ವರ್ಷ ಭವಿಷ್ಯ : ಮೇಷ ರಾಶಿಗೆ ಸಂಕ್ರಮಣ ಫಲ
ವರ್ಷ ಭವಿಷ್ಯ 2014ರಲ್ಲಿ ಮೇಷ ರಾಶಿಯವರಿಗೆ ಮಕರ ಸಂಕ್ರಮಣ ಫಲ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಅಶ್ವಿನಿ, ಭರಣಿ, ಕೃತ್ತಿಕಾ ನಕ್ಷತ್ರದ ಒಂದನೇ ಚರಣದಲ್ಲಿ ಜನಿಸಿದವರು ಮೇಷ ರಾಶಿಯವರಾಗುತ್ತಾರೆ. ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರಿಗೆ ಜನನ ದೋಷವಿರುತ್ತದೆ ಎನ್ನುತ್ತಾರೆ. ಇದರಿಂದ ತಂದೆ-ತಾಯಿಗೆ ಕಿರಿಕಿರಿ ಹಾಗೂ ಹಣದ ಅಭಾವ ವಿಪರೀತ ಕಾಡುತ್ತಿರುತ್ತದೆ.
ಆದ್ದರಿಂದ ಈ ದೋಷ ನಿವಾರಣೆಗೆಗಾಗಿ ಈ ನಕ್ಷತ್ರದವರ ಪಾಲಕರಾಗಲಿ ಅಥವಾ ಸ್ವತಃ ತಾವೇ ಯಾವುದಾದರೂ ಅನ್ನದಾಸೋಹ ನಡೆಯುವ ಸ್ಥಳಗಳಲ್ಲಿ ಕೈಲಾದಷ್ಟು ಅಕ್ಕಿ, ಬೆಲ್ಲ ಹಾಗೂ ತೊಗರಿ ಬೇಳೆಯನ್ನು ಕೊಟ್ಟು ನಿಮ್ಮ ಹೆಸರಿನಲ್ಲಿ ರಸೀದಿ ಪಡೆದಿಟ್ಟುಕೊಳ್ಳಬೇಕು. ಅನುಕೂಲವಿದ್ದಾಗ ಎಷ್ಟು ಬೇಕಾದಷ್ಟು ಸಲವಾದರೂ ಕೊಡಬಹುದು. ವರ್ಷವಿಡಿ ದುಡಿಯುವ ಹಣದಲ್ಲಿ ಶೇ.1ರಷ್ಟನ್ನಾದರೂ ನಿಮ್ಮ ಒಳಿತಿಗಾಗಿ ಖರ್ಚು ಮಾಡಬೇಕು. [ವೃಷಭದಿಂದ ಕರ್ಕ ರಾಶಿಯವರಿಗೆ ಸಂಕ್ರಮಣ ಫಲ]

ಮೇಷ ರಾಶಿಯವರಿಗೆ ಮಕರ ಸಂಕ್ರಮಣ ಫಲವು ತುಂಬಾ ಒಳ್ಳೆಯದಿದೆ. ಇವರಿಗೆ ಬಯಸ್ಸಿದ್ದನ್ನು ಪಡೆಯುವ ಸುಯೋಗವಿರುತ್ತದೆ. ತುಂಬಾ ಇಷ್ಟಪಟ್ಟದ್ದನ್ನು ಖರೀದಿ ಮಾಡಲು ಶತಪ್ರಯತ್ನ ಮಾಡಿದ್ದರೆ ಈಗ ಅದನ್ನು ಪಡೆದುಕೊಳ್ಳುವ ಸಮಯ ಬಂದಿದೆ ಎಂದುಕೊಳ್ಳಿ. ಅಲ್ಲದೇ ಯಾವುದೋ ರೂಪದಿಂದ ನಿಮಗೆ ಹಣಕಾಸಿನ ಸಹಾಯವಾಗಲಿ ಅಥವಾ ಆಸ್ತಿಯ ಲಾಭವಾಗಲಿ ಸಿಗುತ್ತದೆ. ನೀವು ಮರೆತಿರುವ ಹಣವೂ ಕೂಡ ಈಗ ಮರಳಿ ಬರುತ್ತದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಲಾಭವನ್ನು ಪಡೆಯಬಹುದು. ಒಂಥರಾ ನೀವೇ ವಿಸ್ಮಯಗೊಳ್ಳಬಹುದು ಆ ರೀತಿಯಲ್ಲಿ ಹಣದ ಲಾಭಾಂಶ ನಿಮ್ಮ ಕೈ ಸೇರುತ್ತದೆ.
ಆದರೆ ಸಿಕ್ಕಾಪಟ್ಟೆ ಲಾಭ ಆಗಿದೆ ಎಂದುಕೊಂಡು ಬೇಕಾಬಿಟ್ಟಿಯಾಗಿ ಹಣವನ್ನು ಖರ್ಚು ಮಾಡದೇ ಉಳಿತಾಯ ಮಾಡಿಕೊಂಡು ಮುಂದಿನ ದಿನಗಳಿಗೆ ಬಳಸಿಕೊಳ್ಳಬೇಕು ಮೇಷ ರಾಶಿಯವರು. ಒಟ್ಟಿನಲ್ಲಿ ಇವರ ಹಣಕಾಸಿನ ಪರಿಸ್ಥಿತಿಯಲ್ಲಿ ಏರಿಕೆಯಾಗುವ ಸಮಯವೆನ್ನಬಹುದು. ಬ್ಯಾಂಕ್ ಬ್ಯಾಲೆನ್ಸ್ ಏರುತ್ತಿದೆ ಎಂದುಕೊಂಡು ಸೊಕ್ಕಿನಿಂದಿರದೇ ವಿನಯದಿಂದಿರಲು ಕಲಿಯಬೇಕು. ಏಕೆಂದರೆ ಮುಂದೆ ಶನಿದೇವರ ಅಷ್ಟಮ ಗೋಚಾರ ಶುರುವಾಗುತ್ತದೆ ನವೆಂಬರ್ದಿಂದ. ಆಗ ಹಣ ಎಷ್ಟಿದ್ದರೂ ಸಾಲಲ್ಲ ಎಂಬುದನ್ನೂ ನೋಟ್ ಮಾಡಿಟ್ಟುಕೊಳ್ಳಬೇಕು.
ಮೇಷ ರಾಶಿಯವರ ಯುಗಾದಿ ಫಲ ಎಂಬುದು ಮುಂದಿನ ಲೇಖನದಲ್ಲಿ (ಒನ್ಇಂಡಿಯಾ ಕನ್ನಡ)
ಲೇಖಕರ ಮೊಬೈಲ್ : 94815 22011
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications