ಶುಕ್ರ ಸಂಕ್ರಮಣದಿಂದ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು :ಒಲಿದು ಬರುವಳು ಲಕ್ಷ್ಮೀ, ಹಣದ ಸಮಸ್ಯೆಗಳಾಗುವುದು ಪರಿಹಾರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಪ್ರೀತಿ, ಸೌಂದರ್ಯ, ಐಶ್ವರ್ಯ ಮತ್ತು ಕಲಾತ್ಮಕತೆಯ ಕಾರಣ ಕರ್ತ. ಶುಕ್ರ ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಶುಕ್ರನ ಸ್ಥಾನ ಬದಲಾವಣೆಯು ವ್ಯಕ್ತಿಯ ಆರ್ಥಿಕ ಸ್ಥಿತಿ, ಪ್ರೇಮ ಜೀವನ ಮತ್ತು ಭೌತಿಕ ಸುಖ-ಸೌಲಭ್ಯಗಳ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ. ಶುಕ್ರನ ಸಂಚಾರ ಪ್ರತಿಯೊಬ್ಬರ ಜಾತಕ ಫಲದ ಮೇಲೆ ಪರಿಣಾಮ ಬೀರುತ್ತದೆ.ಶುಕ್ರ ಸಂಚಾರವು ಜ್ಯೋತಿಷ್ಯದಲ್ಲಿ ವಿಶೇಷವಾಗಿದೆ. ಜ್ಯೋತಿಷ್ಯದ ಪ್ರಕಾರ ಶುಕ್ರನು ಯಾವ ಮನೆಯಲ್ಲಿದ್ದಾನೆ ಎಂಬುದನ್ನು ಆಧರಿಸಿ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ಶುಕ್ರನ ಅನುಕೂಲಕರ ಸ್ಥಾನವು ಆಕರ್ಷಕ ವ್ಯಕ್ತಿತ್ವ ಮತ್ತು ಅದ್ಭುತ ಸಂವಹನ ಕೌಶಲ್ಯವನ್ನು ನೀಡುತ್ತದೆ.
ಜುಲೈ 16, 2026 ರ ಗುರುವಾರ ಸಂಜೆ 7:11 ಕ್ಕೆ ಶುಕ್ರನು ಪೂರ್ವ ಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಈ ನಕ್ಷತ್ರದಲ್ಲಿ ಶುಕ್ರನ ಸಂಚಾರ ಜುಲೈ 29, 2026 ರವರೆಗೆ ಮುಂದುವರಿಯುತ್ತದೆ. ಶುಕ್ರನ ನಕ್ಷತ್ರ ಬದಲಾವಣೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ ಕೆಲವು ರಾಶಿಯವರು ಈ ಸಂಕ್ರಮಣದ ವಿಶೇಷ ಫಲವನ್ನು ಅನುಭವಿಸುತ್ತಾರೆ. ಈ ಬಾರಿಯ ಶುಕ್ರ ಸಂಕ್ರಮಣದಿಂದ ನಾಲ್ಕು ರಾಶಿಯವರಿಗೆ ಆರ್ಥಿಕ ಲಾಭವಾಗುವುದು. ಯಶಸ್ಸಿನ ಹಾದಿಗಳು ತೆರೆದುಕೊಳ್ಳುವುದು. ಈ ಸಂಚಾರವು ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದು, ಧನಲಾಭ ಮತ್ತು ಕೌಟುಂಬಿಕ ಸೌಖ್ಯವನ್ನು ತರಲಿದೆ.

ಶುಕ್ರ ಸಂಕ್ರಮಣ ಈ ರಾಶಿಯವರಿಗೆ ನೀಡುವುದು ಶುಭಫಲ :
ಮೇಷ ರಾಶಿ (Aries):
ಶುಕ್ರನ ಸಂಚಾರವು ಮೇಷ ರಾಶಿಯವರಿಗೆ ಕೇವಲ ಲಾಭವನ್ನು ತರುತ್ತದೆ. ಆರ್ಥಿಕ ವಿಚಾರದಲ್ಲಿ ಸುಧಾರಣೆಯಾಗುವುದು. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಾಗುವುದು. ಕೈ ಹಾಕುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಸಿಗುವುದು. ಹೊಸ ಕೆಲಸ ಆರಂಭಿಸಲು ಇದು ಒಳ್ಳೆಯ ಸಮಯ. ಇಲ್ಲಿವರೆಗೆ ಎದುರಾಗಿದ್ದ ಸಮಸ್ಯೆಗಳು ಒಂದೊಂದಾಗಿಯೇ ಪರಿಹಾರವಾಗುವುದು. ಜೀವನದ ಸಂತೋಷ ಹೆಚ್ಚಾಗುವುದು. ಉದ್ಯೋಗ ಹುಡುಕಾಟದಲ್ಲಿರುವವರಿಗೆ ನಿರೀಕ್ಷೆಯಂತೆ ಕೆಲಸ ಸಿಗುವುದು. ಹೊಸ ವ್ಯಾಪಾರ ಅವಕಾಶಗಳು ಎದುರಾಗಬಹುದು. ಜಮೀನು ಅಥವಾ ಮನೆ ಯಾವ ರೂಪದಲ್ಲಿಯಾದರೂ ಸರಿ ಆಸ್ತಿಯನ್ನು ಖರೀದಿಸಬಹುದು.
ಮಿಥುನ ರಾಶಿ (Gemini):
ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಶುಕ್ರನ ಸಂಚಾರವು ಮಿಥುನ ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಮಾನಸಿಕ ಒತ್ತಡದಿಂದ ಮುಕ್ತರಾಗುತ್ತಾರೆ. ಸಂತೋಷ, ನೆಮ್ಮದಿ ಹೆಚ್ಚಾಗುವುದು. ಹಣದ ಸಮಸ್ಯೆಯಿಂದ ಮುಕ್ತಿ ಸಿಗುವುದು. ವ್ಯವಹಾರದಲ್ಲಿ ಗಮನಾರ್ಹ ಲಾಭವನ್ನು ಗಳಿಸುತ್ತಾರೆ. ಉದ್ಯೋಗದಲ್ಲಿರುವವರಿಗೆ ಸಂಬಳ ಹೆಚ್ಚಳವಾಗಬಹುದು. ಕಚೇರಿಯಾಗಲಿ, ಮನೆಯೇ ಆಗಲಿ ನಿಮ್ಮ ಮಾತಿಗೆ ವಿಶೇಷ ಬೆಲೆ ಸಿಗುವುದು. ಪ್ರೇಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಸಂಭವಿಸಬಹುದು. ಮದುವೆ ನಿಶ್ಚಯವಾಗುವ ಸಾಧ್ಯತೆ ಇದೆ.
ತುಲಾ ರಾಶಿ (Libra):
ಈ ಶುಕ್ರ ಸಂಚಾರದಿಂದ ತುಲಾ ರಾಶಿಯವರ ಜೀವನದ ಒಳ್ಳೆಯ ಸಮಯ ಆರಂಭವಾಗುವುದು. ಅವರ ಆದಾಯ ಹೆಚ್ಚಾಗಬಹುದು ಮತ್ತು ಸಂತೋಷದ ಮಾರ್ಗಗಳು ತೆರೆದುಕೊಳ್ಳಬಹುದು. ಉದ್ಯೋಗದಲ್ಲಿರುವವರಿಗೆ ಇದು ಶುಭ ಸಮಯ.ಬಡ್ತಿಯೂ ಸಿಗಬಹುದು. ನಿಮ್ಮ ಕೆಲಸ ಕಾರ್ಯಗಳಿಗೆ ಮೇಲಾಧಿಕಾರಿಗಳ ಮೆಚ್ಚುಗೆ ಸಿಗುವುದು. ಹೊಸ ಉದ್ಯೋಗಕ್ಕೆ ಸೇರಬೇಕು ಎನ್ನುವವರಿಗೆ ಇದು ಸಕಾಲ. ನಿಮ್ಮ ಮನಸ್ಸಿನ ಆಸೆಗಳು ಈಡೇರುವುದು. ಹಿರಿಯರ ಆಶೀರ್ವಾದವಿರುವುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ.
ಮಕರ ರಾಶಿ (Capricorn):
ಮಕರ ರಾಶಿಯವರಿಗೆ ಪೂರ್ವ ಫಲ್ಗುಣಿ ನಕ್ಷತ್ರಕ್ಕೆ ಶುಕ್ರನ ಪ್ರವೇಶ ಶುಭಕರವಾಗಿರುತ್ತದೆ. ಈ ಸಮಯದಲ್ಲಿ ಮಾಡುವ ಹೂಡಿಕೆಗಳು ಭವಿಷ್ಯದಲ್ಲಿ ಗಮನಾರ್ಹ ಲಾಭವನ್ನು ತರಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ. ಬಹುಕಾಲದ ಆಸೆ ಈಡೇರಬಹುದು. ನಿಮ್ಮ ಇಚ್ಛೆಯ ಸಂಗಾತಿಯೊಂದಿಗೆ ಗುರು ಹಿರಿಯರ ಆಶೀರ್ವಾದದೊಂದಿಗೆ ವಿವಾಹ ನೆರವೇರುವುದು. ಮನೆ ಖರೀದಿ ಯೋಗವಿದೆ. ಹಣಕಾಸಿನ ಸ್ಥಿತಿ ಕೂಡಾ ಉತ್ತಮವಾಗಿರುವುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications