• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಯೋತಿಷ್ಯ: ಯಾರನ್ನೂ ಕಾಡಬಹುದಾದ ದೃಷ್ಟಿದೋಷ ಮತ್ತು ಪರಿಹಾರ ಮಾರ್ಗ

By ಶ್ರೀ ಶಂಕರನಾರಾಯಣ
|

ಬಹಳ ಜ್ಯೋತಿಷಿಗಳು ಸುಲಭವಾಗಿ ಕಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲದ ಒಂದು ದೊಡ್ಡ ಸಮಸ್ಯೆ ಬಗ್ಗೆ ಈ ದಿನ ನಿಮಗೆ ತಿಳಿಸುತ್ತೇನೆ. ಈಗಿನ ತಲೆಮಾರಿನವರಿಗೆ ಹೆಚ್ಚು ಉಪಯೋಗ ಆಗುವಂಥ ವಿಷಯ ಇದು. ಹಿಂದಿನ ತಲೆಮಾರಿನವರಿಗೆ ಈ ಬಗ್ಗೆ ಖಂಡಿತಾ ಗೊತ್ತಿರುತ್ತದೆ. ಆದರೆ ಸಮಸ್ಯೆ ಗುರುತಿಸುವುದಕ್ಕೆ ಕೆಲವರಿಗೆ ಸಾಧ್ಯವಾಗದೇ ಇರಬಹುದು. ಏನು ಆ ಸಮಸ್ಯೆ ಹೆಸರು ಅಂತೀರಾ? ಆ ಸಮಸ್ಯೆ ಹೆಸರು "ದೃಷ್ಟಿ ದೋಷ".

ಹಲವು ಮಂದಿ ಈ ದೋಷಕ್ಕೆ ಗುರಿ ಆಗುತ್ತಾರೆ. ಅದರಲ್ಲೂ ಹೊಸದಾಗಿ ಮನೆ ಕಟ್ಟುವಾಗ, ಸೈಟ್ ಖರೀದಿಸಿದ ಮೇಲೆ, ವಾಹನ ಕೊಂಡುಕೊಂಡ ನಂತರ, ಆಯಾ ವ್ಯಕ್ತಿಯ ಆರ್ಥಿಕ ಸ್ಥಿತಿಗಿಂತ ಮೇಲ್ಮಟ್ಟದವರ ಜತೆಗೆ ವೈವಾಹಿಕ ಸಂಬಂಧಗಳು ಏರ್ಪಟ್ಟಾಗ ಈ ರೀತಿ ದೃಷ್ಟಿದೋಷ ಆಗುತ್ತದೆ. ನಿಮಗೆ ಗೊತ್ತಿರಲಿ, ಜಮೀನಿನಲ್ಲಿ ತುಂಬ ಚೆನ್ನಾಗಿ ಫಸಲು ಬಂದಾಗಲೂ ಹೀಗಾಗುತ್ತದೆ. ಮನೆಯಲ್ಲಿ ಸಾಕಿದ ಪ್ರಾಣಿಗಳಿಗೂ ಇದರ ಪರಿಣಾಮ ಆಗುತ್ತದೆ.

ಏನಿದು ದೃಷ್ಟಿದೋಷ?

ಒಬ್ಬ ವ್ಯಕ್ತಿಯ ದಿಢೀರ್ ಏಳಿಗೆ ಅಥವಾ ವಿಪರೀತ ದೊಡ್ಡ ಮಟ್ಟದ ಯಶಸ್ಸು, ಗಳಿಕೆ, ಕೀರ್ತಿ ಮತ್ತೊಬ್ಬರಲ್ಲಿ ಈರ್ಷ್ಯೆ ಹುಟ್ಟಿಸುತ್ತದೆ. ಇಂಥ ಭಾವನೆ ಆ ವ್ಯಕ್ತಿಗೆ ಸಂಬಂಧಿಸಿದವರಲ್ಲೇ ಹುಟ್ಟಬೇಕು ಅಂತೇನೂ ಇಲ್ಲ. ತನ್ನ ಪಾಲಿಗೆ ಅದು ಸಿಗಲಿಲ್ಲ ಎಂಬ ಬೇಸರ ಅಥವಾ ಅಸೂಯೆ ಪಡುವ ವ್ಯಕ್ತಿತ್ವ ಇರುವ ಅಪರಿಚಿತರಲ್ಲೂ ಕಾಣಿಸಿಕೊಳ್ಳಬಹುದು.

ಕುಟುಂಬದ ಅಶಾಂತಿಯ ವಾತಾವರಣಕ್ಕೆ ಜ್ಯೋತಿಷ್ಯ ಪರಿಹಾರ

ಹೊಸ ಮನೆಗೆ ಹೋದ ತಕ್ಷಣ ಹಣಕಾಸಿನ ಸಮಸ್ಯೆ, ಜಮೀನಿನಲ್ಲಿ ಪದೇಪದೇ ಫಸಲು ಕೈ ಕೊಡುವುದು, ಸಾಕು ಪ್ರಾಣಿಗಳು ಕಾರಣವೇ ಇಲ್ಲದೆ ಸಾವನ್ನಪ್ಪುವುದು, ದಿಢೀರ್ ವ್ಯಾಪಾರ ನಷ್ಟ, ಮನೆಯಲ್ಲಿ ವಿನಾಕಾರಣದ ಕಲಹ, ಪದೇ ಪದೇ ವಾಹನ ಅಪಘಾತ, ಬೆಂಕಿ ಅವಘಡಗಳು ಇವೆಲ್ಲವೂ ಮುನ್ಸೂಚನೆಗಳೇ.

ದೃಷ್ಟಿದೋಷವನ್ನು ಗುರುತಿಸುವುದು ಹೇಗೆ?

ತುಂಬ ಚೆನ್ನಾಗಿ ವ್ಯಾಪಾರ ಆಗುತ್ತಿತ್ತು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಅಂಗಡಿ ದೊಡ್ಡದು ಮಾಡಲು ಮುಂದಾದರು. ಬಹಳ ಖರ್ಚು ಮಾಡಿ, ಅಲಂಕಾರ ಮಾಡಿ ಅಂಗಡಿ ತೆರೆದರು. ಅದೊಂದು ಸಿಹಿ ತಿನಿಸು ಮಾರಾಟದ ಮಳಿಗೆ. ಮುಂಚಿನಂತೆಯೇ ರುಚಿ ಇದೆ. ಬೆಲೆಯಲ್ಲೂ ದೊಡ್ಡ ವ್ಯತ್ಯಾಸ ಮಾಡಿಲ್ಲ. ಆದರೆ ಮುಂಚೆ ಆಗುತ್ತಿದ್ದ ವ್ಯಾಪಾರದ ಅರ್ಧದಷ್ಟು ಕೂಡ ಆಗುತ್ತಿಲ್ಲ. ಈಗ ಆ ಮಳಿಗೆಯನ್ನೇ ಮಾರುವ ಆಲೋಚನೆಯಲ್ಲಿ ಇದ್ದಾರೆ.

ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಪ್ರತಿಷ್ಠಿತ ಬಡಾವಣೆಯಲ್ಲಿ ಡಬಲ್ ಸೈಟ್ ಖರೀದಿಸಿ, ಅದ್ಧೂರಿ ಮನೆ ಕಟ್ಟಿಸಿದರು. ಅದರ ಬೆನ್ನಿಗೇ ಒಳ್ಳೆ ಕಡೆ ಸಂಬಂಧ ಕೂಡಿಬಂದು, ಮಗನಿಗೆ ಅದ್ಧೂರಿ ಮದುವೆ ಮಾಡಿದರು. ಆ ನಂತರ ಅವರ ಆದಾಯ ಅದ್ಯಾವ ಪರಿ ಕುಸಿಯುತ್ತಾ ಬಂತು ಅಂದರೆ, ಈಗ ಆ ಮನೆಯನ್ನೇ ಮಾರಾಟಕ್ಕೆ ಇಟ್ಟಿದ್ದಾರೆ. ಕಷ್ಟಗಳು ತೀರಿದರೆ ಸಾಕು ಅನ್ನುವಂತಾಗಿದೆ.

ದುಬಾರಿ ಬಟ್ಟೆ, ಒಡವೆ ಹಾಕಿಕೊಂಡು ಕಾರ್ಯಕ್ರಮಕ್ಕೆ ಹೋಗಿ ಬಂದ ತಕ್ಷಣ ಕೆಲವರಿಗೆ ತಲೆ ನೋವು, ವಾಂತಿ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವೈದ್ಯಕೀಯ ಪರೀಕ್ಷೆಗಳು ಮಾಡಿಸಿದಾಗ ಅದರಲ್ಲಿ ಯಾವ ಸಮಸ್ಯೆಯೂ ಕಂಡುಬರುವುದಿಲ್ಲ. ಇದು ಕೂಡ ದೃಷ್ಟಿ ದೋಷದ ಒಂದು ಬಗೆ.

ಸಮಸ್ಯೆ ಆಗುವುದು ಎಲ್ಲಿ?

ನೀವು ಗಮನಿಸಿ ನೋಡಿ, ತುಂಬ ಅದ್ಧೂರಿಯಾಗಿ ಮುಹೂರ್ತವಾದ ಸಿನಿಮಾಗಳು ಆರಂಭದಲ್ಲೇ ನಿಂತುಹೋಗುತ್ತವೆ. ಅವಘಡಗಳು ಎದುರಾಗುತ್ತವೆ. ಯಶಸ್ಸು ಕಂಡ ಉದಾಹರಣೆಗಳು ಸಿಗಲ್ಲ. ಆ ಸಿನಿಮಾ ಪೂರ್ತಿ ಮಾಡುವುದೇ ಕಷ್ಟ ಆಗುತ್ತದೆ. ಅದ್ಧೂರಿ ಮದುವೆಗಳು ಸಹ ಕುಟುಂಬದಲ್ಲಿ ನಾನಾ ಸಂಕಷ್ಟಗಳನ್ನು ತಂದೊಡ್ಡುತ್ತವೆ.

ನಾವು ಮಾಡುವ ಕಾರ್ಯಕ್ರಮ ನೋಡಿ, ಮತ್ತೊಬ್ಬರು ಹೊಟ್ಟೆಕಿಚ್ಚು ಪಟ್ಟುಕೊಳ್ಳಬೇಕು ಎಂದು ಆಲೋಚನೆ ಮಾಡುತ್ತಾರಲ್ಲಾ ಅಲ್ಲೇ ಸಮಸ್ಯೆ ಇರುವುದು. ದೃಷ್ಟಿದೋಷದ ಸಮಸ್ಯೆ ಆಗುವುದು ಅಲ್ಲೇ. ಮನೆ ಖರೀದಿಸಿದೆ. ಅದರ ಹಿಂದೆಯೇ ಕಾರು ತಂದೆ. ವಿದೇಶ ಪ್ರವಾಸ ಮಾಡಿಬಂದೆ. ಹೀಗೆ ಎಲ್ಲವನ್ನೂ ಸಾಲ ತೆಗೆದುಕೊಂಡೇ ಮಾಡಿರಬಹುದು. ಆದರೆ ಇದು ದೃಷ್ಟಿದೋಷಕ್ಕೆ ಕಾರಣ ಆಗುತ್ತದೆ.

ಎಲ್ಲರಿಗೂ ಹೀಗೇ ಆಗುತ್ತದಾ?

ಹಾಗಂತ ಈ ದೋಷ ಎಲ್ಲರಿಗೂ ಆಗುತ್ತದಾ? ಇಲ್ಲ. ಈಗ ಮೈಸೂರು ರಾಜ ವಂಶಸ್ಥರು ಅದ್ಧೂರಿ ಮದುವೆ, ನಾಮಕರಣ ಮಾಡಿದರೂ ಅಂತಿಟ್ಟುಕೊಳ್ಳಿ. ಅದರಿಂದ ಸಮಸ್ಯೆ ಆಗುವುದಿಲ್ಲ. ಜತೆಗೆ ಜಾತಕ ಬಲ ಕೂಡ ನೋಡಬೇಕಾಗುತ್ತದೆ. ನಿಮಗೆ ಗೊತ್ತಿರಲಿ, ಎಷ್ಟೋ ಮಂದಿ ಮನೆಗೆ ವಜ್ರದ ಆಭರಣ ಖರೀದಿಸಿ ತಂದ ಕೆಲವೇ ದಿನಗಳಲ್ಲಿ ನಾನಾ ಸಮಸ್ಯೆಗಳಿಗೆ ಸಿಲುಕಿಕೊಂಡಿದ್ದಾರೆ.

ನಮ್ಮ ರಾಜ್ಯದ ಎಷ್ಟೋ ರಾಜಕಾರಣಿಗಳಿಗೆ ಇಂಥ ದೃಷ್ಟಿದೋಷಗಳಾಗಿವೆ. ಹಾಗಂತ ದೊಡ್ಡ ಮಟ್ಟದಲ್ಲಿ ಆಲೋಚನೆ, ಖರೀದಿ ಮಾಡುವುದು ತಪ್ಪಾ ಅಂತ ಕೇಳಬಹುದು. ಖಂಡಿತಾ ತಪ್ಪಲ್ಲ. ಆದರೆ ಅದಕ್ಕೆ ಬೇಕಾದ ದೋಷ ನಿವಾರಣೆ ಕ್ರಮಗಳನ್ನು ಮುಂಚಿತವಾಗಿಯೇ ಆಲೋಚಿಸುವುದು ಮುಖ್ಯ ಆಗುತ್ತದೆ.

ಒಬ್ಬ ವ್ಯಕ್ತಿಯ ಉತ್ತಮ ದೈಹಿಕ ಆರೋಗ್ಯವೂ ಕೆಲವೊಮ್ಮೆ ದೃಷ್ಟಿದೋಷಕ್ಕೆ ಕಾರಣ ಆಗಬಹುದು. ಅದರಿಂದಾಗಿ ಪದೇ ಪದೇ ಅನಾರೋಗ್ಯ ಎದುರಿಸುತ್ತಿದ್ದಲ್ಲಿ ಕೂಡ ಪರಿಹಾರ ಕಂಡುಕೊಳ್ಳಿ.

ದೋಷ ನಿವಾರಣೆ ಹೇಗೆ?

ಇನ್ನೊಂದು ಉದಾಹರಣೆ ನೀಡಿ, ಪರಿಹಾರದ ಬಗ್ಗೆ ತಿಳಿಸುತ್ತೇನೆ. ಹೆಸರಾಂತ ಸಿನಿಮಾ ನಿರ್ದೇಶಕರೊಬ್ಬರು ಮರ್ಸಿಡೀಸ್ ಬೆಂಜ್ ಕಾರು ಖರೀದಿ ಮಾಡಿದರು. ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಅವರು, ಬಹಳ ಶ್ರಮ ಪಟ್ಟು ಮೇಲೆ ಬಂದವರು. ಅದುವರೆಗೆ ಅವರ ಯಶಸ್ಸಿನ ಗ್ರಾಫ್ ಮೇಲ್ಮಟ್ಟದಲ್ಲಿತ್ತು. ಅದಾದ ನಂತರ ಸಾಲು ಸಾಲು ವೈಫಲ್ಯ. ಇದೇ ರೀತಿಯ ಸಮಸ್ಯೆ ನಿರ್ದೇಶಕ ಕಂ ನಟರಾದವರೊಬ್ಬರಿಗೆ ಕೂಡ ಆಯಿತು.

ಅದ್ಧೂರಿ- ವೈಭವ ಇದನ್ನು ದೃಷ್ಟಿ ತಾಗದಂತೆ ಪ್ರದರ್ಶಿಸುವುದು ಹೇಗೆ ಅನ್ನೋದು ತಿಳಿದುಕೊಳ್ಳಬೇಕು. ಈಗಾಗಲೇ ಈ ಸಮಸ್ಯೆ ಎದುರಿಸುತ್ತಿದ್ದಲ್ಲಿ ಗಣಪತಿ ಆರಾಧನೆ, ಸುದರ್ಶನ ಹೋಮ ಸೇರಿದಂತೆ ನಾನಾ ಬಗೆಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ಆದರೆ ಅದಕ್ಕೆ ಆ ವ್ಯಕ್ತಿಯ ಜಾತಕ ಬೇಕಾಗುತ್ತದೆ. ಒಂದು ವೇಳೆ ಜಾತಕ ಇಲ್ಲದಿದ್ದರೂ ತೊಂದರೆ ಇಲ್ಲ. ವೈಯಕ್ತಿಕವಾಗಿ ಭೇಟಿ ಆದಲ್ಲಿ ಪರಿಹಾರ ಸೂಚಿಸಬಹುದು.

ಶುಭವಾಗಲಿ.

ಶ್ರೀ ಶಂಕರ ನಾರಾಯಣ

ಮೀರಾ ನಿವಾಸ, ಸಾಯಿಬಾಬಾ ದೇವಸ್ಥಾನದ ಎದುರು,

ಶೇಷಾದ್ರಿಪುರಂ ಕಾಲೇಜಿನ ಹತ್ತಿರ, ಶೇಷಾದ್ರಿಪುರ- ಬೆಂಗಳೂರು- 560020

ಸಂಪರ್ಕ ಸಂಖ್ಯೆ: 9945065555

ಇ-ಮೇಲ್: Shankarnarayana1981@gmail.com

ವೆಬ್‌ಸೈಟ್: srisaiastrologer.com

English summary
Here is an explainer about evil eye problem according to vedic astrology, by well known astrologer Shankara Narayana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more