Weekly Horoscope 2025: ವಾರ ಭವಿಷ್ಯ: ಮೇ ತಿಂಗಳ ಎರಡನೇ ವಾರ 12 ರಾಶಿಗಳ ಭವಿಷ್ಯ ತಿಳಿಯಿರಿ
ಮೇ ತಿಂಗಳ ಎರಡನೇ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ, ವೃತ್ತಿ ಜೀವನ ಹೇಗಿರಲಿದೆ ಎಂದು ಈಗ ತಿಳಿಯೋಣ.
ಈ ವಾರದ ಚಂದ್ರನ ಸಂಚಾರ ಪುಷ್ಯ ನಕ್ಷತ್ರದಿಂದ ಸ್ವಾತಿಯವರೆಗೆ ಇರುತ್ತದೆ. ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ವಸಂತ ಋತುವಿನಲ್ಲಿ ವೈಶಾಖ ಮಾಸದ ಶುದ್ಧ ಸಪ್ತಮಿಯಿಂದ ಚತುರ್ದಶಿಯವರೆಗೆ ಅಂದರೆ 04.05.25 ರಿಂದ 11.05.25ವರೆಗೆ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.

ಮೇಷ ರಾಶಿ:
ವಾರದ ಮೊದಲಲ್ಲಿ ಬುಧ ನಿಮ್ಮ ರಾಶಿಗೆ ಬರುತ್ತಾನೆ ಉಳಿದ ಮೂರುಗ್ರಹಗಳು ವ್ಯಯಸ್ಥಾನವಾದ ಮೀನದಲ್ಲೇ ಇರುತ್ತದೆ. ಇದರಿಂದ ಹೆಚ್ಚು ವ್ಯತ್ಯಾಸವಾಗದಿದ್ದರೂ ನಿಮ್ಮ ರಾಶಿಗೆ ಬರುವ ಬುಧನಿಂದ ನಿಮಗೆ ರಕ್ಷಣೆ ಇದೆ. ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಗಮನ ಇರಲಿ. ಹಣಕಾಸು ವ್ಯವಹಾರವನ್ನು ಜಾಣ್ಮೆಯಿಂದ ನಿಭಾಯಿಸಿಕೊಳ್ಳಿ.

ವೃಷಭ ರಾಶಿ:
ಹನ್ನೊಂದನೇ ಮನೆ ಲಾಭಸ್ಥಾನದಲ್ಲಿ ಮೂರು ಮಿತ್ರಗ್ರಹಗಳು ಸೇರಿ ನಿಮಗೆ ಒಂದು ರಾಜಯೋಗ ಆಗಿದೆ. ಇದರಿಂದ ನಿಮಗೆ ಧನಲಾಭ ಅಭರಣಲಾಭ, ವಸ್ತ್ರಲಾಭ ಇದೆ. ಖರ್ಚುಗಳುಇದ್ದರೂ ಮೇನೇಜ್ ಮಾಡಬಲ್ಲಿರಿ. ಬುಧ ಹನ್ನೆರಡನೇ ಮನೆಗೆಬರುವುದು ಕೊಂಚ ನಷ್ಟವನ್ಬು ತೋರಿಸುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಗುರುಬಲ ಬರುವುದರಿಂದ ನಷ್ಟ ತಾತ್ಕಾಲಿಕ. ಮೂರನೇ ಮನೆಯಲ್ಲಿ ಕುಜ ನಿಮ್ಮ ಶಕ್ತಿ ಧೈರ್ಯವನ್ನು ಹೆಚ್ಚಿಸುತ್ತಾನೆ.

ಮಿಥುನ ರಾಶಿ:
ಹನ್ನೊಂದನೇ ಮನೆಗೆ ನಿಮ್ಮ ರಾಶಿಯ ಅಧಿಪತಿ ಪ್ರವೇಶದಿಂದ ನಿಮಗೆ ಅಧಿಕಧನಲಾಭ, ವೈಯುಕ್ತಿಕ ಜೀವನದಲ್ಲಿ ಬೆಳವಣಿಗೆ, ಸಮೃದ್ಧಿ ಇದೆ. ಹತ್ತರಲ್ಲಿ ಶುಕ್ರ, ರಾಹು, ಶನಿ ಮೂವರೂ ನಿಮ್ಮ ರಾಶಿಗೆ ಮಿತ್ರ ಗ್ರಹಗಳಾಗಿ ಇರುವುದರಿಂದ ವೃತ್ತಿಯಲ್ಲಿ ಬಹಳ ಅಭಿವೃದ್ಧಿ ಇದೆ. ಪಗಾರ ಹೆಚ್ಚಾಗಬಹುದು, ಬಡ್ತಿ ಸಿಗಬಹುದು. ಒತ್ತಡಗಳ ನಡುವೆಯೂ ಜೀವನ ಸರಾಗವಾಗಿ ಸಾಗುತ್ತದೆ. ದೈವಾನುಗ್ರಹ ಇದೆ.

ಕಟಕ ರಾಶಿ:
ನಿಮ್ಮ ರಾಶಿಯಲ್ಲೇ ನಿಚಕುಜ ಇದ್ದು ಒತ್ತಡಗಳನ್ನು ಕೊಡುತ್ತಾನೆ. ಒಂಬತ್ತನೇ ಮನೆಯಲ್ಲಿ ಶನಿ ಶುಕ್ರ ರಾಹು ಇದ್ದು ನಿಮಗೆ ಸರ್ವತೋಮುಖ ಪ್ರಗತಿ ಇದೆ. ಆಧ್ಯಾತ್ಮಿಕ ಚಿಂತನೆ ಮಾಡುತ್ತೀರಿ ಗುರುಗಳ ಸಾಧು ಸಂತರ ದರ್ಶನ ಭಾಗ್ಯ ಇದೆ. ಗುರುಬಲವೂ ಇರುವುದರಿಂದ ಸತ್ಫಲಗಳು ಹೆಚ್ವು ಇದೆ.

ಸಿಂಹ ರಾಶಿ:
ಎಂಟರಲ್ಲಿ ಶನಿ ಬಹಳ ಸಂಕಷ್ಟಗಳನ್ನು ಕೊಡುತ್ತಾನೆ. ಒಂಬತ್ತನೇ ಮನೆಯ ಬುಧ ಸಹ ನಷ್ಟ ವನ್ನುಂಟು ಮಾಡುತ್ತಾನೆ. ಹತ್ತನೇ ಮನೆಯ ಗುರು ಹನ್ನೊಂದನೇ ಮನೆಗೆ ಬಂದಾಗ ನಿಮಗೆ ಕೊಂಚ ಹಗುರ ವಾಗುತ್ತದೆ ಧನಲಾಭ ಇದೆ. ಕಗ್ಗಂಟುಗಳು ಬಿಡಿಸಿಕೊಳ್ಳುತ್ತದೆ. ಈಗ ಸ್ವಲ್ಪ ಏರುಪೇರಿನ ಜೀವನ. ಎಚ್ಚರದಿಂದ ನಡೆಯಬೇಕು ನಿಭಾಯಿಸಬೇಕು. ಆರೋಗ್ಯ. ಜೋಪಾನ. ವಿಷ್ಣು ಸಹಸ್ರನಾಮ ಪಠಿಸಿ.

ಕನ್ಯಾ ರಾಶಿ:
ಏಳರಲ್ಲಿ ಶನಿ ಶುಕ್ರ ರಾಹು ಮೂವರೂ ನಿಮಗೆ ಉಪಕಾರಿಗಳಲ್ಲ.ಇವರಿಂದ ತೊಂದರೆಯೇ ಹೆಚ್ಚು. ಎಂಟನೇ ಮನೆಯಲ್ಲಿಇರುವ ಬುಧ ಕೊಂಚ ಅನುಕೂಲಗಳನ್ನು ಕೊಡುತ್ತಾನೆ. ಒಂಬತ್ತರ ಗುರುವಿನರಕ್ಷೆ ಇದೆ ಆದರೆ ಗುರು ಹತ್ತನೇ ಮನೆಗೆ ಪ್ರವೇಶವಾಗುತ್ತಿದ್ದಾನೆ ಇದು ಸ್ಥಾನ ಭ್ರಷ್ಟತೆಯನ್ನು ಸೂಚಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಜಾಗರೂಕರಾಗಿರಿ. ಭೂಮಿಯಿಂದ ಲಾಭ ಇದೆ.

ತುಲಾ ರಾಶಿ:
ಆರನೇ ಮನೆಯಲ್ಲಿ ಶನಿ ರಾಹು ಶುಕ್ರ ಇರುವುದು ನಿಮಗೆ ತುಂಬಾ ಅನುಕೂಲ. ಹಣಕಾಸು ಸ್ಥಿತಿ ಸುಗಮವಾಗಿ ಇರುತ್ತದೆ. ಏಳರಲ್ಲಿ ಬುಧ ಇದೂ ಸಹ ನಿಮಗೆ ರಕ್ಷೆ. ಸ್ವಲ್ಪ ದಿನಗಳಲ್ಲಿ ಗುರು ಒಂಬತ್ತನೇ ಮನೆಗೆ ಪ್ರವೇಶವಾದಾಗ ಇನ್ನೂ ಹೆಚ್ವಿನ ಅನುಕೂಲಗಳು ಸಿದ್ದಿಸುತ್ತದೆ.

ವೃಶ್ಚಿಕ ರಾಶಿ:
ಪಂಚಮ ಶನಿ ಪ್ರಾರಂಭವಾಗಿದೆ. ರಾಹು ಶುಕ್ರ ಸಹ ಶನಿಯ ಜೊತೆ ಇದ್ದು ಕೊಂಚ ಏರುಪೇರಿನ ಜೀವನ. ಆರರಲ್ಲಿ ಬುಧ ಏಳರಲ್ಲಿ ಗುರು ಇದ್ದಾರೆ. ಮಿಶ್ರ ಫಲ ಅನುಭವಿಸುತ್ತಿದ್ದೀರಿ.ಆದರೆ ಹೇಳಿಕೊಳ್ಳುವಂಥ ಯಾವುದೂ ಕೆಲಸಗಳು ನಡೆಯಿತ್ತಿಲ್ಲ ನಿಧಾನಗತಿಯ ಜೀವನ. ಈಗ ನಿಮಗೆ ತಾಳ್ಮೆ ಹೆಚ್ಚು ಅವಶ್ಯಕ.

ಧನಸ್ಸು ರಾಶಿ:
ಗುರು ಆರರಲ್ಲಿದ್ದು ಅನಾರೋಗ್ಯ ಕೊಡುತ್ತಾನೆ. ಹಣಕಾಸಿನ ಖರ್ಚು ಬಹಳ ಇರುತ್ತದೆ. ಆದರೆ ಇನ್ನು ಕೆಲವೇ ದಿನಗಳಲ್ಲಿ ಗುರುಬಲ ಬರುತ್ತದೆ. ರಾಹು ಸಹ ಮೂರನೇ ಮನೆಗೆ ಬರುತ್ತಾನೆ. ಹಣಕಾಸಿನ ಬಲ, ನೆರವು, ಆರೋಗ್ಯ ಸುಧಾರಣೆ, ಅವಿವಾಹಿತರಿಗೆ ವಿವಾಹ ಭಾಗ್ಯ, ಹೊಸ ಕೆಲಸ ಸಿಗುವುದು ಹೀಗೆ ಬಹಳ ಶುಭಫಲಗಳು ಇವೆ. ಈಗ ಸಧ್ಯಕ್ಕೆ ಸಹನೆ ಇರಲಿ. ಮುಂದೆ ಎಲ್ಲವೂ ಒಳ್ಳೆಯದಾಗಲಿದೆ.

ಮಕರ ರಾಶಿ:
ಈಗ ನಿಮಗೆ ಒಳ್ಳೆಯ ಕಾಲ. ಮೂರರಲ್ಲಿ ಶನಿ ರಾಹು ಶುಕ್ರ, ಐದನೇ ಮನೆಯಲ್ಲಿ ಗುರು, ನಾಲ್ಕನೇ ಮನೆಯಲ್ಲಿ ಬುಧ ಸಮಯ ಬಹಳ ಚೆನ್ನಾಗಿದೆ. ಒಳ್ಳೆಯ ಅವಕಾಶಗಳು ಸಿಗುವ ಸಮಯ. ಸ್ವಲ್ಪ ಮಟ್ಟಿನ ಪ್ರಯತ್ನದಲ್ಲೇ ಗುರಿ ಮುಟ್ಟುತ್ತೀರಿ. ಶ್ರಮ ಕಡಿಮೆ ಫಲ ಹೆಚ್ಚು.

ಕುಂಭ ರಾಶಿ:
ಇನ್ನು ಕೆಲವೇ ದಿನಗಳಲ್ಲಿ ಗುರುಬಲ ಬರಲಿದೆ. ಸಾಡೆಸಾತಿಯ ಪ್ರಭಾವ ಇದ್ದರೂ ಗುರುವಿನ ಅನುಗ್ರಹ ದೊರೆಯುವುದರಿಂದ ಎಲ್ಲವೂ ಒಳ್ಳೆಯದಾಗುತ್ತದೆ. ಈಗ ಎರಡನೇ ಮನೆಯಲ್ಲಿ ಶುಕ್ರ ಒಳ್ಳೆಯ ಧನಲಾಭ ಕೊಡುತ್ತಾನೆ ಮೂರರಲ್ಲಿ ಬುಧ ಸಹ ಶುಭಫಲ ನೀಡುತ್ತಾನೆ. ಕೆಲವೇ ದಿನಗಳಲ್ಲಿ ಗುರು ಬದಲಾವಣೆ ಆಗುತ್ತಾನೆ. ನಿಮ್ಮ ನಿರೀಕ್ಷೆಗಳೆಯಲ್ಲ ಫಲಿಸುತ್ತದೆ.

ಮೀನ ರಾಶಿ:
ನಿಮಗೆ ಈಗ ಕೊಂಚ ಗಂಭೀರ ಸಮಯ. ಈಗ ಎಷ್ಟು ತಾಳ್ಮೆಯಿಂದ ಇದ್ದರೆ ಅಷ್ಟೂ ಒಳ್ಳೆಯದು. ಸಾಡೆಸಾತಿ ಶನಿಯ ಪ್ರಭಾವ ನಿಮ್ಮನ್ನು ಬಹಳ ಕಂಗೆಡಿಸುತ್ತಿದೆ. ಹಣಕಾಸು ನೀರಿನಂತೆ ಖರ್ಚಾಗುತ್ತಿದೆ. ಅನಾರೋಗ್ಯ ಕೌಟುಂಬಿಕ ಕಿರಿಕಿರಿ ಇಂಥವನ್ನು ಅನುಭವಿಸುತ್ತಿದ್ದೀರಿ. ಆದಷ್ಡು ದೇವರ ಧ್ಯಾನ ಮಾಡಿ. ಸಹನೆಯಿಂದ ಇರಿ. ಕೆಲಸಗಳು ನೀವಂದುಕೊಂಡಂತೆ ನಡೆಯುವುದಿಲ್ಲ. ನಿಧಾನವಾಗುತ್ತದೆ.












Click it and Unblock the Notifications