• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪೇಂದ್ರ ರಾಜಕೀಯ ಭವಿಷ್ಯದ ಬಗ್ಗೆ ಜಾತಕ ಏನು ಹೇಳುತ್ತದೆ?

By ಪ್ರಕಾಶ್ ಅಮ್ಮಣ್ಣಾಯ
|
   ಉಪೇಂದ್ರ ರಾಜಕೀಯ ಭವಿಷ್ಯ : ಜಾತಕ ವಿಶ್ಲೇಷಣೆ | Oneindia Kannada

   ಈ ವ್ಯಕ್ತಿಯ ಜಾತಕ ವಿಶ್ಲೇಷಣೆ ಮಾಡಬೇಕು ಎಂಬುದು ಈ ಸನ್ನಿವೇಶಕ್ಕೆ ಹುಟ್ಟಿಕೊಂಡ ಉದ್ದೇಶ. ಈತನ ಪ್ರತಿಭೆ, ಉದ್ದೇಶ ಶುದ್ಧತೆ, ರಾಜಕೀಯ ಭವಿಷ್ಯ ಹಾಗೂ ಸಿನಿಮಾ ಸಾಧನೆ ಬಗ್ಗೆ ಒಂದು ಸಣ್ಣ ಕುತೂಹಲ ಇಟ್ಟುಕೊಂಡು ಈ ಲೇಖನ ಸಿದ್ಧವಾಗಿದೆ. ಓದಿದ ನಂತರ ಈ ಎಲ್ಲ ವಿಚಾರಗಳ ಪೈಕಿ ಕೆಲವಾದರೂ ನೆನಪಿನಲ್ಲಿ ಇಟ್ಟುಕೊಳ್ಳಿ.

   ಏಕೆಂದರೆ ಭವಿಷ್ಯ ನಿಜವೋ ಸುಳ್ಳೋ ಎಂದು ನಿರ್ಧರಿಸಲು ನಿಮಗೆ ಒಂದು ಅಳತೆಗೋಲು ಸಿಕ್ಕಂತಾಗುತ್ತದೆ. ಅಯ್ಯೋ, ಇದೇನು ಇಷ್ಟುದ್ದ ಪೀಠಿಕೆ ಹಾಕ್ತಿದ್ದೀರಲ್ಲಾ, ಉಪೇಂದ್ರ ಸಿನಿಮಾದ ಆರಂಭ ಇದ್ದ ಹಾಗೆ ಇದೆಯಲ್ಲಾ ಎಂದು ನಿಮಗೆ ಅನಿಸುತ್ತಿದ್ದರೆ ಈಗ ಜಾತಕ ಪರಾಮರ್ಶೆ ಮಾಡುತ್ತಿರುವುದು ಅದೇ ಉಪೇಂದ್ರ ಅವರದು.

   ದೇವರಿದ್ದಾನೆ! ನಾಳೆ ಅಂತಿಮ ನಿರ್ಧಾರ ಪ್ರಕಟಿಸುವೆ: ಉಪ್ಪಿ

   ರಾಜಕಾರಣದಲ್ಲೇ ಬದಲಾವಣೆ ಆಗಬೇಕು, ಕರ್ನಾಟಕದಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿ ಆಗಬೇಕು. ಪ್ರಜೆಗಳ ಕೈಗೆ ಅಧಿಕಾರದ ರಿಮೋಟ್ ನೀಡಿ, ಕಾರ್ಮಿಕರ ರೀತಿ ಜನರ ಕೆಲಸ ಮಾಡುವಂಥ 'ಪ್ರಜಾಕಾರಣಿ'ಗಳು ಬೇಕು ಎಂದು ದೊಡ್ಡ ಕನಸು ಕಂಡ ಉಪೇಂದ್ರ ಅವರಿಗೆ ಆರಂಭದಲ್ಲೇ ವಿಘ್ನವಾಗಿದೆ. ಅದಕ್ಕೆ ಕಾರಣ ಏನು? ಅವರ ಭವಿಷ್ಯ ಹೇಗಿದೆ ಎಂದು ತಿಳಿಯುವುದಕ್ಕೆ ಮುಂದೆ ಓದಿ.

   ಪುಷ್ಯ ನಕ್ಷತ್ರ, ಕರ್ಕಾಟಕ ರಾಶಿ

   ಪುಷ್ಯ ನಕ್ಷತ್ರ, ಕರ್ಕಾಟಕ ರಾಶಿ

   ಉಪೇಂದ್ರ ಅವರ ಜನ್ಮ ದಿನಾಂಕ 18-9-1968. ಪುಷ್ಯ ನಕ್ಷತ್ರ ಮೂರನೇ ಪಾದ, ಕರ್ಕಾಟಕ ರಾಶಿ. ವೃಶ್ಚಿಕ ಲಗ್ನ. ಜನಿಸುವ ವೇಳೆಯಲ್ಲಿ ಶನಿ ಮಹರ್ದಶೆ ಒಂಬತ್ತು ವರ್ಷ ಬಾಕಿ ಇತ್ತು. ಅಂದ ಹಾಗೆ ಇವರ ಜನ್ಮ ಜಾತಕದಲ್ಲಿ ಮೇಷ ರಾಶಿಯಲ್ಲಿ ಶನಿ ಸ್ಥಿತನಾಗಿದ್ದು, ವಿಪರೀತ ದುರ್ಬಲವಾಗಿದೆ.

   ಪಟ್ಟು ಬಿಡುವ ಜಾಯಮಾನದವರಲ್ಲ

   ಪಟ್ಟು ಬಿಡುವ ಜಾಯಮಾನದವರಲ್ಲ

   ಜಾತಕದ ಪ್ರಕಾರ ಉಪೇಂದ್ರ ವಿಪರೀತ ಶಿಸ್ತಿನ ಮನುಷ್ಯ. ಅಂದುಕೊಂಡದ್ದು ಯಥಾವತ್ತಾಗಿ ಜಾರಿ ಆಗುವವರೆಗೆ ಪಟ್ಟು ಬಿಡುವ ಪೈಕಿ ಅಲ್ಲ. ಬುದ್ಧಿ ಪೊಲೀಸರಂತೆ. ಎದುರಿಗಿನ ವ್ಯಕ್ತಿಯ ಮೈಂಡ್ ರೀಡಿಂಗ್ ಮಾಡಬಲ್ಲ ಶಕ್ತಿ ಇದೆ. ಆದರೆ ಆಲೋಚನೆ ಮಾಡುವುದು ಕಡಿಮೆ, ಅವಸರದಲ್ಲಿ ಕಾರ್ಯ ಜಾರಿಗೆ ನಿಂತು ಬಿಡುತ್ತಾರೆ.

   ನಾವೂ ಒಂದು ಸಮೀಕ್ಷೆ ಬಿಡ್ತೀವಿ ನೋಡಿ: ಸಂದರ್ಶನದಲ್ಲಿ ಉಪೇಂದ್ರ

   ರವಿ-ಬುಧ ನಿಪುಣ ಯೋಗ

   ರವಿ-ಬುಧ ನಿಪುಣ ಯೋಗ

   ಇವರ ಜಾತಕದಲ್ಲಿ ರವಿ ಬುಧ ನಿಪುಣ ಯೋಗವಿದೆ. ಇಂಥವರು ಒಳ್ಳೆ ನಾಯಕರಾಗುತ್ತಾರೆ. ಮಾತಿನ ವಿಚಾರದಲ್ಲಿ ಹಿಡಿತ ಇರುತ್ತದೆ. ಆದರೆ ಜನ್ಮ ಸಮಯದಲ್ಲಿ ದುರ್ಬಲನಾಗಿರುವ ಶನಿ ಇವರಿಗೆ ಯಾವುದರಲ್ಲೂ ಸ್ಪಷ್ಟತೆ ನೀಡುವುದಿಲ್ಲ. ಎಲ್ಲ ವಿಚಾರದಲ್ಲೂ ಹಲವು ದೃಷ್ಟಿಕೋನವನ್ನು ಕಣ್ಣೆದುರು ತಂದು, ಗೊಂದಲಕ್ಕೆ ಕಾರಣ ಆಗುತ್ತದೆ.

   ಹೊಸ ಪಕ್ಷ ಕಟ್ಟುವ ಆಲೋಚನೆ ತಪ್ಪು

   ಹೊಸ ಪಕ್ಷ ಕಟ್ಟುವ ಆಲೋಚನೆ ತಪ್ಪು

   ಉಪೇಂದ್ರ ರಾಜಕೀಯಕ್ಕೆ ಬಂದದ್ದು ತಪ್ಪಲ್ಲ. ಆದರೆ ಹೊಸ ಪಕ್ಷ ಕಟ್ಟುತ್ತೇನೆ ಎಂದು ಹೊರಟದ್ದು ಸರಿಯಾದ ನಿರ್ಧಾರ ಅಲ್ಲ. ಇದು ಅವರಿಗೆ ಉತ್ತಮ ಸಮಯ. ಅವರೇನಾದರೂ ಒಂದು ಸಿನಿಮಾ ಮಾಡಿದ್ದರೆ ಅದು ಭಾರೀ ಹಿಟ್ ಆಗಿ, ಇನ್ನು ಹತ್ತು ವರ್ಷಗಳ ಕಾಲ ಬೇಡಿಕೆಯಲ್ಲಿ ಇರುತ್ತಿದ್ದರು. ಅಗಾಧವಾಗಿ ಹೆಸರು, ಕೀರ್ತಿ, ಹಣ ಎಲ್ಲ ಸಂಪಾದನೆ ಆಗುತ್ತಿತ್ತು.

   ಉಪ್ಪಿ ಭಾಗ 3: ಕೆಪಿಜೆಪಿಗೆ ರಾಜೀನಾಮೆ, ಪ್ರಜಾಕೀಯ ಉದಯ

   ಶಾಸಕರಾಗುವ ಯೋಗವಿದೆ

   ಶಾಸಕರಾಗುವ ಯೋಗವಿದೆ

   ಹಾಗಂತ ಉಪೇಂದ್ರ ಅವರಿಗೆ ರಾಜಕೀಯದಲ್ಲಿ ಭವಿಷ್ಯ ಇಲ್ಲ ಅಂತ ನಿರ್ಧರಿಸಬೇಡಿ. ಈತ ಖಂಡಿತಾ ಶಾಸಕರಾಗಿಯೇ ಆಗುತ್ತಾರೆ. ವಿಧಾನಪರಿಷತ್ ಸದಸ್ಯರಾಗಿ ಆದರೂ ಸೇವೆ ಮಾಡುತ್ತಾರೆ. ಮಂತ್ರಿ ಆಗುವ ಅವಕಾಶ ಸಹ ಇವರಿಗಿದೆ. ಆದರೆ ಸ್ವಂತ ಪಕ್ಷ ಮಾಡಿದರೆ ಇವರ ಮೇಲೆ ಸರ್ವಾಧಿಕಾರಿ ಎಂಬ ಆರೋಪ ಬರುತ್ತದೆ. ಏಕೆಂದರೆ, ತಾನು ಕೈಗೊಂಡ ನಿರ್ಣಯದಿಂದ ಹಿಂತೆಗೆಯುವ ಆಸಾಮಿಯಲ್ಲ. ಜತೆಗೆ ಇವರ ಶಿಸ್ತಿನೊಂದಿಗೆ ಹೆಣಗುವುದು ಸಲೀಸಲ್ಲ.

   ಶಿಸ್ತು, ಸಂಘಟನೆ ಇರುವ ಪಕ್ಷಕ್ಕೆ ಸೇರಿದರೆ ಒಳಿತು

   ಶಿಸ್ತು, ಸಂಘಟನೆ ಇರುವ ಪಕ್ಷಕ್ಕೆ ಸೇರಿದರೆ ಒಳಿತು

   ಚಿತ್ರರಂಗದಲ್ಲಿ ಅನಂತನಾಗ್ ಅವರು ಹೇಗೆ ಸರಕಾರದಲ್ಲಿ ಸಚಿವರಾಗಿದ್ದರೋ ಅದೇ ರೀತಿ ಉಪೇಂದ್ರರನ್ನು ಸಹ ಮುಂದೊಂದು ದಿನ ನಾವೆಲ್ಲ ಸಚಿವರಾಗಿ ನೋಡಿದರೆ ಅಚ್ಚರಿಯಿಲ್ಲ. ಆದರೆ ಉಪೇಂದ್ರರು ಈಗ ಕೈಗೊಳ್ಳುವ ತೀರ್ಮಾನದ ಮೇಲೆ ಭವಿಷ್ಯ ನಿಂತಿದೆ. ನಾನು ಸ್ವಂತ ಪಕ್ಷವೇ ಮಾಡುತ್ತೇನೆ ಎಂದು ಹೊರಟರೆ ಗುಡ್ಡಕ್ಕೆ ಕಲ್ಲು ಹೊತ್ತಂತೆ ಆಗುತ್ತದೆ. ಆದರೆ ಯಾವುದಾದರೂ ರಾಜಕೀಯ ಪಕ್ಷಕ್ಕೆ, ಅದರಲ್ಲೂ ಒಂದಿಷ್ಟು ಶಿಸ್ತು, ಸಂಘಟನೆ ಇರುವ ಪಕ್ಷಕ್ಕೆ ಸೇರಿಕೊಂಡರೆ ಒಳ್ಳೆ ಭವಿಷ್ಯವಿದೆ.

   ಇತಿಹಾಸದಲ್ಲಿ ಹೆಸರು ಉಳಿಯುತ್ತದೆ

   ಇತಿಹಾಸದಲ್ಲಿ ಹೆಸರು ಉಳಿಯುತ್ತದೆ

   ಉಪೇಂದ್ರ ಜಾತಕದ ಪ್ರಕಾರ ಇತಿಹಾಸದಲ್ಲಿ ಅವರ ಹೆಸರು ಚಿರಸ್ಥಾಯಿ ಆಗಿ ಉಳಿಯುತ್ತದೆ. ಈ ವ್ಯಕ್ತಿ ಸಾಂಸಾರಿಕ ಜೀವನದ ಬಗ್ಗೆ ಹೆಚ್ಚಿನ ಕಾಳಜಿ ತೋರುವ ಅಗತ್ಯ ಇದೆ. ಕುಟುಂಬಕ್ಕೆ ಹೆಚ್ಚಿನ ಗಮನ ಕೊಡದಿದ್ದರೆ ಪರಿಸ್ಥಿತಿ ಬಿಗಡಾಯಿಸಿ, ಸಲ್ಲದ ಸುದ್ದಿಗೆ ಕಾರಣವಾಗುತ್ತದೆ. ವಿಪರೀತಕ್ಕೆ ಹೋಗಿ ಗಂಡ- ಹೆಂಡತಿಯನ್ನು ಬೇರ್ಪಡಿಸುವ ಮಟ್ಟದವರೆಗೆ ತಲುಪುತ್ತದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   What horoscope predict about actor- director Upendra's political career? There is a misunderstanding in recently launched KPJP. So, Upendra has announced that, he will announce decision regarding this issue on Tuesday, March 6th. Here is an analysis of Upendra horoscope by well known astrologer Prakash Ammannaya.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more