Visha Yoga 2025: ವಿಷ ಯೋಗ- ಈ ರಾಶಿಯವರಿಗೆ ಯುಗಾದಿಗೂ ಮೊದಲೇ ಧನಲಾಭ ಗ್ಯಾರಂಟಿ
ನವಗ್ರಹಗಳಲ್ಲಿ ಶನಿ ದೇವನನ್ನು ಅತ್ಯಂತ ಅಶುಭ ಗ್ರಹವೆಂದು ಕರೆಯಲಾಗುತ್ತದೆ. ಯಾಕೆಂದರೆ ಶನಿಯೂ ಕರ್ಮಗಳಿಗೆ ಅನುಸಾರ ಫಲ ನೀಡುವ ದೇವರು. ಹೀಗಾಗಿ ಈ ಗ್ರಹದ ಸ್ಥಾನಪಲ್ಲಟದ ಬಗ್ಗೆ ಜನರಿಗೆ ಭಯವಿರುತ್ತದೆ. ಅಂದಹಾಗೆ ಇದೇ ಮಾರ್ಚ್ 26 ರಂದು ಕುಂಭ ರಾಶಿಯಲ್ಲಿ ಶನಿ-ಚಂದ್ರನ ಸಂಯೋಗವಾಗಲಿದೆ. ಇದರಿಂದ ಅಶುಭ ಯೋಗ ಸೃಷ್ಟಿಯಾಗಲಿದ್ದು, ಈ ಯೋಗದಿಂದ ಕೆಲ ರಾಶಿಯವರಿಗೆ ಅತ್ಯುತ್ತಮ ಫಲ ಸಿಗಲಿವೆ.
ಹೌದು... ಸುಮಾರು ಎರಡೂವರೆ ವರ್ಷಗಳ ಹಿಂದೆ ಶನಿ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಿತು. ಈಗ ಮಾರ್ಚ್ 29 ಚಂದ್ರನು ಮೀನ ರಾಶಿಗೆ ಸಾಗುತ್ತಾನೆ. ಆದರೆ ಅದಕ್ಕೂ ಮೊದಲು ಮಾರ್ಚ್ 26 ರಂದು ಚಂದ್ರನು ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಮಾರ್ಚ್ 26, 2025ರಂದು ಮಧ್ಯಾಹ್ನ 3:14 ಕ್ಕೆ ಚಂದ್ರನು ಕುಂಭ ರಾಶಿಗೆ ಪ್ರವೇಶಿ ಅಲ್ಲಿ ಶನಿ ಹಾಗೂ ಚಂದ್ರನ ಸಂಯೋಗವಾಗಲಿದೆ.
ಮಾರ್ಚ್ 29ರ ನಂತರ ಚಂದ್ರನನ್ನು ಬಿಟ್ಟು ಮೀನ ರಾಶಿಯಲ್ಲಿ ಶನಿ ಸಾಗುತ್ತಾನೆ. ಈ ಕಾರಣಕ್ಕಾಗಿ ಮಾರ್ಚ್ 26ರಂದು ಕುಂಭ ರಾಶಿಯಲ್ಲಿ ಶನಿ ಮತ್ತು ಚಂದ್ರನ ಸಂಯೋಗದಿಂದ ವಿಷ ಯೋಗ ರೂಪಗೊಳ್ಳುವುದು. ಈ ಸಂಯೋಜನೆಯಿಂದಾಗಿ ಕೆಲವು ರಾಶಿಗಳ ಜನರ ಅದೃಷ್ಟ ತೆರೆದುಕೊಳ್ಳುತ್ತದೆ. ಹಾಗಾದರೆ ಈ ವಿಷ ಯೋಗ ಯಾವ ರಾಶಿಗಳಿಗೆ ಶುಭವಾಗಲಿದೆ ಎಂದು ಈಗ ತಿಳಿಸೋಣ.

ಮಿಥುನ ರಾಶಿ
ವಿಷ ಯೋಗದಿಂದ ಮಿಥುನ ರಾಶಿಯವರ ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಜಂಟಿಯಾಗಿ ಮಾಡಿದ ಉದ್ಯೋಗ ಕೈ ಹಿಡಿಯಲಿದೆ. ಉದ್ಯಮಿಗಳಿಗೆ ಹೂಡಿಕೆಯಿಂದ ಲಾಭವಿದೆ. ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಹೋಗಬಹುದು. ವಿದ್ಯಾರ್ಥಿಗಳ ಬುದ್ಧಿ ಶಕ್ತಿ ಹೆಚ್ಚಾಗುವುದು. ಅಂದುಕೊಂಡಂತೆ ಆದಾಯ ಸಿಗಲಿದೆ. ಈ ಅವಧಿಯಲ್ಲಿ ಮಿಥುನ ರಾಶಿಯ ಜನರು ತಮ್ಮ ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇದರೊಂದಿಗೆ ನೀವು ಸರ್ಕಾರಿ ಅಥವಾ ಆಡಳಿತ ಕ್ಷೇತ್ರಗಳಲ್ಲಿ ಕೆಲವು ವಿಶೇಷ ಅವಕಾಶಗಳನ್ನು ನೋಡುತ್ತೀರಿ.

ತುಲಾ ರಾಶಿ
ತುಲಾ ರಾಶಿಯವರಿಗೆ ಈ ಸಮಯ ಹೆಚ್ಚು ಪ್ರಯೋಜನಕಾರಿಯಾಗಿದೆ. ವಿಷಯೋಗದಿಂದ ತುಲಾ ರಾಶಿಯವರ ಸಂಕಷ್ಟಗಳು ದೂರವಾಗುತ್ತವೆ. ಶುತ್ರಗಳ ಕಾಟ ನಿಮ್ಮ ಹತ್ತಿರಕ್ಕೂ ಬಾರದು. ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ, ಸಣ್ಣ ಪ್ರಯತ್ನ ಹೆಚ್ಚು ಲಾಭವನ್ನು ತಮದು ಕೊಡುತ್ತದೆ. ಜನರಿಗೆ ಆರ್ಥಿಕ ವಿಷಯಗಳಲ್ಲಿ ಸುಧಾರಣೆ ಕಂಡುಬರಲಿದೆ. ಸಮಾಜದಲ್ಲಿ ಗೌರವವೂ ಹೆಚ್ಚಾಗುತ್ತದೆ. ಸಂಬಂಧಗಳು ಇನ್ನಷ್ಟು ಬಲಗೊಳ್ಳಲಿವೆ.

ಮಕರ ರಾಶಿ
ಮಕರ ರಾಶಿಯವರಿಗೆ ವಿಷ ಯೋಗ ಅದೃಷ್ಟದ ಪರ್ವಕಾಲವಾಗಿದೆ. ಆರ್ಥಿಕವಾಗಿ ಸಾಕಷ್ಟು ಬದಲಾವಣೆಯನ್ನು ನೀವು ನೋಡುವಿರಿ. ಶನಿ ದೇವನ ಕೃಪೆಯಿಂದ ಸಮಸ್ಯೆಗಳೆಲ್ಲವೂ ನಿಮ್ಮಿಂದ ದೂರ ಉಳಿಯಲಿವೆ. ಹೂಡಿಕೆ ಅಥವಾ ಆಸ್ತಿಗೆ ಸಂಬಂಧಿಸಿದ ನಿರ್ಧಾರಗಳು ನಿಮಗೆ ಪ್ರಯೋಜನ ನೀಡಲಿವೆ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಶನಿ ಮತ್ತು ಚಂದ್ರನ ಸಂಯೋಜನೆಯಿಂದ ಸೃಷ್ಟಿಯಾದ ವಿಷಯೋಗ ಅದೃಷ್ಟವನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದರಿಂದಾಗಿ ನೀವು ಮಾನಸಿಕ ಸ್ಥಿರತೆಯನ್ನು ಅನುಭವಿಸುವಿರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಕೆಲಸದಲ್ಲಿ ಹೊಸತನವನ್ನು ಕಾಣುವಿರಿ. ನಿಮ್ಮ ಅಪೂರ್ಣ ಕೆಲಸ ಪೂರ್ಣಗೊಳ್ಳುವ ಸಾಧ್ಯತೆಯಿದೆ.












Click it and Unblock the Notifications