Venus Transit 2023: ಶುಕ್ರ ಸಂಕ್ರಮಣದಿಂದಾಗಿ ಈ ರಾಶಿಯವರು ನಾಳೆಯಿಂದ ಹಣದ ಬಗ್ಗೆ ಎಚ್ಚರದಿಂದಿರಿ...

ಅಸುರರ ಗುರುವಾದ ಶುಕ್ರ ಗ್ರಹ ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತದೆ. ಈ ಶುಕ್ರನನ್ನು ಸೌಂದರ್ಯ, ಐಷಾರಾಮಿ, ಸಮೃದ್ಧಿ ಮತ್ತು ಪ್ರೀತಿಯ ಅಂಶವೆಂದು ಪರಿಗಣಿಸಲಾಗಿದೆ. ಶುಕ್ರನ ಸ್ಥಾನದಲ್ಲಿ ಬದಲಾವಣೆಯಾದಾಗ ಜೀವನದ ಈ ಎಲ್ಲಾ ಅಂಶಗಳಲ್ಲಿ ಪರಿಣಾಮ ಗೋಚರಿಸುತ್ತದೆ.

ಈ ಶುಕ್ರ ದೀಪಾವಳಿಯ ಮೊದಲು ರಾಶಿಯನ್ನು ಬದಲಾಯಿಸುತ್ತದೆ. ಇದು ನವೆಂಬರ್ 3ರಂದು ಶುಕ್ರ ಗ್ರಹ ಸಿಂಹದಿಂದ ಕನ್ಯಾರಾಶಿಗೆ ಚಲಿಸುತ್ತದೆ. ಕನ್ಯಾರಾಶಿಯಲ್ಲಿ ಶುಕ್ರ ಸ್ವಲ್ಪ ದುರ್ಬಲವಾಗುತ್ತದೆ. ಹೀಗಾಗಿ ಶುಕ್ರನ ಈ ಸಂಕ್ರಮಣವು ಕೆಲವು ರಾಶಿಯವರ ಜೀವನದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಈಗ ಶುಕ್ರನು ಕನ್ಯಾರಾಶಿಗೆ ತೆರಳುತ್ತಿದ್ದಾನೆ. ನವೆಂಬರ್ 03 ರಿಂದ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯೋಣ.

venus transit in virgo on november 2023 these zodiac signs face many problems in life in kannada

ಮೇಷ ರಾಶಿ

ಶುಕ್ರ ಗ್ರಹ ಮೇಷ ರಾಶಿಯ 6ನೇ ಮನೆಗೆ ಸಾಗುತ್ತದೆ. ಹಾಗಾಗಿ ಈ ರಾಶಿಯವರು ಸ್ವಲ್ಪ ಜಾಗರೂಕರಾಗಿರಬೇಕು. ದುರ್ಬಲಗೊಂಡಿರುವ ಶುಕ್ರ ಸಂಬಂಧಗಳ ಮೇಲೆ ಸ್ವಲ್ಪ ಋಣಾತ್ಮಕ ಪರಿಣಾಮ ಬೀರುತ್ತದೆ. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ಯಾರೊಂದಿಗೂ ವಾದ ಮಾಡಬೇಡಿ. ಉದ್ಯೋಗಿಗಳು ಕಚೇರಿಯಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ನೌಕರರು ಎಚ್ಚರಿಕೆಯಿಂದ ಇರಬೇಕು. ನೀವು ಕೆಲಸವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ, ಈ ಸಮಯದಲ್ಲಿ ಅದನ್ನು ತಪ್ಪಿಸಿ. ವ್ಯಾಪಾರಿಗಳಿಗೆ ಕಡಿಮೆ ಲಾಭ ಸಿಗಲಿದೆ. ಕೆಲವರು ಆರ್ಥಿಕ ನಷ್ಟವನ್ನು ಅನುಭವಿಸಬಹುದು.

venus transit in virgo on november 2023 these zodiac signs face many problems in life in kannada

ಸಿಂಹ ರಾಶಿ

ಶುಕ್ರ ಗ್ರಹ ಸಿಂಹ ರಾಶಿಯ 2ನೇ ಮನೆಗೆ ಸಾಗುತ್ತದೆ. ಈ ಕಾರಣದಿಂದಾಗಿ ಈ ರಾಶಿಯವರು ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗಿಗಳು ಕಚೇರಿಯಲ್ಲಿ ಹಲವು ಏರಿಳಿತಗಳನ್ನು ಎದುರಿಸಬಹುದು. ನಿಮ್ಮ ಕೆಲಸದಲ್ಲಿ ನೀವು ಅತೃಪ್ತರಾಗುತ್ತೀರಿ. ಸಹೋದ್ಯೋಗಿಗಳ ಅಭಿಪ್ರಾಯಗಳನ್ನು ಕೇಳುವುದನ್ನು ತಪ್ಪಿಸಿ. ಇಲ್ಲದಿದ್ದರೆ, ಅದು ನಿಮಗೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ಈ ಶುಕ್ರ ಸಂಕ್ರಮದಿಂದ ನಷ್ಟವಾಗುವ ಸಂಭವವಿರುವುದರಿಂದ ವ್ಯಾಪಾರಸ್ಥರು ತಮ್ಮ ಖರ್ಚಿನ ಬಗ್ಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು.

venus transit in virgo on november 2023 these zodiac signs face many problems in life in kannada

ಕುಂಭ ರಾಶಿ

ಶುಕ್ರ ಗ್ರಹ ಕುಂಭ ರಾಶಿಯ 8ನೇ ಮನೆಗೆ ಸಾಗುತ್ತದೆ. ಇದು ಈ ರಾಶಿಯವರ ಪ್ರಗತಿಯಲ್ಲಿ ವಿವಿಧ ಅಡೆತಡೆಗಳನ್ನು ಉಂಟುಮಾಡಬಹುದು. ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ಸಂಬಂಧಗಳಲ್ಲಿ ಬಿರುಕು ಬೀಳುವ ಪ್ರವೃತ್ತಿಯೂ ಇದೆ.

ಉದ್ಯೋಗಿಗಳು ಕಚೇರಿಯಲ್ಲಿ ಸಾಕಷ್ಟು ಒತ್ತಡವನ್ನು ಅನುಭವಿಸಬಹುದು. ನಿಮ್ಮ ಕೆಲಸದಿಂದ ನೀವು ಸಂತೋಷವಾಗಿರುವುದಿಲ್ಲ. ಉದ್ಯೋಗಾಕಾಂಕ್ಷಿಗಳು ಸ್ವಲ್ಪ ದಿನ ಕಾಯಬೇಕಾಗುತ್ತದೆ. ವ್ಯಾಪಾರಿಗಳಿಗೆ ಯಾವುದೇ ಲಾಭ ಸಿಗುವುದಿಲ್ಲ. ಈ ಬದಲಾವಣೆಯಿಂದ ಕಠಿಣ ಪರಿಶ್ರಮದ ಪ್ರತಿಫಲವನ್ನು ಪಡೆಯಲು ಸಾಧ್ಯವಿಲ್ಲ. ಶತ್ರುಗಳು ನಿಮ್ಮನ್ನು ಕೆಡವುವ ಸಾಧ್ಯತೆ ಇದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+