• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಷೇರು ಮಾರ್ಕೆಟ್ ನಲ್ಲಿ ಹಣ ಹಾಕಬಹುದಾ ಎಂಬ ಪ್ರಶ್ನೆಗೆ ಜ್ಯೋತಿಷ್ಯ ಉತ್ತರ

ಷೇರು ಮಾರ್ಕೆಟ್ ನಲ್ಲಿ ಈಗ ಹಣ ಹಾಕಬಹುದಾ? ಈ ಪ್ರಶ್ನೆಯೊಂದಿಗೆ ನನ್ನ ಬಳಿ ಬಹಳ ಜನ ಬರುತ್ತಾರೆ. ಬರೀ ಷೇರು ಮಾರ್ಕೆಟ್ ಮಾತ್ರ ಅಲ್ಲ. ಕೆಲವರು ಸಟ್ಟಾ ವ್ಯವಹಾರ ಕೂಡ ಮಾಡುತ್ತಾರೆ. ಅಂದರೆ, ಚಿನ್ನ- ಬೆಳ್ಳಿ, ಆಹಾರ ಧಾನ್ಯಗಳನ್ನು ಬೆಲೆ ಏರಿಕೆ ಅಥವಾ ಕಡಿಮೆ ಆಗಬಹುದು ಎಂಬ ಲೆಕ್ಕಾಚಾರದಲ್ಲಿ ವಹಿವಾಟು ನಡೆಸುತ್ತಾರೆ.

ಆದರೆ, ಎಲ್ಲವೂ ಇದನ್ನು ಮಾಡಿ, ಲಾಭ ಗಳಿಸುವುದಕ್ಕೆ ಸಾಧ್ಯವಾ? ಖಂಡಿತಾ ಸಾಧ್ಯ ಇಲ್ಲ. ಯಾವ ವ್ಯಕ್ತಿಯ ಜನ್ಮ ಜಾತಕದಲ್ಲಿ ಶುಕ್ರ ಉಚ್ಚನಾಗಿರುತ್ತಾನೋ ಅಂಥವರಿಗೆ ಮಾತ್ರ ಷೇರು ಮಾರ್ಕೆಟ್ ಮತ್ತಿತರ ಸಟ್ಟಾ ವ್ಯವಹಾರದಲ್ಲಿ ಲಾಭ ಕಾಣುವುದಕ್ಕೆ ಸಾಧ್ಯ. ಹಾಗಿಲ್ಲದಿದ್ದರೆ ಲಾಭ ಬರುವುದಿಲ್ಲ.

ಜಾತಕದಲ್ಲಿ ಬುಧ- ಗುರು ಗ್ರಹಗಳು ಉಚ್ಚವಾಗಿದ್ದರೆ ಅಂಥವರು ಬುದ್ಧಿವಂತರು, ವಿದ್ಯಾವಂತರು ಆಗಿರುತ್ತಾರೆ. ಅದರಲ್ಲೂ ಬುಧ ಉತ್ತಮವಾಗಿದ್ದರೆ ತಮ್ಮ ಮಾತಿನ ಮೂಲಕ ಎಂಥವರನ್ನೂ ಮೋಡಿ ಮಾಡುತ್ತಾರೆ. ಇನ್ನು ಗುರು ಉತ್ತಮ ಸ್ಥಿತಿಯಲ್ಲಿದ್ದರೆ ಅಪಾರ ಪ್ರಮಾಣದ ಜ್ಞಾನ ಸಂಪಾದಿಸುತ್ತಾರೆ. ಅತ್ಯುತ್ತಮ ಪ್ರೊಫೆಸರ್ ಗಳು, ಪ್ರವಚನಕಾರರು, ಪ್ರಖರ ವಾಗ್ಮಿಗಳು, ಮಾಧ್ಯಮ ಲೋಕದಲ್ಲಿ ಹೆಸರು ಆಗಬೇಕು ಎಂದಾದಲ್ಲಿ ಈ ಎರಡೂ ಗ್ರಹ ಅನುಕೂಲಕರ ಸ್ಥಿತಿಯಲ್ಲಿ ಇರಬೇಕು.

ವ್ಯಾಪಾರದಲ್ಲಿ ಹಾಗೂ ಷೇರು ಮಾರುಕಟ್ಟೆ, ಸಟ್ಟಾ ವ್ಯವಹಾರದಲ್ಲಿ ಲಾಭ ಆಗಬೇಕು ಎಂದಾದಲ್ಲಿ ಶುಕ್ರ, ಕಮಿಷನ್, ಟ್ರಾನ್ಸ್ ಪೋರ್ಟೇಷನ್ ವ್ಯವಹಾರಕ್ಕೆ ಬುಧ, ರಿಯಲ್ ಎಸ್ಟೇಟ್ ಗೆ ಕುಜ, ಸರ್ಕಾರದಲ್ಲಿ ಕಾಂಟ್ರ್ಯಾಕ್ಟ್ ಗಳಿಗೆ ರವಿ, ಕಬ್ಬಿಣ- ಸಿಮೆಂಟ್ ಮೊದಲಾದ ವ್ಯವಹಾರಕ್ಕೆ ಶನಿ, ವೈದ್ಯಕೀಯ ಸಲಕರಣೆ ಮೊದಲಾದವಕ್ಕೆ ಚಂದ್ರ, ಶಿಕ್ಷಣ ಸಂಸ್ಥೆಗೆ ಗುರು ಗ್ರಹ ಉತ್ತಮ ಸ್ಥಾನದಲ್ಲಿ ಇರುವುದು ಮುಖ್ಯ.

ಆದ್ದರಿಂದ ಷೇರು ಮಾರ್ಕೆಟ್ ವೊಂದೇ ಅಲ್ಲ, ಯಾವುದೇ ವ್ಯಾಪಾರ- ವ್ಯವಹಾರಕ್ಕೆ ತೊಡಗಿಕೊಳ್ಳುವುದಕ್ಕೆ ಮುನ್ನ ಜನ್ಮ ಜಾತಕವನ್ನು ಪರಿಶೀಲನೆ ಮಾಡಿಸಿಕೊಳ್ಳಿ. ಯಶಸ್ಸು ಪಡೆದುಕೊಳ್ಳಿ.

ಶ್ರೀ ಪಂಚಮುಖಿ ಜ್ಯೋತಿಷ್ಯಂ, ಪಂಡಿತ್ ಶ್ರೀ ಗಣೇಶಕುಮಾರ್, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಸ್ತ್ರೀ ಪುರುಷ ಆಕರ್ಷಣೆ , ದಾಂಪತ್ಯ, ಪ್ರೇಮವಿಚಾರ , ಮಾನಸಿಕ, ಗೃಹಶಾಂತಿ, ಆರೋಗ್ಯ, ಹಣಕಾಸು, ಮಾಟಭಾದೆ, ಶತ್ರುಕಾಟ, ಅಲ್ಲದೇ ರಾಜಯೋಗವಶಗಳು, ಅಖಂಡಯೋಗವಶಗಳು ಇನ್ನಿತರ ನಿಮ್ಮ ಯಾವುದೇ ಕಠಿಣ, ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಪರಿಹಾರ ಶತಸಿದ್ದ . (ಫೋನಿನ ಮೂಲಕ ಪರಿಹಾರ) PH:-9880533337 ಮೈಸೂರು ಸರ್ಕಲ್ (ಸಿರಸಿ ವೃತ್ತ) ಚಾಮರಾಜಪೇಟೆ, ಬೆಂಗಳೂರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X