ಜನ್ಮರಾಶಿ, ನಕ್ಷತ್ರ : ತಿಳಿಯಲೇಬೇಕಾದ ಅಂಶಗಳು

ರಾಶಿಯನ್ನು, ಅರ್ಥಾತ್ ತಾರಾರಾಶಿಯನ್ನು ಎರಡು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಅಧ್ಯಯಿಸಲು ಅನುಕೂಲ ಆಗಲಿ ಎಂದು ಖಗೋಲದ ಒಟ್ಟು ಕ್ಷೇತ್ರವನ್ನು 88 ಭಾಗಗಳಾಗಿ ಇಂಟರ್ ನ್ಯಾಷನಲ್ ಅಸ್ಟ್ರನಾಮಿಕಲ್ ಯೂನಿಯನ್ ವಿಭಜಿಸಿದೆ. ಆಧುನಿಕ ಖಗೋಲ ವಿಜ್ಞಾನದ ಪ್ರಕಾರ ಈ ವಿಭಾಗಗಳಿಗೆ ತಾರಾರಾಶಿಗಳು (ಕಾನ್ಸ್ಟಲೇಷನ್ಸ್) ಎಂದು ಹೆಸರು. ಎಂದೇ, ಖಗೋಲದ ಒಂದು ಸೀಮಿತ ಕ್ಷೇತ್ರದಲ್ಲಿ ಇರುವ ತಾರೆಗಳ ಸಮೂಹವೇ ರಾಶಿ, ಪ್ರತೀ ಭಾಗದಲ್ಲಿಯೂ ಅನೇಕ ತಾರೆಗಳು ಇರುವುದರಿಂದ. ತಾರಾನಿಬಿಡ ಆಕಾಶವನ್ನು ತದೇಕಚಿತ್ತದಿಂದ ಅವಲೋಕಿಸುತ್ತಿದ್ದರೆ ಕೆಲವು ಒಂಟಿ ತಾರೆಗಳು ತಮ್ಮ ಉಜ್ವಲತೆಯಿಂದಾಗಿ ನಮ್ಮ ಗಮನ ಮೊದಲು ಸೆಳೆಯುತ್ತವೆ. ತದನಂತರ ಸಾಪೇಕ್ಷವಾಗಿ ಆಸುಪಾಸಿನಲ್ಲಿ ಇರುವ ಕೆಲವು ತಾರೆಗಳು ನಮ್ಮ ಮನಃಪಟಲದಲ್ಲಿ ವಿಶಷ್ಟ ಆಕೃತಿಗಳನ್ನು ಮೂಡಿಸುವುದರ ಮುಖೇನ ನಮ್ಮ ಗಮನ ಸೆಳೆಯುತ್ತವೆ.
ವೀಕ್ಷಕನ ಮನಃಪಟಲದಲ್ಲಿ ನಿರ್ದಿಷ್ಟ ಚಿತ್ರ ಬಿಂಬಿಸುವ ತಾರೆಗಳ ಇಂಥ ಸಮೂಹವನ್ನು, ಅರ್ಥಾತ್ ಪುಂಜವನ್ನು ಅಥವ ತಾರಾರಾಶಿಗಳು ಅನ್ನುವುದು ವಾಡಿಕೆ. ಇದೇ ಬಹುಜನಪ್ರಿಯ ವ್ಯಾಖ್ಯಾನ. ಎಲ್ಲ ಸಂಸ್ಕೃತಿಗಳಲ್ಲಿ ಪುರಾತನರು ಇಂಥ ಅನೇಕ ಪುಂಜಗಳನ್ನು ಗುರುತಿಸಿ ಅವು ಅವರ ಮನಸ್ಸಿನಲ್ಲಿ ಮೂಡಿಸಿದ ಬಿಂಬಗಳ ಹೆಸರನ್ನೇ ಇಟ್ಟರು. ಆಧುನಿಕ ಖಗೋಲ ವಿಜ್ಞಾನಿಗಳು ಕೂಡ ತಾವು ಗುರುತಿಸಿದ ಪ್ರತೀ ರಾಶಿಯಲ್ಲಿ ಒಂದು ತಾರಾಪುಂಜವನ್ನು ಗುರುತಿಸಿ ಅದಕ್ಕೊಂದು ಹೆಸರು ಕೊಟ್ಟು ಆ ಹೆಸರಿನಿಂದಲೇ ರಾಶಿಯನ್ನು ಗುರುತಿಸುತ್ತಾರೆ.
ಈಗಾಗಲೇ ಜನಪ್ರಿಯವಾಗಿದ್ದ ಪುರಾತನ ರಾಶಿ ನಾಮಗಳನ್ನು ಅಂತೆಯೇ ಉಳಿಸಿಕೊಂಡಿದ್ದಾರೆ. ಪುರಾತನರು ಒಂದೇ ರಾಶಿಗೆ ವಿಭಿನ್ನ ಸಂಸ್ಕೃತಿಗಳಲ್ಲಿ ವಿಭಿನ್ನ ಹೆಸರುಗಳು ಇರುವ ಉದಾಹರಣೆಗಳೂ ಇವೆ. ಚಿತ್ರ 1 ರಲ್ಲಿ ಇರುವ ತಾರಾ ಸಮೂಹದ ವಿನ್ಯಾಸ ಗಮನಿಸಿ. ಭಾರತೀಯರಿಗೆ ಇದು ಸಪ್ತರ್ಷಿ ಮಂಡಲ, ಬ್ರಿಟನ್ ದ್ವೀಪವಾಸಿಗಳಿಗೆ 'ನೇಗಿಲು (ದಿ ಪ್ಲೌ)", ಯುರೋಪಿನವರಿಗೆ 'ಉದ್ದ ಹಿಡಿಯ ಸೌಟು (ಬಿಗ್ ಡಿಪ್ಪರ್)", ಉತ್ತರ ಇಂಗ್ಲೆಂಡಿನವರಿಗೆ 'ಕಸಾಯಿ ಕತ್ತಿ (ಬುಚರ್ಸ್ ಕ್ಲೀವರ್), ಅಮೇರಿಕದ ಮೂಲನಿವಾಸಿಗಳಿಗೆ 'ದೊಡ್ಡ ಕರಡಿ (ಬಿಗ್ ಬೇರ್)".
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications