Weekly Horoscope 2025: ನಿಮ್ಮ ರಾಶಿಯಲ್ಲೇ ಶನಿ, ಆರೋಗ್ಯ ಜೋಪಾನ, ಖರ್ಚುಗಳು ವಿಪರೀತ: ಈ ವಾರ ನಿಮ್ಮ ಭವಿಷ್ಯ ಹೇಗಿರುತ್ತೆ?
ಜೂನ್ ತಿಂಗಳ ಮೂರನೇ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ 12 ರಾಶಿಗಳ ಆರೋಗ್ಯ, ಹಣಕಾಸು, ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ, ವೃತ್ತಿ ಜೀವನ ಹೇಗಿರಲಿದೆ ಎಂದು ಈಗ ತಿಳಿಯೋಣ.
ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಕೃಷ್ಣಪಕ್ಷದ ಚತುರ್ಥಿಯಿಂದ ದ್ವಾದಶಿಯವರೆಗೆ ಅಂದರೆ 15.06.25 ರಿಂದ 22.06.25 ರ ವರೆಗೆ ಈ ವಾರದ ಚಂದ್ರನ ಸಂಚಾರ ಶ್ರವಣಾ ನಕ್ಷತ್ರದಿಂದ ಭರಣಿಯವರೆಗೆ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಸಂಪೂರ್ಣವಾಗಿ ತಿಳಿಯೋಣ.

ಮೇಷರಾಶಿ
ರಾಶಿಯಲ್ಲೇ ಶುಕ್ರ ಇದ್ದಾನೆ. ಇದು ನಿಮಗೆ ಕೊಂಚ ಬಲ ಕೊಡುತ್ತದೆ. ಲಾಭಸ್ಥಾನದಲ್ಲಿ ರಾಹು ಕೂಡ ಧನಲಾಭ ಕೊಡುತ್ತಾನೆ. ಸಾಡೆಸಾತಿ ನಡೆಯುತ್ತಿದ್ದರೂ ಮರಳುಗಾಡಿನಲ್ಲಿ ಓಯೆಸಿಸ್ ತರ ಈ ಎರಡು ಗ್ರಹಗಳು ನಿಮ್ಮ ಕೈಹಿಡಿಯುತ್ತದೆ. ಮೂರನೇ ಮನೆಯ ಸೂರ್ಯ ಗುರು ಬುಧ ನಿಮಗೆ ಅನುಕೂಲಕರವಾಗಿದ್ದಾರೆ. ಕಿರಿಕಿರಿ ಗಳ ನಡುವೆಯೇ ಜೀವನ ಸಾಗುತ್ತದೆ.
ವೃಷಭರಾಶಿ
ಎರಡನೇ ಮನೆಯಲ್ಲಿ ಬುಧ ಗುರು ಅಪಾರ ಧನಲಾಭ ಯಶಸ್ಸನ್ಬು ಕೊಡುತ್ತಾರೆ. ಧನಾಧಿಪತಿ ಲಾಭಾಧಿಪತಿ ಎರಡನೇ ಮನೆಯಲ್ಲಿ ಬಲಿಷ್ಠರಾಗಿದ್ದಾರೆ. ನಾಲ್ಕರಲ್ಲಿ ಕುಜ ಭೂಮಿಯಿಂದ ಲಾಭ ಕೊಡಿಸುತ್ತಾನೆ. 12 ಶುಕ್ರ ಸಹ ಶುಭಫಲ ನೀಡುತ್ತಾನೆ. ಲಾಭದ ಶನಿಯಿಂದ ಅತ್ಯುತ್ತಮ ಫಲ ಇದೆ. ಎಲ್ಲ ಕಡೆಯೂ ಹಸಿರು ಸುಗ್ಗಿ. ದೈವಾನುಗ್ರಹ ಚೆನ್ನಾಗಿದೆ. ಎಣಿಸಿದ ಕೆಲಸಕಾರ್ಯಗಳು ಸುಲಲಿತವಾಗಿ ಆಗುತ್ತದೆ.
ಮಿಥುನರಾಶಿ
ಹನ್ನೊಂದನೇ ಮನೆಯಲ್ಲಿ ಶುಕ್ರ ಇದ್ದು ಧನಲಾಬ ವಾಹನಲಾಭ ಅಭರಣ ಲಾಭ ಇದೆ. ಹನ್ನೊಂದನೇ ಮನೆಯ ಶುಕ್ರ ಐದನೇ ಮನೆಯನ್ನು ನೋಡುವುರಿಂದ ವಿದ್ಯಾರ್ಥಿಗಳಿಗೆ ಶುಭವಿದೆ. ಮೂರನೇ ಮನೆಯಲ್ಲಿ ಕೇತುಕುಜ ತುಂಬಾ ಶಕ್ತಿ ಕೊಡುತ್ತಾರೆ. ಭೂಮಿಯಿಂದ ಲಾಭ ಇದೆ. ದೊಡ್ಡಗ್ರಹಗಳ ಬಲ ಇಲ್ಲದಿದ್ದರೂ ಸಣ್ಣಗ್ರಹಗಳ ಬಲದಿಂದ ಈ ವಾರ ಸರಾಗವಾಗಿ ಕಳೆಯುತ್ತದೆ.
ಕಟಕರಾಶಿ
ಹತ್ತನೇ ಮನೆಯಲ್ಲಿ ಶುಕ್ರ, ಹನ್ನೆರಡನೇ ಮನೆಯಲ್ಲಿ ಗುರು ಸೂರ್ಯ ಬುಧ, ಎರಡನೇ ಮನೆಯಲ್ಲಿ ಕೇತು, ಕುಜ ಸಮಯ ಬಹಳ ಗಂಭೀರ. ಯಾವುದೇ ವಿಚಾರ ಯೋಚಿಸಿ ತೀರ್ಮಾನಿಸಿ. ಆತುರ ಒಳ್ಳೆಯದಲ್ಲ. ಯಾರೊಡನೆಯೂ ವಾದ ಬೇಡ. ಕೌಟುಂಬಿಕವಾಗಿ ಕೊಂಚ ಅಶಾಂತಿಯ ವಾತಾವರಣ ಇರುತ್ತದೆ.
ಸಿಂಹರಾಶಿ
ಹನ್ನೊಂದನೇ ಮನೆಯಲ್ಲಿ ಬುಧ ಗುರು ಸೂರ್ಯ ಬಹಳ ಶುಭ ಫಲಗಳನ್ನು ಕೊಡುತ್ತಾರೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಬಡ್ತಿ, ಆಸ್ತಿ ಕೊಳ್ಳುವುದು, ವಾಹನ ಖರೀದಿ ಮೊದಲಾದ ಶುಭಸಂಗತಿಗಳು ಇವೆ. ನಿಮ್ಮ ರಾಶಿಯಲ್ಲೇ ಇರುವ ಕುಜ ಹಾಗೂ ಕೇತುವಿಗೆ ರಾಹುವಿನದೃಷ್ಟಿ ಇರುವುದರಿಂದ ಕೈಗೆ ಪೆಟ್ಟಾಗುವುದು, ಬೀಳುವುದು ಮುಂತಾದ ತೊಂದರೆಗಳು ಇವೆ. ಬೆಂಕಿಯಿಂದ ತೊಂದರೆ ಇದೆ. ಜಾಗರೂಕರಾಗಿರಿ. ಅಷ್ಠಮಶನಿಯ ಪ್ರಭಾವವೂ ಇರುವುದರಿಂದ ಎಚ್ಚರಿಕೆ ಇರಲಿ. ಸಹನೆ ಇರಲಿ.
ಕನ್ಯಾರಾಶಿ
12 ನೇ ಮನೆಯಲ್ಲಿ ಕುಜ ಕೇತು ಇದ್ದು ರಾಹುವಿನ ದೃಷ್ಟಿ ಇದೆ. ಅನಾರೋಗ್ಯ ಕಾಡಬಹುದು. ವೈರಲ್ ಜ್ವರ, ಇನ್ಫೆಕ್ಷನ್ ಆಗಬಹುದು. ಆರೋಗ್ಯ ಜೋಪಾನ. ಹತ್ತನೇ ಮನೆಯಲ್ಲಿ ಗುರು ಅಷ್ಟು ಶುಭಪಲ ಕೊಡುವುದಿಲ್ಲ. ಹಿಂದಕ್ಕೆ ಎಳೆಯುತ್ತಾನೆ. ಮನಸ್ಸಿಗೆ ಕಸಿವಿಸಿ ಹಿಂಸೆ ಇರುತ್ತದೆ. ರಾಹು ಆರನೇ ಮನೆಯಲ್ಲಿ ಇರುವುದರಿಂದ ಹಣಕಾಸಿನ ಹರಿವು ಉತ್ತಮವಾಗಿದೆ.
ತುಲಾರಾಶಿ
ಒಂಬತ್ತನೇ ಮನೆಯಲ್ಲಿ ಗುರು ಬುಧ ಅದರಲ್ಲೂ ಬುಧ ಸ್ವಂತ ಮನೆಯಲ್ಲಿ ಇದ್ದಾನೆ ಅದೃಷ್ಡವೋ ಅದೃಷ್ಡ. ಏಳರಲ್ಲಿ ಶುಕ್ರ ನಿಮ್ಮ ರಾಶಿಯನ್ನೇ ನೋಡುತ್ತಾನೆ ಇದೂ ಶುಭಫಲ ನೀಡುತ್ತದೆ. ಲಾಭಸ್ಥಾನದಲ್ಲಿ ಕುಜ ಕೇತು ಅಧಿಕ ಧನಲಾಭ, ಭೂಮಿಯಿಂದ ಆದಾಯ ಕೊಡುತ್ತಾರೆ. ಆರರಲ್ಲಿ ರಾಹು ಕೂಡ ಧನಲಾಭ ಕೊಡುತ್ತಾನೆ. ಒಟ್ಟಾರೆ ನಿಮ್ಮ ರಾಶಿಗೆ ಈಗ ಧನಲಾಭ ಅದೃಷ್ಟ ಚೆನ್ನಾಗಿ ಇದೆ. ಹೊಸ ನೌಕರಿ ಬಡ್ತಿ ಎಲ್ಲಾ ಭಾಗ್ಯವೂ ಇದೆ.
ವೃಶ್ಚಿಕರಾಶಿ
ಈಗ ಯಾವುದೇ ಗ್ರಹಬಲ ಇಲ್ಲ. ಪಂಚಮಶನಿಯ ಪ್ರಭಾವದಿಂದ ಕೆಲವು ಕಸಿವಿಸಿಗಳು, ಅಪಮಾನ ನಿಂದನೆಗಳು ಆಗುತ್ತದೆ. ಹಣಕಾಸು ನೀರಿನಂತೆ ಖರ್ಚಾಗುತ್ತದೆ. ನಿಮ್ಮ ರಾಶಿಯ ಅಧಿಪತಿ ಕುಜ ಹತ್ತನೇ ಮನೆಯಲ್ಲಿ ಇದ್ದು ನಿಮ್ಮ ರಾಶಿಯನ್ನು ನೋಡುತ್ತಾನೆ. ಇದು ನಿಮಗೆ ಕೊಂಚ ರಕ್ಷಣೆ ಕೊಡುತ್ತದೆ. ಆದರೂ ಜಾಗರೂಕರಾಗಿರಿ. ಯಾರೊಂದಿಗೂ ಜಗಳ- ವಾದ ಬೇಡ.
ಧನಸ್ಸುರಾಶಿ
ಈಗ ನಿಮಗೆ ಮೂರರಲ್ಲಿ ರಾಹು ಏಳರಲ್ಲಿ ಗುರು ಬುಧ ಸಮಯ ಬಹಳ ಚೆನ್ನಾಗಿ ಇದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಬಡ್ತಿ ಇದೆ. ಐದನೇ ಮನೆಯಲ್ಲಿ ಶುಕ್ರ ಹೆಣ್ಣುಮಕ್ಕಳಿಗೆ ಒಳ್ಳೆಯದು. ವಿದ್ಯಾರ್ಥಿಗಳಿಗೆ ಶುಭಫಲ. ಹೆಣ್ಣುಮಕ್ಕಳು ಆಭರಣ ಖರೀದಿ ಮಾಡುತ್ತಾರೆ. ವಾಹನ ಯೋಗ, ವಾಹನದಿಂದ ಲಾಭ ಇದೆ. ಮೂರರ ರಾಹು ಅಧಿಕ ಧನಲಾಭ ಹಾಗೂ ಪರಾಕ್ರಮವನ್ನು ಕೊಡುತ್ತಾನೆ. ಯಾವುದೇ ಕೆಲಸ ಮಾಡಿದರೂ ಯಶಸ್ಸು ಲಾಭ ಇದೆ.
ಮಕರರಾಶಿ
ಮೂರರಲ್ಲಿ ಶನಿ, ನಾಲ್ಕರಲ್ಲಿ ಶುಕ್ರ ಸಮಯ ತುಂಬಾ ಚೆನ್ನಾಗಿದೆ. ಧನಾಗಮನ ಉತ್ತಮವಾಗಿದೆ. ವಾಹನದಿಂದ ಲಾಭ ಇದೆ. ವಾಹನ ಉದ್ದಿಮೆದಾರರಿಗೆ ಶುಭಫಲ ಇದೆ. ಆರರಲ್ಲಿ ಸೂರ್ಯ ಸರ್ ಉತ್ತಮ ಶಕ್ತಿ ಪರಾಕ್ರಮ ನೀಡುತ್ತಾನೆ. ಎಂಟರಲ್ಲಿ ಮಂಗಳ ಕೇತು ಇದ್ದಾರೆ ಇದು ಕೊಂಚ ನೆಗೆಟಿವ್ ಪರಿಣಾಮ ಬೀರುತ್ತದೆ. ದೃಷ್ಟಿ ದೋಷ ಆಗಬಹುದು. ಜಾಗ್ರತೆಯಿಂದ ಇರಿ.
ಕುಂಭರಾಶಿ
ನಿಮ್ಮ ರಾಶಿಯಲ್ಲೇ ರಾಹು ಏಳನೇ ಮನೆಯಲ್ಲಿ ಕೇತು ಕುಜ ಇದ್ದು ಕೊಂಚ ನೆಗೆಟಿವ್ ಪರಿಣಾಮ ಬೀರುತ್ತದೆ. ಅಪಘಾತ ಆಗದಹಾಗೆ ಎಚ್ಚರಿಕೆ ವಹಿಸಿ. ವಾಹನ ಚಾಲನೆಯಲ್ಲಿ ಜಾಗ್ರತೆ ಇರಲಿ. ಮೂರರಲ್ಲಿ ಶುಕ್ರ ಐದನೇ ಮನೆಯಲ್ಲಿ ಬುಧ ಗುರು ಸೂರ್ಯ ಶುಭಫಲಗಳನ್ನು ಕೊಡುತ್ತಾರೆ. ಅರ್ಹರಿಗೆ ವಿವಾಹ ಪ್ರಾಪ್ತಿ ಇದೆ. ನೌಕರಿಯಲ್ಲಿ ಯಶಸ್ಸು ಇದೆ. ವಿದ್ಯಾರ್ಥಿಗಳಿಗೆ ಶುಭಫಲಗಳು ಸಿಗುತ್ತದೆ.
ಮೀನರಾಶಿ
ನಿಮ್ಮ ರಾಶಿಯಲ್ಲೇ ಶನಿ ಇದ್ದಾನೆ. ಹೊಟ್ಟೆಯಲ್ಲಿ ಶನಿ. ಆರೋಗ್ಯ ಜೋಪಾನ. ಖರ್ಚುಗಳು ವಿಪರೀತವಾಗಿ ಇರುತ್ತದೆ. ನಾಲ್ಕನೇ ಮನೆಯಲ್ಲಿ ಗುರು ಉನ್ನತ ಸ್ಥಾನಮಾನದಿಂದ ಇಳಿಸುತ್ತಾನೆ. ಅಪಮಾನ ನಿಂದನೆ ಇಂತಹ ಸಂಗತಿಗಳು ಜರುಗುತ್ತದೆ. ಯಾರೊಂದಿಗೂ ಜಗಳ ಆಡಬೇಡಿ ವಾದ ಮಾಡಬೇಡಿ. ಸಹನೆಯಿಂದ ಇರಿ. ಮನೆದೇವರ ಜಪ ಮಾಡಿ.












Click it and Unblock the Notifications