Vastu Tips for Tulsi: ಮನೆಯಲ್ಲಿ ನೆಟ್ಟ ತುಳಸಿ ಏನ್ಮಾಡಿದ್ರೂ ಒಳಗ್ತಿದ್ಯಾ? ಹೀಗ್ ಮಾಡಿ ನೋಡಿಯೊಮ್ಮೆ
ತುಳಸಿ ಗಿಡ ಎಂದರೆ ಅದು ಬಹಳ ಪವಿತ್ರ. ಪ್ರತಿಯೊಂದೂ ಮನೆಯ ಅಂಗಳ ಅಥವಾ ಬಾಲ್ಕನಿಯಲ್ಲಿ ತುಳಸಿ ಗಿಡ ಇದ್ದೇ ಇರ್ತದೆ. ಯಾವ ಮನೆಯ ತುಳಸಿ ಗಿಡ ಹಚ್ಚ ಹಸಿರಾಗಿ ಇರುತ್ತೋ ಆ ಮನೆಯಲ್ಲಿ ಲಕ್ಷ್ಮೀ ವಾಸಿಸುತ್ತಾಳೆ ಎಂಬುವುದು ಹಿಂದೂಗಳ ನಂಬಿಕೆ. ಸುಖ, ಶಾಂತಿ, ಸಮೃದ್ದಿ ಆ ಮನೆಯಲ್ಲಿ ನೆಲೆ ನಿಂತಿರ್ತದೆಯಂತೆ.

ಕೆಲವೊಮ್ಮೆ, ತುಳಸಿ ಗಿಡದ ಬಗ್ಗೆ ಎಷ್ಟೇ ಕಾಳಜಿ ವಹಿಸಿದ್ರೂ, ಹಚ್ಚ ಹಸಿರಾಗಿ ಇರೋ ತುಳಸಿ ಕೂಡಾ ಒಮ್ಮೆಲೇ ಒಣಗಿ ಹೋಗ್ತದೆ. ಆದ್ರೆ, ಮನೆ ಅಂಗಳದ ತುಳಸಿ ಹಾಗೆ ಒಣಗುವುದು ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ. ಇದು ಸಾಮಾನ್ಯವೂ ಅಲ್ಲ. ಇದರ ಹಿಂದೆ ಕೆಲವೊಂದು ಕಾರಣಗಳು ಮತ್ತು ಸೂಚನೆಗಳಿರುತ್ತವೆ.
ತುಳಸಿ ಗಿಡ ಒಣಗುವುದರ ಅರ್ಥವೇನು ?
ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ, ತುಳಸಿ ಎಲೆಗಳು ಒಮ್ಮೆಲೇ ಒಣಗುವುದು ಸಮಸ್ಯೆ ಅಥವಾ ಆರ್ಥಿಕ ತೊಂದರೆಗಳು ಎದುರಾಗುತ್ತಿರುವುದರ ಸಂಕೇತ. ನಮ್ಮ ಮನೆಗೆ ಏನೇ ಸಮಸ್ಯೆ ಎದುರಾಗುವುದಾದರೂ ಅಥವಾ ನೆಗೆಟಿವ್ ಎನರ್ಜಿ ಪ್ರವೇಶವಾಗುವುದಾದರೂ ಮೊದಲು ತುಳಸಿಗೆ ತಿಳಿಯುತ್ತದೆ. ಹಾಗಾಗಿ, ಆ ನೆಗೆಟಿವ್ ಎನರ್ಜಿಯನ್ನು ತುಳಸಿ ಹೀರಿಕೊಳ್ಳುತ್ತದೆ. ಇದೇ ಕಾರಣದಿಂದ ಕಾರಣವೇ ಇಲ್ಲದೆ ತುಳಸಿ ಎಲೆಗಳು ಒಣಗಿ ಹೋಗ್ತದೆ.
ಜ್ಯೋತಿಷ್ಯದಲ್ಲಿ, ತುಳಸಿಯು ಬುಧ ಗ್ರಹದೊಂದಿಗೆ ಸಂಬಂಧ ಹೊಂದಿದೆ. ತುಳಸಿ ಒಣಗುತ್ತಿದ್ದರೆ ಎಂದರೆ ಬುಧ ದುರ್ಬಲಗೊಳ್ಳುತ್ತಿದ್ದಾನೆ ಅಥವಾ ಆರ್ಥಿಕ ನಷ್ಟ ಎದುರಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅಂಥಹ ಸ್ಥಿತಿಯಲ್ಲಿ, ಎಚ್ಚರಿಕೆಯಿಂದ ಇರುವ ಅಗತ್ಯವಿರುತ್ತದೆ.
Vastu Tips for Tulsi ದಿಕ್ಕು ಯಾವುದಿರಬೇಕು?
ಎಲ್ಲಾ ಮನೆಯಲ್ಲಿ ತುಳಸಿ ಗಿಡ ಇರುತ್ತದೆ ನಿಜ. ಆದ್ರೆ ತುಳಸಿಯ ಪಾಸಿಟಿವ್ ಎನರ್ಜಿ ನಮಗೆ ಸಿಗಬೇಕಾದರೆ ಅದನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕು. ವಾಸ್ತು ಪ್ರಕಾರ (Vastu Tips for Tulsi), ತುಳಸಿಯನ್ನು ಯಾವಾಗಲೂ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು.
ಈ ದಿಕ್ಕು ಹೆಚ್ಚು ಸಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತದೆ. ಸ್ಥಳಾವಕಾಶ ಲಭ್ಯವಿಲ್ಲದಿದ್ದರೆ, ಅದನ್ನು ಪೂರ್ವ ದಿಕ್ಕಿನಲ್ಲಿಯೂ ಇಡಬಹುದು. ಆದ್ರೆ, ತುಳಸಿ ಗಿಡವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಲೇಬಾರದು. ದಕ್ಷಿಣ ದಿಕ್ಕಿನಲ್ಲಿ ತುಳಸಿಯನ್ನು ನೆಡುವುದರಿಂದ ವಾಸ್ತು ದೋಷಗಳು ಉಂಟಾಗುತ್ತವೆ. ಇದು ಅನಗತ್ಯ ಸಂಘರ್ಷಕ್ಕೆ ಕಾರಣವಾಗ್ತದೆ.
ತುಳಸಿಗೆ ನೀರು ಹಾಕುವ ಪ್ರಮುಖ ನಿಯಮಗಳು :
ತುಳಸಿ ಗಿಡಕ್ಕೆ ನೀರು ಹಾಕುವಾಗ ಕೆಲವು ಸಣ್ಣ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಬೆಳಿಗ್ಗೆ ಸ್ನಾನ ಮಾಡಿ ಪರಿಶುದ್ಧ ಬಟ್ಟೆಗಳನ್ನು ಧರಿಸಿದ ನಂತರವೇ ತುಳಸಿಗೆ ನೀರು ಹಾಕಬೇಕು. ನೆನಪಿನಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ಮುಖ್ಯ ವಿಷಯವೆಂದರೆ ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ನೀರು ಹಾಕಬಾರದು. ಈ ದಿನಗಳಲ್ಲಿ ತುಳಸಿ ದೇವಿ ನಿರ್ಜಲ ಉಪವಾಸ ಮಾಡುತ್ತಾಳೆಯಂತೆ.
ಸಂಜೆ ಈ ಕೆಲಸ ಮಾಡಲು ಮರೆಯಬೇಡಿ.
ಸಂಜೆ ತುಳಸಿ ಗಿಡದ ಬಳಿ ದೀಪ ಹಚ್ಚುವುದು ತುಂಬಾ ಶುಭ.ಪ್ರತಿದಿನ ಸಂಜೆ ತುಳಸಿ ಗಿಡದ ಬಳಿ ತುಪ್ಪದ ದೀಪ ಹಚ್ಚುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಆದ್ರೆ ದೀಪವನ್ನು ನೆಲದ ಮೇಲೆ ಇಡಬಾರದು ಎನ್ನುವುದು ಕೂಡಾ ನೆನಪಿರಲಿ. ಸಂಜೆ ತುಳಸಿ ಎಲೆ ಅಥವಾ ಕುಡಿಯನ್ನು ಕೀಳಬಾರದು, ಮುಟ್ಟಬಾರದು. ಪೂಜೆಗೆ ತುಳಸಿ ಎಲೆಗಳು ಬೇಕಾದರೆ, ಬೆಳಿಗ್ಗೆ ಅವುಗಳನ್ನು ಕೀಳಬೇಕು.
ತುಳಸಿ ಒಣಗಿದರೆ ತಕ್ಷಣ ಏನು ಮಾಡಬೇಕು?
ತುಳಸಿ ಗಿಡ ಯಾವುದಾದರೂ ಕಾರಣದಿಂದ ಸಂಪೂರ್ಣವಾಗಿ ಒಣಗಿದ್ದರೆ, ಅದನ್ನು ತಕ್ಷಣವೇ ಚಿವುಟಿ ಹಾಕಿ. ಒಣಗಿದ ತುಳಸಿಯನ್ನು ಮನೆಯಲ್ಲಿ ಇಡುವುದು ಅಶುಭ. ಅದು ಮನೆಗೆ ನಕಾರಾತ್ಮಕತೆಯನ್ನು ತರುತ್ತದೆ.
ಒಣಗಿದ ತುಳಸಿಯನ್ನು ಹರಿಯುವ ನದಿಯಲ್ಲಿ ಬಿಡಬೇಕು ಅಥವಾ ಸ್ವಚ್ಛವಾದ ಸ್ಥಳದಲ್ಲಿ ಹೂತು ಹಾಕಿ. ಅದನ್ನು ಎಂದಿಗೂ ಕಸದ ಬುಟ್ಟಿಗೆ ಎಸೆಯಬೇಡಿ. ತಕ್ಷಣವೇ ಹೊಸ, ತುಳಸಿ ಗಿಡವನ್ನು ನೆಡಬೇಕು. ಕಟ್ಟೆಯನ್ನು ಯಾವತ್ತೂ ಖಾಲಿ ಬಿಡಬಾರದು.


Click it and Unblock the Notifications
