ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!

By Super
|
Google Oneindia Kannada News

ನಮ್ಮಲ್ಲಿನ ಅನೇಕ ಓದುಗರು ಉತ್ತಮ ಚಿಂತಕರಾಗಿರುತ್ತಾರೆ, ಸುದ್ದಿ ಸಂಗ್ರಹ ನಿಷ್ಣಾತರಾಗಿರುತ್ತಾರೆ, ಅವರಿಗೆ ಪತ್ರಕರ್ತನಿಗಿರಬೇಕಾದ ಮಿಡಿತವಿರುತ್ತದೆ, ಬರಹದ ತುಡಿತವೂ ಇರುತ್ತದೆ. ಆದರೆ, ತಲೆಯಲ್ಲಿರುವ ವಿಷಯವನ್ನು ಬರಹಕ್ಕಿಳಿಸುವಲ್ಲಿ ಅನೇಕಬಾರಿ ಸೋತಿರುತ್ತಾರೆ ಅಥವಾ ಬರೆದದ್ದನ್ನು ನೇರವಾಗಿ ಜನರಿಗೆ ತಲುಪಿಸುವಲ್ಲಿ ವಿಫಲರಾಗಿರುತ್ತಾರೆ.

ಸ್ನೇಹಿತರೆ, ನೀವು ಕೂಡ ಫ್ರೀಲಾನ್ಸ್ ಪತ್ರಕರ್ತರಾಗಬೇಕೆಂಬ ಹಂಬಲ ಇಟ್ಟುಕೊಂಡಿದ್ದೀರಾ? ಬರೆದದ್ದು ಸಾವಿರಾರು ಲಕ್ಷ ಓದುಗರಿಗೆ ತಪುಪಿಸಬೇಕೆಂಬ ಮನೋಗತವಿದ್ದರೆ ನಿಮಗಿಲ್ಲಿ ಸುವರ್ಣಾವಕಾಶವನ್ನು ದಟ್ಸ್ ಕನ್ನಡ ನೀಡುತ್ತಿದೆ. ಬರೆಯಲೇಬೇಕೆಂಬ ತುಡಿತ ಇಮ್ಮಡಿಸಿದಾಗ ಹಿಡಿದಿಟ್ಟುಕೊಳ್ಳುವುದು ಬಲು ಕಷ್ಟ. ಇನ್ನೇಕೆ ತಡ. ತಲೆಯಲ್ಲಿ ಹುದುಗಿರುವ ಸೃಜನಶೀಲತೆಯನ್ನು ಅಕ್ಷರಕ್ಕಿಳಿಸಲು ಸಿದ್ಧರಾಗಿ.

ಹುಮ್ಮಸ್ಸಿರುವ ಪ್ರತಿಭಾವಂತ ಬರಹಗಾರರು, ವಿದ್ಯಾರ್ಥಿಗಳು, ಬ್ಲಾಗಿಗರಿಗೆ ದಟ್ಸ್ ಕನ್ನಡ ಮುಕ್ತ ಆಹ್ವಾನ ನೀಡುತ್ತಿದೆ. ಪತ್ರಕರ್ತನಾಗಬೇಕೆಂಬ ಕನಸನ್ನು ನನಸಾಗಿಸಲು ಕನ್ನಡ ಪೋರ್ಟಲ್ ಅತ್ಯುತ್ತಮ ಅವಕಾಶವನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲ, ಫ್ರೀಲಾನ್ಸ ಬರಹಗಾರರಿಗೆ 'ಸಿಟಿಜನ್ ಜರ್ನಲಿಸಂ' ಎಂಬ ಬೇರೆಯದೇ ಆದ ವೇದಿಕೆ ಕಲ್ಪಿಸಿಕೊಡುತ್ತಿದೆ.

ನಿಮಗೆಲ್ಲ ತಿಳಿದಿರುವಂತೆ, ಕರ್ನಾಟಕ ಮತ್ತು ಕನ್ನಡಕ್ಕೆ ಸಂಬಂಧಿಸಿದ ಸುದ್ದಿ ಸ್ವಾರಸ್ಯಗಳನ್ನು ನಿಮ್ಮ ಮೆಚ್ಚಿನ ಅಂತರ್ಜಾಲ ತಾಣ ಕಳೆದ 9 ವರ್ಷಗಳಿಂದ ಪ್ರಕಟಿಸುತ್ತಿದೆ. ಸಿನೆಮಾ, ರಾಜಕೀಯ, ಅಡುಗೆಮನೆ, ಸಾಹಿತ್ಯ ಮುಂತಾದ ವಿಷಯಗಳಿಗೆ ಸೇರಿದ ಲೇಖನಗಳನ್ನು ವಿಶ್ವದಾದ್ಯಂತ ಕನ್ನಡಿಗರ ಮನೆಮನೆಗೂ ತಲುಪಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹದಿನೈದಕ್ಕೂ ಹೆಚ್ಚಿನ ಸೃಜನಶೀಲ ಲೇಖಕರಿಗೆ ಅಂಕಣ ಬರೆಯಲು ಅವಕಾಶ ನೀಡಿ ತನ್ನ ಪರಿಧಿಯನ್ನು ಹೆಚ್ಚಿಸಿಕೊಂಡಿದೆ.

ಬರೆಯುವ ಮುನ್ನ ಕೆಲ ವಿಷಯಗಳು ನಿಮ್ಮ ಗಮನದಲ್ಲಿರಲಿ

ನೀವು ಬರೆಯಲಿರುವ, ಬರೆದಿರುವ ಸುದ್ದಿ, ಲೇಖನ ಸ್ವಂತಿಕೆಯಿಂದ ಕೂಡಿರಲಿ. ಯಾವುದೇ ಪತ್ರಿಕೆಯಿಂದ, ಅಂತರ್ಜಾಲ ತಾಣದಿಂದ ಅಥವಾ ರೇಡಿಯೋದಿಂದ ಪ್ರೇರಿತವಾಗಿಲ್ಲದಿರಲಿ.

ವಿಷಯಗಳು

* ವ್ಯಕ್ತಿಚಿತ್ರ
* ವಿಷಯಾಧಾರಿತ (ಆರೋಗ್ಯ, ಪರಿಸರ, ಮೂಲಸೌಕರ್ಯ ಮುಂತಾದವು)
* ಪ್ರಾದೇಶಿಕ ಕ್ರೀಡೆ
* ನಿಮ್ಮ ನಗರ ಅಥವಾ ಹಳ್ಳಿಯಲ್ಲಿ ನಡೆಯುವ ವಿದ್ಯಮಾನ
* ನಿಮ್ಮ ಊರಿನ ಸುತ್ತಮುತ್ತಲಿನ ಪ್ರಮುಖ ಸ್ಥಳಗಳು
* ಸಾಂದರ್ಭಿಕ ಲೇಖನಗಳು
* ಶೈಕ್ಷಣಿಕ ಸಂಸ್ಥೆ ಕುರಿತ ಮಾಹಿತಿ ಮತ್ತು ಕಾರ್ಯಕ್ರಮಗಳು
* ಯುವಸಂವೇದಿ ಲೇಖನಗಳು
* ಮನರಂಜನೆ (ಸಿನೆಮಾ ಅಥವಾ ನಾಟಕಗಳ ವಿಮರ್ಶೆ ಇತ್ಯಾದಿ)
* ನಿಮ್ಮ ಊರಿನ ವಿಶೇಷ ತಿಂಡಿ ತಿನಿಸುಗಳು
* ಸಂಪಾದಕರು ತಿಳಿಸಿದ ಯಾವುದೇ ವಿಷಯ

ಗಮನಿಸಿ

* ರಾಜಕೀಯ, ಅಪರಾಧ ಮತ್ತು ತನಿಖಾ ವರದಿಗಳು ವಿವಾದಗಳಿಂದ ಮುಕ್ತವಾಗಿರಲಿ.
* ಬರಹಗಳನ್ನು ವೈಯಕ್ತಿಕ ನಿಂದನೆಗಳಿಂದ ದೂರವಿಡಿ.
* ಮಾನವೀಯತೆ ಸಾರುವ ಲೇಖನಗಳಿಗೆ ಹೆಚ್ಚಿನ ಪ್ರಾಧಾನ್ಯತೆ.
* ಬರಹಗಳು ಸುತ್ತಿಬಳಸದೆ ನೇರವಾಗಿರಲಿ, ಭಾಷಾಲಂಕಾರದಿಂದ ದೂರವಿರಲಿ.

ಸ್ವೀಕರಿಸಲಾಗುವ ಬರಹದ ಸ್ವರೂಪ

* ಕಂಪ್ಯೂಟರ್ ಮುಖಾಂತರ ಕಳುಹಿಸುವ ಲೇಖನಗಳನ್ನು ಮಾತ್ರ ಸ್ವೀಕರಿಸಲಾಗುವುದು.
* ಲೇಖನವನ್ನು ಕನ್ನಡದಲ್ಲಿಯೇ ಬರೆದಿರಬೇಕು.
* ಯುನಿಕೋಡ್ ನಲ್ಲಿ ಕಳುಹಿಸಿದರೆ ಉತ್ತಮ.
* ಲೇಖನದ ಶೀರ್ಷಿಕೆ ಚಿಕ್ಕ ಮತ್ತು ಚೊಕ್ಕದಾಗಿರಬೇಕು.
* ಬರಹ 600 ಪದಗಳನ್ನು ಮೀರಿರಬಾರದು.
* ಕಳುಹಿಸುವ ಚಿತ್ರಗಳು ಕಾಪಿರೈಟ್ ನಿರ್ಬಂಧದಿಂದ ಮುಕ್ತವಾಗಿರಲಿ.
* ಲೇಖಕರೇ ತೆಗೆದ ಚಿತ್ರಗಳಿಗೆ ಹೆಚ್ಚಿನ ಮಾನ್ಯತೆ.

ಲೇಖನವನ್ನು [email protected] ವಿಳಾಸಕ್ಕೆ ಟೆಕ್ಸ್ಟ್ (.txt) ಸ್ವರೂಪದಲ್ಲಿ 'Citizen Journalism' ಸಬ್ಜೆಕ್ಟ್ ಲೈನ್ ನೊಂದಿಗೆ ಕಳುಹಿಸಿಕೊಡಿ.

ನಿಬಂಧನೆ ಮತ್ತು ಷರತ್ತುಗಳು

* ಪೋರ್ಟಲ್ ಸಂಪಾದಕರ ನಿರ್ಧಾರವೇ ಅಂತಿಮ.
* ಪ್ರಕಟಿಸುವ ಮುನ್ನ ಲೇಖನವನ್ನು ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿ ಮಾಡುವ ಸ್ವಾತಂತ್ರ್ಯ ಸಂಪಾದಕರದ್ದು.
* ಲೇಖನಕ್ಕೆ ಲೇಖಕರ ಬೈಲೈನ್ ನೀಡಲಾಗುವುದು.

ಮತ್ತೇನಾದರೂ ಸ್ಪಷ್ಟೀಕರಣ ಬಯಸಿದ್ದರೆ ಸಂಪಾದಕರಿಗೆ ಮುಕ್ತವಾಗಿ ಬರೆಯಿರಿ : [email protected]

(ಮರೆತ ಮಾತು : ಇಲ್ಲಿ ಎಲ್ಲ ಲೇಖನಗಳನ್ನು ಒಂದೇ ವಿಭಾಗದಲ್ಲಿ ಪ್ರಕಟಿಸುವುದಿಲ್ಲ. ಪ್ರತಿ ಲೇಖಕರಿಗೂ ಒಂದೊಂದು ವಿಭಾಗ ಪ್ರಾರಂಭಿಸಲಾಗುವುದು. ನಿಮ್ಮ ನೆಚ್ಚಿನ ದಟ್ಸ್ ಕನ್ನಡದಲ್ಲಿ ನಿಮ್ಮದೇ ಅಂಕಣ ಪ್ರಾರಂಭಿಸಲು ಸುವರ್ಣಾವಕಾಶವನ್ನು ನೀಡಲಾಗುತ್ತಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸತ್ವಯುತವಾದ ಬರಹಗಳಿಂದ ನಿಮ್ಮದೇ ಅಂಕಣವನ್ನು ಅಲಂಕರಿಸುವುದು ನಿಮ್ಮ ಜವಾಬ್ದಾರಿ.)

English summary
ThatsKananda is inviting talented and enthusiastic writers, bloggers, students to gain real time experience by writing for our portal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X