Weekly Horoscope: ಆಗಸ್ಟ್ ತಿಂಗಳ ಕೊನೆಯ ವಾರ ಈ ರಾಶಿಗಳಿಗೆ ಅದೃಷ್ಟದ ಬಲ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವರ್ಷ ಋತು ಶ್ರಾವಣ ಬಹುಳ ಷಷ್ಠಿಯಿಂದ ಚತುರ್ದಶಿ ವರೆಗೆ.
ಈ ವಾರದ ಚಂದ್ರನ ಸಂಚಾರ ಭರಣಿ ನಕ್ಷತ್ರದಿಂದ ಆಶ್ಲೇಷಾ ನಕ್ಷತ್ರದವರೆಗೆ
25/08/2024-31/08/2024ರ ವಾರ ಭವಿಷ್ಯ

ಮೇಷ ರಾಶಿಯ ವಾರ ಭವಿಷ್ಯ
ಈ ವಾರ ಚಂದ್ರ ನಿಮ್ಮ ರಾಶಿಯಿಂದ ಎರಡು, ಮೂರು, ನಾಲ್ಕನೇ ಮನೆಗಳಲ್ಲಿ ಸಂಚರಿಸುತ್ತ ನಿಮಗೆ ಧನಲಾಭವನ್ನು, ಯಶಸ್ಸನ್ನೂ ಕೊಡುತ್ತಾನೆ. ಗುರು ಎರಡನೇ ಮನೆಯಲ್ಲಿ ಕೌಟುಂಬಿಕ ಸುಖ ಸಂತೋಷ ಹಾಗೂ ಕಾರ್ಯಸಿದ್ಧಿಯನ್ನು ಕೊಡುತ್ತಾನೆ. ಮೂರನೇ ಮನೆಯಲ್ಲಿ ಕುಜ ಹಾಗೂ ಲಾಭಸ್ಥಾನದಲ್ಲಿ ಶನಿ ಅಪಾರ ಧನಲಾಭ ಸೌಖ್ಯ, ಪರಾಕ್ರವನ್ನು ಕೊಟ್ಟು ಕಾಪಾಡುತ್ತಾರೆ.

ವೃಷಭ ರಾಶಿಯ ವಾರ ಭವಿಷ್ಯ
ಈ ವಾರದಲ್ಲಿ ಚಂದ್ರ ನಿಮ್ಮ ರಾಶಿ ಹಾಗೂ ಎರಡನೇ ಮೂರನೇ ಮನೆಯಲ್ಲಿ ಸಂಚರಿಸುತ್ತಾನೆ. ಇದು ನಿಮಗೆ ಯಶಸ್ಸನ್ನು ಲಾಭವನ್ನು ತಂದುಕೊಡುತ್ತದೆ. ಹಾಲು ಹೈನು ವ್ಯಾಪಾರಿಗಳು, ಕಲಾವಿದರು, ಐಸ್ ಕ್ರೀಂ ಮಾರಾಟಗಾರರಿಗೆ ಶುಭ ವಾಗುತ್ತದೆ. ಹನ್ನೊಂದನೇ ಮನೆಯಲ್ಲಿ ರಾಹು ಇದ್ದು ಧನ ಲಾಭ ಕೊಡುತ್ತಾನೆ. ಮೂರರಲ್ಲಿ ಬುಧ, ನಾಲ್ಕರಲ್ಲಿ ಸೂರ್ಯ, ಐದನೇ ಮನೆಯಲ್ಲಿ ಶುಕ್ರ ಇದ್ದು ಸಮಯ ಬಹಳ ಚೆನ್ನಾಗಿದೆ.

ಮಿಥುನ ರಾಶಿಯ ವಾರ ಭವಿಷ್ಯ
ಈ ವಾರದಲ್ಲಿ ಚಂದ್ರ ನಿಮ್ಮ ರಾಶಿ ಹಾಗೂ ಎರಡನೇ ಮನೆಯಲ್ಲಿ ಸಂಚರಿಸುತ್ತಾನೆ. ನಿಮ್ಮ ರಾಶಿಯಲ್ಲೇ ಕುಜ ಇದ್ದಾನೆ. ಎರಡನೇ ಮನೆಯಲ್ಲಿ ಬುಧ, ಮೂರರಲ್ಲಿ ಸೂರ್ಯ ನಾಲ್ಕರಲ್ಲಿ ಶುಕ್ರ ಕೇತು ಇದ್ದಾರೆ. ಈ ವಾರ ಮಿಶ್ರಫಲ ನಿಮ್ಮದು. ದೈನಂದಿನ ಬದುಕಿಗೆ ಅಡಚಣೆಯಾಗದೆ ಹಾಗೆಯೇ ವಿಶೇಷಗಳೇನೂ ಘಟಿಸದೆ ಸಾಧಾರಣವಾಗಿ ಕಳೆಯುತ್ತದೆ.

ಕಟಕ ರಾಶಿಯ ವಾರ ಭವಿಷ್ಯ
ನಿಮ್ಮ ರಾಶಿಯಲ್ಲೇ ಬುಧ, ಎರಡನೇ ಮನೆಯಲ್ಲಿ ಸೂರ್ಯ, ಮೂರರಲ್ಲಿ ಕೇತು ಶುಕ್ರ, ಹನ್ನೊಂದನೇ ಮನೆಯಲ್ಲಿ ಗುರು ಸಮಯ ಬಹಳ ಚೆನ್ನಾಗಿದೆ. ಆದರೆ ಅಷ್ಠಮ ಶನಿಯ ಪ್ರಭಾವ ಇರುವುದರಿಂದ ಕೊಂಚ ಆರೋಗ್ಯ ಏರುಪೇರು, ಹಣಕಾಸಿನ ಮುಗ್ಗಟ್ಟು ಕಾಣಿಸಬಹುದು. ಆದರೆ ಗುರುವಿನ ಅನುಗ್ರಹದಿಂದ ಎಲ್ಲವೂ ಸರಿಹೋಗುತ್ತದೆ. ಬೆಟ್ಟದಂತೆ ಬಂದ ಕಷ್ಟ ಮಂಜಿನಂತೆ ಕರಗಿ ಹೋಗುತ್ತದೆ.

ಸಿಂಹ ರಾಶಿಯ ವಾರ ಭವಿಷ್ಯ
ಈಗ ಸಮಯ ನಿಮಗೆ ಅನುಕೂಲವಾಗಿಲ್ಲ. ರಾಶಿಯಲ್ಲೇ ಅದರ ಅಧಿಪತಿ ಸೂರ್ಯ ಇರುವುದು, ಸೂರ್ಯನಿಗೆ ಶನಿ ದೃಷ್ಟಿ ಇರುವುದು ನಿಮಗೆ ಅನೇಕ ಕಿರುಕುಳಗಳನ್ನು ಕೊಡುತ್ತದೆ. ನಿಮ್ಮವರೇ ನಿಮ್ಮ ವಿರುದ್ಧ ಪಿತೂರಿ ಮಾಡುವುದು, ನಿಮ್ಮ ಕೈಕೆಳಗಿನವರೆ ನಿಮ್ಮ ಮಾತನ್ನು ಕೇಳದೆ ಇರುವುದು ಹೀಗೆ ನಿಮಗೆ ವ್ಯತಿರಿಕ್ತ ಸಂದರ್ಭಗಳು ಎದುರಾಗುತ್ತದೆ. ಹಣಕಾಸಿನ ಮುಗ್ಗಟ್ಟು ಕೂಡ ಇದೆ. ನಿಮ್ಮ ವಾಹನದಿಂದ ಅಪಘಾತವಾಗಿ ಪರಿಹಾರ ಕೊಡಬೇಕಾಗಬಹುದು. ಯಾವುದಕ್ಕೂ ಜಾಗ್ರತೆಯಿಂದ ಇರಿ.

ಕನ್ಯಾ ರಾಶಿಯ ವಾರ ಭವಿಷ್ಯ
ನಿಮಗೆ ಈಗ ಸಮಯ ಬಹಳ ಚೆನ್ನಾಗಿ ಇರುವುದರಿಂದ ಬೆಟ್ಟದಂತೆ ಎದುರಾದ ಆಪತ್ತುಗಳು ಮಂಜಿನಂತೆ ಕರಗಿ ಹೋಗುತ್ತದೆ. ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ರಾಹು ಇರುವುದು ಸಂಗಾತಿಯ ಆರೋಗ್ಯಕ್ಕೆ ತೊಂದರೆ. ಆದರೆ ತೊಂದರೆ ಎದುರಾದರೂ ಸುಲಭವಾಗಿ ಪರಿಹಾರವೂ ಸಿಗುತ್ತದೆ. ಹಣಕಾಸಿನ ಸ್ಥಿತಿ ಸುಗಮವಾಗಲಿದೆ. ಯಾವುದಾದರೂ ಸಿಕ್ಕಿಹಾಕಿಕೊಂಡ ಸಮಸ್ಯೆಗಳಿಗೆ ಪರಿಹಾರ ದೊರೆತು ನಿರಾಳವಾಗಲಿದೆ.

ತುಲಾ ರಾಶಿಯ ವಾರ ಭವಿಷ್ಯ
ಈ ವಾರ ಪೂರ್ತಿ ಸೂರ್ಯ, ಬುಧ ಹಾಗೂ ರಾಹುವಿನ ಬಲ ಇದೆ. ಆದರೆ ಗುರು ಎಂಟನೇ ಮನೆಯಲ್ಲಿ ಇರುವುದರಿಂದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಿ. ಸರ್ಕಾರದಿಂದ ಆಗಬೇಕಾದ ಕೆಲಸಗಳು ಈಗ ಹಗುರವಾಗಿ ನೆರವೇರುತ್ತದೆ. ವಾರದ ಕೊನೆಯಲ್ಲಿ ಚಂದ್ರನ ಸಂಚಾರ ನಿಮಗೆ ಲಾಭ ತರುತ್ತದೆ. ಪಂಚಮ ಶನಿಯ ಪ್ರಭಾವ ಇರುವುದರಿಂದ ಕೊಂಚ ಕಿರಿಕಿರಿಗಳು ಇದ್ದೇ ಇರುತ್ತದೆ. ಸಂಭಾಳಿಸಿಕೊಳ್ಳಿ.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಏಳನೇ ಮನೆಯಲ್ಲಿ ಗುರು, ಹತ್ತರಲ್ಲಿ ಸೂರ್ಯ, ಹನ್ನೊಂದನೇ ಮನೆಯಲ್ಲಿ ಶುಕ್ರ ಕೇತು ಸಮಯ ಬಹಳ ಚೆನ್ನಾಗಿದೆ. ಹೊಸ ಉದ್ಯೋಗ ಪ್ರಾಪ್ತಿ, ಉದ್ಯೋಗದಲ್ಲಿ ಟಾರ್ಗೆಟ್ ರೀಚ್ ಮಾಡಿ ಭೇಷ್ ಎನಿಸಿಕೊಳ್ಳುವಿರಿ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಸಂತಾನದಿಂದ ಕೆಲವು ಬೇಸರದ ಸಂಗತಿಗಳು ನಡೆಯಬಹುದು. ಕ್ರಮೇಣವಾಗಿ ಸರಿ ಹೋಗುತ್ತದೆ.

ಧನಸ್ಸು ರಾಶಿಯ ವಾರ ಭವಿಷ್ಯ
ಈಗ ಗುರು ಆರನೇ ಮನೆಯಲ್ಲಿ ಇರುವುದರಿಂದ ಮಾನಸಿಕ ಕಿರಿಕಿರಿ ಚಿಂತೆ ಇರುತ್ತದೆ. ತಾಯಿಯಿಂದ ಅಥವಾ ತಾಯಿ ಸಮಾನ ರಿಂದ ನಿಷ್ಟೂರ ಉಂಟಾಗುತ್ತದೆ. ಮೂರನೇ ಮನೆಯಲ್ಲಿ ಶನಿಇರುವುದರಿಂದ ಹಣಕಾಸಿಗೇನೂ ಅಡಚಣೆ ಬರುವುದಿಲ್ಲ. ಒಂಬತ್ತನೇ ಮನೆಯಲ್ಲಿ ಸೂರ್ಯ ಇದ್ದಾನೆ ತಂದೆಯಿಂದ ಸಹಾಯ ಇದೆ. ಹತ್ತರಲ್ಲಿ ಶುಕ್ರ ಕೇತು ಇದ್ದಾರೆ ವೃತ್ತಿಯಲ್ಲಿ ಯಶಸ್ಸು ಇದೆ.

ಮಕರ ರಾಶಿಯ ವಾರ ಭವಿಷ್ಯ
ಈಗ ನಿಮಗೆ ಸಮಯ ಬಹಳ ಚೆನ್ನಾಗಿದೆ. ಗುರುವಿನ ಅನುಗ್ರಹ ಇದೆ. ರಾಹುವಿನ ಬಲ ಇದೆ. ಒಂಬತ್ತರಲ್ಲಿ ಶುಕ್ರ ಏಳರಲ್ಲಿ ಬುಧ ಸಮಯ ಬಹಳ ಚೆನ್ನಾಗಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ, ನಿರುದ್ಯೋಗಿಗಳಿಗೆ ಉದ್ತೋಗ ಪ್ರಾಪ್ತಿ ಇದೆ. ವಿದೇಶ ಪ್ರಯಾಣ ಯೋಗ ಇದೆ. ಧನಲಾಭ ಶುಭಕಾರ್ಯಗಳು ನಡೆಯುವುದು ಮುಂತಾದ ಮಂಗಳಕರ ಸಂಗತಿಗಳು ಇವೆ.

ಕುಂಭ ರಾಶಿಯ ವಾರ ಭವಿಷ್ಯ
ಈಗ ಗಂಭೀರ ಸಮಯ. ನಾನಾ ತರದ ವಿಚಾರಣೆಗಳನ್ನು ಎದುರಿಸುತ್ತೀರಿ. ಮಾನಹಾನಿ ಧನಹಾನಿ ಮೊದಲಾದ ಅವಮಾನಕರ ಸಂಗತಿಗಳು ನಡೆದು ಮನಸ್ಸಿಗೆ ಬೇಸರವಾಗುತ್ತದೆ. ಕೌಟುಂಬಿಕವಾಗಿಯೂ ಬಹಳ ಕಷ್ಟಗಳು ಕಿರಿಕಿರಿಗಳುಇವೆ. ಯಾವ ವಿಷಯವನ್ನೂ ಹಗುರಾಗಿ ಎಣಿಸಬೇಡಿ. ಪ್ರತಿಯೊಂದು ನಿರ್ಧಾರವನ್ನೂ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಈಗ ನಿಮಗೆ ಸಹನೆ ತಾಳ್ಮೆಯೇ ಮುಖ್ಯ.

ಮೀನ ರಾಶಿಯ ವಾರ ಭವಿಷ್ಯ
ನಿಮಗೂ ಸಹ ಗಂಭೀರ ಸಮಯವೇ ಆಗಿದೆ. ಮನೆಯಲ್ಲಿ ಕೊಂಚ ಏರುಪೇರುಗಳು ಆಗಿ ಮನಸ್ಸಿಗೆ ಆತಂಕವಾಗುತ್ತದೆ. ಮೂರರಲ್ಲಿ ಕುಜ ಹಾಗೂ ಆರರಲ್ಲಿ ಸೂರ್ಯ ನಿಮ್ಮ ನೆರವಿಗೆ ಇದ್ದಾರೆ. ಕುಜ ಸೂರ್ಯರಿಂದ ಕೊಂಚಮಟ್ಟಿಗೆ ಸಹಾಯ ಆಗುತ್ತದೆ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಹಣಕಾಸಿನ ಸ್ಥಿತಿಯನ್ನು ಉಪಾಯವಾಗಿ ಸಂಭಾಳಿಸಿಕೊಳ್ಳಿ.












Click it and Unblock the Notifications