ಮೋಕ್ಷಗುಂಡಂ ಗುರೂಜಿಯ 2015ರ ವರ್ಷ ಭವಿಷ್ಯ

ಪ್ರಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞರಾದ ಶ್ರೀ ರಾಘವೇಂದ್ರ ಮೋಕ್ಷಗುಂಡಂ ಗುರೂಜಿಯವರ '2015ರ ವರ್ಷ ಭವಿಷ್ಯ' ಪುಸ್ತಕ ಪ್ರಕಟವಾಗಿದ್ದು, ಮಾರುಕಟ್ಟೆಯಲ್ಲಿ ಈಗ ಲಭ್ಯವಿದೆ.

ಪಾಶ್ಚಿಮಾತ್ಯ ಜ್ಯೋತಿಷ್ಯ ಮತ್ತು ಭಾರತೀಯ ಜ್ಯೋತಿಷ್ಯದ ಸಮನ್ವಯದಿಂದ ರಚಿತವಾದ ಈ ಪುಸ್ತಕವನ್ನು ಮಂಗಳೂರಿನ ಚಿತ್ತಾ ಪಬ್ಲಿಕೇಷನ್ ಹೊರತಂದಿದೆ.

ಮುಂದಿನ ಇಡೀ ಒಂದು ವರ್ಷದ ಎಲ್ಲಾ ರಾಶಿಯವರ ಭವಿಷ್ಯವನ್ನು ಬಿಂಬಿಸುವ ಕೈಗನ್ನಡಿ ಇದಾಗಿದೆ. ಈ ಕಿರು ಹೊತ್ತಿಗೆಯನ್ನು ಹೊರತಂದು ನಿಮ್ಮೆಲ್ಲರನ್ನು ತಲುಪುವ ಪ್ರಯತ್ನ ಇದೆಂದು ಶ್ರೀ ರಾಘವೇಂದ್ರ ಮೋಕ್ಷಗುಂಡಂ ಅವರು ಹೇಳಿದ್ದಾರೆ. (ಶನಿಕಾಟದಲ್ಲಿ ಆಂಜನೇಯನಿಗೇಕೆ ಪೂಜೆ ಸಲ್ಲಿಕೆ)

Year 2015 prediction

ಜಗನ್ಮಾತೆ ಗಾಯತ್ರಿ ದೇವಿಯ ಅನುಗ್ರಹದಿಂದ ಇದನ್ನು ಒಂದು ಸಕಲರಿಗೂ ಉಪಯುಕ್ತವಾದ ಪುಸ್ತಕವಾಗಿ ಮಾಡಲು ಸಾಧ್ಯವಾಗಿದೆ. ಚಿತ್ತಾ ಪಬ್ಲಿಕೇಷನ್ ಅವರ ಪ್ರೀತಿಪೂರ್ವಕ ನಿರಂತರ ಒತ್ತಾಯ ನನಗೆ ಈ ಪುಸ್ತಕ ಬರೆಯಲು ಪ್ರೇರೇಪಣೆಯಾಗಿದೆ ಎಂದು ಮೋಕ್ಷಗುಂಡಂ ತಿಳಿಸಿದ್ದಾರೆ.

ನನ್ನ ಹದಿನೇಳು ವರ್ಷದ ಸಂಶೋಧನೆಯಲ್ಲಿ ನನ್ನೆಲ್ಲಾ 22 ಗುರುಗಳ ಅನುಗ್ರಹದಿಂದ ಕಂಡುಕೊಂಡ ಪರಮ ಸತ್ಯಗಳನ್ನು, ರಹಸ್ಯವಾದ ಮಾಹಿತಿಗಳನ್ನು ಜನರಿಗೆ ತಲುಪಿಸ ಬೇಕೆಂಬ ನನ್ನ ಆಕ್ಷಾಂಕ್ಷೆಗೆ ಚಿತ್ತಾ ಪಬ್ಲಿಕೇಷನ್ ಒತ್ತಾಸೆಯಾಗಿ ನಿಂತಿದೆ ಎಂದು ಗುರೂಜಿ, ಪ್ರಕಾಶಕರ ಬಗ್ಗೆ ಮೆಚ್ಚಿನ ಮಾತನ್ನಾಡಿದ್ದಾರೆ.

2015ರ ಸಾಲಿನ ದ್ವಾದಶ ರಾಶಿಗಳ ಸಂಪೂರ್ಣ ವರ್ಷ ಭವಿಷ್ಯವನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಈ ಪುಸ್ತಕವು ರಾಜ್ಯದ ಹೆಚ್ಚಿನ ಗ್ರಂಥಿಕೆ ಅಂಗಡಿ ಮತ್ತು ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. 88 ಪುಟಗಳನ್ನು ಹೊಂದಿರುವ ಈ ಪುಸ್ತಕದ ಬೆಲೆ ರುಪಾಯಿ 45.

ಪ್ರತೀ ತಿಂಗಳ ಫಲಾಫಲಗಳು, ಪರಿಹಾರಗಳು, ತಿಂಗಳ ಅತ್ಯುತ್ತಮ ದಿನಗಳು, ಎಚ್ಚರಿಕೆಯಿಂದ ಇರಬೇಕಾದ ದಿನ ಮುಂತಾದವುಗಳನ್ನು ರಾಶಿಗನುಗುಣವಾಗಿ ಪುಸ್ತಕದಲ್ಲಿ ನೀಡಲಾಗಿದೆ.

ಆಸಕ್ತರು ಪ್ರತಿಗಾಗಿ ಈ ನಂಬರನ್ನು ಸಂಪರ್ಕಿಸ ಬಹುದಾಗಿದೆ : 94800-88960 ಅಥವಾ 84318-23004

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+