keyboard_backspace

ಉಪ ಚುನಾವಣೆಗಳು 2021: 29 ಅಸೆಂಬ್ಲಿ, 3 ಲೋಕಸಭೆ ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾನ

Google Oneindia Kannada News

ನವದೆಹಲಿ ಅಕ್ಟೋಬರ್ 31: ದೇಶದ ದಾದ್ರಾ ಮತ್ತು ನಗರ ಹವೇಲಿ ಸೇರಿದಂತೆ ಲೋಕಸಭೆಯ 3 ಸ್ಥಾನಗಳು ಹಾಗೂ 13 ರಾಜ್ಯಗಳ ಒಟ್ಟು 29 ವಿಧಾನಸಭೆಯ ಸ್ಥಾನಗಳಿಗೆ ಶನಿವಾರ ಉಪಚುನಾವಣೆ ಯಶಸ್ವಿಯಾಗಿ ನಡೆದಿದೆ. ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ನೇರ ಪೈಪೋಟಿ ನಡೆದಿದೆ. ನಿನ್ನೆ ದಾದ್ರಾ ಮತ್ತು ನಗರ ಹವೇಲಿ, ಹಿಮಾಚಲ ಪ್ರದೇಶದ ಮಂಡಿ ಮತ್ತು ಮಧ್ಯಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಇದೆ ವೇಳೆ 29 ವಿಧಾನಸಭಾ ಸ್ಥಾನಗಳಲ್ಲಿ, ಅಸ್ಸಾಂನಲ್ಲಿ ಐದು, ಪಶ್ಚಿಮ ಬಂಗಾಳದಲ್ಲಿ ನಾಲ್ಕು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ತಲಾ ಮೂರು, ಬಿಹಾರ, ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ತಲಾ ಎರಡು ಮತ್ತು ಆಂಧ್ರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಮಿಜೋರಾಂ ಮತ್ತು ತೆಲಂಗಾಣದಲ್ಲಿ ತಲಾ ಒಂದು ಸ್ಥಾನಕ್ಕೆ ಮತದಾನ ನಡೆಯಿತು. ನವೆಂಬರ್ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಶನಿವಾರ ನಡೆದ 29 ವಿಧಾನಸಭೆಯ ಸ್ಥಾನಗಳು ಮತ್ತು 3 ಲೋಕಸಭೆ ಸ್ಥಾನಗಳಿಗೆ ನಡೆದ ಉಪಚುನಾವಣೆಯು ಸಾಧಾರಣದಿಂದ ಹೆಚ್ಚಿನ ಮತದಾನಕ್ಕೆ ಸಾಕ್ಷಿಯಾಗಿದೆ.

ಗಮನಾರ್ಹವಾಗಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಅತಿ ಹೆಚ್ಚು ಮತಗಟ್ಟೆಯಲ್ಲಿ 100 ಪ್ರತಿಶತ ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಲಾಹೌಲ್-ಸ್ಪಿಟಿ ಜಿಲ್ಲೆಯ ತಾಶಿಗಾಂಗ್ ಗ್ರಾಮದ ಮತಗಟ್ಟೆಯಲ್ಲಿ 18 ಮಹಿಳೆಯರು ಸೇರಿದಂತೆ 47 ಮತದಾರರಿದ್ದರು. ಮತ್ತೊಂದೆಡೆ 13 ರಾಜ್ಯಗಳಲ್ಲಿರುವ ಮೂರು ಲೋಕಸಭೆ ಮತ್ತು 29 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಶೇಕಡಾ 50 ರಿಂದ 80 ರಷ್ಟು ಮತದಾನವಾಗಿದೆ. ಗಮನಾರ್ಹವಾಗಿ, ಮತದಾನವು ಶಾಂತಿಯುತವಾಗಿ ನಡೆದಿದೆ. ಜೊತೆಗೆ ಎಲ್ಲಾ COVID-19 ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ.

 ಹರಿಯಾಣದಲ್ಲಿ ಉಪ ಚುನಾವಣೆಯಲ್ಲಿ ಶೇ 80 ಮತದಾನ

ಹರಿಯಾಣದಲ್ಲಿ ಉಪ ಚುನಾವಣೆಯಲ್ಲಿ ಶೇ 80 ಮತದಾನ

ಹರಿಯಾಣದಲ್ಲಿ ಎಲ್ಲೆನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶೇಕಡಾ 80 ರಷ್ಟು ಮತದಾನವಾಗಿದೆ. ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) ನಾಯಕ ಅಭಯ್ ಚೌತಾಲಾ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಚುನಾವಣೆ ನಡೆದಿದೆ. ಇನ್ನೂ ಚುನಾವಣಾ ಆಯೋಗದ ಅಪ್‌ಡೇಟ್‌ಗಳ ಪ್ರಕಾರ ದಾದ್ರಾ ಮತ್ತು ನಗರ ಹವೇಲಿ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 7 ಗಂಟೆಗೆ ಮತದಾನ ಮುಕ್ತಾಯವಾದಾಗ ಶೇ.75.51 ರಷ್ಟು ಮತದಾನವಾಗಿದೆ. ಹಿಮಾಚಲ ಪ್ರದೇಶದಲ್ಲಿ ಪ್ರತಿಭಾ ಸಿಂಗ್ ಸ್ಪರ್ಧಿಸಿರುವ ಮಂಡಿ ಲೋಕಸಭಾ ಕ್ಷೇತ್ರಕ್ಕೆ ಶೇ 100ರಷ್ಟು ಮತದಾನವಾಗಿದೆ. ಮೂರು ವಿಧಾನಸಭಾ ಕ್ಷೇತ್ರಗಳಾದ ಫತೇಪುರ್, ಅರ್ಕಿ ಮತ್ತು ಜುಬ್ಬಲ್-ಕೋಟ್‌ಖೈಯಲ್ಲಿ ಕ್ರಮವಾಗಿ ಶೇ.62.4, ಶೇ.61.33 ಮತ್ತು ಶೇ.66.1ರಷ್ಟು ಮತದಾನವಾಗಿದೆ. ಜೊತೆಗೆ ಬಿಜೆಪಿಯ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ನಿಧನರಾದ ಮಧ್ಯಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 63.88 ರಷ್ಟು ಮತದಾನವಾಗಿದ್ದು, ಮೂರು ವಿಧಾನಸಭಾ ಸ್ಥಾನಗಳಲ್ಲಿ ಅಂದಾಜು 64.60 ರಷ್ಟು ಮತದಾನವಾಗಿದೆ.

ಅಸ್ಸಾಂ

ಅಸ್ಸಾಂ

ಅಸ್ಸಾಂನ ಐದು ವಿಧಾನಸಭಾ ಕ್ಷೇತ್ರಗಳಾದ ಗೊಸ್ಸೈಗಾಂವ್, ಭಬಾನಿಪುರ, ತಮುಲ್‌ಪುರ್, ಮರಿಯಾನಿ ಮತ್ತು ಥೌರಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ಶೇ.69.60 ಮತದಾನವಾಗಿದೆ ಎಂದು ವರದಿಯಾಗಿದೆ. ಆಡಳಿತಾರೂಢ ಬಿಜೆಪಿ ಮೂರು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇನ್ನೆರಡನ್ನು ಮೈತ್ರಿ ಪಾಲುದಾರ ಯುಪಿಪಿಎಲ್‌ಗೆ ಬಿಟ್ಟಿದೆ. ಕಾಂಗ್ರೆಸ್ ಎಲ್ಲಾ ಐದರಲ್ಲಿಯೂ ನಾಮನಿರ್ದೇಶಿತರನ್ನು ಹಾಕಿದರೆ, ಅದರ ಹಿಂದಿನ ಮಿತ್ರಪಕ್ಷಗಳಾದ ಎಐಯುಡಿಎಫ್ ಮತ್ತು ಬಿಪಿಎಫ್ ಕ್ರಮವಾಗಿ ಎರಡು ಮತ್ತು ಒಂದು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಪಶ್ಚಿಮ ಬಂಗಾಳದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ಸುಮಾರು 71 ಪ್ರತಿಶತದಷ್ಟು ಹೆಚ್ಚಿನ ಮತದಾನವಾಗಿದೆ. ಬಿಜೆಪಿ ಮತ್ತು ಟಿಎಂಸಿ ತಲಾ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ. ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಜರುಗಿತು ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಹಾರ

ಬಿಹಾರ

ಬಿಹಾರದಲ್ಲಿ ಜೆಡಿಯು ವಶದಲ್ಲಿದ್ದ ಕುಶೇಶ್ವರ್ ಆಸ್ಥಾನ ಮತ್ತು ತಾರಾಪುರದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಅಂದಾಜು ಶೇ.49.60ರಷ್ಟು ಮತದಾನವಾಗಿದೆ. ಜೊತೆಗೆ ರಾಜಸ್ಥಾನದ ಧರಿಯಾವಾಡ ಮತ್ತು ವಲ್ಲಭನಗರ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಸರಾಸರಿ ಶೇ.70ರಷ್ಟು ಮತದಾನವಾಗಿದೆ. ವಲ್ಲಭನಗರದ ಕಾಂಗ್ರೆಸ್ ಶಾಸಕ ಗಜೇಂದ್ರ ಸಿಂಗ್ ಶಕ್ತಾವತ್ ಮತ್ತು ಧರಿಯಾವಾಡದ ಬಿಜೆಪಿ ಶಾಸಕ ಗೌತಮ್ ಲಾಲ್ ಮೀನಾ ಅವರ ನಿಧನದಿಂದಾಗಿ ಉಪಚುನಾವಣೆ ನಡೆದಿದೆ.

ಕರ್ನಾಟಕ

ಕರ್ನಾಟಕ

ಕರ್ನಾಟಕದ ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಅಂದಾಜು 56.78 ರಷ್ಟು ಮತದಾನವಾಗಿದೆ. ಸಿಂದಗಿ ಜೆಡಿಎಸ್ ಶಾಸಕ ಎಂ ಸಿ ಮನಗೂಳಿ ಮತ್ತು ಹಾನಗಲ್ ಬಿಜೆಪಿಯ ಸಿ ಎಂ ಉದಾಸಿ ಅವರ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದೆ. ಬಿ ಎಸ್ ಯಡಿಯೂರಪ್ಪ ಅವರ ಸ್ಥಾನಕ್ಕೆ ಬಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದು ಮೊದಲ ಚುನಾವಣಾ ಪರೀಕ್ಷೆಯಾಗಿದೆ.

ತೆಲಂಗಾಣ

ತೆಲಂಗಾಣ

ತೆಲಂಗಾಣದಲ್ಲಿ ಹುಜೂರಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿದ್ದು, ಆಡಳಿತಾರೂಢ ಟಿಆರ್‌ಎಸ್, ಪ್ರತಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಭೂಕಬಳಿಕೆ ಆರೋಪದ ಮೇಲೆ ರಾಜ್ಯ ಸಚಿವ ಸಂಪುಟದಿಂದ ವಜಾಗೊಂಡ ನಂತರ ಜೂನ್‌ನಲ್ಲಿ ಈಟಾಲ ರಾಜೇಂದರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದೆ. ಆರೋಪವನ್ನು ತಳ್ಳಿ ಹಾಕಿರುವ ರಾಜೇಂದರ್, ಟಿಆರ್‌ಎಸ್ ತೊರೆದು ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದಾರೆ. ಇನ್ನೂ ಮೇಘಾಲಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆದ ಉಪಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತದಾರರಲ್ಲಿ ಶೇಕಡಾ 80 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಎಫ್‌ಆರ್ ಖಾರ್ಕೊಂಗೊರ್ ಹೇಳಿದ್ದಾರೆ. ಮಾವ್ರಿಂಗ್‌ನೆಂಗ್, ಮಾವ್‌ಫ್ಲಾಂಗ್ ಮತ್ತು ರಾಜಬಾಲಾದಲ್ಲಿ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಅವರು ಹೇಳಿದರು.

 ಮಿಜೋರಾಂ, ಮೇಘಾಲಯ

ಮಿಜೋರಾಂ, ಮೇಘಾಲಯ

ಇತರ ಈಶಾನ್ಯ ರಾಜ್ಯಗಳಲ್ಲಿನ ಉಪಚುನಾವಣೆಗಳು ನಡೆದಿವೆ. ಮಿಜೋರಾಂನಲ್ಲಿ ಅತಿ ಹೆಚ್ಚು ಶೇಕಡಾ 81.29 ರಷ್ಟು ಮತದಾನವಾಗಿದೆ, ನಂತರ ಮೇಘಾಲಯದಲ್ಲಿ 80.86 ಶೇಕಡಾ ಮತ್ತು ಅಸ್ಸಾಂನಲ್ಲಿ 73.38 ಶೇಕಡಾ ಮತದಾನವಾಗಿದೆ. ನಾಗಾಲ್ಯಾಂಡ್‌ನ ಶಾಮತೋರ್-ಚೆಸೋರ್ ವಿಧಾನಸಭಾ ಸ್ಥಾನಕ್ಕೂ ಉಪಚುನಾವಣೆ ಘೋಷಣೆಯಾಗಿತ್ತು. ಆದರೆ, ಪ್ರಾದೇಶಿಕ ಪಕ್ಷವಾದ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಅಭ್ಯರ್ಥಿಯನ್ನು ಅಕ್ಟೋಬರ್ 13 ರಂದು ಅವಿರೋಧವಾಗಿ ವಿಜೇತ ಎಂದು ಅಲ್ಲಿ ಘೋಷಿಸಲಾಗಿದೆ.

English summary
The bypolls to 29 Assembly seats and 3 Lok Sabha seats on Saturday witnessed moderate to high voter turnout.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X