Weekly horoscope : ಈ ಎರಡು ರಾಶಿಯವರ ಗಳಿಕೆ ಹೆಚ್ಚಾಗುವುದು; ಇವರಿಗೆ ಉದ್ಯೋಗದಲ್ಲಿ ಸಿಗುವುದು ಬಡ್ತಿ
ಈ ವಾರ ವೃತ್ತಿ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಪಟ್ಟಂತೆ ವಿಶೇಷವಾಗಿರುತ್ತದೆ. ವೃತ್ತಿಯಲ್ಲಿ ಬಡ್ತಿ ಅಥವಾ ವ್ಯವಹಾರದಲ್ಲಿ ಲಾಭವನ್ನು ಎದುರು ನೋಡುತ್ತಿರುವವರಿಗೆ ಈ ವಾರ ವಿಶೇಷ. ಮೇಷ, ಮಿಥುನ ಸೇರಿದಂತೆ ಐದು ರಾಶಿಯವರಿಗೆ ಈ ವಾರ ಬಹಳ ಶುಭವಾಗಿರುತ್ತದೆ. ಈ ವಾರ ಯಾವ ರಾಶಿಗೆ ಶುಭ ಯಾರಿಗೆ ಅಶುಭ? ಯಾರಿಗೆ ಲಾಭ ಯಾರಿಗೆ ನಷ್ಟ ಎನ್ನು ವಿವರವಾದ ಮಾಹಿತಿ ಈ ವಾರದ ವಾರ ಭವಿಷ್ಯದಲ್ಲಿ.
ಮೇಷ ರಾಶಿ
ಈ ವಾರ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಕೆಲಸದಲ್ಲಿ ಹೆಚ್ಚು ಸೃಜನಶೀಲರಾಗಿರುವಿರಿ. ಅನಿರೀಕ್ಷಿತ ಮೂಲಗಳಿಂದ ಹಣ ಪಡೆಯುವ ಸಾಧ್ಯತೆಗಳಿವೆ. ಉದ್ಯಮಿಗಳಿಗೆ ವ್ಯಾಪಾರದಲ್ಲಿ ಪ್ರಗತಿಯಾಗುವುದು. ಕುಟುಂಬದಲ್ಲಿ ಸಂತೋಷ ಇರುತ್ತದೆ.

ವೃಷಭ ರಾಶಿ
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವುದು. ಇಡೀ ವಾರ ಸಂತೋಷದಿಂದ ಕೂಡಿರುವುದು. ಆದಾಯದಲ್ಲಿ ಹೆಚ್ಚಳವಾಗಬಹುದು.
ಮಿಥುನ ರಾಶಿ
ನಿಮ್ಮ ಮಾತಿನ ಶೈಲಿಯಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ. ನಿಮ್ಮ ಜನಪ್ರಿಯತೆ ಹೆಚ್ಚುವುದು. ಮಾಡಬೇಕು ಎಂದುಕೊಂಡಿರುವ ಪ್ರಮುಖ ಕೆಲಸಗಳು ಈ ವಾರ ಕೈಗೂಡುವುದು. ಆರ್ಥಿಕ ಲಾಭವಾಗುವುದು.
ಕರ್ಕಾಟಕ ರಾಶಿ
ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಮಯ. ಭವಿಷ್ಯಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವಾಗ ನಿಮ್ಮ ಮನಸ್ಸಿನ ಮಾತನ್ನು ಕೇಳಿ. ಭಾವನಾತ್ಮಕವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಡಿ. ಸಮಸ್ಯೆಗಳನ್ನು ಉಂಟುಮಾಡಬಹುದು.
ಸಿಂಹ ರಾಶಿ
ಹಣಕಾಸಿನ ಸ್ಥಿತಿ ಸದೃಢವಾಗಿರುವುದು. ಸ್ಥಾನಮಾನದಲ್ಲಿ ಹೆಚ್ಚಳವಾಗುವುದು. ವಾರದ ಅಂತ್ಯದ ವೇಳೆಗೆ ನೀವು ಹೆಚ್ಚು ಭಾವನಾತ್ಮಕವಾಗಬಹುದು.
ಕನ್ಯಾ ರಾಶಿ
ಅಂದುಕೊಂಡ ಕೆಲಸಗಳನ್ನು ತ್ವರಿತವಾಗಿ ಮಾಡಿ ಮುಗಿಸುವಿರಿ.ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಮಾತನಾಡುವಾಗ ಮಾತುಗಳಲ್ಲಿ ಸ್ಪಷ್ಟತೆ ಇರಲಿ. ಮಾತನಾಡುವ ಮೊದಲು ಎಚ್ಚರ ವಹಿಸಿ.
ತುಲಾ ರಾಶಿ
ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಮಯ ಕಳೆಯುವಿರಿ. ನಿಮ್ಮ ವ್ಯಕ್ತಿತ್ವದ ಮೂಲಕವೇ ಎದುರಿಗಿರುವವರನ್ನು ಆಕರ್ಷಿಸುವಿರಿ. ನಿಮ್ಮ ಮಾತಿಗೆ ಈ ವಾರ ವಿಶೇಷ ಮನ್ನಣೆ ಸಿಗುವುದು. ವೆಚ್ಚಗಳು ಹೆಚ್ಚಾಗುವುದು. ವೃತ್ತಿಯಲ್ಲಿ ಪ್ರಗತಿಯಾಗುವುದು.
ವೃಶ್ಚಿಕ ರಾಶಿ
ಈ ವಾರದ ಆರಂಭವು ವೃತ್ತಿಜೀವನಕ್ಕೆ ತುಂಬಾ ಶುಭವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಆದಾಯವೂ ಹೆಚ್ಚಾಗುವುದು. ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ.
ಧನು ರಾಶಿ
ಹೊಸ ವಿಷಯಗಳನ್ನು ಕಲಿಯಲು ಇದು ಶುಭ ಸಮಯ. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿ ಸಿಗುವುದು. ಆದರೂ ವೈಯಕ್ತಿಕ ಬದುಕಿನಲ್ಲಿ ಒತ್ತಡ ಹೆಚ್ಚಾಗುವುದು.
ಮಕರ ರಾಶಿ
ವಾರದ ಆರಂಭದಲ್ಲಿ ಹೆಚ್ಚು ಭಾವನಾತ್ಮಕವಾಗಿರಬಹುದು. ವೃತ್ತಿಜೀವನದ ಮೇಲೆ ಗಮನ ಹರಿಸಿ. ಆರ್ಥಿಕವಾಗಿ ಲಾಭವಾಗುವುದು. ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಹೆಚ್ಚಾಗುತ್ತದೆ.
ಕುಂಭ ರಾಶಿ
ಈ ವಾರ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷವಾಗಿದೆ. ಸಾಲ ಕೊಟ್ಟು ಹೊರ ಉಳಿದಿರುವ ಹಣ ಮತ್ತೆ ಕೈ ಸೇರುವುದು. ಆದಾಯದಲ್ಲಿ ಆಗುವ ಹೆಚ್ಚಳವು ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ನೀಡುವುದು. ವೃತ್ತಿಜೀವನದಲ್ಲಿ ಗಮನಾರ್ಹ ಬದಲಾವಣೆಗಳಾಗುವುದು.
ಮೀನ ರಾಶಿ
ಈ ವಾರ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಜವಾಬ್ದಾರಿಗಳು ಹೆಚ್ಚಾಗಿರುತ್ತದೆ. ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications