ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಟು ಖರೀದಿ- ಮನೆ ನಿರ್ಮಾಣದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

Google Oneindia Kannada News

ಕೆಲವರಿಗೆ ಮನೆ ಕಟ್ಟಬೇಕು ಅಂತ ಮನಸ್ಸಿನಲ್ಲಿ ಇರುತ್ತದೆ. ಅದಕ್ಕೆ ಹಣವೂ ಇರುತ್ತದೆ. ಆದರೆ ಸಾಧ್ಯವೇ ಆಗುವುದಿಲ್ಲ. ಸ್ವಂತ ಮನೆಯಲ್ಲಿ ಇರಬೇಕು ಅನ್ನೋ ಆಸೆ ಕನಸಾಗಿಯೇ ಉಳಿದುಬಿಡುತ್ತದೆ. ಏಕೆ ಹೀಗಾಗುತ್ತದೆ, ಯಾರಿಗೆ ಹೀಗಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸುತ್ತೇನೆ. ನಿಮಗೂ ಹೀಗಾಗುತ್ತಿದ್ದಲ್ಲಿ ಅದಕ್ಕೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಿ.

ಒಬ್ಬ ವ್ಯಕ್ತಿಯ ಜನ್ಮ ಜಾತಕದಲ್ಲಿ ಲಗ್ನದಿಂದ ನಾಲ್ಕನೇ ಮನೆಯನ್ನು ಸುಖ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಆ ನಾಲ್ಕನೇ ಮನೆ ಯಾವ ರಾಶಿ ಆಗುತ್ತದೆ ಹಾಗೂ ಆ ರಾಶಿಯ ಅಧಿಪತಿ ಎಲ್ಲಿದೆ ಹಾಗೂ ಆ ಗ್ರಹದ ಮೇಲೆ ಯಾವ ದೃಷ್ಟಿಯಿದೆ ಮತ್ತು ನಾಲ್ಕನೇ ಸ್ಥಾನದ ಮೇಲೆ ಯಾವ ಗ್ರಹದ ವೀಕ್ಷಣೆ ಇದೆ ಎಂಬುದನ್ನೆಲ್ಲ ಪರಿಗಣಿಸಬೇಕಾಗುತ್ತದೆ.

ಇನ್ನು ಜಾತಕದಲ್ಲಿ ಶುಕ್ರ ಗ್ರಹ ನೀಚವಾಗಿದ್ದಲ್ಲಿ ಸ್ವತಃ ಮನೆ ಕಟ್ಟಿಸುವುದು ಕಷ್ಟಸಾಧ್ಯವಾಗುತ್ತದೆ. ಇಂಥ ಜಾತಕರಿಗೆ ನಿವೇಶನ ಇದ್ದರೂ ಮನೆ ಕಟ್ಟಿಸುವುದು ಕಷ್ಟವಾಗುತ್ತದೆ. ಇನ್ನು ಜಾತಕದಲ್ಲಿ ಕುಜ ಗ್ರಹ ನೀಚವಾಗಿ ಶುಕ್ರ ಉಚ್ಚವಾಗಿದ್ದಲ್ಲಿ ಇಂಥವರು ಫ್ಲ್ಯಾಟ್ ಖರೀದಿಸುವ ಸಾಧ್ಯತೆ ಹೆಚ್ಚು.

What Astrology Tells About House Construction And Site Purchase?

ಅದೇ ರೀತಿ ಯಾರಿಗೆ ಜಾತಕದಲ್ಲಿ ಶುಕ್ರ ಹಾಗೂ ಕುಜ ನೀಚವಾಗಿ, ಶನಿ ಉಚ್ಚವಾಗಿರುತ್ತದೋ ಅಂಥವರು ಪೂರ್ವಾರ್ಜಿತವಾಗಿ ಬಂದ ಮನೆಯಲ್ಲಿ ವಾಸ ಇರುತ್ತಾರೆ ವಿನಾ ಇವರಿಗೆ ಭೂಮಿಯನ್ನು ಖರೀದಿ ಮಾಡುವುದಕ್ಕೋ ಅಥವಾ ಮನೆ ಕಟ್ಟುವುಕ್ಕೋ ಕಟ್ಟಿರುವುದನ್ನೇ ಖರೀದಿಸುವುದಕ್ಕೋ ಸಾಧ್ಯವಾಗುವುದೇ ಇಲ್ಲ.

ಕುಜ ಭೂಮಿಗೆ ಸಂಬಂಧಿಸಿದ ಗ್ರಹ. ಯಾರಿಗೆ ಕುಜ ಲಾಭ ಸ್ಥಾನದಲ್ಲೋ ಕರ್ಮ ಸ್ಥಾನದಲ್ಲೋ ಸ್ಥಿತನಿರುತ್ತಾನೋ ಅಂಥವರು ಭೂಮಿ ಮೂಲಕ ಲಾಭವನ್ನಷ್ಟೇ ಪಡೆಯಲು ಸಾಧ್ಯ. ಸುಖವನ್ನಲ್ಲ. ಇವರು ಸ್ಥಳ ಖರೀದಿ- ಮಾರಾಟ, ಆ ಮೂಲಕ ಕಮಿಷನ್ ವ್ಯವಹಾರವಷ್ಟೇ ಮಾಡುವುದಕ್ಕೆ ಸಾಧ್ಯ. ಅದೇ ರೀತಿ ಶುಕ್ರ ಇದ್ದಲ್ಲಿ ಇವರು ಸೇಲ್ ಬಿಲ್ಡಿಂಗ್ ವ್ಯವಹಾರ ಮಾಡಬಹುದೇ ವಿನಾ ತಾವು ವಾಸವಿರುವುದಕ್ಕೆ ಉತ್ತಮ ಮನೆ ನಿರ್ಮಿಸಿಕೊಳ್ಳುವುದು ಅಥವಾ ಕಟ್ಟಿದರೂ ಉಳಿಸಿಕೊಳ್ಳುವುದು ಅಸಾಧ್ಯವಾಗುತ್ತದೆ.

ನಾಲ್ಕನೇ ಸ್ಥಾನದಲ್ಲಿ ಶನಿ ಉಚ್ಚನಾಗಿದ್ದಲ್ಲಿ ಇವರು ಎಷ್ಟೇ ಚೆನ್ನಾಗಿ ಮನೆ ಕಟ್ಟಿದರೂ ಅಥವಾ ಕಟ್ಟಿರುವ ಮನೆಯನ್ನು ಕೊಂಡರೂ ಸಣ್ಣ ನ್ಯೂನ್ಯತೆಯಾದರೂ ಇರುತ್ತದೆ. ಮಾನಸಿಕವಾಗಿ ಬೇಸರವೊಂದು ಇವರನ್ನು ಕಾಡುತ್ತಲೇ ಇರುತ್ತದೆ. ಜಾತಕದಲ್ಲೇ ಶನಿಯೇ ನೀಚನಾದರೆ ಪೂರ್ವಾರ್ಜಿತವಾಗಿ ಬಂದಂಥ ಆಸ್ತಿಯನ್ನು ಇವರು ಉಳಿಸುವುದಿಲ್ಲ.

ಇಲ್ಲಿ ವಿವರಿಸಿರುವುದು ನಿಮಗೆ ಮಾಹಿತಿ ಇರಲಿ ಎಂಬ ಕಾರಣಕ್ಕೆ. ಸೈಟು- ಮನೆ ಖರೀದಿ ಅಥವಾ ನಿರ್ಮಾಣ ಎಂಬುದು ಇವತ್ತಿಗೆ ಲಕ್ಷಗಳು- ಕೋಟಿಗಳ ಮಾತಾಯಿತು. ಆದ್ದರಿಂದ ಸೂಕ್ತ ಜ್ಯೋತಿಷ್ಯ ಮಾರ್ಗದರ್ಶನ ಪಡೆದುಕೊಂಡ ನಂತರವಷ್ಟೇ ಮುಂದಿನ ಹೆಜ್ಜೆಗಳನ್ನು ಇಡಿ.

ಶ್ರೀ ಪಂಚಮುಖಿ ಜ್ಯೋತಿಷ್ಯಂ, ಪಂಡಿತ್ ಶ್ರೀ ಗಣೇಶಕುಮಾರ್, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಸ್ತ್ರೀ ಪುರುಷ ಆಕರ್ಷಣೆ , ದಾಂಪತ್ಯ, ಪ್ರೇಮವಿಚಾರ , ಮಾನಸಿಕ, ಗೃಹಶಾಂತಿ, ಆರೋಗ್ಯ, ಹಣಕಾಸು, ಮಾಟಭಾದೆ, ಶತ್ರುಕಾಟ, ಅಲ್ಲದೇ ರಾಜಯೋಗವಶಗಳು, ಅಖಂಡಯೋಗವಶಗಳು ಇನ್ನಿತರ ನಿಮ್ಮ ಯಾವುದೇ ಕಠಿಣ, ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಪರಿಹಾರ ಶತಸಿದ್ದ . (ಫೋನಿನ ಮೂಲಕ ಪರಿಹಾರ) PH:-9880533337 ಮೈಸೂರು ಸರ್ಕಲ್ (ಸಿರಸಿ ವೃತ್ತ) ಚಾಮರಾಜಪೇಟೆ, ಬೆಂಗಳೂರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X