ. ಅವನು ನಿನ್ನ ಕಡೆ ಒಂದು ಸಲ ಕೂಡ ಕತ್ತೆತ್ತಿ ನೋಡಿಲ್ಲವಲ್ಲ" ಅಂದ. ಅದಕ್ಕೆ ಯುವತಿ ಕೇಳಿದಳು 'ಅದು ಅವಮಾನವಲ್ಲವೇ?"

*

ಮರ್ಫಿಗೆ ತ್ರಿವಳಿಗಳು ಜನಿಸಿದ್ದಕ್ಕೆ, ದೇವಸ್ಥಾನದ ಅರ್ಚಕ ಅಭಿನಂದಿಸುತ್ತಾ, 'ಕೊನೆಗೂ ದೇವರು ನಿಮ್ಮ ಪಾಲಿಗೆ ನಗು ಚೆಲ್ಲಿದನಲ್ಲಾ" ಎಂದರು. ಇದನ್ನು ಕೇಳಿದ ಮರ್ಫಿ ಹೇಳಿದ -'ಅದು ಕೇವಲ ನಗುವಲ್ಲ, ಅಟ್ಟಹಾಸದ ನಗು".

*

ಎಂಟು ಸಲ ವಿವಾಹವಾಗಿದ್ದ ಹಾಲಿವುಡ್‌ನ ಖ್ಯಾತ ಅಭಿನೇತ್ರಿ ಗ್ಲಾರಿಯಾ ಲವ್‌ಜಾಯ್‌ ಮುಪ್ಪಿನಲ್ಲಿ ತೀರಿಕೊಂಡಳು. ಮೊದಲ ಗಂಡ ರೆಜಿನಾಲ್ಡ್‌ನ ಸಮಾಧಿಯ ಪಕ್ಕದಲ್ಲೇ ಆಕೆಯನ್ನು ಸಮಾಧಿ ಮಾಡಲಾಯಿತು. ಆಕೆಯ ಸಮಾಧಿಗೆ ಪುಷ್ಪಗುಚ್ಚವಿರಿಸುವಾಗ ಗ್ಲಾರಿಯಾ ಲವ್‌ಜಾಯ್‌ಯ ಇಬ್ಬರು ಸ್ನೇಹಿತೆಯರಿಗೆ ಆಕೆಯ ಸಮಾಧಿ ಮೇಲೆ ಬರೆದ ವಾಕ್ಯ ಕಣ್ಣಿಗೆ, Together at last ಎಂದು ಬರೆದಿತ್ತು.

ಒಬ್ಬಳು ಕೇಳಿದಳು -'ಗ್ಲಾರಿಯಾ ಮತ್ತು ರೆಜಿನಾಲ್ಡ್‌ ಅಷ್ಟೊಂದು ಅನ್ಯೋನ್ಯನಾಗದ್ದರಾ? ನನಗೆ ಗೊತ್ತೇ ಇರಲಿಲ್ಲ".

ಈ ಮಾತು ಕೇಳಿದ ಮತ್ತೊಬ್ಬಳು ಹೇಳಿದಳು -'ಡೋಂಟ್‌ ಬಿ ಸಿಲ್ಲಿ. ಆ ವಾಕ್ಯ ಆಕೆಯ ಕಾಲುಗಳನ್ನು ನೋಡಿ ಬರೆಯಲಾಗಿದೆ."

ನಿಮಗಾಗಿ ಮತ್ತಷ್ಟು ಜೋಕ್ಸ್‌, ನಿಮಗಾಗಿ ಇಲ್ಲಿ ಇನ್ನಷ್ಟು ಜೋಕ್ಸ್‌ ಕಾಯುತ್ತಿವೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+