Neech Bhang Rajyoga 2023: ಕನ್ಯಾರಾಶಿಯಲ್ಲಿ ಶುಕ್ರನಿಂದ ರೂಪುಗೊಂಡ ನೀಚಭಂಗ ರಾಜಯೋಗ: ನೀವೇನಾ ಈ ಧನ ಭಾಗ್ಯದ ಅದೃಷ್ಟಶಾಲಿಗಳು...
ಜ್ಯೋತಿಷ್ಯದಲ್ಲಿ ಶುಕ್ರ ದೇವನನ್ನು ಸೌಂದರ್ಯ, ಐಷಾರಾಮಿ, ಸಮೃದ್ಧಿ ಮತ್ತು ಪ್ರೀತಿಯ ಅಂಶವೆಂದು ಪರಿಗಣಿಸಲಾಗಿದೆ. ಈ ಶುಕ್ರ ಗ್ರಹ ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾಗಿದೆ. ತಿಂಗಳಿಗೊಮ್ಮೆ ರಾಶಿಗಳನ್ನು ಬದಲಾಯಿಸಬಲ್ಲ ಶುಕ್ರ ಗ್ರಹ ಪ್ರಸ್ತುತ ಸಿಂಹ ರಾಶಿಯಲ್ಲಿ ಸಂಚರಿಸುತ್ತಿದೆ.
1 ವರ್ಷದ ನಂತರ ನವೆಂಬರ್ ಆರಂಭದಲ್ಲಿ ಶುಕ್ರ ಗ್ರಹ ಕನ್ಯಾರಾಶಿಗೆ ಪ್ರವೇಶಿಸಲಿದೆ. ಕನ್ಯಾರಾಶಿಯಲ್ಲಿ ಶುಕ್ರನು ದುರ್ಬಲನಾಗಿರುತ್ತಾನೆ. ಹೀಗಾಗಿ ಶುಕ್ರನು ಈ ರಾಶಿಯನ್ನು ಪ್ರವೇಶಿಸಿದಾಗ ನೀಚ ಭಂಗ ರಾಜಯೋಗವು ರೂಪುಗೊಳ್ಳುತ್ತದೆ. ಈ ಯೋಗದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ 3 ರಾಶಿಯವರಿಗೆ ಈ ರಾಜಯೋಗದಿಂದ ದಿಢೀರ್ ಧನ ಭಾಗ್ಯ ಲಭಿಸುತ್ತದೆ. ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

ಮಕರ ರಾಶಿ
ಶುಕ್ರನು ಮಕರ ರಾಶಿಯ 9ನೇ ಮನೆಯಲ್ಲಿ ಸಂಕ್ರಮಿಸುವುದರಿಂದ ಅದು ನೀಚಭಂಗ ರಾಜಯೋಗವನ್ನು ರೂಪಿಸುತ್ತದೆ. ಇದರಿಂದಾಗಿ ಈ ಅವಧಿಯಲ್ಲಿ ಮಕರ ರಾಶಿಯವರ ಅದೃಷ್ಟವು ಬೆಳಗುತ್ತದೆ. ನಿಂತು ಹೋಗಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ವ್ಯವಹಾರದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
ಕೆಲಸ ಮತ್ತು ವ್ಯಾಪಾರ ಸಂಬಂಧಿತ ಪ್ರವಾಸಗಳನ್ನು ಕೈಗೊಳ್ಳಬೇಕಾಗಬಹುದು. ವಿದೇಶಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರು ಉತ್ತಮ ಲಾಭವನ್ನು ತರುವಂತಹ ಹೊಸ ವ್ಯವಹಾರಗಳನ್ನು ಮಾಡುವರು. ಈ ಅವಧಿ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಾರೆ.

ಸಿಂಹ ರಾಶಿ
ಶುಕ್ರನು ಸಿಂಹ ರಾಶಿಯ 2 ನೇ ಮನೆಯಲ್ಲಿ ಸಂಕ್ರಮಿಸುವುದರಿಂದ ಈ ಮನೆಯು ನೀಚಭಗ ರಾಜಯೋಗವನ್ನು ರೂಪಿಸುತ್ತದೆ. ಈ ಕಾರಣದಿಂದಾಗಿ ಈ ಸ್ಥಳೀಯರು ಅನಿರೀಕ್ಷಿತ ಹಣವನ್ನು ಪಡೆಯಬಹುದು. ಹಣಕಾಸಿನ ಸ್ಥಿತಿಯು ಸಾಮಾನ್ಯಕ್ಕಿಂತ ಬಲವಾಗಿರುತ್ತದೆ. ಭಾಗ್ಯದ ಕೃಪೆಯಿಂದ ಹಣದ ಕೊರತೆ ಇರುವುದಿಲ್ಲ. ವ್ಯಕ್ತಿತ್ವ ಸುಧಾರಿಸುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಆಹ್ಲಾದಕರವಾಗಿರುತ್ತದೆ. ಮುಖ್ಯವಾಗಿ ಈ ಸಮಯದಲ್ಲಿ ನಿಮ್ಮ ಮಾತು ಇತರರನ್ನು ಮೆಚ್ಚಿಸುತ್ತದೆ.

ಧನು ರಾಶಿ
ಶುಕ್ರನು ಧನು ರಾಶಿಯ 11ನೇ ಮನೆಗೆ ಸಂಕ್ರಮಿಸುವುದರಿಂದ ಅದು ನೀಚಭಂಗ ರಾಜಯೋಗವನ್ನು ಉಂಟುಮಾಡುತ್ತದೆ. ಹೀಗಾಗಿ ಈ ರಾಶಿಚಕ್ರದವರು ತಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಸಮಾಜದಲ್ಲಿ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ.
ಉದ್ಯೋಗಿಗಳಿಗೆ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರಮುಖ ಕೆಲಸಗಳಲ್ಲಿ ಯಶಸ್ಸು ಕಾಣುವ ಸಾಧ್ಯತೆ ಇದೆ. ವ್ಯಾಪಾರಿಗಳು ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಅದು ಅವರಿಗೆ ಅಧಿಕ ಲಾಭವನ್ನು ನೀಡುತ್ತದೆ. ಮುಖ್ಯವಾಗಿ ತಂದೆಯ ಸಂಪೂರ್ಣ ಬೆಂಬಲ ಈ ಅವಧಿಯಲ್ಲಿ ದೊರೆಯುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications