Weekly Horoscope: ಜನವರಿ ಮೂರನೇ ವಾರ ಶುಭ ಯೋಗ: ಈ ರಾಶಿಗೆ ಅದೃಷ್ಟದ ಹೊಳೆ

ಜನವರಿ ಮೂರನೇ ವಾರ 12 ತಾರೀಕಿನಿಂದ ಪ್ರಾರಂಭವಾಗಲಿದ್ದು, ಕೆಲವು ರಾಶಿಯವರು ಹೆಚ್ಚು ಲಾಭವನ್ನು ಪಡೆಯಲಿದ್ದಾರೆ. ಜೊತೆಗೆ ಕೆಲವು ರಾಶಿಯವರಿಗೆ ಈ ವಾರ ಕೆಲ ಸಮಸ್ಯೆಗಳು ಎದುರಾಗಬಹುದು. ಈ ವಾರವು ಜ್ಯೋತಿಷ್ಯದ ಪ್ರಕಾರ ವಿಶೇಷವಾಗಿದೆ. ಈ ವಾರ ಗ್ರಹಗಳ ಸ್ಥಾನ ಬದಲಾಗುತ್ತದೆ. ಆದ್ದರಿಂದ ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಸಾಪ್ತಾಹಿಕ ಭವಿಷ್ಯ ಬಗ್ಗೆ ತಿಳಿದುಕೊಳ್ಳೋಣ.

ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಪುಷ್ಯಮಾಸದ ಶುಕ್ಲಪಕ್ಷ ದ ಚತುರ್ದಶಿಯಿಂದ ಕೃಷ್ಣಪಕ್ಷದ ಷಷ್ಠಿಯವರೆಗೆ

ಅಂದರೆ 12.01.25 ರಿಂದ 19.01.25ರ ವರೆಗೆ

ಈ ವಾರದ ಚಂದ್ರನ ಸಂಚಾರ ಆರಿದ್ರಾ ನಕ್ಷತ್ರದಿಂದ ಉತ್ತರಾ ಫಾಲ್ಗುಣಿಯವರೆಗೆ

Weekly Horoscope In Kannada From January 12 To January 19 2025

ಮೇಷರಾಶಿ:

ಒಂಬತ್ತರಲ್ಲಿ ಬುಧ ಎರಡನೇ ಮನೆಯಲ್ಲಿ ಗುರು, ಹನ್ನೊಂದನೇ ಮನೆಯಲ್ಲಿ ಶನಿ ಶುಕ್ರ ಸಮಯ ಬಹಳ ಚೆನ್ನಾಗಿದೆ. ಹೊಸ ಕೆಲಸ ಸಿಗುವ ಯೋಗ ಇದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಯೋಗ ಇದೆ. ಹಣದ ಹರಿವು ಉತ್ತಮವಾಗಿದೆ. ಮಕರಸಂಕ್ರಾಂತಿಯ ನಂತರ ಇನ್ನೂ ಹೆಚ್ಚಿನ ಶುಭಫಲಗಳು ಸಿಗಲಿವೆ.

Weekly Horoscope In Kannada From January 12 To January 19 2025

ವೃಷಭರಾಶಿ:

ಎಂಟನೇ ಮನೆಯಲ್ಲಿ ಬುಧ, ಹನ್ನೊಂದನೇ ಮನೆಯಲ್ಲಿ ರಾಹು ಸಮಯ ಬಹಳ ಚೆನ್ನಾಗಿದೆ. ಕೇತು ವಿದ್ಯಾ ಸ್ಥಾನದಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಹಿನ್ನಡೆ. ಆದರೆ ಧನಲಾಭ ಉತ್ತಮವಾಗಿದೆ. ಜೀವನದಲ್ಲಿ ಅಡೆತಡೆಗಳು ನಿರ್ಮೂಲನವಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಶನಿಯ ಬದಲಾವಣೆಯಿಂದ ನಿಮಗೆ ಒಳ್ಳೆಯದಾಗುತ್ತದೆ

Weekly Horoscope In Kannada From January 12 To January 19 2025

ಮಿಥುನರಾಶಿ:

ಏಳನೇ ಮನೆಯಲ್ಲಿ ಬುಧ ನೇರವಾಗಿ ನಿಮ್ಮ ರಾಶಿ ನೋಡುತ್ತಾನೆ. ಇದು ನಿಮಗೆ ಅಪಾಯಗಳಿಂದ ರಕ್ಷಿಸುತ್ತದೆ. ಒಂಬತ್ತರಲ್ಲಿ ಶುಕ್ರ ಶುಭಫಲಗಳನ್ನು ಕೊಡುತ್ತಾನೆ. ಹತ್ತನೇ ಮನೆಯಲ್ಲಿ ರಾಹು ರಾಸಾಯನಿಕ ವಸ್ತುಗಳ ವೃತ್ತಿಯಲ್ಲಿ ಇರುವವರಿಗೆ ಶುಭಫಲಗಳನ್ನು ಕೊಡುತ್ತಾನೆ. ‌ಆದರೂ ನಿಮಗೆ ಇನ್ನೂ ಸ್ವಲ್ಪ ಕಾಲ ಪರೀಕ್ಷಾ ಸಮಯ ಇದೆ. ಕೇತು ಮೂರನೇ ಮನೆಗೆ ಬಂದಾಗ ಕೊಂಚ ಮಟ್ಟಿಗೆ ಶುಭಫಲಗಳನ್ನು ನಿರೀಕ್ಷಿಸಬಹುದು.

Weekly Horoscope In Kannada From January 12 To January 19 2025

ಕಟಕರಾಶಿ:

ಮೂರನೇ ಮನೆಯಲ್ಲಿ ಕೇತು ದೈಹಿಕ ಶಕ್ತಿಯನ್ನು ಹೆಚ್ಚು ಮಾಡುತ್ತಾನೆ.‌ಹಣದ ಹರಿವು ಉತ್ತಮ ವಾಗುತ್ತದೆ. ಲಾಭ ಸ್ಥಾನದಲ್ಲಿ ಗುರು ಉತ್ತಮ ಫಲಗಳನ್ನು ಕೊಡುತ್ತಾನೆ. ಹೊಸ ಕೆಲಸ ಸಿಗುವುದು, ವೃತ್ತಿಯಲ್ಲಿ ಬಡ್ತಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ, ಮನೆಯಲ್ಲಿ ಮಂಗಳಕಾರ್ಯಗಳು ನಡೆಯುವುದು ಹೀಗೆ ಈ ವಾರ ಸಹ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು

Weekly Horoscope In Kannada From January 12 To January 19 2025

ಸಿಂಹರಾಶಿ:

ಅಷ್ಟಮ ಶನಿಯ ಪ್ರಭಾವದ ಬಿಸಿ ತಾಕುತ್ತಿರಬಹುದು. ಎಲ್ಲ ವಿಷಯಗಳಲ್ಲೂ ಏರುಪೇರು. ನೀವಂದುಕೊಂಡಂತೆ ಯಾವುದೂ ಆಗುವುದಿಲ್ಲ. ಹಣ ನೀರಿನಂತೆ ಖರ್ಚಾಗುತ್ತದೆ. ಇಲ್ಲಸಲ್ಲದ ಆಪಾದನೆಗಳು ಕಿರಿಕಿರಿಗಳು ನಿಮ್ಮನ್ನು ಹೈರಾಣ ಮಾಡುತ್ತದೆ. ಕೆಲವು ದಿನ‌ಸಹಿಸಿಕೊಳ್ಳಿ. ಮುಮದಿನ ದಿನಗಳಲ್ಲಿ ಗುರುಬಲ ಬಂದಾಗ ಸಮಸ್ಯೆಗಳು ತಕ್ಕಮಟ್ಟಿಗೆ ಹಗುರವಾಗುತ್ತದೆ.

Weekly Horoscope In Kannada From January 12 To January 19 2025

ಕನ್ಯಾರಾಶಿ:

ಶನಿಯ ಬಲ ಕಡಿಮೆ ಆಗುತ್ತಿದೆ. ಈಗ ಬುಧ ನಾಲ್ಕನೇ ಮನೆಯಲ್ಲಿ ಇದ್ದಾನೆ ಇದು ನಿಮಗೆ ಕೊಂಚ ಅನುಕೂಲಕರವಾಗಿದೆ. ಇನ್ನು ಕೆಲವು ದಿನಗಳಲ್ಲಿ ಕೇತು ನಿಮ್ಮ ರಾಶಿಯನ್ನು ಬಿಟ್ಟು ಸಿಂಹರಾಶಿ ಗೆ ಪ್ರವೇಶವಾದಾಗ ಅನೇಕ ಸಮಸ್ಯೆಗಳಿಂದ ಬಿಡುಗಡೆ ಪಡೆಯುತ್ತಿರಿ.‌ಆರೋಗ್ಯ ಸುಧಾರಿಸುತ್ತದೆ. ರಾಹು ಆರನೇ ಮನೆಗೆ ಪ್ರವೇಶವಾದಾಗ ಇನ್ನೂ ಹೆಚ್ಚಿನ ಧನಲಾಭ ಇದೆ. ಒಂಬತ್ತನೆಯ ಮನೆ ಗುರು ಭಾಗ್ಯಗಳನ್ನು ಕೊಡುತ್ತಾನೆ.‌ ಜೀವನ‌ ಸುಗಮವಾಗಿ ನಡೆಯುತ್ತದೆ

Weekly Horoscope In Kannada From January 12 To January 19 2025

ತುಲಾರಾಶಿ:

ಒಳ್ಳೆಯ ದಿನಗಳು ಮುಂದೆ ಬರಲಿದೆ. ಭಾಗ್ಯೋದಯವಾಗುವ ಸಮಯ. ನೀವು ಅಂದುಕೊಂಡ ಯೋಜನೆಗಳೆಲ್ಲ ಪೂರ್ಣವಾಗಿ ನಿಮಗೆ ಮನಸ್ಸಿಗೆ ಸಂತೋಷ‌ಸಿಗುವ ಸಮಯ ಹತ್ತಿರದಲ್ಲೇ ಇದೆ. ಈಗ ಮೂರನೇ ಮನೆಯಲ್ಲಿ ಬುಧ ಐದನೇ ಮನೆಯಲ್ಲಿ ಶುಕ್ರ ಶುಭಫಲಗಳನ್ನು ಕೊಡುತ್ತಾರೆ. ಎಂಟನೇ ಮನೆಯ ಗುರು ಆರೋಗ್ಯದಲ್ಲಿ ಕಿರಿಕಿರಿ ಮಾಡಿದರೂ ಕೆಲವೇ ದಿನಗಳಲ್ಲಿ ಎಲ್ಲವೂ ತಹಬದಿಗೆ ಬರುತ್ತದೆ.

Weekly Horoscope In Kannada From January 12 To January 19 2025

ವೃಶ್ಚಿಕರಾಶಿ:

ಏಳನೇ ಮನೆಯಲ್ಲಿ ಗುರು ಭಾಗ್ಯೋದಯವನ್ನು ಉಂಟುಮಾಡುತ್ತಾನೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದ ಕೆಲಸಗಳು ಈಗ ಪೂರ್ಣ ವಾಗುತ್ತದೆ.ಮನೆಯಲ್ಲಿ ಶುಭಕಾರ್ಯ ನಡೆಯುವ ಸಮಯ. ಈಗ ನಿಮಗೆ ಪಂಚಮ‌ಶನಿ‌ ಪ್ರಾರಂಭವಾಗುವುದರಿಂದ ಒತ್ತಡಗಳು ಸೃಷ್ಟಿಯಾಗುತ್ತದೆ. ಆಪಾದನೆಗಳು ಬರುತ್ತದೆ. ವೃತ್ತಿಗೆ ತೊಂದರೆ ಆಗಬಹುದು. ಆದಷ್ಟು ಸಂಯಮದಿಂದ ನಿಭಾಯಿಸಿ. ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಗಮನ ಇರಲಿ.

Weekly Horoscope In Kannada From January 12 To January 19 2025

ಧನಸ್ಸುರಾಶಿ:

ಈಗ ಮೂರರಲ್ಲಿ ಶನಿ, ಶುಕ್ರ ನಿಮ್ಮ ರಾಶಿಯಲ್ಲೇ ಬುಧ ಇರುವುದು‌ ಒಳ್ಳೆಯ ಫಲಗಳನ್ನು ಕೊಡಬಹುದಾದರೂ ಮುಖ್ಯವಾಗಿ ಈಗ ಗುರುಬಲ ಇಲ್ಲ. ಆರನೇ ಮನೆಯ ಗುರು ಅನಾರೋಗ್ಯ ಹಾಗೂ ಮಾಮಸಿಕವಾಗಿ‌ ಕಿರಿಕಿರಿ ಕೊಡುತ್ತಾನೆ. ಗುರುಗಳ ಸೇವೆ ಮಾಡಿ. ಈಶ್ವರನ ಪ್ರಾರ್ಥನೆ ಮಾಡಿ. ಮುಂದಿನ ದಿನಗಳಲ್ಲಿ ರಾಹು ಮೂರನೇ ಮನೆಗೆ ಬಂದು, ಗುರು ಏಳನೇ ಮನೆಗೆ ಪ್ರವೇಶವಾದಾಗ ಖಂಡಿತಾ ಶುಭಫಲಗಳು ಇವೆ.

Weekly Horoscope In Kannada From January 12 To January 19 2025

ಮಕರರಾಶಿ:

ಈಗ ಗುರುಬಲ ರಾಹು ಬಲ ಇದೆ. ನೀವು ಅಂದುಕೊಂಡ ಕೆಲಸಗಳು ನಿಮ್ಮ ಇಚ್ಛೆಯಂತೆ ನೆರವೇರುತ್ತದೆ. ಶನಿಕೂಡ ಕೆಲವೇ ದಿನಗಳಲ್ಲಿ ಎರಡನೇ ಮನೆಯಿಂದ ಮೂರನೇ ಮನೆಗೆ ಪ್ರವೇಶವಾಗುತ್ತಾನೆ. ನಿಮಗೆ ಈಗ ಶುಭಕಾಲ. ಒಳ್ಳೆಯ ಫಲಗಳನ್ನು ಅನುಭವಿಸುತ್ತೀರಿ. ನಿಂತು ಹೋದ ಕಾರ್ಯಗಳು ಮರು ಚಾಲನೆ ಗೊಂಡು ನಿಮ್ಮ ಜಡತ್ವವನ್ನು ಕಳೆಯುತ್ತದೆ.

Weekly Horoscope In Kannada From January 12 To January 19 2025

ಕುಂಭರಾಶಿ:

ಹನ್ನೊಂದನೇ ಮನೆಯಲ್ಲಿ ಬುಧ ಸೂರ್ಯ ಒಳ್ಳೆಯ ಫಲಗಳನ್ನು ಕೊಡುತ್ತಾರೆ. ನಿಮ್ಮ ರಾಶಿಯಲ್ಲೇ ಶುಕ್ರ ಇದ್ದು ಕೊಂಚ ತಂಪು ಅನುಭವ ಆಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಗುರುಬಲ‌ಬರಲಿದ್ದು ಸುಖಸಂತೋಷ ನೆಮ್ಮದಿಗಳನ್ನು‌ ಪಡೆಯುತ್ತೀರಿ. ನಿಂತು ಹೋದ ಕೆಲಸಗಳು ಮತ್ತೆ ಚಾಲನೆ ಪಡೆದು ಕೊಳ್ಳುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಈಗೊನಿಂದಲೇ ಶುಭಸೂಚನೆಗಳನ್ನು ಕಾಣುವಿರಿ. ವೃತ್ತಿಯಲ್ಲಿ ಗೌರವ ಪ್ರಶಂಸೆ ಸಿಗಲಿದೆ. ಅರ್ಹರಿಗೆ ಸನ್ಮಾನ ಪ್ರಶಸ್ತಿ ಗಳೂ ಲಭಿಸಬಹುದು.

Weekly Horoscope In Kannada From January 12 To January 19 2025

ಮೀನರಾಶಿ:

ನಿಮಗೆ ಈಗ ಯಾವುದೇ ಗ್ರಹಬಲ ಇಲ್ಲದಿರುವುದರಿಂದ ನೀವು ಎಚ್ಚರಿಕೆಯ ನಡೆ ಅನುಸರಿಸಬೇಕು. ಯಾವ ಕೆಲಸವಾಗಬೇಕಾದರೂ ಶ್ರಮ ಹೆಚ್ವು ಫಲ ಕಡಿಮೆ. ವಾದವಿವಾದಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಜಾಗರೂಕರಾಗಿರಿ. ಒತ್ತಡಗಳು, ಹಣಕಾಸು ತಾಪತ್ರಯ ಇರುತ್ತದೆ. ಜಾಣ್ಮೆಯಿಂದ ನಿಭಾಯಿಸಬೇಕು.‌

ಶುಭಮಸ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+