Weekly Horoscope: ಈ ವಾರ ಕನ್ಯಾ ಸೇರಿದಂತೆ ಈ ರಾಶಿಗಳಿಗೆ ಅದೃಷ್ಟದ ಮಳೆ

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಶುದ್ಧ ದಶಮಿಯಿಂದ ಬಹುಳ ತದಿಗೆಯವರೆಗೆ.

ಈ ವಾರದ ಚಂದ್ರನ ಸಂಚಾರ ಹಸ್ತಾದಿಂದ ನಕ್ಷತ್ರದಿಂದ ಪೂರ್ವಾಷಾಢದ ವರೆಗೆ

16/06/2024-22/06/2024ರ ವಾರ ಭವಿಷ್ಯ

ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜೂನ್‌ 16 ರಿಂದ ಜೂನ್‌ 22ರವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

Weekly Horoscope In Kannada From June 16 To June 22 2024

ಮೇಷ ರಾಶಿಯ ವಾರ ಭವಿಷ್ಯ

ಲಾಭ ಸ್ಥಾನದಲ್ಲಿ ಶನಿ, ಎರಡನೇ ಮನೆಯಲ್ಲಿ ಗುರು, ಮೂರರಲ್ಲಿ ಸೂರ್ಯ ಬುಧ ಶುಕ್ರ ಸಮಯ ಬಹಳ ಚೆನ್ನಾಗಿದೆ. ನೀವು ಬಯಸಿದ್ದು ಕೈಗೂಡುವ ಸಮಯ. ಶತ್ರುಗಳು ದೂರವಾಗುತ್ತಾರೆ. ಹಣದ ಹರಿವು ಉತ್ತಮವಾಗಿದೆ. ನೌಕರಿಯಲ್ಲಿ ಯಶಸ್ಸು ಬಡ್ತಿ ಸಿಗುವ ಸಮಯ. ಸರ್ಕಾರಿ ನೌಕರರಿಗೆ ಬಹಳ ಒಳ್ಳೆಯ ಸಮಯ. ಮನೆಯಲ್ಲಿ ಶುಭಕಾರ್ಯ ನಡೆಯುವ ಸಮಯ. ಅವಿವಾಹಿತರಿಗೆ ವಿವಾಹಪ್ರಾಪ್ತಿ.

Weekly Horoscope In Kannada From June 16 To June 22 2024

ವೃಷಭ ರಾಶಿಯ ವಾರ ಭವಿಷ್ಯ

ಗುರುಬಲ ಇಲ್ಲದಿದ್ದರೂ ರಾಹು ಬಲ ಇದೆ. ಹಣದ ಹರಿವಿಗೆ ತೊಂದರೆ ಇಲ್ಲ. ಎರಡನೇಯ ಮನೆಯಲ್ಲಿ ಸೂರ್ಯ ಬುಧ ಶುಕ್ರರು ಇದ್ದಾರೆ. ಇದು ನಿಮಗೆ ಅಪರಿಮಿತ ಬಲ ಕೊಡುತ್ತದೆ. ಮನೆಯಲ್ಲಿ ಸಂಭ್ರಮ ಸಂತಸದ ವಾತಾವರಣ ಇರುತ್ತದೆ. ದೇವ ಕಾರ್ಯ ಪೂಜೆ ನಡೆಯುವ ಮಂಗಳಮಯ ವಾತಾವರಣ ಇರುತ್ತದೆ. ಹಣದ ಹರಿವು ಉತ್ತಮವಾಗಿದೆ. ‌ಹಿಡಿದ ಕೆಲಸ ಛಲದಿಂದ ಮಾಡಿಮುಗಿಸುವ ಶಕ್ತಿಯನ್ನು ಗ್ರಹಗಳು ಕೊಡುತ್ತದೆ.

Weekly Horoscope In Kannada From June 16 To June 22 2024

ಮಿಥುನ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಬುಧ ಶುಕ್ರ ಸೂರ್ಯ ಇದ್ದಾರೆ. ಒಂದು ಕೇಂದ್ರತ್ರಿಕೋಣ ಯೋಗ ಆಯಿತು. ಐದನೇ ಅಧಿಪತಿ ಶುಕ್ರ ಹಾಗೂ ನಿಮ್ಮ ರಾಶಿ ಅಧಿಪತಿ ಬುಧ ಯುತಿಯೋಗದಲ್ಲಿ ಇರುವುದು ನಿಮಗೆ ಅದೃಷ್ಟವನ್ನು ಕೊಡುತ್ತದೆ. ಕಿರಿಕಿರಿ ಕೋಟಲೆಗಳಿಂದ ಕೊಂಚ ಉಪಶಮನ ಸಿಗುತ್ತದೆ. ಮನಸ್ಸಿಗೆ ನೆಮ್ಮದಿ ಇರುತ್ತದೆ. ನೌಕರಿಯಲ್ಲಿ ವರ್ಗಾವಣೆ ಸಾಧ್ಯತೆ ಇದೆ.

Weekly Horoscope In Kannada From June 16 To June 22 2024

ಕಟಕ ರಾಶಿಯ ವಾರ ಭವಿಷ್ಯ

ಈಗ ಲಾಭಸ್ಥಾನದಲ್ಲಿ ಗುರು ಇರುವುದು ನಿಮ್ಮ ಬೆಳವಣಿಗೆಗೆ ಬಹಳಷ್ಟು ಕಾರಣವಾಗುತ್ತದೆ. ಹಿಂದೆ ಬಿದ್ದಿದ್ದ ನಿಮ್ಮ ನಿರೀಕ್ಷೆ ಆಸೆ ಗುರಿ ಮುಂತಾದ ಸಂಗತಿಗಳು ಈಗ ಚಾಲನೆ ಪಡೆದುಕೊಂಡು ಚುರುಕಾಗುತ್ತದೆ. ಹಣದ ಹರಿವು ಉತ್ತಮವಾಗಿದೆ. ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ.

Weekly Horoscope In Kannada From June 16 To June 22 2024

ಸಿಂಹ ರಾಶಿಯ ವಾರ ಭವಿಷ್ಯ

ಗುರುಬಲ ಇಲ್ಲದೇ ಇದ್ದರೂ ಲಾಭ ಸ್ಥಾನದಲ್ಲಿ ಮೂರುಗ್ರಹಗಳು ಬುಧ ಶುಕ್ರ ಸೂರ್ಯ ಸೇರಿ ಒಂದು ರಾಜಯೋಗ ಆಗಿದೆ. ಇದರಿಂದ ನಿಮಗೆ ಹಣಕಾಸಿನ ಲಾಭ, ವಿದೇಶ ಪ್ರಯಾಣ ಮೊದಲಾದ ಶುಭಸಂಗತಿಗಳು ನಡೆಯುತ್ತದೆ.‌ ವೃತ್ತಿಕ್ಷೇತ್ರದಲ್ಲಿ ಒತ್ತಡವಿದ್ದರೂ ನಿಭಾಯಿಸಿಕೊಳ್ಳುವ ಶಕ್ತಿ ಬರುತ್ತದೆ. ಆದರೆ ಎಂಟನೇ ಮನೆಯಲ್ಲಿ ರಾಹು ಇರುವುದರಿಂದ ಆರೋಗ್ಯದ ಕಡೆ ಗಮನ ಇರಲಿ. ಮನೆಯಲ್ಲಿ ಖರ್ಚುವೆಚ್ಚಗಳಾಗುವಂಥ ವಾತಾವರಣ ಇರುತ್ತದೆ.

Weekly Horoscope In Kannada From June 16 To June 22 2024

ಕನ್ಯಾ ರಾಶಿಯ ವಾರ ಭವಿಷ್ಯ

ಭಾಗ್ಯಸ್ಥಾನದ ಹಾಗೂ ವೃತ್ತಿಸ್ಥಾನದ ಆಧಿಪತಿಗಳು ಹತ್ತನೇ ಮನೆಯಲ್ಲಿ ಇದ್ದಾರೆ. ಗುರು ಭಾಗ್ಯ ಸ್ಥಾನದಲ್ಲಿ ಇದ್ದಾನೆ. ವೃತ್ತಿಯಲ್ಲಿ ಬಹುದೊಡ್ಡ ಯಶಸ್ಸು ಇದೆ. ಯಾವುದೋ ಒಂದು ಉನ್ನತ ಪದವಿ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ರಾಜಕೀಯ ನಾಯಕರಿಗೆ ಪ್ರಚಂಡ ಯಶಸ್ಸು ಇದೆ. ಅವಿವಾಹಿತರಿಗೆ ವಿವಾಹ ಕೂಡಿ ಬರುತ್ತದೆ. ವಿದ್ಯಾರ್ಥಿಗಳಿಗೆ ಶುಭಕಾಲ. ಎಲ್ಲ ವಿಧದಲ್ಲೂ ಯಶಸ್ಸು ಖುಷಿ ನಿಮ್ಮ ಪಾಲಿಗೆ ಇದೆ.

Weekly Horoscope In Kannada From June 16 To June 22 2024

ತುಲಾ ರಾಶಿಯ ವಾರ ಭವಿಷ್ಯ

ಒಂಬತ್ತನೇ ಮನೆಯಲ್ಲಿ ಬುಧ ಶುಕ್ರ ಸೂರ್ಯ ಇದ್ದಾರೆ. ಆರನೇ ಮನೆಯಲ್ಲಿ ರಾಹು ಇವೆಲ್ಲವೂ ನಿಮಗೆ ಈಗ ಅದೃಷ್ಟ ಯಶಸ್ಸು ಕೊಡುವ ಗ್ರಹಗಳು. ಚಿಂತೆಗಳು ಕಡಿಮೆಯಾಗುತ್ತದೆ.‌ ಬದುಕು ಯಶಸ್ಸಿನತ್ತ ನಡೆಯುತ್ತದೆ. ಧನಾಗಮನ ಚೆನ್ನಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಇದೆ. ಆರೋಗ್ಯದ ಬಗ್ಗೆ ಕೊಂಚ ಗಮನ ಇರಲಿ.

Weekly Horoscope In Kannada From June 16 To June 22 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ಈಗ ಗುರುಬಲ ಇರುವುದರಿಂದ ಯಾವುದೇ ನೆಗೆಟಿವ್ ಸಂಗತಿಗಳು ನಿಮ್ಮನ್ನು ತಾಕುವುದಿಲ್ಲ. ಏನೇ ಗಂಡಾಂತರ ಬಂದರೂ ನಿಮ್ಮ ವರೆಗೆ ಬರುವುದರೊಳಗೆ ಮುರಿದುಬೀಳುತ್ತದೆ. ಬೆಟ್ಟದಹಾಗೆ ಬಂದ ಕಷ್ಟ ಮಂಜಿನ ಹಾಗೆ ಕರಗಿ ಹೋಗುತ್ತದೆ. ರಾಜಕೀಯ ನಾಯಕರು ಹಾಗೂ ವಿದ್ಯಾರ್ಥಿಗಳಿಗೆ ಶುಭವಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ವಾಹನದಿಂದ ನಷ್ಟ ಇದೆ. ಅಕೌಂಟ್ಸ್ ವಿಭಾಗವರಿಗೆ ಕೊಂಚ ಹಿನ್ನಡೆ ಇದೆ.

Weekly Horoscope In Kannada From June 16 To June 22 2024

ಧನಸ್ಸು ರಾಶಿಯ ವಾರ ಭವಿಷ್ಯ

ಈಗ ನಿಮಗೆ ಗುರುಬಲ ಕಡಿಮೆಯಾಗಿದೆ ಹಾಗೂನಾಲ್ಕನೇ ಮನೆಯಲ್ಲಿ ರಾಹು‌ಇದ್ದಾನೆ. ಇದುವರಗ ಯಾವ ಅಡೆತಡೆಗಳು ಇಲ್ಲದೆ ಇದ್ದ ನಿಮಗೆ ಈಗ ಸ್ವಲ್ಲ ತಡೆಗಳು ಎದುರಾಗುತ್ತದೆ ಆದರೂ ಮೂರನೇ ಮನೆಯಲ್ಲಿ ಶನಿ ನಿಮಗೆ ಪರಾಕ್ರಮವನ್ನು ಕೊಟ್ಟು ನೀವು ಮುಂದೆ ಸಾಗುವಂತೆ ಮಾಡುತ್ತಾನೆ. ಏಳನೇ ಮನೆಯಲ್ಲಿ ಸೂರ್ಯ ಬುಧ ಶುಕ್ರರೂ ನಿಮ್ಮ ನೆರವಿಗೆ ಇದ್ದಾರೆ. ಅಡೆತಡೆಗಳ ನಡುವೆ ಶುಭವೂ ಇದೆ.‌

Weekly Horoscope In Kannada From June 16 To June 22 2024

ಮಕರ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಗುರುಬಲ ರಾಹುಬಲ ಇದೆ. ಶುಭಕಾಲ ನಡೆಯುತ್ತಿದೆ. ನಿಮ್ಮ ರಾಶಿಯಲ್ಲಿ ಇರುವ ಶನಿ‌ ಮುಂದಿನ ರಾಶಿಗೆ ಇನ್ನು ಕೆಲವೇ

ತಿಂಗಳುಗಳಲ್ಲಿ ಮುಂದಿನ ರಾಶಿಗೆ ಹೋಗುತ್ತಾನೆ.‌ಆಗ ನಿಮಗೆ ಇನ್ನೂ ಹೆಚ್ಚಿನ ಶುಭಫಲ ಇದೆ. ಈಗಲೂ ಹಣದ ಹರಿವು ಉತ್ತಮವಾಗಿದೆ. ಹೊಸ ನೌಕರಿ ಸಿಗುವ ಯೋಗ ಇದೆ. ರಾಹು ಪರಾಕ್ರಮ ಧೈರ್ಯ ಕೊಡುತ್ತಾನೆ. ಅಡೆತಡೆಗಳನ್ನು ನಿವಾರಿಸಿ ಮುಂದೆ ದಾರಿ ಸುಗಮ ಮಾಡಿ ಕೊಡುತ್ತಾನೆ. ಗುರುವಿನ ಸಂಪೂರ್ಣ ಅನುಗ್ರಹ ಇದೆ. ಶುಭ ಸಂಗತಿಗಳು ನಡೆಯುತ್ತದೆ.

Weekly Horoscope In Kannada From June 16 To June 22 2024

ಕುಂಭ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಸ್ವಲ್ಪ ಪರೀಕ್ಷೆಯ ಕಾಲ. ಕಂಟಕಗಳು ಅಡೆತಡೆಗಳು ಎದುರಾಗುತ್ತದೆ. ನೀವು ನಿಂತ ನೆಲ ಕುಸಿಯುವಂಥ ಸಂದರ್ಭ ಸೃಷ್ಟಿಯಾಗಬಹುದು. ಹೆಜ್ಜೆಹೆಜ್ಜೆಗೂ ಎಚ್ಚರಿಕೆ ವಹಿಸಿ.‌ ದೇವರ ಧ್ಯಾನ ಮಾಡಿ. ನಿಮಗೆ ತಪ್ಪು ಎನಿಸಿದ ಕೆಲಸ ಯಾವುದೇ ಕಾರಣಕ್ಕೂ ಮಾಡಬೇಡಿ‌ ಅಂತರಾತ್ಮದ ದನಿಗೆ ಕಿವಿಕೊಡಿ. ಕುಟುಂಬದಲ್ಲೂ ಸಾಮರಸ್ಯ ಕೆಡಬಹುದು ಜಗಳಕ್ಕೆ ಅವಕಾಶ ಕೊಡಬೇಡಿ.

Weekly Horoscope In Kannada From June 16 To June 22 2024

ಮೀನ ರಾಶಿಯ ವಾರ ಭವಿಷ್ಯ

ನಿಮಗೂ ಸಹ ಗಂಭೀರ ಸಮಯ. ನೀವು ಏನೇ ಯೋಚಿಸಿದರೂ ಅದು ವ್ಯತಿರಿಕ್ತವಾಗಿ ನಡೆಯುವ ಸಂದರ್ಭ ಇದೆ. ಖರ್ಚುಗಳು ವಿಪರೀತವಾಗಿ ಇರುತ್ತದೆ. ಆದಷ್ಟು ತಾಳ್ಮೆಯಿಂದ ಸಹನೆಯಿಂದ ಇರಬೇಕು. ಮನಸ್ಸಿಗೆ ನೋವು ಕಿರಿಕಿರಿ ಆಗುವ ಸಂದರ್ಭ ಬಹಳಷ್ಟು ಇದೆ. ಎಲ್ಲದಕ್ಕೂ ತಾಳ್ಮೆ ಮುಖ್ಯ. ದೇವರನ್ನು ಪ್ರಾರ್ಥನೆ ಮಾಡಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+