Venus Transit In Capricorn: ಶುಕ್ರ ಸಂಕ್ರಮಣದಿಂದಾಗಿ ಇಂದಿನಿಂದ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ದುಪ್ಪಟ್ಟು

ಸೌರವ್ಯೂಹದಲ್ಲಿ ಅನೇಕ ಗ್ರಹಗಳು ಸಂಚಾರ ಮಾಡುವ ವೇಳೆ ರಾಶಿಯನ್ನು ಬದಲಾಯಿಸುತ್ತವೆ. ವೈದಿಕ ಜ್ಯೋತಿಷ್ಯದ ಪ್ರಕಾರ ಶುಕ್ರನನ್ನು ಅಸುರರ ಗುರು ಎಂದು ಪರಿಗಣಿಸಲಾಗುತ್ತದೆ. ಈ ಶುಕ್ರನನ್ನು ಸೌಂದರ್ಯ, ಪ್ರೀತಿ, ಐಷಾರಾಮಿ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗಿದೆ. ಪ್ರತಿ ಬಾರಿ ಶುಕ್ರನು ರಾಶಿಯನ್ನು ಬದಲಾಯಿಸಿದಾಗ ಅದರ ಪರಿಣಾಮ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಗ್ರಹಗಳಲ್ಲಿ ಶುಕ್ರ ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತದೆ. ಅಲ್ಲದೆ ಇದು ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾಗಿದೆ.

ಈ ಶುಕ್ರ ಗ್ರಹ ಫೆಬ್ರವರಿ 12ರಂದು ಅಂದರೆ ಸೋಮವಾರ ಶನಿಯ ರಾಶಿಯಾದ ಮಕರ ರಾಶಿಯನ್ನು ಪ್ರವೇಶಿಸಿದೆ. ಶನಿ ಮತ್ತು ಶುಕ್ರನ ನಡುವಿನ ಸ್ನೇಹ ಸಂಬಂಧದಿಂದಾಗಿ ಈ ಶುಕ್ರ ಸಂಕ್ರಮವು ಸ್ವಲ್ಪ ವಿಶೇಷವಾಗಿರುತ್ತದೆ. ವಿಶೇಷವಾಗಿ ಕೆಲವು ರಾಶಿಯವರಿಗೆ ಅದೃಷ್ಟ ಹೊಳೆಯುತ್ತದೆ ಮತ್ತು ಅನಿರೀಕ್ಷಿತ ಆರ್ಥಿಕ ಲಾಭ ಸಿಗುತ್ತದೆ. ಹಾಗಾದರೆ ಈಗ ಮಕರ ರಾಶಿಯಲ್ಲಿ ಶುಕ್ರನೊಂದಿಗೆ ಅದೃಷ್ಟ ರಾಶಿಯವರು ಯಾರೆಂದು ನೋಡೋಣ.

venus transit in capricorn on 12 february 2024 these zodiac signs income will increase in kannada

ವೃಷಭ ರಾಶಿ

ಮಕರ ರಾಶಿಯಲ್ಲಿ ಶುಕ್ರ ಸಂಕ್ರಮಣ ವೃಷಭ ರಾಶಿಯವರಿಗೆ ಮಂಗಳಕರ ಫಲಿತಾಂಶ ನೀಡಲಿದೆ. ಶುಕ್ರನು ವೃಷಭ ರಾಶಿಯ 9ನೇ ಮನೆಗೆ ತೆರಳಿದ್ದಾನೆ. ಇದರಿಂದ ಈ ರಾಶಿಚಕ್ರದವರ ಮನೋಬಲ ಹೆಚ್ಚುತ್ತದೆ. ಕೆಲಸದ ಸ್ಥಳದಲ್ಲಿ ಪ್ರಭಾವ ಹೆಚ್ಚಾಗುತ್ತದೆ. ವಿದೇಶ ಪ್ರಯಾಣ ಸಾಧ್ಯವಾಗುತ್ತದೆ. ನೀವು ಉತ್ತಮ ಭೌತಿಕ ಸಂತೋಷಗಳನ್ನು ಪಡೆಯುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

venus transit in capricorn on 12 february 2024 these zodiac signs income will increase in kannada

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಮಕರ ರಾಶಿಯಲ್ಲಿ ಶುಕ್ರ ಸಂಕ್ರಮಣ ತುಂಬಾ ಮಂಗಳಕರವಾಗಿದೆ. ಈ ಸಮಯದಲ್ಲಿ ಶುಕ್ರ ಗ್ರಹ ಕನ್ಯಾ ರಾಶಿಯ 5ನೇ ಮನೆಗೆ ತೆರಳಿದ್ದಾನೆ. ಆದ್ದರಿಂದ ನಿಮ್ಮ ಸಂಬಳ ಅಥವಾ ಆದಾಯ ಹೆಚ್ಚಾಗಲಿದೆ. ಮನೆ, ಭೂಮಿ ಖರೀದಿ ಇತ್ಯಾದಿಗಳಿಂದ ನೀವು ಸಂತೋಷವಾಗಿರುತ್ತೀರಿ.

ಪ್ರೇಮ ಜೀವನ ಮಧುರವಾಗಿರುತ್ತದೆ. ವಿವಾಹಿತರು ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಅವಕಾಶಗಳನ್ನು ಪಡೆಯುತ್ತಾರೆ. ಅನಿರೀಕ್ಷಿತ ಹಣದ ಹರಿವನ್ನು ಪಡೆಯಬಹುದು. ಆದಾಯದಲ್ಲಿ ಹೆಚ್ಚಳವಾಗಲಿದೆ. ಶುಕ್ರನ ಅನುಗ್ರಹದಿಂದ ಪ್ರೇಮ ಸಂಬಂಧವು ಮದುವೆಗೆ ತಿರುಗುವ ಸಾಧ್ಯತೆಯಿದೆ. ಅವಿವಾಹಿತರಿಗೆ ಕಂಕಣ ಭಾಗ್ಯವೂ ಕೂಡಿ ಬರಲಿದೆ.

venus transit in capricorn on 12 february 2024 these zodiac signs income will increase in kannada

ಕುಂಭ ರಾಶಿ

ಮಕರ ರಾಶಿಯಲ್ಲಿ ಶುಕ್ರ ಸಂಕ್ರಮಣ ಕುಂಭ ರಾಶಿಯವರಿಗೆ ಶುಭ ಫಲವನ್ನು ನೀಡುತ್ತದೆ. ಶುಕ್ರನು ಕುಂಭ ರಾಶಿಯ 12ನೇ ಮನೆಗೆ ತೆರಳಿದ್ದಾನೆ. ಇದರಿಂದ ಕುಂಭ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುವಿರಿ. ಯಶಸ್ಸು ನಿಮ್ಮದಾಗುತ್ತದೆ.

ಈ ಸಮಯದಲ್ಲಿ ಹೊಸ ವಾಹನ ಮತ್ತು ಆಸ್ತಿ ಖರೀದಿಸಲು ಅವಕಾಶವಿರುತ್ತದೆ. ವೃತ್ತಿ ಮತ್ತು ಆದಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಉದ್ಯೋಗಿಗಳು ತಮ್ಮ ಉದ್ಯೋಗ ಬದಲಾವಣೆಯ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತಾರೆ. ಮುಖ್ಯವಾಗಿ ಐಷಾರಾಮಿ ವಸ್ತುಗಳನ್ನು ಖರೀದಿಸುವ ಸಾಧ್ಯತೆಯಿದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+