ಆಸ್ತಿಕ ಮತ್ತು ನಾಸ್ತಿಕರಿಗೆ ವರ್ಷ ಭವಿಷ್ಯ 2014
ನಾವಿರುವ ಈ ಜಗದಲ್ಲಿ ನಾಸ್ತಿಕರು ಮತ್ತು ಆಸ್ತಿಕರು ಎಂಬೆರಡು ವರ್ಗಗಳ ಜನರಿದ್ದಾರೆ. ಆಸ್ತಿಕರು ತಮ್ಮ ಮುಂದಿನ ದಿನಗಳು ಹೇಗಿರುತ್ತವೆ ಎಂದು ಆಸಕ್ತಿಯಿಂದ ತಿಳಿದುಕೊಂಡು ಧರ್ಮದಿಂದ ಜೀವನ ಮಾಡುತ್ತಾ ಸಂತಸದ ಜೀವನಾನುಭವ ಹೊಂದುತ್ತಾರೆ. ಇವರಿಗೆ ದೇವರು, ಭವಿಷ್ಯ ಎಂಬುದರಲ್ಲಿ ನಂಬಿಕೆ ಇರುತ್ತದೆ.
ಆದರೆ ನಾಸ್ತಿಕರು ದೈವದ ಭಯವಿಲ್ಲದೇ ಅಧರ್ಮದ ಜೀವನ ಮಾಡುತ್ತಿರುವುದರಿಂದ ಅವರಿಗೆ ತೊಂದರೆ, ತಾಪತ್ರಯಗಳು ಬೆಟ್ಟದಷ್ಟಿರುತ್ತವೆ. ಇವರಿಗೆ ದೇವರೆಂದರೆ ಅಲರ್ಜಿ, ರಾಶಿ, ಶನಿ, ನಕ್ಷತ್ರ, ಭವಿಷ್ಯವೆಂದರೆ ದುಡ್ಡು ಮಾಡಿಕೊಳ್ಳುವುದು ಎಂದು ಬೊಗಳುತ್ತಿರುತ್ತಾರೆ. "ಕಾಮಾಲೆ ಕಣ್ಣಿಗೆ ಜಗವೆಲ್ಲ ಹಳದಿ" ಎಂಬಂತೆ ಎಲ್ಲರೂ ತಮ್ಮಂತೆ ಸುಳ್ಳುಗಾರರು, ದುಷ್ಟರು, ಲಂಪಟರು, ವಂಚಕರು ಎಂದುಕೊಂಡಿರುತ್ತಾರೆ. ಆದರೆ ಕಷ್ಟದ ಸಮಯ ಬಂದಾಗ "ಶಿವನೇ ಶಂಭೋಲಿಂಗಾ ಬೇಗ ಕರೆದುಕೊಳ್ಳಪ್ಪಾ" ಎಂದು ತಾವೇ ನಂಬದ ದೇವರಿಗೆ ಗೋಗರೆಯಲಾರಂಭಿಸುತ್ತಾರೆ. ಯಾವುದಕ್ಕೂ ಅವರವರ ಕರ್ಮ ಎಂದುಕೊಳ್ಳಬಹುದು.

ಹೀಗಾಗಿ ನಾವೂ ಕೂಡ ಏನೂ ಮಾಡುವ ಹಾಗಿಲ್ಲ ಅನುಭವಿಸಲಿ ಬಿಡಿ. ಇದೂ ಕೂಡ ದೇವರ ಶಿಕ್ಷೆಯ ಸ್ವರೂಪ ಎಂದುಕೊಳ್ಳಬಹುದು. ಯಾಕೆಂದರೆ ದೈವಭಕ್ತಿಯಲ್ಲಿ ನಮ್ಮನ್ನೇ ನಾವು ಅರಿತುಕೊಂಡು ನಮ್ಮತನವನ್ನು ತಿಳಿದುಕೊಳ್ಳಬಹುದು. ಯಾರಿಂದಲೂ ನಮ್ಮ ಬಗ್ಗೆ "ಭ್ರ" ಅನ್ನಿಸಿಕೊಳ್ಳಬೇಕಾಗಿರುವುದಿಲ್ಲ. ಇದಕ್ಕೆಂದೇ "ನಂಬಿ ಕೆಟ್ಟವರಿಲ್ಲ" ಎಂಬ ಮಾತು ಗಾದೆ ಮಾತಾಗಿದೆ.
ಪ್ರತಿ 12 ತಿಂಗಳಿಗೆ ಕ್ಯಾಲೆಂಡರ್‌ನಲ್ಲಿ ವರ್ಷದ ಅಂಕಿಯಷ್ಟೇ ಬದಲಾಗುತ್ತದೆ. ಆದರೆ, ಮುಂದಿನ 12 ತಿಂಗಳು ನಮ್ಮ ದಿನಗಳು ಹೇಗಿರುತ್ತವೆ ಎಂಬುದನ್ನು ಕೆಲವು ಹಂತದಲ್ಲಿ ನಾವು ಮೊದಲೇ ತಿಳಿದುಕೊಳ್ಳಬಹುದು. ಇದನ್ನೇ ಭವಿಷ್ಯವೆನ್ನಲಾಗುತ್ತದೆ.












Click it and Unblock the Notifications