ಎರಡು ಸಾವಿರ ನೋಟ್ ಬ್ಯಾನ್ ನೆಪದಲ್ಲಿ ಬ್ಲಾಕ್ ಅಂಡ್ ವೈಟ್ ದಂಧೆ
ಬೆಂಗಳೂರು, ಡಿಸೆಂಬರ್ 30 : ಕೆಲವೇ ದಿನಗಳಲ್ಲಿ ಎರಡು ಸಾವಿರ ಮುಖ ಬೆಲೆಯ ನೋಟುಗಳು ಬ್ಯಾನ್ ಆಗಲಿದೆ ಎಂದು ನಂಬಿಸಿ ಮೂರು ಕೋಟಿ ರೂಪಾಯಿ ಕಪ್ಪು ಹಣ ವೈಟ್ ಮಾಡಲು ಯತ್ನಿಸಿದ ಆರೋಪಿಗಳಾಗಿ ಮಾರತಹಳ್ಳಿ ಪೊಲೀಸರು ಸೀಕ್ರೇಟ್ ಆಪರೇಷನ್ ನಡೆಸಿದರು ! ಆರೋಪಿಗಳೂ ಸಿಕ್ಕಿಬಿದ್ದಿದ್ದು, ವಿ ಎರಡು ಸಾವಿರ ಮುಖ ಬೆಲೆಯ ಮೂರು ಕೋಟಿ ರೂಪಾಯಿ ಹಣ ಸಿಕ್ಕಿಲ್ಲ. ಮಾರತಹಳ್ಳಿ ಪೊಲೀಸರು ನಡೆಸಿದ ಸೀಕ್ರೇಟ್ ಆಪರೇಷನ್ ರೋಚಕ ಸ್ಟೋರಿ ಇಲ್ಲಿದೆ.

ಡೀಲಿಂಗ್ ಆಫರ್ :
ಪಬ್ ಮಲ್ಲೇಶ್ವರಂ ಬೋಲ್ಟ್ ಪಬ್ ನಲ್ಲಿ ಮ್ಯಾನೇಜರ್ ಆಗಿ ಸುರೇಶ್ ಗೌಡ ಎಂಬಾತ ಕೆಲಸ ಮಾಡುತ್ತಿದ್ದ. ಗ್ರಾಹಕರೊಬ್ಬರು ಸುರೇಶ್ ಗೌಡ ಅವರನ್ನು ಸಂಪರ್ಕಿಸಿ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಎರಡು ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳನ್ನು ಬ್ಯಾನ್ ಮಾಡಲಿದೆ. ನನಗೆ ಗೊತ್ತಿರುವ ವ್ಯಕ್ತಿಯೊಬ್ಬರ ಬಳಿ ಎರಡು ಸಾವಿರ ಮುಖ ಬೆಲೆಯ ಮೂರು ಕೋಟಿ ರೂಪಾಯಿ ಹಣವಿದೆ. ಮಾರತಹಳ್ಳಿಯ ಕಾಫಿ ಡೇ ಬಳಿ ಇದ್ದು, ಐದುನೂರು ರೂಪಾಯಿ ಮುಖ ಬೆಲೆಯ ನೋಟು ಕೊಟ್ಟರೆ 80 ಲಕ್ಷ ರೂಪಾಯಿ ಕಮೀಷನ್ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಹಣ ಇರುವ ಬಗ್ಗೆ ಎರಡು ಸಾವರಿ ಮುಖ ಬೆಲೆಯ ನೋಟುಗಳ ಕಂತೆ ಜೋಡಿಸಿಟ್ಟಿರುವ ವಿಡಿಯೋ ಕೂಡ ತೋರಿಸಿದ್ದಾರೆ. ಸುರೇಶ್ ಗೌಡ ಮಾರತಹಳ್ಳಿ ಪೊಲೀಸರನ್ನು ಸಂಪರ್ಕಿಸಿ, ಬ್ಲಾಕ್ ಅಂಡ್ ವೈಟ್ ದಂಧೆ ನಡೆಸುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಸೀಕ್ರೇಟ್ ಆಪರೇಷನ್:
ಐದು ನೂರು ರೂಪಾಯಿ ನೋಟು ಕೊಟ್ಟು ಎರಡು ಸಾವಿರ ರೂಪಾಯಿ ಮುಖ ಬೆಲೆಯ ನೋಟು ಬದಲಾವಣೆ ಮಾಡಿಕೊಡುವುದಾಗಿ ಸುರೇಶ್ ಗೌಡ ತನ್ನ ಸ್ನೇಹಿತನ ಮೂರಕ ಮಾರತಹಳ್ಳಿಯಲ್ಲಿ ವ್ಯಕ್ತಿಯೊಬ್ಬನನ್ನು ಸಂಪರ್ಕಿಸಿದ್ದಾರೆ. ಆತನ ಬಳಿ ಮಾತುಕತೆ ಮಾಡಿದ ಬಳಿಕ ಸುರೇಶ ಗೌಡ ಮಾರತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಣ ಎಕ್ಸ್ ಚೇಂಜ್ ಮಾಡಿಕೊಡುವ ಸೋಗಿನಲ್ಲಿ ಪೊಲೀಸರೇ ಮಾರು ವೇಷದಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಸುರೇಶ್ ಗೌಡ ಮಾರತಹಳ್ಳಿ ಹೊರ ವರ್ತುಲ ರಸ್ತೆಯಲ್ಲಿರುವ ಲೋಹಿತ್ ಎಂಬುವರನ್ನು ಭೇಟಿ ಮಾಡಿದ್ದಾರೆ. ಲೋಹಿತ್ ತನ್ನ ಸಹಚರ ರವಿಕುಮಾರ್ ಎಂಬಾತನನ್ನು ಪರಿಚಯ ಮಾಡಿಸಿದ್ದು, ಎರಡು ಸಾವಿರ ಮುಖ ಬೆಲೆಯ ನೋಟು ಬದಲಾವಣೆ ಮಾಡಿಕೊಡುವುದಾಗಿ ಮಾತುಕತೆ ನಡೆಸಿದ್ದಾರೆ. ಎರಡು ಸಾವಿರ ಮುಖ ಬೆಲೆಯ ನೋಟುಗಳನ್ನು ಮೂರು ಕೋಟಿ ರೂಪಾಯಿ ಕೊಡುತ್ತೇವೆ. ನಮಗೆ ಐದು ನೂರು ರೂಪಾಯಿ ಮುಖ ಬೆಲೆಯ ನೋಟುಗಳನ್ನು ಕೊಟ್ಟು ನಿಮ್ಮ ಕಮೀಷನ್ ಹಿಡಿದುಕೊಂಡು ಹಣ ಒದಗಿಸುವಂತೆ ತಿಳಿಸಿದ್ದಾರೆ. ಇದಕ್ಕೆ ಸುರೇಶ್ ಗೌಡ ಒಪ್ಪಿಕೊಂಡಿದ್ದು, ಕೂಡಲೇ ಯಲಹಂಕದ ಏರ್‌ಪೋರ್ಟ್ ರಸ್ತೆ ಕಡೆ ಕರೆದೊಯ್ದಿದ್ದಾರೆ. ಈ ರಹಸ್ಯ ಮಾತುಕತೆಯಲ್ಲಿ ಪೊಲೀಸರು ಕೂಡ ಮಫ್ತಿಯಲ್ಲಿ ಎಲ್ಲವನ್ನೂ ಗಮನಿಸಿದ್ದಾರೆ.

ಆಪರೇಷನ್ 2 :
ಮೂರು ಕೋಟಿ ರೂಪಾಯಿ ಇರುವ ಬಗ್ಗೆ ಮಾಡಿದ್ದ ವಿಡಿಯೋಗೆ Sk3917 ಕೋಡ್ ಬರೆದು 2000 ಮುಖ ಬೆಲೆಯ ನೋಟುಗಳ ಕಂತುಗಳನ್ನು ತೋರಿಸಿದ್ದಾರೆ. ಅರ್ಧ ಹರಿದ ಹತ್ತು ರೂಪಾಯಿ ನೋಟ್ ತೊರಿಸಿದರೆ ಹಣ ನೀಡಲಿದ್ದಾರೆ. ಅದೇ ಸಮಯಕ್ಕೆ ನೀವು ಹಣ ಕೊಡಬೇಕು ಎಂದು ಮಾತುಕತೆ ಮಾಡಿದ್ದಾರೆ. ಮಾತುಕತೆಗೆ ಒಪ್ಪಿದ ಬಳಿಕ ಮಾರುವೇಷದಲ್ಲಿದ್ದ ಪೊಲೀಸರನ್ನು ರವಿಕುಮಾರ್ ಯಲಹಂಕ ಸಮೀಪದ ಕಾಫಿ ಡೇಗೆ ಕರೆದೊಯ್ದಿದ್ದಾರೆ. ಅಲ್ಲಿ ಅರವಿಂದ್, ಸುದರ್ಶನ್, ಶಿವಶಂಕರ್ ಎಂಬುವರನ್ನು ಪರಿಚಯಿಸಿದ್ದಾನೆ. ಮಾತುಕತೆ ಮಾಡುತ್ತಿದ್ದಂತೆ ಮೂವರು ಆರೋಪಿಗಳನ್ನು ಆರಕ್ಷಕ ಉಪ ನಿರೀಕ್ಷಕ ಅಶೋಕ್ ಮತ್ತು ತಂಡ ಪಿಸ್ತೂಲ್ ತೋರಿಸಿ ವಶಕ್ಕೆ ಪಡೆದಿದೆ. ಪೊಲೀಸರು ಸೂಚನೆ ಮೇರೆಗೆ ಚಿಕ್ಕಪೇಟೆಯ ಮೆಟ್ರೋ ಸ್ಟೇಷನ್ ಬಳಿಯಿದ್ದ ನೋಟ್ ಬದಲಾವಣೆ ತಂಡದ ಜತೆ ಮಾತನಾಡಿಸಿದ್ದಾರೆ. ಗ್ರಾಹಕರೆಂದು ಮಫ್ತಿಯಲ್ಲಿದ್ದ ಪೊಲೀಸರನ್ನು ಪರಿಚಯಿಸಿದ್ದಾರೆ. ಈ ವೇಳೆ ಅನುಮಾನಗೊಂಡ ಬ್ಲಾಕ್ ಅಂಡ್ ವೈಟ್ ದಂಧೆಕೋರರು ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾರೆ.

ಆರೋಪಿಗಳ ಸೆರೆ:
ಹಣವಿದ್ದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಯಲಹಂಕ ಕಾಫಿ ಡೇ ಹಾಗೂ ಮಾರತಹಳ್ಳಿಯ ಕಾಫಿ ಡೇ ಬಳಿ ಸಿಕ್ಕಿದ ಆರೋಪಿಗಳಾದ ಲೋಹಿತ್, ರವಿಕುಮಾರ್, ಸುದರ್ಶನ್, ಅರವಿಂದ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಪೊಲೀಸರು ಯಲಹಂಕದ ಬಳಿ ಆರೋಪಿಗಳನ್ನು ವಶಕ್ಕೆ ಪಡೆದ ಕೂಡಲೇ ಪೊಲೀಸರೆಂದು ಹೇಳಿದ್ದೇ ಆಪರೇಷನ್ ವಿಫಲವಾಗಲು ಕಾರಣವಾಯಿತೇ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

ದುಡ್ಡು ಯಾರದ್ದು ! :
ಮೂರು ಕೋಟಿ ಹಣ ಇದ್ದಿದ್ದು ನಿಜ. ಆದರೆ ಇದನ್ನು ಎಕ್ಸ್ ಚೇಂಜ್ ಮಾಡಲಿಕ್ಕೆ ಪ್ರಯತ್ನ ಮಾಡಿದ್ದರು. ಹೀಗಾಗಿ ಪ್ರಭಾವಿ ಶಾಸಕರಿಗೆ ಸೇರಿದ ಹಣ ಎಂಬ ಮಾತುಗಳು ಪೊಲೀಸರ ವಲಯದಲ್ಲಿ ಕೇಳಿ ಬರುತ್ತಿದೆ. ಹಣ ಯಾರದ್ದು ? ಯಾಕಾಗಿ ಐದು ನೂರು ರೂಪಾಯಿಗೆ ಪರಿವರ್ತನೆ ಮಾಡಲು ಯತ್ನಿಸಿದ್ದರು. ಪರಿವರ್ತನೆ ಮಾಡಿದ ಹಣವನ್ನು ಯಾರಿಗೆ ತಲುಪಿಸಲಾಗುತ್ತಿತ್ತು. ಪ್ರಕರಣದ ತನಿಖೆ ಮೇಲೆ ರಾಜಕೀಯ ಒತ್ತಡ ಬೀಳುತ್ತಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಇವೆಲ್ಲದಕ್ಕೂ ಪೊಲೀಸರ ತನಿಖೆಯೇ ಉತ್ತರ ನೀಡಬೇಕಿದೆ.












Click it and Unblock the Notifications