ವಿಪರೀತ ರಾಜಯೋಗ: ಈ 3 ರಾಶಿಯವರಿಗೆ ಶುರುವಾಯ್ತು ಅದೃಷ್ಟದ ಕಾಲ; ಭರ್ಜರಿ ಧನಲಾಭ, ರಾಜ ವೈಭೋಗ!
Vipareetha Rajayoga : ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಬಹಳ ಮುಖ್ಯವಾದ ಗ್ರಹವೆಂದು ಹೇಳಲಾಗುತ್ತದೆ. ಗುರುವು ಸಂಪತ್ತು, ಶಿಕ್ಷಣ, ಜ್ಞಾನ, ಅದೃಷ್ಟ, ಸಂತೋಷದ ಅಂಶ. ಇತರ ಗ್ರಹಗಳಿಗೆ ಹೋಲಿಸಿದರೆ ಗುರುವು ಒಂದು ರಾಶಿಯಲ್ಲಿ ಹೆಚ್ಚು ಕಾಲ ಸಂಚಾರ ಮಾಡುವುದರಿಂದ ಅವನ ಸಂಚಾರವು ಎಲ್ಲಾ ರಾಶಿಯವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಶನಿ ಒಂದು ರಾಶಿಯಲ್ಲಿ ಎರಡೂವರೆ ವರ್ಷ ಸಂಚಾರ ಮಾಡಿದರೆ ರಾಹು ಮತ್ತು ಕೇತು ಒಂದೂವರೆ ವರ್ಷ ಒಂದೇ ರಾಶಿಯಲ್ಲಿ ಇರುತ್ತಾರೆ. ಇದಾದ ನಂತರ ಅತಿ ಹೆಚ್ಚು ಸಮಯದವರೆಗೆ ಒಂದು ರಾಶಿಯಲ್ಲಿ ಅಂದರೆ ಒಂದು ವರ್ಷದವರೆಗೆ ಸಂಚಾರ ಮಾಡುವ ಗ್ರಹ ಅಂದರೆ ಅದು ಗುರು.
ಆ ನಿಟ್ಟಿನಲ್ಲಿ, ಜೂನ್ 2 ರಂದು ಗುರುವು ಕರ್ಕ ರಾಶಿಯನ್ನು ಪ್ರವೇಶಿಸಿದ್ದಾನೆ. ಕರ್ಕ ರಾಶಿಯನ್ನು ಗುರುವಿನ ಪರಮೋಚ್ಚ ಮನೆ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯಲ್ಲಿ ಗುರವಿನ ಸಂಚಾರವು ಬಹಳ ಮಹತ್ವದ್ದಾಗಿದೆ. ಗುರುವು ಅಕ್ಟೋಬರ್ 31 ರವರೆಗೆ ಕರ್ಕ ರಾಶಿಯಲ್ಲಿಯೇ ಸಂಚಾರ ಮಾಡುತ್ತಾ ಇರುತ್ತಾನೆ.

ಈ ಅವಧಿಯಲ್ಲಿ ಕೆಲವು ರಾಶಿಯವರು 6, 8 ಮತ್ತು 12 ನೇ ಮನೆಗಳಿಗೆ ಸಂಬಂಧಿಸಿದ ಅಸಾಧಾರಣ ರಾಜಯೋಗದ ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತದೆ ಜ್ಯೋತಿಷ್ಯ. ಅನಿರೀಕ್ಷಿತವಾಗಿ ಎದುರಾಗುವ ಅಡೆತಡೆಗಳು ನಿವಾರಣೆಯಾಗುವುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವುದು ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಆ ರೀತಿಯಲ್ಲಿ, ಗುರುವಿನ ಈ ಸಂಚಾರದಿಂದ 3 ರಾಶಿಯವರಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಯಿದೆ.
ಗುರುವಿನ ವಿಪರೀತ ರಾಜಯೋಗದಿಂದ ಅದೃಷ್ಟ ಪಡೆಯುವ ರಾಶಿಗಳು
ಸಿಂಹ ರಾಶಿ (Leo)
ಗುರು ಗ್ರಹವು ಸಿಂಹ ರಾಶಿಯವರ 12ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಇದರಿಂದಾಗಿ, ವಿದೇಶದಲ್ಲಿ ಕೆಲಸ ಮಾಡುತ್ತಿರುವ ಅಥವಾ ವ್ಯಾಪಾರ ಮಾಡುತ್ತಿರುವವರಿಗೆ ಅನುಕೂಲಕರ ಅವಕಾಶಗಳು ಸಿಗಬಹುದು. ವಿದೇಶದಲ್ಲಿ ಕೆಲಸ ಮಾಡುವ ಯೋಗ ಸಿಗುವುದು. ವ್ಯಾಪಾರ ಮಾಡುವ ಕನಸು ನಿಮ್ಮಲ್ಲಿದ್ದರೆ, ನಿಮ್ಮ ಪ್ರಯತ್ನಗಳಲ್ಲಿ ಪ್ರಗತಿಯಾಗುವ ಸಾಧ್ಯತೆಯಿದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಈ ಹೊತ್ತಿನಲ್ಲಿ ಪೂರ್ಣವಾಗುವುದು. ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳು ಸುಲಭವಾಗಿ ನೆರವೇರುವುದು. ವ್ಯವಹಾರ ಮತ್ತು ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೊಸ ಅವಕಾಶಗಳು ಒದಗಿ ಬರುವುದು. ಇದು ಬೆಳವಣಿಗೆಯ ದಾರಿಯನ್ನು ತೆರೆಯುತ್ತದೆ.
ಇದಲ್ಲದೆ, ಗುರುವಿನ ದೃಷ್ಟಿ 4 ನೇ ಮನೆಯ ಮೇಲೆ ಬೀಳುವುದರಿಂದ, ಕುಟುಂಬದಲ್ಲಿ ಎದುರಾಗಿರುವ ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆಯಿದೆ. ಮನೆಯಲ್ಲಿ ಮತ್ತೆ ಸಂತೋಷದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಯಿದೆ. ನೀವು ಮಾಡುವ ಪ್ರಯತ್ನಗಳಿಗೆ, ಕೆಲಸಗಳಿಗೆ ನಿಮ್ಮ ತಾಯಿಯಿಂದ ಬೆಂಬಲವೂ ಸಿಗಬಹುದು. ಹೊಸ ಮನೆ ಅಥವಾ ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅವಕಾಶಗಳು ಒದಗಿ ಬರುವುದು. ಅದೇ ರೀತಿ, ಹೊಸ ಜನರ ಭೇಟಿಯಿಂದ ಲಾಭವಾಗುವುದು. ಇವರ ಸ್ನೇಹವು ಭವಿಷ್ಯದಲ್ಲಿ ನಿಮಗೆ ಸಹಾಯಕವಾಗಬಹುದು. ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಸಿಂಹ ರಾಶಿಯವರಿಗೆ ಹೆಚ್ಚುವರಿ ಆದಾಯವನ್ನು ಗಳಿಸುವ ಹೊಸ ಮಾರ್ಗಗಳು ಒಲಿದು ಬರುವುದು. ಆರ್ಥಿಕ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ.
Vipareetha Rajayoga: ಧನು ರಾಶಿ (Sagittarius)
ಗುರು ಧನು ರಾಶಿಯವರ 8ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಇದರಿಂದಾಗಿ ಕೆಲವು ದೀರ್ಘಕಾಲದ ಸಮಸ್ಯೆಗಳಿಗೆ ಈಗ ಪರಿಹಾರ ಸಿಗುವುದು. ಅನಿರೀಕ್ಷಿತವಾಗಿ ಹಣ ಸಿಗುವುದು. ಬಹಳ ಕಾಲದಿಂದ ಹೊರಗೆ ಉಳಿದಿರುವ ಹಣ ಮತ್ತೆ ಕೈ ಸೇರುವುದು. ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಕೈಯ್ಯಲ್ಲಿ ಹಣ ಉಳಿಯುವುದು. ಈಗಾಗಲೇ ಮಾಡಿರುವ ಹೂಡಿಕೆಯಿಂದ ದೊಡ್ಡ ಮಟ್ಟದ ಪ್ರಯೋಜನವಾಗುವುದು. ಈ ಅವಧಿಯಲ್ಲಿ ನಿರೀಕ್ಷಿತ ಲಾಭವಾಗುವುದು. ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಸಿಗುವುದು.
ಉದ್ಯಮಿಗಳಿಗೆ ಭವಿಷ್ಯದಲ್ಲಿ ಉತ್ತಮ ಆದಾಯ ತರುವ ಹೊಸ ಒಪ್ಪಂದಗಳು ಸಿಗಬಹುದು. ಅನಗತ್ಯ ವೆಚ್ಚಗಳು ಕಡಿಮೆಯಾಗಬಹುದು. ಹಣ ಉಳಿಸುವ ವಾತಾವರಣ ಸೃಷ್ಟಿಯಾಗಬಹುದು. ಬಹಳ ಕಾಲದಿಂದ ಪೂರ್ಣವಾಗದೆ ಉಳಿದಿರುವ ಕೆಲಸ ಪೂರ್ಣವಾಗುವುದು. ಹೊಸ ಆಸ್ತಿಯನ್ನು ಖರೀದಿಸುವ ಪ್ರಯತ್ನಗಳಿಗೆ ಯಶಸ್ಸು ಸಿಗುವುದು. ಈ ಸಮಯ ಎಲ್ಲಾ ವಿಷಯಗಳಲ್ಲೂ ನಿಮಗೆ ಅನುಕೂಲಕರವಾಗಿರುವುದು. ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಮತ್ತು ಸಮಸ್ಯೆಗಳು ಕ್ರಮೇಣ ಕಡಿಮೆಯಾಗಬಹುದು.
Vipareetha Rajayoga: ಕುಂಭ ರಾಶಿ (Aquarius)
ಗುರು ಕುಂಭ ರಾಶಿಯವರ 6ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಇದರಿಂದಾಗಿ, ಆರ್ಥಿಕ ಪರಿಸ್ಥಿತಿ ಬಲಗೊಳ್ಳುವ ಸಾಧ್ಯತೆಯಿದೆ. ವಿಶೇಷವಾಗಿ, ಸಾಲ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಪರಿಹಾರ ಸಿಗುವುದು. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವುದು, ಸಂಬಳ ಹೆಚ್ಚಾಗುವುದು ಅಥವಾ ಹೊಸ ಜವಾಬ್ದಾರಿಗಳು ಹೆಗಲೇರುವುದು. ಕಠಿಣ ಪರಿಶ್ರಮಕ್ಕೆ ತಕ್ಕಂತೆ ಸೂಕ್ತ ಮನ್ನಣೆಯೂ ಸಿಗಬಹುದು.
ವ್ಯಾಪಾರ ಮಾಡುತ್ತಿರುವವರಿಗೆ ತಮ್ಮ ವ್ಯವಹಾರವನ್ನು ವಿಸ್ತರಿಸಲು ಹೊಸ ಅವಕಾಶಗಳು ಸಿಗಬಹುದು. ವ್ಯವಹಾರದಲ್ಲಿ ನಿರೀಕ್ಷೆಗಿಂತ ಉತ್ತಮ ಲಾಭ ಪಡೆಯುವ ವಾತಾವರಣ ನಿರ್ಮಾಣವಾಗುವುದು. ನ್ಯಾಯಾಲಯ ಅಥವಾ ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಅನುಕೂಲಕರ ಫಲಿತಾಂಶಗಳು ಸಿಗಬಹುದು. ಇಲ್ಲಿಯವರೆಗೆ ಇದ್ದ ಒತ್ತಡ ಮತ್ತು ಅಡೆತಡೆಗಳು ಕ್ರಮೇಣ ಕಡಿಮೆಯಾಗುವುದು.
ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೂ ಪರಿಹಾರ ಸಿಗುವುದು. ಈ ಅವಧಿಯು ಕುಂಭ ರಾಶಿಯವರಿಗೆ ಆರ್ಥಿಕ ಮತ್ತು ವೃತ್ತಿಪರ ಪ್ರಗತಿಯನ್ನು ಒದಗಿಸಬಹುದು.


Click it and Unblock the Notifications
